ಡಾನ್‍ಬೋಸ್ಕೋ ಶಾಲೆಯಲ್ಲಿ ಕಲಾ ಸಂಭ್ರಮ-2023 : ವಿಜೇತ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ…!

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಫೆ.08): ಡಾನ್‍ಬೋಸ್ಕೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾ ಸಂಭ್ರಮ-2023 ಅಂತರ ಶಾಲಾ ಆರ್ಟ್ ಮೀಟ್ ಹಮ್ಮಿಕೊಳ್ಳಲಾಗಿತ್ತು.

ಪ್ರೌಢಶಾಲಾ ವಿಭಾಗದಲ್ಲಿ ಪಾಶ್ರ್ವನಾಥ  ಶಾಲೆಯ ಒಂಬತ್ತನೆ ತರಗತಿಯ ಸಾನಿಯ ಪ್ರಥಮ.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆಯ 8 ನೇ ತರಗತಿ ಬಾಲಕಿ ದೀನ ದ್ವಿತೀಯ,

ಡಾನ್‍ಬೋಸ್ಕೋ ಆಂಗ್ಲ ಮಾಧ್ಯಮ ಹತ್ತನೆ ತರಗತಿ ವಿದ್ಯಾರ್ಥಿ ಶ್ರೇಯಸ್ ತೃತೀಯ,

ಇಂಡಿಯನ್ ಇಂಟರ್‍ನ್ಯಾಷನಲ್ ಶಾಲೆಯ ಒಂಬತ್ತನೆ ತರಗತಿಯ ರಕ್ಷಿತ್ ದೀಪು ನಾಲ್ಕನೆ ಹಾಗೂ

ಪಾಶ್ರ್ವನಾಥ ಶಾಲೆಯ ವಂಚ್ ಜೈನ್ ಐದನೆ ಬಹುಮಾನ ಪಡೆದುಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗದಿಂದ ಡಾನ್‍ಬೊಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಸ್ನೇಹ ಜ್ಯೋತಿ ಪ್ರಥಮ. ಪಾಶ್ರ್ವನಾಥ ಶಾಲೆಯ ಕೃಷ್ಣಪಾಲ್ ಸಿಂಗ್ ದ್ವಿತೀಯ. ಡಾನ್‍ಬೋಸ್ಕೋ ಆಂಗ್ಲ ಮಾಧ್ಯಮ ಶಾಲೆಯ ವೈಷ್ಣವಿ ತೃತೀಯ. ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್‍ನ ಪ್ರೀತಮ್ ಕೃಷ್ಣ ನಾಲ್ಕನೆ ಹಾಗೂ ಡಾನ್‍ಬೋಸ್ಕೋ ಕನ್ನಡ ಮಾಧ್ಯಮ ಶಾಲೆಯ ದಿಗಂತ್ ಐದನೆ ಬಹುಮಾನ ಪಡೆದುಕೊಂಡಿದ್ದಾರೆ.

ಡಾನ್‍ಬೋಸ್ಕೋ ಶಾಲೆಯ ಪ್ರಾಂಶುಪಾಲರಾದ ಫಾದರ್ ಲಾರೆನ್ಸ್ ಚಿತ್ರಕಲಾ ಶಿಕ್ಷಕ ವೆಂಕಟೇಶ್ ಕೆ.ಎಸ್. ಪ್ರಜ್ಞ ಇವರುಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

The post ಡಾನ್‍ಬೋಸ್ಕೋ ಶಾಲೆಯಲ್ಲಿ ಕಲಾ ಸಂಭ್ರಮ-2023 : ವಿಜೇತ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ…! first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/FQfqPO4
via IFTTT

Leave a Reply

Your email address will not be published. Required fields are marked *