9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಮ್ ​​​! ಪರೀಕ್ಷೆ ಪ್ರಕ್ರಿಯೆ ಹೇಗೆ ? ಇಲ್ಲಿದೆ ಮಾಹಿತಿ

Board Exam For 9th and 11th Standard Students: ಸಾಕಷ್ಟು ವಿರೋಧಗಳ ಮಧ್ಯೆಯೇ ಪ್ರಸಕ್ತ 2023-24 ನೇ ಸಾಲಿನಲ್ಲಿಯೇ 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಬೆಂಗಳೂರು ಸೆ.23: ಕರ್ನಾಟಕದ  ಶಿಕ್ಷಣ ವ್ಯವಸ್ಥೆಯಲ್ಲಿ ತುಂಬಾ ಬದಲಾವಣೆಗಳು ಆಗುತ್ತಿದ್ದು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (Department of School Education and Literacy) 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​​ ಪರೀಕ್ಷೆ (Board Exam) ನಡೆಸಲು ನಿರ್ಧರಿಸಿದೆ. ಮಕ್ಕಳ ಕಲಿಕಾ ದೃಷ್ಟಿಯಿಂದ ಒಂಬತ್ತನೇ ತರಗತಿ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುತ್ತದೆ. ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಪರೀಕ್ಷಾ ಮಂಡಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.

ಸಾಕಷ್ಟು ವಿರೋಧಗಳ ಮಧ್ಯೆಯೇ ಪ್ರಸಕ್ತ 2023-24 ನೇ ಸಾಲಿನಲ್ಲಿಯೇ 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​ ಪರೀಕ್ಷೆಯನ್ನು ಇಲಾಖೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲಾ ಅನುದಾನಿತ, ಸರ್ಕಾರಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಇಲಾಖೆ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆ ಕಳೆದ ವರ್ಷವಷ್ಟೇ 5 ಮತ್ತು 8 ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಿತ್ತು.

ಪ್ರಥಮ ಪಿಯು ಪರೀಕ್ಷೆ ಹೇಗಿರುತ್ತೆ

  1. ದ್ವಿತೀಯ ಪಿಯುಸಿಯಲ್ಲಿ ಪರೀಕ್ಷಾ ಮೌಲ್ಯ ಮಾಪನ ಬೇರೆ ಕಡೆ ನಡೆಯುತ್ತೆ, ಆದರೆ ಪ್ರಥಮ ಪಿಯು ಪರೀಕ್ಷೆ ಮೌಲ್ಯಮಾಪನ ಆಯಾ ಕಾಲೇಜುಗಳಲ್ಲಿ ನಡೆಯುತ್ತೆ.
  2. ದ್ವೀತಿಯ ಪಿಯು ಪರೀಕ್ಷೆಯಲ್ಲಿ ಇರುವ ಹಾಗೇ ಮೇಲ್ವಿಚಾರಕರು ಪ್ರಥಮ ಪಿಯುಸಿಯಲ್ಲೂ ಇರುತ್ತಾರೆ.
  3. ದ್ವೀತಿಯ ಪಿಯು ಪರೀಕ್ಷೆ ಹಾಗೆಯೇ ಇಲ್ಲಿಯೂ ಪರೀಕ್ಷಾ ಪ್ರಕ್ರಿಯೆ ನಡೆಯುತ್ತೆ.
  4. ಪ್ರಶ್ನೆ ಪತ್ರಿಕೆಯನ್ನು ಇಲ್ಲಿಯೂ ಕೂಡ ಪಿಯು ಬೋರ್ಡ್​​ದಿಂದಲೇ ಕಳುಹಿಸಲಾಗುತ್ತದೆ.
  5. ಮೊದಲು ವಾರ್ಷಿಕವಾಗಿ ಒಂದು ಪರೀಕ್ಷೆ ನಡೆಸಲಾಗುತ್ತದೆ.
  6. ಅನುತ್ತೀರ್ಣ ಆದರೆ ಮತ್ತೊಂದು ಪೂರಕ ಪರೀಕ್ಷೆ ನಡೆಸಲಾಗುತ್ತದೆ.
  7. ಪೂರಕ ಪರೀಕ್ಷೆಯಲ್ಲೂ ಅನುತ್ತೀರ್ಣರಾದ ಮೇಲೆ  ಮುಂದೇನು ಎಂಬುವುದರ ಬಗ್ಗೆ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಳಿ ಉತ್ತರ ಇಲ್ಲ.
  8. ಪರೀಕ್ಷೆಯ ಪ್ರಕ್ರಿಯೆ ದ್ವೀತಿಯ ಪಿಯು ಹಾಗೇ ಇರುತ್ತೆ, ಆದರೆ ಮೌಲ್ಯಮಾಪನ ಕಾಲೇಜು ಹಂತದಲ್ಲಿ ಮಾಡಲಾಗುತ್ತೆ.

9ನೇ ತರಗತಿ ಸಂಕಲನತ್ಮಕ ಮೌಲ್ಯಾ ಮಾಪನ ಪ್ರಶ್ನೆ

  1. ಇದು ಮೊದಲಿನ ಹಾಗೆ 5 ಮತ್ತು 8 ನೇ ತರಗತಿ ಪರೀಕ್ಷೆ ನಡೆದ ತರಹ ನಡೆಯುತ್ತೆ
  2. ಇಲ್ಲಿ ಪರೀಕ್ಷೆಯನ್ನು ಜಿಲ್ಲಾ ಹಂತದಲ್ಲೇ ಮಾಡಲಾಗುತ್ತೆ.
  3. ಆಯಾ ಶಾಲೆಯ ಶಿಕ್ಷಕರೇ ಪರೀಕ್ಷೆ ನಡೆಸುತ್ತಾರೆ, ಮೌಲ್ಯಮಾಪನ ಮಾಡುತ್ತಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://tv9kannada.com/education/karnataka-education-department-decided-to-conduct-board-exam-for-9th-and-11th-standard-students-vkb-677171.html

Leave a Reply

Your email address will not be published. Required fields are marked *