Horoscope 02 Feb: ದಿನಭವಿಷ್ಯ; ಮಕ್ಕಳು ನಿಮ್ಮ ವಿರುದ್ಧ ನಿಲ್ಲುವರು, ಆಸ್ತಿಯ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:05ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ.

ಮೇಷ ರಾಶಿ: ಇಂದು ಮನಸ್ಸಿನ ಏರಿಳಿತಗಳಿಂದ ಜೊತೆಗಾರರಿಗೆ ಕಷ್ಟವಾದೀತು. ಕುಟುಂಬದ ಆಪ್ತರ ಆರೋಗ್ಯದ ಬಗ್ಗೆ ಕಾಳಜಿ ಇರುವುದು. ಇಂದು ವ್ಯಾಪಾರಿಗಳಿಗೆ ಒತ್ತಡ ಉಂಟಾಗಬಹುದು. ಆನ್‌ಲೈನ್ ಖರೀದಿಯು ಅಧಿಕವಾಗಿದ್ದು, ಗೊತ್ತಾಗದಂತೆ ಖರ್ಚು ಮಾಡಿಕೊಳ್ಳುವಿರಿ. ವಾಹನ ಖರೀದಗೆ ಹೆಚ್ಚು ಒತ್ತು ಕೊಡಲಿದ್ದೀರಿ. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಅಳತೆ ಮೀರಿ ವರ್ತಿಸುವುದು ಬೇಡ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ. ನಿಮ್ಮ‌ ಸಹಾಯ ಗುಣವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ವಿಚಾದಲ್ಲಿ ನಿಮಗೆ ತಾಳ್ಮೆ ಕಡಿಮೆ‌ ಎನಿಸಬಹುದು. ಯಾರನ್ನೂ ಹಗುರಾಗಿ ಕಾಣಲಾರಿರಿ.

ವೃಷಭ ರಾಶಿ: ಇಂದು ವ್ಯಾಪಾರವು ಗಳಿಕೆಯ ಕಡೆ ಮುಖ ಮಾಡಬಹುದು. ಇಂದು ನೀವು ಮತ್ತು ನಿಮ್ಮ ಸಂಗಾತಿಯು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ನಿಮ್ಮ ಮನಸ್ಸಿಗೆ ತೃಪ್ತಿ ಇರುತ್ತದೆ. ಕುಟುಂಬದಲ್ಲಿ ದೀರ್ಘಕಾಲದವರೆಗೆ ಯಾವುದೇ ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದರೆ, ಇಂದು ಅದು ಕೊನೆಗೊಳ್ಳಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಅಪಕ್ವತೆಯು ಕಾಣುತ್ತದೆ. ಸುಲಭ ಸಂಗತಿಯನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ಶತ್ರುಗಳಿಂದ ಉದ್ಯಮಕ್ಕೆ ತೊಂದರೆ ಆಗಬಹುದು. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ನೂತನ ಗೃಹನಿರ್ಮಾಣಕ್ಕೆ ಸಂಗಾತಿಗೆ ಒತ್ತಡವನ್ನು ತರುವಿರಿ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ಇದ್ದ ಆಸೆಯನ್ನು ಪೂರ್ಣಮಾಡಿಕೊಳ್ಳುವಿರಿ.

ಮಿಥುನ ರಾಶಿ: ಇಂದಿನ ವ್ಯವಹಾರವು ಲಾಭದಾಯಕವಾಗಿರುತ್ತದೆ. ಆರ್ಥಿಕತೆಯ ಬಗ್ಗೆ ಕೆಲಸ ಮಾಡುವವರಿಗೆ ಇದು ಬಿಡುವಿಲ್ಲದ ದಿನವಾಗಬಹುದು. ಕೆಲಸದ ನಿಮಿತ್ತ ನೀವು ಇಂದು ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಪ್ರಗತಿಯ ಮಾರ್ಗಗಳನ್ನು ತೆರೆಯಬಹುದು. ನೀವು ಉತ್ತಮ ವ್ಯವಹಾರದಿಂದ ಇಂದು ಯಶಸ್ವಿಯಾಗುತ್ತೀರಿ. ನಿಮ್ಮ ಪೋಷಕರು ಮತ್ತು ಒಡಹುಟ್ಟಿದವರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಸಮಯೋಚಿತ ಸ್ಪಂದ‌ನೆಯಿಂದ ಗೌರವ ಸಿಗುವುದು. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ಕಛೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಎಲ್ಲವನ್ನೂ ಹಣದಿಂದ ಲೆಕ್ಕಹಾಕಲಾಗದು.

