ಹೊಳಲ್ಕೆರೆ| ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜಾತ್ರೋತ್ಸವ ಸಂಪನ್ನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 16 : ಹೊಳಲ್ಕೆರೆ ಪಟ್ಟಣದ ಮಂಜುನಾಥ ಸ್ಕೂಲ್ ರೋಡ್‍ನಲ್ಲಿನ ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ
ಟ್ರಸ್ಟ್‍ವತಿಯಿಂದ ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜಾತ್ರೋತ್ಸವವನ್ನು ಸಂಪನ್ನವಾಗಿ ಸಾವಿರಾರು ಭಕ್ತರ ನಡುವೆ
ಜರುಗಿತು.

ಜಾತ್ರೋತ್ಸವದ ಅಂಗವಾಗಿ ಏ. 14 ರಂದು ಅಮ್ಮನವರು ಮಧು ಒಣಗಿತ್ತಿ ಕಾರ್ಯಕ್ರಮ, ಏ. 15 ರಂದು ಗಂಗಾ ಪೂಜೆ ಪೂಜೆಯ
ನಂತರ ಕೆಂಡಾರ್ಚನೆ ನೇರವೇರಿದ್ದು, ಆಗಮಿಸಿದ ಭಕ್ತಾದಿಗಳಿಗೆಲ್ಲ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಇದೇ ಸಮಯದಲ್ಲಿ ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷರಾದ ಎಂ ಸತೀಶ್ ಕುಮಾರ್ ಹಾಜರಿದ್ದು
ಮಾತನಾಡಿದ ಅವರು ಈ ಅಮ್ಮನವರಲ್ಲಿ ಆಗಮಿಸುವ ಭಕ್ತಾಧಿಗಳು ತಮ್ಮ ಇಷ್ಠಾರ್ಥಗಳನ್ನು ದೇವಿಯಲ್ಲಿ ಅರ್ಪಿಸುವುದರ ಮೂಲಕ
ಈಡೇರಿಸಿಕೊಳ್ಳಬಹುದಾಗಿದೆ, ಇದ್ದಲ್ಲದೆ ಇಲ್ಲಿ ಮಾಟ ಮದ್ದು ಭೂತ ಪಿಶಾಚಿ, ಪೀಡೆಗಳನ್ನು ಬಗೆಹರಿಸಲಿದ್ದಾರೆ. ಇದಕ್ಕೆ
ಭಕ್ತಾಧಿಗಳಿಂದ ಹಣವನ್ನು ಪಡೆಯುವುದಿಲ್ಲ ಇದರ ಅಭೀವೃದ್ದಿಗೆ ಸರ್ಕಾರದ ಅನುಗ್ರಹ ಅಗತ್ಯ ಇದೆ ಈ ಅಮ್ಮನವರಿಂದ ಬಹಳಷ್ಟು
ಜನ ಓಳ್ಳೆಯದನ್ನು ಅನುಭವಿಸಿದ್ದಾರೆ.

ಅಮ್ಮನವರ ಹೋಮ ಹವನ ಪೂಜೆಯನ್ನು ವೇದ ಬ್ರಹ್ಮ ಪುರೋಹಿತ ಪುನಿತ್ ಶಾಸ್ತ್ರಿಜಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ
ಟ್ರಸ್ಟ್ ಸದಸ್ಯರಾದ ಪೂಜಾರ್ ಕಾಳ್ಯ ನಾಯಕ್ ಹೀರಾ ನಾಯಕ್ ಮಂಜುನಾಥ್ ಶಿವಾನಂದಪ್ಪ ಆನಂದ್ ಮಹೇಶ್ ಇನ್ನೂ ಇತರರು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *