Train Cancel: ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ.

- ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ ಕೆಲವು ವಿಶೇಷ ರೈಲುಗಳನ್ನು ರದ್ದುಗೊಳಿಸಿದ ನೈಋತ್ಯ ರೈಲ್ವೆ
- ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನೈಋತ್ಯ ರೈಲ್ವೆ
Special Trains Cancel: ಕೆಎಸ್‌ಆರ್ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿರ್ಮಾಣ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸುಮಾರು 11 ವಿಶೇಷ ರೈಲುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಈ ಕೆಳಗಿನ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ (Special Trains Cancel) ಎಂದು ನೈಋತ್ಯ ರೈಲ್ವೆಯ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ನೈಋತ್ಯ ರೈಲ್ವೆ (South Western Railways) ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ.
ನೈಋತ್ಯ ರೈಲ್ವೆ ರದ್ದುಗೊಳಿಸಿರುವ ರೈಲುಗಳ ವಿವರ ಈ ಕೆಳಕಂಡಂತಿದೆ:
* ವಿಶಾಖಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ (ಎಸ್‌ಎಂವಿಟಿ) ಬೆಂಗಳೂರು (08543) – ಜೂನ್ 16ರಿಂದ ಮುಂದಿನ ಆದೇಶದವರೆಗೆ
* ಎಸ್‌ಎಂವಿಟಿ ಬೆಂಗಳೂರು – ವಿಶಾಖಪಟ್ಟಣಂ (08544)- ಜೂನ್ 17ರಿಂದ ಮುಂದಿನ ಆದೇಶದವರೆಗೆ
* ಎಸ್‌ಎಂವಿಟಿ ಬೆಂಗಳೂರು-ಗವಾಹಟಿ (06521)- ಜೂನ್18ರಿಂದ ಮುಂದಿನ ಆದೇಶದವರೆಗೆ
* ಎಸ್ ಎಂವಿಟಿ ಬೆಂಗಳೂರು-ಮಾಲ್‌ಟೌನ್ (06565)- ಜೂನ್ 19ರಿಂದ ಮುಂದಿನ ಆದೇಶದವರೆಗೆ
* ಸಂತ್ರಗಾಚ್ ಎಸ್‌ಎಂವಿಟಿ ಬೆಂಗಳೂರು (08845)- ಜೂನ್ 21ರಿಂದ ಮುಂದಿನ ಆದೇಶದವರೆಗೆ
* ಮಾಲ್ಡ್‌ಟೌನ್ – ಎಸ್‌ಎಂವಿಟಿ ಬೆಂಗಳೂರು (06566)- ಜೂನ್22ರಿಂದ ಮುಂದಿನ ಆದೇಶದವರೆಗೆ
* ಗುವಾಹಟಿ -ಎಸ್‌ಎಂವಿಟಿ ಬೆಂಗಳೂರು (06522) ರೈಲಗಳು ರದ್ದು ಜೂ.22ರಿಂದ ಮುಂದಿನ ಆದೇಶದವರೆಗೆ
* ಎಸ್‌ಎಂವಿಟಿ ಬೆಂಗಳೂರು -ಸಂತ್ರಗಾಚ್ (08846)- ಜೂನ್ 23ರಿಂದ ಮುಂದಿನ ಆದೇಶದವರೆಗೆ
ಉಳಿದಂತೆ ಗಯಾ- ಯಶವಂತಪುರ (06218) ರೈಲನ್ನು ಜೂನ್ 17ರಂದು ಒಂದು ಟ್ರಿಪ್ ಹಾಗೂ ಭಗತ್ ಕಿ ಕೋಠಿ – ಎಸ್‌ಎಂವಿಟಿ ಬೆಂಗಳೂರು ರೈಲು ಎರಡು ಕಡೆಗಳಲ್ಲಿ ಜೂನ್ 20, 23, 27 ಮತ್ತು ಜೂ. 30ರಂದು ರದ್ದುಗೊಳಿಸಲಾಗಿದೆ.