ಕರ್ಕ ರಾಶಿ: ಇಂದು ನಿಮ್ಮ ಮನಸ್ಸಿನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಏನಾದರೂ ಗೊಂದಲವಿರಬಹುದು. ಯಾವುದೋ ಅವಘಡದ ಸೂಚನೆಯಿಂದ ನೀವು ಹೆದರುವಿರಿ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡೀತು. ನಿಮ್ಮ ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ, ನಿಮ್ಮ ಸಂಗಾತಿಯ ನಿಮ್ಮ ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ನೀವು ಧರ್ಮ ಕರ್ಮದ ಕೆಲಸಗಳಲ್ಲಿ ಆಸಕ್ತಿ ತೋರಿಸುವಿರಿ. ಇಂದು ಮನೆಯ ಹಿರಿಯರಿಂದ ಆಶೀರ್ವಾದ ಬಲಬಂದಂತೆ ಅನ್ನಿಸಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು. ಒಂದೇ ತಕ್ಕಡಿಯಲ್ಲಿ ಎಲ್ಲರನ್ನೂ ತೂಗಲಾಗದು. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ.‌

ಸಿಂಹ ರಾಶಿ: ಇಂದು ಆರೋಗ್ಯ ವಿಷಯಗಳಲ್ಲಿ ಅಪಾಯಗಳು ಮತ್ತು ಅಜಾಗರೂಕತೆಯಿಂದ ದೂರವಿರಬೇಕು. ವ್ಯವಹಾರದಲ್ಲಿ ನೀವು ಸ್ಪರ್ಧಿಗಳ ಬಗ್ಗೆ ತಿಳಿಯಿರಿ. ಹಣಕಾಸಿನ ವಿಷಯಗಳಲ್ಲಿ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಪ್ರೇಮ ಜೀವನದ ಸಂದರ್ಭದಲ್ಲಿ, ದಿನವು ಸಾಮಾನ್ಯವಾಗಿರುತ್ತದೆ. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ಬಹಳ ದಿನಗಳಿಂದ ಇದ್ದ ಅನಾಥ ಭಯವನ್ನು ನೀವು ದೂರಮಾಡಿಕೊಳ್ಳುವಿರಿ. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗುವುದು. ಯಾರಾದರೂ ಸಂಬಂಧದ ನಡುವೆ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಪ್ರಭಾವವು ಇಂದು ಹೆಚ್ಚಾಗಬಹುದು ಎಂದು ಅಂದುಕೊಳ್ಳುವಿರಿ. ನಿಮ್ಮ ಜಮೀನು ಅಥವಾ ಅದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ಜಯ ಸಾಧಿಸಬಹುದು. ನಿಮಗೆ ಬಂಧುಗಳ ಬೆಂಬಲವು ಯೋಜಿತ ಕಾರ್ಯಕ್ಕೆ ಸಿಗಲಿದೆ. ಇಂದು ನೀವು ಹಣಕಾಸಿನ ವಿಷಯದಲ್ಲಿ ಲಾಭವನ್ನು ಪಡೆಯುತ್ತೀರಿ. ನಿಮ್ಮ ಇಂದಿನ ಗಳಿಕೆಯಿಂದ ಸಂತೋಷವಾಗುತ್ತದೆ. ನೀವು ತಾಳ್ಮೆಯಿಂದಿರಿ ಮತ್ತು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಮಕ್ಕಳಿಗಾಗಿ ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಿರಿ.

ತುಲಾ ರಾಶಿ: ಇಂದು ನಿಮ್ಮ ಮನಸ್ಸಿಗೆ ಅನೇಕ ಸಕಾರ ಹಾಗೂ ನಕಾರಾತ್ಮಕವಾದ ಮಿಶ್ರ ಆಲೋಚನೆಗಳು ಬರಬಹುದು. ನಿಮ್ಮ ಕ್ರಿಯಾಶೀಲತೆಯಿಂದ ಪ್ರಶಂಸೆಯು ಸಿಗಲಿದೆ. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚು ಚಿಂತೆ ಮಾಡಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕೆಲವು ಯೋಜನೆಗಳನ್ನು ಸಹ ಮಾಡಬಹುದು. ಆರ್ಥಿಕ ಲಾಭಕ್ಕಾಗಿ ನೀವು ಅವಕಾಶಗಳನ್ನು ಪಡೆಯುವುದನ್ನು ಮುಂದುವರಿಸುವಿರಿ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ನಿಮ್ಮ ಮನಸ್ತಾಪವನ್ನು ಕೋಪದ‌ ಮೂಲಕ ಹೊರಹಾಕುವಿರಿ. ನಿಮ್ಮ ನಡವಳಿಕೆಯ ಬಗ್ಗೆ ಹಿರಿಯರು ಮಾತನಾಡಿಕೊಳ್ಳುವರು.

