IPL 2023: ಈ ಬಾರಿ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

IPL 2023: ಐಪಿಎಲ್​ನ 16ನೇ ಆವೃತ್ತಿಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಕಳೆದ 2 ತಿಂಗಳಿಂದ ಮನರಂಜನೆಯ ರಸದೌತಣ ಒದಗಿಸಿದ್ದ ಐಪಿಎಲ್​ ಮುಕ್ತಾಯಗೊಂಡಿದೆ. ವಿಶೇಷ ಎಂದರೆ ಈ ಬಾರಿಯ ಐಪಿಎಲ್​ ಸಿಡಿಲಬ್ಬರದ ಬ್ಯಾಟಿಂಗ್​ಗೆ ಸಾಕ್ಷಿಯಾಗಿತ್ತು.ಅದರಲ್ಲೂ ಅನುಭವಿ ಆಟಗಾರರೊಂದಿಗೆ ಯುವ ಆಟಗಾರರು ಕೂಡ ಅಬ್ಬರಿಸಿದ್ದರು. ಹೀಗೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಅತೀ ಹೆಚ್ಚು ಫೋರ್​ಗಳನ್ನು ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ....1- ಶುಭ್​ಮನ್ ಗಿಲ್: ಈ ಬಾರಿ 17 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಒಟ್ಟು 85 ಫೋರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ 2023 ರಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.2- ಯಶಸ್ವಿ ಜೈಸ್ವಾಲ್: ರಾಜಸ್ಥಾನ್ ರಾಯಲ್ಸ್ ತಂಡದ ಸ್ಪೋಟಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಲ್ಲಿ 82 ಫೋರ್​ಗಳನ್ನು ಬಾರಿಸಿದ್ದಾರೆ.3- ಡೆವೊನ್ ಕಾನ್ವೆ: ಸಿಎಸ್​ಕೆ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೆ 15 ಇನಿಂಗ್ಸ್​ಗಳಲ್ಲಿ ಒಟ್ಟು 77 ಫೋರ್​ಗಳನ್ನು ಬಾರಿಸಿದ್ದಾರೆ.4- ಡೇವಿಡ್ ವಾರ್ನರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ವಾರ್ನರ್ 14 ಪಂದ್ಯಗಳಲ್ಲಿ ಒಟ್ಟು 69 ಫೋರ್ಸ್​ ಬಾರಿಸಿದ್ದಾರೆ.5- ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ 16 ಇನಿಂಗ್ಸ್​ಗಳಲ್ಲಿ 65 ಫೋರ್​ಗಳನ್ನು ಬಾರಿಸಿ ಮಿಂಚಿದ್ದಾರೆ.

source https://tv9kannada.com/photo-gallery/cricket-photos/most-fours-in-ipl-2023-players-list-ipl-2023-most-fours-kannada-news-zp-589057.html

Leave a Reply

Your email address will not be published. Required fields are marked *