ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 7 : ಪಿಎಸ್ ಐ ಪರಶುರಾಮ್ ಕುಟುಂಬಸ್ಥರ ಮನಸ್ಸಿಗೆ ನೋವಾಗಿದೆ, ನೋವಿನಲ್ಲಿ ಮಾತನಾಡುತ್ತಾರೆ, ನಾವು ಸಾಂತ್ವನ ಹೇಳಿ ನಮ್ಮ ತೀರ್ಮಾನ ಹೇಳಿಬರುತ್ತೇವೆ. ನಾನು ಈಗಾಗಲೇ ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಿದ್ದೇನೆ ಎಂದು ಗೃಹ ಸಚಿವರಾಧ ಜಿ.ಪರಮೇಶ್ವರ ತಿಳಿಸಿದರು.

ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೃಹ ಸಚಿವರು ಬರುವುದಾದರೆ ಆರೋಪಿಗಳನ್ನು ಬಂಧಿಸಿ ಬರಲಿ ಎಂಬ ಪಿಎಸ್‍ಐ ಪರಶುರಾಮ್ ಕುಟುಂಬಸ್ಥರ ಹೇಳಿಕೆಗೆ ಹಾಗೂ ಪ್ರಕರಣವನ್ನು ಸಿಬಿಐ ವಹಿಸಬೇಕು ಎಂಬ ಪಿಎಸ್‍ಐ ಪರಶುರಾಮ್ ರವರ ಪತ್ನಿಯ ಅಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಿಎಂ ವಿರುದ್ಧ ಆರ್ ಟಿಐ ಕಾರ್ಯಕರ್ತ ಕೃಷ್ಣ ದೂರು ವಿಚಾರಕ್ಕೆ ಪ್ರತಿಕ್ರಿಯಿಸಿ ನಾವು ಈಗಾಗಲೇ ದೇಸಾಯಿ ಕಮಿಷನ್ ಮಾಡಿದ್ದೇವೆ, ದೇಸಾಯಿ ಕಮಿಷನ್ಮುಂದೆ ದೂರು ಕೊಟ್ಟರೆ ಪರಿಶೀಲಿಸುತ್ತಾರೆ. ತಪ್ಪಿದ್ದರೆ ವರದಿಯಲ್ಲಿ ಅನುಮೋದನೆ ಮಾಡುತ್ತಾರೆ.ಸಿಎಂ ರಾಜೀನಾಮೆ ಬಗ್ಗೆ ಬಿ.ವೈ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಆ ರೀತಿ ಬೇಡಿಕೆ ಆಸೆ ಅವರಿಗಿದೆ, ನಮ್ಮಾಸೆ ಬೇರೆ ತರಹ ಇದೆ ಎಂದರು.
ಠಾಣೆಗಳಿಗೆ ಪೋಸ್ಟಿಂಗ್ ಗೆ ಲಕ್ಷ, ಕೋಟಿ ರೂ. ಲಂಚ ನೀಡಬೇಕು ಎಂಬ ನಿವೃತ್ತ ಐಪಿಎಸ್ ಅಧಿಕಾರಿ ಬಾಸ್ಕರ್ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿ ಮಾಹಿತಿಗಳಿದ್ದರೆ ನಮಗೂ ಹೇಳಿದರೆ ಕ್ರಮ ಕೈಗೊಳ್ಳೋಣ. ಪಿಎಸ್‍ಐ ನೇಮಕಾತಿಯಲ್ಲಿ ಹಗರಣ ಬಗ್ಗೆ ತನಿಖೆಯು ನಡೆಯುತ್ತಿದೆ ಹಗರಣದಲ್ಲಿ ಭಾಗಿಯಾಗಿದ್ದ ಎಡಿಜಿಪಿ ಜೈಲಿಗೆ ಹೋಗಿ ಬಂದು ಈಗ ಬೇಲ್ ಮೇಲೆ ಇದ್ದಾರೆ. ದಲಿತ ಸಿಎಂ ವಿಚಾರ ಚರ್ಚೆಗೆ ಬರುತ್ತಿಲ್ಲ ಸುಮ್ಮನೆ ನೀವೆ ಹೇಳಬೇಡಿ.