ಡ್ರೈವಿಂಗ್ ಲೈಸೆನ್ಸ್‌ ಪಡೆಯುವ ಸರಳ ವಿಧಾನ: ಅರ್ಜಿ ಸಲ್ಲಿಸುವುದು ಹೇಗೆ, ಲಿಂಕ್‌ ಮಾಹಿತಿ ಇಲ್ಲಿದೆ!

Driving license updates: ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಿಸಿದಂತೆ ಇಲ್ಲೊಂದು ಮಹತ್ವದ ಅಪ್ಡೇಟ್ಸ್‌ ಇದೆ. ನೀವು ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್‌ಗಾಗಿ ಹೆಚ್ಚು ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಸರಳವಾಗಿ ನೀವು ಡ್ರೈವಿಂಗ್ ಲೈಸೆನ್ಸ್‌ (ಚಾಲನಾ ಪರವಾನಗಿ) ಪಡೆದುಕೊಳ್ಳಲು ಅವಕಾಶ ಇದೆ. ಹಾಗದರೆ ಇದಕ್ಕೆ ಏನು ಮಾಡಬೇಕು, ಡ್ರೈವಿಂಗ್ ಲೈಸೆನ್ಸ್‌ ನಲ್ಲಿನ ಹೊಸ ಬದಲಾವಣೆ ಏನು ಹಾಗೂ ಇದರಿಂದ ಸಾಮಾನ್ಯ ಜರಿಗೆ ಹೇಗೆಲ್ಲಾ ಅನುಕೂಲ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ..

ಕೇಂದ್ರ ಸಾರಿಗೆ ಇಲಾಖೆಯು (ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು) ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯನ್ನು ಮಾಡಿದೆ. ಇದನ್ನು ದೇಶದಾದ್ಯಂತ ಜಾರಿ ಮಾಡಲಾಗಿದ್ದು, ಇದರಿಂದ ಕೋಟ್ಯಾಂತರ ಜನ ವಾಹನ ಸವಾರರಿಗೆ ಅನುಕೂಲ ಆಗುವ ನಿರೀಕ್ಷೆ ಇದೆ. ಇನ್ನು ಕೇಂದ್ರ ಸರ್ಕಾರವು ದೇಶದಾದ್ಯಂತ ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸಿದೆ.

ಈ ಬದಲಾವಣೆಯಿಂದಾಗಿ ನೀವು ರಾಜ್ಯದ ಯಾವುದೇ (ದೇಶದ ಯಾವುದೇ ರಾಜ್ಯದ ಜಿಲ್ಲೆಗಳಲ್ಲಿ) ಜಿಲ್ಲೆಗಳಿಂದ ಬೇಕಾದರೂ ನೀವು ಡ್ರೈವಿಂಗ್ ಲೈಸೆನ್ಸ್‌ ಪಡೆಯುವುಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಶಾಶ್ವತ ಡ್ರೈವಿಂಗ್‌ ಲೈಸೆನ್ಸ್‌ ಪಡೆದುಕೊಳ್ಳುವುದಕ್ಕೆ ನೀವು ಇನ್ಮುಂದೆ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡಿ, ಗಂಟೆ ಗಟ್ಟಲೆ ಕಾಯುವ ಅವಶ್ಯಕತೆಯೂ ಇಲ್ಲ. ಇದೀಗ ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯ ಪೂರ್ಣ ಹಂತವನ್ನು ಬಹುತೇಕ ಸರಳೀಕರಣಗೊಳಿಸಲಾಗಿದೆ.

