Oscar Awards 2025 Winner List: 2025ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ‘ಅನೋರಾ’ ಹಾಗೂ ‘ದಿ ಬ್ರೂಟಲಿಸ್ಟ್’ ಚಿತ್ರಗಳು ಹೆಚ್ಚು ಪ್ರಶಸ್ತಿಗಳನ್ನು ಪಡೆದವು. ಅತ್ಯುತ್ತಮ ಚಿತ್ರ, ನಿರ್ದೇಶನ, ನಟ, ನಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರ ಪಟ್ಟಿಯನ್ನು ಘೋಷಿಸಲಾಯಿತು ಅನ್ನೋದು ವಿಶೇಷ.

ಈ ಬಾರಿಯ ಆಸ್ಕರ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ 97ನೇ ವರ್ಷದ ಅವಾರ್ಡ್ ಫಂಕ್ಷನ್ ನಡೆದಿದೆ. ಹಾಲಿವುಡ್ನ ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆದರು. ಅನೇಕರು ಈ ಅವಾರ್ಡ್ನ ಗೆದ್ದು ಬೀಗಿದರು. ಈ ಪೈಕಿ ಅವಾರ್ಡ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಆಸ್ಕರ್ನಲ್ಲಿ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ಹಾಗೂ ನಟಿ ಅವಾರ್ಡ್ಗಳನ್ನು ಯಾರು ಪಡೆಯುತ್ತಾರೆ ಎಂಬುದು ಕುತೂಹಲಕಾರಿ ಆಗಿರುತ್ತದೆ. ಇದನ್ನು ಕೊನೆಯಲ್ಲಿ ಘೋಷಣೆ ಮಾಡಲಾಯಿತು. ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಅವಾರ್ಡ್ ಕಾರ್ಯಕ್ರಮ ಆರಂಭ ಆಯಿತು. ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾಡ್ಗಿಚ್ಚಿನ ವಿರುದ್ಧ ಹೋರಾಡಿದ ಅಗ್ನಿಶಾಮಕ ದಳದವರಿಗೆ ಇಲ್ಲಿ ಗೌರವ ಸೂಚಿಸಲಾಯಿತು. ಅನೋರಾ ಹಾಗೂ ದಿ ಬ್ರೂಟಲಿಸ್ಟ್ ಚಿತ್ರಗಳು ಹೆಚ್ಚಿನ ಅವಾರ್ಡ್ ಪಡೆದವು.
ಅತ್ಯುತ್ತಮ ಸಿನಿಮಾ: ಅನೋರಾ
ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ನಿರ್ದೇಶನ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ನಟ: ಏಡ್ರಿಯನ್ ಬ್ರೋಡಿ (ದಿ ಬ್ರೂಟಲಿಸ್ಟ್)
ಬೆಸ್ಟ್ ಒರಿಜಿನಲ್ ಸ್ಕೋರ್: ಡ್ಯಾನಿಯಲ್ ಬ್ಲೂಮ್ಬರ್ಗ್ (ದಿ ಬ್ರೂಟಲಿಸ್ಟ್)
ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೇಜಿಲ್)
ಅತ್ಯುತ್ತಮ ಛಾಯಾಗ್ರಹಣ: ಲೋಲ್ ಗ್ರಾವ್ಲೇ (ದಿ ಬ್ರೂಟಲಿಸ್ಟ್)
ಬೆಸ್ಟ್ ಸೌಂಡ್ ಆ್ಯಂಡ್ ಬೆಸ್ಟ್ ವಿಶ್ಯುವಲ್ ಎಫೆಕ್ಟ್: ಡ್ಯೂನ್ 2
ಬೆಸ್ಟ್ ಡಾಕ್ಯುಮೆಂಟರಿ ಫ್ಯೂಚರ್ ಫಿಲ್ಮ್: ನೋ ಒದರ್ ಲ್ಯಾಂಡ್