IPL 2023: RCB ತಂಡದಿಂದ ಡೇವಿಡ್ ವಿಲ್ಲಿ ಹೊರ ನಡೆದಿದ್ದೇಕೆ? ಇಲ್ಲಿದೆ ಮಾಹಿತಿ

IPL 2023: ಐಪಿಎಲ್​ನ ಮೊದಲಾರ್ಧದಲ್ಲಿ ಆರ್​ಸಿಬಿ ತಂಡದ ರಜತ್ ಪಾಟಿದಾರ್, ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಗಾಯದ ಕಾರಣ ಹೊರಗುಳಿದಿದ್ದರು. ಮತ್ತೊಂದೆಡೆ ಗಾಯದ ಹಿನ್ನೆಲೆ ಜೋಶ್ ಹ್ಯಾಝಲ್​ವುಡ್ ಮೊದಲ ಸುತ್ತಿನಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ದ್ವಿತಿಯಾರ್ಧದ ಆರಂಭದ ಬೆನ್ನಲ್ಲೇ ಡೇವಿಡ್ ವಿಲ್ಲಿ ಕೂಡ ಐಪಿಎಲ್​ನಿಂದ ಹೊರ ನಡೆದಿದ್ದಾರೆ.
ಆರ್​ಸಿಬಿ ತಂಡದ ಪ್ರಮುಖ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿದ್ದ ವಿಲ್ ಜಾಕ್ಸ್ ಈ ಬಾರಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆಡಿದ 4 ಪಂದ್ಯಗಳಲ್ಲಿ ಒಟ್ಟು 15 ಓವರ್ ಬೌಲ್ ಮಾಡಿದ್ದ ವಿಲ್ಲಿ ನೀಡಿದ್ದು ಕೇವಲ 105 ರನ್​ ಮಾತ್ರ. ಅಲ್ಲದೆ ಈ ವೇಳೆ 3 ವಿಕೆಟ್ ಕೂಡ ಕಬಳಿಸಿದ್ದರು. ಆದರೆ ಬ್ಯಾಟಿಂಗ್​ನಲ್ಲಿ 3 ಇನಿಂಗ್ಸ್​ನಲ್ಲಿ ಒಟ್ಟು 35 ರನ್​ಗಳಿಸಿ ನಿರಾಸೆ ಮೂಡಿಸಿದ್ದರು.ಇದಾಗ್ಯೂ ಡೇವಿಡ್ ವಿಲ್ಲಿ ಅವರ ಉಪಸ್ಥಿತಿಯು ಆರ್​ಸಿಬಿ ಬೌಲಿಂಗ್​ ಲೈನಪ್​ಗೆ ಅಗತ್ಯವಾಗಿತ್ತು. ಆದರೀಗ ಗಾಯದ ಕಾರಣ ಇಂಗ್ಲೆಂಡ್ ಆಟಗಾರ ತವರಿಗೆ ಮರಳಲಿದ್ದಾರೆ ಎಂಬುದನ್ನು ಆರ್​ಸಿಬಿ ಫ್ರಾಂಚೈಸ್ ಖಚಿತಪಡಿಸಿದೆ.ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರ ಎಸೆದ ಬೌನ್ಸರ್​ ಎಸೆತವನ್ನು ಆಡುವಾಗ ಡೇವಿಡ್ ವಿಲ್ಲಿ ಅವರ ಬೆರಳಿಗೆ ಗಾಯವಾಗಿತ್ತು. ಈ ಗಾಯವು ಗಂಭೀರವಾಗಿರುವ ಕಾರಣ ಡೇವಿಡ್ ವಿಲ್ಲಿ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.ಹೀಗಾಗಿ ಆರ್​ಸಿಬಿ ತಂಡದ ಮುಂದಿನ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಅಲಭ್ಯರಾಗಲಿದ್ದಾರೆ. ಇತ್ತ ವಿಲ್ಲಿಯ ಅನುಪಸ್ಥಿತಿಯಲ್ಲಿ ಆರ್​ಸಿಬಿ ಬೌಲಿಂಗ್ ವಿಭಾಗವನ್ನು ಜೋಶ್ ಹ್ಯಾಝಲ್​ವುಡ್ ಮುನ್ನಡೆಸಲ್ಲಿದ್ದಾರೆ.
ಹಾಗೆಯೇ ಇದೀಗ ಡೇವಿಡ್ ವಿಲ್ಲಿಯ ಬದಲಿಗೆ ಆರ್​ಸಿಬಿ ಫ್ರಾಂಚೈಸಿಯು 38 ವರ್ಷದ ಕೇದಾರ್ ಜಾಧವ್ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ. RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್, ಕೇದಾರ್ ಜಾಧವ್.

source https://tv9kannada.com/photo-gallery/cricket-photos/ipl-2023-why-david-willey-out-of-ipl-2023-kannada-news-zp-au50-567774.html

Leave a Reply

Your email address will not be published. Required fields are marked *