23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ: ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಪಟ್ಟಿ.

ಬೆಂಗಳೂರು, (ಜನವರಿ 29): ಕರ್ನಾಟಕದ 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಬಿಜೆಪಿ (BJP) ಪಟ್ಟಿ ಬಿಡುಗಡೆ ಮಾಡಿದೆ. ಕೆಲ ಜಿಲ್ಲೆಗಳಿಗೆ ಹೊಸ ಮುಖಗಳಿಗೆ ಮಣೆ ಹಾಕಿದ್ದರೆ, ಇನ್ನು ಕೆಲ ಜಿಲ್ಲೆಗಳಿಗೆ ಹಳೇಬರನ್ನೇ ಮುಂದುವರಿಸಲಾಗಿದೆ. ಇನ್ನು ಕೆಲ ಜಿಲ್ಲೆಗಳಿಗೆ ಅಧ್ಯಕ್ಷರ ಆಯ್ಕೆ ಮಾಡಲಾಗಿಲ್ಲ. ಈ ನೂತನ ಜಿಲ್ಲಾಧ್ಯಕ್ಷರುಗಳು ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸಧೃಢಗೊಳಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಬಿಜೆಪಿ ಕಿವಿ ಮಾತು ಹೇಳಿದೆ. ಇನ್ನು ವಿಜಯೇಂದ್ರ ತಮ್ಮ ಆಪ್ತರಿಗೆ ಮಣೆ ಹಾಕಿದ್ದಾರೆ ಎನ್ನುವ ಆರೋಪ ಪಕ್ಷದಲ್ಲೇ ಕೇಳಿಬಂದಿದೆ.

ಯಾರು ಯಾವ ಜಿಲ್ಲೆಗೆ ಅಧ್ಯಕ್ಷರು?

ಮೈಸೂರು ನಗರ: ಎಲ್.ನಾಗೇಂದ್ರ, ಚಾಮರಾಜನಗರ-ಸಿ.ಎಸ್.ನಿರಂಜನ್‌ಕುಮಾರ್, ದಕ್ಷಿಣ ಕನ್ನಡ-ಸತೀಶ್ ಕುಂಪಲಿ, ಚಿಕ್ಕಮಗಳೂರು-ದೇವರಾಜ ಶೆಟ್ಟಿ, ಶಿವಮೊಗ್ಗ-ಎನ್.ಕೆ.ಜಗದೀಶ್, ಉತ್ತರ ಕನ್ನಡ-ನಾರಾಯಣ ಶ್ರೀನಿವಾಸ ಹೆಗಡೆ, ಹುಬ್ಬಳ್ಳಿ-ಧಾರವಾಡ– ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರ-ನಿಂಗಪ್ಪ ಡಿ.ಸುತಗಟ್ಟಿ, ಬೆಳಗಾವಿ ನಗರ-ಗೀತಾ ಸುತಾರ್, ಬೆಳಗಾವಿ ಗ್ರಾಮಾಂತರ-ಸುಭಾಷ್ ದುಂಡಪ್ಪ ಪಾಟೀಲ್, ಚಿಕ್ಕೋಡಿ-ಸತೀಶ್ ಅಪ್ಪಾಜಿಗೋಲ್, ಬೀದರ್-ಸೋಮನಾಥ್ ಪಾಟೀಲ್, ಕಲಬುರಗಿ ನಗರ-ಚಂದ್ರಕಾಂತ ಬಿ.ಪಾಟೀಲ್, ಕಲಬುರಗಿ ಗ್ರಾಮಾಂತರ-ಅಶೋಕ ಶಾಂತಪ್ಪ ಬಗಲಿ, ಯಾದಗಿರಿ-ಬಸವರಾಜ ವಿಭೂತಿಹಳ್ಳಿ, ಕೊಪ್ಪಳ-ಧಡೇಸುಗೂರು ಬಸವರಾಜ್, ಬಳ್ಳಾರಿ-ಅನಿಲ್ ಕುಮಾರ್ ಮೋಕಾ, ವಿಜಯನಗರ-ಸಂಜೀವರೆಡ್ಡಿ ಎಸ್, ಚಿಕ್ಕಬಳ್ಳಾಪುರ-ಬಿ.ಸಂದೀಪ್, ಕೋಲಾರ-ಓಂ ಶಂಕ್ತಿ ಛಲಪತಿ, ಬೆಂಗಳೂರು ಗ್ರಾಮಾಂತರ-ಎಸ್.ಹರೀಶ್, ಬೆಂಗಳೂರು ಕೇಂದ್ರ-ಎ.ಆರ್.ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ-ಸಿ.ಕೆ.ರಾಮಮೂರ್ತಿ.

ಯಾವ ಜಿಲ್ಲೆಗೆ ಹೊಸಬರು? ಯಾರು ಮರು ನೇಮಕ?

ಶಿವಮೊಗ್ಗ, ಕಲಬುರಗಿ ಗ್ರಾಮಾಂತರ, ಯಾದಗಿರಿ, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡಲಾಗಿದೆ. ಇನ್ನು ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಬೆಳಗಾವಿ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಬೀದರ್, ಕಲಬುರಗಿ, ಬಳ್ಳಾರಿ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಜಿಲ್ಲೆಗೆ ಮರು ನೇಮಕ ಮಾಡಲಾಗಿದೆ.

ಬಾಕಿ ಇರುವ ಜಿಲ್ಲೆಗಳು

ಇನ್ನು 23 ಜಿಲ್ಲೆಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, 16 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಮಾಡಬೇಕಿದೆ. ಮೈಸೂರು ಗ್ರಾಮಾಂತರ, ಮಂಡ್ಯ, ಹಾಸನ, ಕೊಡಗು, ಉಡುಪಿ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಧುಗಿರಿ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಆಯ್ಕೆಯಲ್ಲಿ ಕೆಲ ಗೊಂದಲ ಏರ್ಪಟ್ಟಿದ್ದರಿಂದ ಸದ್ಯಕ್ಕೆ ಯಾವುದೇ ನೇಮಕ ಮಾಡಿಲ್ಲ.

Source : https://tv9kannada.com/karnataka/karnataka-bjp-appoints-23-district-presidents-here-is-list-news-in-kannada-rbj-971146.html

Leave a Reply

Your email address will not be published. Required fields are marked *