ಮಧ್ಯಮ ವರ್ಗದವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025 ರ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದಾರೆ. ವೇತನ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸುವ ಮೂಲಕ ದೊಡ್ಡ ಉಡುಗೊರೆ ನೀಡಿದ್ದಾರೆ. ಈಗ ದೇಶದಲ್ಲಿ 12 ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಅಲ್ಲದೆ, 75,000 ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಲಾಭವೂ ಸಿಗಲಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ವೇತನ ವರ್ಗಕ್ಕೆ ಎಷ್ಟು ಪ್ರಯೋಜನವಾಗಲಿದೆ ಎಂಬ ಹಣಕಾಸು ಲೆಕ್ಕಾಚಾರ ಇಲ್ಲಿದೆ.
ನವದೆಹಲಿ, ಫೆಬ್ರವರಿ 1: ಮಧ್ಯಮ ವರ್ಗದವರು, ವೇತನ ವರ್ಗದವರು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿಜವಾಗಿಸಿದ್ದಾರೆ. 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವನ್ನು ಅವರು 2025ರ ಬಜೆಟ್‌ನಲ್ಲಿ ಒದಗಿಸಿಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ, ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ ಹೊಸ ಕಾನೂನು ರೂಪಿಸುವ ಘೋಷಣೆಯನ್ನೂ ಮಾಡಿದ್ದಾರೆ. ಮುಂದಿನ ವಾರ ಹೊಸ ಮಸೂದೆ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೀಗ 12 ಲಕ್ಷ ರೂಪಾಯಿ ವರೆಗಿನ ಆದಾಯವನ್ನು ಈಗ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವುದರಿಂದ ಎಷ್ಟು ವೇತನ ಇದ್ದವರಿಗೆ ಎಷ್ಟು ತೆರಿಗೆ ವಿನಾಯಿತಿ ದೊರೆಯಲಿದೆ, ದುಡ್ಡು ಉಳಿಯಲಿದೆ ಎಂಬ ವಿವರ ಇಲ್ಲಿದೆ.
ನಿಮಗೆ ಇಷ್ಟು ವೇತನ ಇದ್ದರೆ ತೆರಿಗೆ ಇಲ್ಲ!
ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ ವಾರ್ಷಿಕ 12 ಲಕ್ಷ ರೂಪಾಯಿ ವರೆಗೆ ಆದಾಯ ಇದ್ದರೆ ತೆರಿಗೆ ವಿನಾಯಿತಿ ಪಡೆಯಬಹುದು. ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ 8 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ 30,000 ರೂ. ಉಳಿತಾಯವಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. 9 ಲಕ್ಷ ರೂಪಾಯಿ ಆದಾಯ ಇರುವವರಿಗೆ 40,000 ರೂ. ಮತ್ತು 10 ಲಕ್ಷ ರೂ. ಆದಾಯ ಇರುವವರಿಗೆ 50,000 ರೂಪಾಯಿ ಉಳಿತಾಯವಾಗಲಿದೆ
ತೆರಿಗೆ ಪಾವತಿಯಲ್ಲಿ ಎಷ್ಟು ಉಳಿತಾಯವಾಯ್ತು? ಇಲ್ಲಿದೆ ಲೆಕ್ಕಾಚಾರ
ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ, 11 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 65,000 ರೂ. ಉಳಿತಾಯವಾಗಲಿದೆ. 12 ಲಕ್ಷ ರೂ. ಆದಾಯ ಇದ್ದರೆ 80,000 ರೂ. ಉಳಿತಾಯವಾಗಲಿದೆ. 16 ಲಕ್ಷ ರೂ. ಆದಾಯ ಇದ್ದರೆ 50,000 ರೂ. ಉಳಿತಾಯವಾಗಲಿದೆ. 20 ಲಕ್ಷ ರೂ. ಆದಾಯ ಇದ್ದರೆ 50,000 ರೂ. ಉಳಿತಾಯವಾಗಲಿದೆ.
ಆದಾಯ | ಉಳಿತಾಯ |
8 ಲಕ್ಷ ರೂ. ವರೆಗೆ | 30,000 ರೂ. |
9 ಲಕ್ಷ ರೂ. | 40,000 ರೂ. |
10 ಲಕ್ಷ ರೂ. | 50,000 ರೂ. |
11 ಲಕ್ಷ ರೂ. | 65,000 ರೂ. |
12 ಲಕ್ಷ ರೂ. | 80,000 ರೂ. |
16 ಲಕ್ಷ ರೂ. | 50,000 ರೂ. |
20 ಲಕ್ಷ ರೂ. | 90,000 ರೂ. |
24 ಲಕ್ಷ ರೂ. | 1.10 ಲಕ್ಷ ರೂ. |
50 ಲಕ್ಷ ರೂ. | 1.10 ಲಕ್ಷ ರೂ. |
ಹೊಸ ಆದಾಯ ತೆರಿಗೆ ವ್ಯವಸ್ಥೆಯ ಪ್ರಕಾರ, 24 ಲಕ್ಷ ರೂ. ಆದಾಯ ಇದ್ದರೆ 1.10 ಲಕ್ಷ ರೂ. ತೆರಿಗೆ ಉಳಿತಾಯವಾಗಲಿದೆ. 50 ಲಕ್ಷ ರೂ. ಆದಾಯ ಇದ್ದರೆ 1.10 ಲಕ್ಷ ರೂ. ತೆರಿಗೆ ಉಳಿತಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ತಿಳಿಸಿದ್ದಾರೆ.