ನಮ್ಮ ಮೆಟ್ರೋದಲ್ಲಿ ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಆಗಸ್ಟ್​​ 28: ಬೆಂಗಳೂರು (Bengaluru) ನಗರದಲ್ಲಿ ಸುಗಮ ಮತ್ತು ವೇಗದ ಸಂಚಾರಕ್ಕೆ ನಮ್ಮ ಮೆಟ್ರೋ (Namma Metro) ರೈಲು ಸಾಕಷ್ಟು ಅನುಕೂಲಕಾರಿಯಾಗಿದೆ. ನಮ್ಮ ಮೆಟ್ರೋ ರೈಲಿನಲ್ಲಿ ಪ್ರತಿನಿತ್ಯ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇಂತಹ ಮೆಟ್ರೋ ರೈಲು ಅಥವಾ ನಿಲ್ದಾಣದಲ್ಲಿ ಜನರು ಬೆಳೆ ಬಾಳುವ ವಸ್ತುಗಳನ್ನು ಮರೆತು ಹೋಗುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಒಂದು ವೇಳೆ ನಮ್ಮ ಮೆಟ್ರೋದಲ್ಲಿ ವಸ್ತುಗಳನ್ನು ಕಳೆದುಕೊಂಡರೆ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.

ವಸ್ತುಗಳನ್ನು ಮರಳಿ ಪಡೆಯುವುದು ಹೇಗೆ?

ಪ್ರಯಾಣಿಕರು ಒಂದು ವೇಳೆ ನಮ್ಮ ಮೆಟ್ರೋ ರೈಲಿನಲ್ಲಿ ವಸ್ತುಗಳನ್ನು ಕಳೆದುಕೊಂಡರೆ ಚಿಂತಿಸುವ ಅವಶ್ಯಕತೆ ಇಲ್ಲ. ನಿಮಗೆ ಸುಲಭವಾಗಿ ನಿಮ್ಮ ವಸ್ತುಗಳು ದೊರೆಯುತ್ತವೆ. ನೀವು ರೈಲಿನಲ್ಲಿ ವಸ್ತು, ಬ್ಯಾಗ್​ ಇತ್ಯಾದಿ ಮರೆತು ಹೋಗಿದ್ದರೆ, ಕೂಡಲೆ ನಮ್ಮ ಮೆಟ್ರೋ ವೆಬ್​ಸೈಟ್​ಗೆ ಭೇಟಿ ನೀಡಿ.

  • ಮುಖ ಪುಟದಲ್ಲಿ ಕಾಣುವ grievance ಮೇಲೆ ಕ್ಲಿಕ್​ ಮಾಡಿ. ನಂತರ ಲಾಗಿನ್​ ಆಗಿ.
  • ನಂತರ ನೀವು ಯಾವ ತರಹದ ವಸ್ತುವನ್ನು ಕಳೆದು ಕೊಂಡಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿ.
  • ಬಳಿಕ ಯಾವ ನಿಲ್ದಾಣದಲ್ಲಿ ಕಳೆದುಕೊಂಡಿದ್ದೀರಿ ಎಂಬುವುದನ್ನು ಸೆಲೆಕ್ಟ್​​ ಮಾಡಿ
  • ನಂತರ ನಿಮ್ಮ ವಸ್ತುವಿನ ಸಂಪೂರ್ಣ ಮಾಹಿತಿ, ನಿಮ್ಮ ಮೊಬೈಲ್​ ಸಂಖ್ಯೆ, ಹೆಸರು ಹಾಕಿ.
  • ಕೊನೆಗೆ ನಿಮ್ಮ ವಸ್ತುವಿನ ಫೋಟೋ ಅಪ್​ಲೋಡ್​ ಮಾಡಿ Submit ಕೊಡಿ.

ಒಂದು ವೇಳೆ ವಸ್ತು ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ಸಿಕ್ಕಿದ್ದರೆ, ನಿಮಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ನಂತರ ವಸ್ತುವಿನ ಬಗ್ಗೆ ನಿಮ್ಮ ಬಳಿ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನೀವು ನೀಡಿದ ಮಾಹಿತಿ ಸರಿಯಾಗಿದ್ದರೆ. ನಿಮ್ಮ ವಸ್ತುವನ್ನು ಹಿಂದಿರುಗಿಸುತ್ತಾರೆ.

ಇನ್ನೂ ಒಂದು ಆಯ್ಕೆ ಇದೆ: Travel Info ಮೇಲೆ ಕ್ಲಿಕ್​ ಮಾಡಿ ನಂತರ Lost and Pay ಮೇಲೆ ಕ್ಲಿಕ್​ ಮಾಡಿ. ಅಲ್ಲಿ ನಿಮಗೆ ಹಸಿರು ಮತ್ತು ಪರ್ಪಲ್​ ಮಾರ್ಗದ ಸಹಾಯವಾಣಿ ನಂಬರ್​ ಸಿಗುತ್ತೆ. ಅವರನ್ನು ಸಂಪರ್ಕಿಸಿ, ನಿಮ್ಮ ಬ್ಯಾಗ್​ ಅಥವಾ ವಸ್ತುಗಳ ಬಗ್ಗೆ ದೂರು ದಾಖಲಿಸಬಹುದು. ಅಥವಾ ಮೆಟ್ರೋ ಸಹಾಯವಾಣಿಗೆ ಕರೆ ಮಾಡಿ.

ವಸ್ತುಗಳನ್ನು ಎಲ್ಲಿ ಹಿಂಪಡೆಯಬೇಕು?

ಕಳೆದುಹೋದ ವಸ್ತುಗಳನ್ನು ಯಶವಂತಪುರ ಅಥವಾ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಹಿಂಪಡೆಯಬೇಕು. ಈ ನಿಲ್ದಾಣಗಳಲ್ಲಿ ನಿಮ್ಮ ವಸ್ತು 24 ಗಂಟೆಗಳವರೆಗೆ ಇರಿತ್ತದೆ. ನಿಮ್ಮ ವಸ್ತು ಯಾವ ನಿಲ್ದಾಣದಲ್ಲಿದೆ ಎಂಬ ಮಾಹಿತಿ ಪಡೆದು, ಸಂಗ್ರಹಿಸಬಹುದು. ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಸಿಕ್ಕ ವಸ್ತುಗಳನ್ನು ಮಾಲಿಕರು ಹಿಂಪಡೆಯದಿದ್ದರೆ ಪ್ರತಿ ಆರು ತಿಂಗಳಿಗೊಮ್ಮೆ ಹರಾಜು ಮಾಡಲಾಗುತ್ತದೆ.

Source : https://tv9kannada.com/karnataka/bengaluru/bmrcl-how-to-recover-lost-items-in-bengaluru-namma-metro-kannada-news-vkb-891465.html

 

Leave a Reply

Your email address will not be published. Required fields are marked *