ಅಲ್ಲದೇ ಸಾರಿಗೆ ಇಲಾಖೆಯ ಮೂಲಕ ನೀವು ತಾತ್ಕಾಲಿಕ ವಿಳಾಸದ ಆಧಾರದ ಮೇಲೆಯೂ ಶಾಶ್ವತ ಡಿಎಲ್ ಮಾಡಿಸಿಕೊಳ್ಳಬಹುದು. ಇದು ನಿಮ್ಮ ಮನೆಗೆ ಪೋಸ್ಟ್‌ ಮೂಲಕ ಬಂದು ಸೇರಲಿದೆ. ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಬಂದು ನೆಲೆಸಿರುವವರು ಸಹ ತಾತ್ಕಾಲಿಕವಾಗಿ ಇರುವ ಊರು (ನಗರ)ದಿಂದಲೇ ಡ್ರೈವಿಂಗ್‌ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಉದಾ: ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರು ಬೆಂಗಳೂರಿನಲ್ಲೇ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಸಾರಿಗೆ ಇಲಾಖೆಯು ದೊಡ್ಡ ಬದಲಾವಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ನೂತನ ಅರ್ಜಿಯಿಂದ ಸಾಕಷ್ಟು ಅನುಕೂಲವಾಗಲಿದೆ. ಲರ್ನಿಂಗ್ ಡ್ರೈವಿಂಗ್‌ ಲೈಸೆನ್ಸ್‌ (ಕಲಿಕಾ ಲೈಸೆನ್ಸ್‌) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಸಹ ಸರಳವಾಗಿದೆ. ಇದಕ್ಕೂ ಸಹ ನೀವು ಮತ್ತೊಂದು ಊರಿನಲ್ಲಿದ್ದು, ಆ ಊರಿನಿಂದ ತಾತ್ಕಾಲಿಕ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೊಸ ಡ್ರೈವಿಂಗ್ ಲೈಸೆನ್ಸ್‌ ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಬಹುದಾಗಿದೆ. ಈ ರೀತಿ ಅರ್ಜಿ ಸಲ್ಲಿಸಿದವರು ಚಾಲನಾ ಪರೀಕ್ಷೆಯನ್ನು ಆನ್‌ಲೈನ್‌ನ ಮೂಲಕವೇ ಮಾಡಬಹುದಾಗಿದೆ. ಈ ಎಲ್ಲಾ ಕಾರಣಗಳಿಂದ ನೀವು ಆರ್‌ಟಿಒ ಆಫೀಸ್‌ಗೆ ಹೋಗುವುದು ತಪ್ಪಲಿದೆ. ಅಲ್ಲದೇ ಸರತಿ ಸಾಲಿನಲ್ಲಿ ತಾಸು ಗಟ್ಟಲೆ ನಿಲ್ಲುವುದು ಸಹ ತಪ್ಪಲಿದೆ.

ಡ್ರೈವಿಂಗ್‌ ಲೈಸೆನ್ಸ್ ಇಲ್ಲೂ ಪಡೆಯಬಹುದು ಇನ್ನು ಕೇಂದ್ರ ಸರ್ಕಾರವು ಹೊಸ ನಿಯಮದ ಪ್ರಕಾರ, ಆರ್‌ಟಿಒ ಕಚೇರಿಗಳು ಮಾತ್ರವಲ್ಲದೆ ಖಾಸಗಿ ಏಜೆನ್ಸಿಗಳ ಮೂಲಕವೂ ಡ್ರೈವಿಂಗ್ ಪರೀಕ್ಷೆಗಳನ್ನು ನಡೆಸಲು ಹಾಗೂ ಡ್ರೈವಿಂಗ್ ಪ್ರಮಾಣಪತ್ರಗಳನ್ನು ನೀಡಲು ಮುಂದಾಗಿದೆ. ನೀವು ಇನ್ಮುಂದೆ ಆರ್‌ಟಿಒ ಕಚೇರಿಗೆ ಹೋಗದೆಯೂ ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವ ಸಮಯ ಸನ್ನಿಹಿತವಾಗಲಿದೆ. ನೀವು ಮೊದಲು https://parivahan.gov.in ವೆಬ್‌ಸೈಟ್‌ಗೆ ಲಾಗಿನ್ ಮಾಡಿಕೊಳ್ಳಿ. ಮುಖಪುಟದಲ್ಲಿ ಡ್ರೈವಿಂಗ್ ಲೈಸೆನ್ಸ್‌ ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯಲ್ಲಿ (ಮಾದರಿ) ಕೇಳಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಸರಿಯಾಗಿ ತುಂಬಿಸಿ . ಫಾರ್ಮ್‌‌ನಲ್ಲಿ ನಮೂದಿಸಲಾದ ದಾಖಲೆಗಳ ವಿವರ ಸರಿಯಾಗಿದೆಯೇ ಗಮನಿಸಿ, ನಂತರ ಅದನ್ನು ಅಪ್ಲೋಡ್ ಮಾಡಿ. ಇದನ್ನು ಆನ್‌ಲೈನ್‌ ಅಥವಾ ಅಥವಾ ಆಫ್‌ಲೈನ್‌ನಲ್ಲೂ ಮಾಡಬಹುದಾಗಿದೆ.

Source : https://kannada.oneindia.com/news/karnataka/driving-license-easy-way-to-get-driving-license-how-to-apply-link-info-here-385833.html

Views: 2

Leave a Reply

Your email address will not be published. Required fields are marked *