ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 04
ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಮಂಜುನಾಥ ಸ್ಕೂಲ್ ರಸ್ತೆಯಲ್ಲಿನ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ದಾರ ಟ್ರಸ್ಟ್‍ವತಿಯಿಂದ ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜಾತ್ರೋತ್ಸವವೂ ಏಪ್ರಿಲ್ ಆರು ಮತ್ತು ಏಳು ರಂದು ಜರಗಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷರಾದ ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಏ.6ರಂದು ಮದಲಿಂಗತ್ತಿ ಕಾರ್ಯಕ್ರಮ, ಏ.7ರಂದು ಕೆಂಡೋತ್ಸವ ಅಗ್ನಿಕುಂಡ, ಇದರ ಪೂಜಾ ಕಾರ್ಯಗಳನ್ನು ವೇದಬ್ರಹ್ಮ ಪುರೋಹಿತರು ಪುನೀತ್ ಶಾಸ್ತ್ರೀಜಿಯವರು ನಡೆಸಿಕೊಡುವರು. ಹಾಗೂ ಬೇರೆ ಎಲ್ಲಾ ಕಾರ್ಯಗಳನ್ನು ಭಕ್ತರು ಹಾಗೂ ಆಡಳಿತ ಮಂಡಳಿಯವರು ನಡೆಸಿ ಕೂಡಲಿದ್ದಾರೆ.