ವೃಶ್ಚಿಕ ರಾಶಿ: ಇಂದು ಆಹ್ಲಾದಕರ ವಾತಾವರಣವು ಇರಲಿದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಗಮನವೂ ಬೇಕು. ದೇಹಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು ನಿಮಗೆ ಸರಿಹೊಂದುವುದು. ಇಂದು ನೀವು ದಿನದ ಕೊನೆಯಲ್ಲಿ ಸುವಾರ್ತೆಯನ್ನು ನಿರೀಕ್ಷಿಸಬಹುದು. ಸಹೋದರರ ಬೆಂಬಲ ಸಿಗಲಿದೆ. ಇಂದು ನಿಮ್ಮ ಹವ್ಯಾಸವನ್ನು ಪೂರೈಸಲು ಸಮಯವನ್ನು ತೆಗೆದುಕೊಳ್ಳುವಿರಿ. ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗಬಹುದು. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ.‌ ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದು ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಅಂತಹ ಸಂದರ್ಭವು ಸೃಷ್ಟಿಯಾಗಬಹುದು.

ಧನು ರಾಶಿ: ನೀವು ಇಂದು ಒಮ್ಮೆಲೆ ಸ್ವೀಕರಿಸಲು ಒಪ್ಪಲಾರಿರಿ. ನೀವು ಇಂದು ವ್ಯಾಪಾರದಲ್ಲಿ ಲಾಭವನ್ನು ಪಡೆಯುವಿರಿ. ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಇಂದು ನಿಮ್ಮ ಪರಿವಾರದಲ್ಲಿ ಪ್ರೀತಿ ಮತ್ತು ಸಾಮರಸ್ಯ ಉಳಿಯಲಿದೆ. ಪೋಷಕರು ಬೆಂಬಲಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ತಂತ್ರಜ್ಞಾನದ ಬಗ್ಗೆ ಮಾಹಿತಿ ಕಡಿಮೆ‌ ಇರುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಗುಣಮುಖವಾಗುವ ಆರೋಗ್ಯದಿಂದ ಸಮಾಧಾನ‌ ಸಿಗಲಿದೆ. ನಿಮ್ಮನ್ನು ತಿಳಿದವರೇ ನಿಮಗೆ ವಂಚನೆ ಮಾಡಬಹುದು.

ಮಕರ ರಾಶಿ: ಇಂದು ನಿಮ್ಮ ಕೆಲಸದ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ ನೀವು ಗೌರವವನ್ನು ಪಡೆಯಬಹುದು. ನಿಮ್ಮ ಪ್ರಭಾವವೂ ಇಂದು ಇತರರ ಮೇಲೆ ಹೆಚ್ಚಾಗಿರಲಿದೆ. ಕುಟುಂಬದಲ್ಲಿಯೂ ನೀವು ಗೌರವವನ್ನು ಪಡೆಯುವಿರಿ. ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಯಸಿದರೆ ಅಥವಾ ಯಾವುದಾದರೂ ಸಾಮಾಜಿಕ ಸಂಸ್ಥೆಗೆ ಸೇರಲು ಇಚ್ಛಿಸಬಹುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗುರುತನ್ನು ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಭೂಮಿಯ ಮೇಲೆ ಹೂಡಿಕೆ‌ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ. ನಿಮ್ಮ ನೋವನ್ನು‌ ನೀವೇ ನುಂಗಿಕೊಳ್ಳುವಿರಿ.

ಕುಂಭ ರಾಶಿ: ನೀವು ಇಂದು ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ಗೊಂದಲಕ್ಕೊಳಗಾಗಬಹುದು. ಕೆಲಸದ ಸ್ಥಳದಲ್ಲಿ ಉದ್ವಿಗ್ನತೆ ಇರುತ್ತದೆ. ನೀವು ವಿರುದ್ಧ ಲಿಂಗಿಗಳ ಬೆಂಬಲವನ್ನು ಪಡೆಯುತ್ತೀರಿ. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ. ನಿಮಗೆ ಬರಬೇಕಾದ ಹಣವನ್ನು ನೀವು ಬಿಟ್ಟುಕೊಡುವಿರಿ. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಬಲವಾದ ನೋವನ್ನು ಪಡೆಯಬೇಕಾದೀತು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯೂ ಬರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಸ್ವಂತ ಹಣವನ್ನು ದುಪ್ಪಟ್ಟು ಖರ್ಚುಮಾಡುವಿರಿ.

ಮೀನ ರಾಶಿ: ಇಂದು ಆರ್ಥಿಕ ವಿಷಯಗಳಿಗೆ ಬಂಧುಗಳ ಪ್ರವೇಶವಾಗಬಹುದು. ಮಕ್ಕಳು ನಿಮ್ಮ ವಿರುದ್ಧ ದಿಕ್ಕಿನ ಕಡೆ ಇರುವರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಇಂದಿನ‌ ಒತ್ತಡದಲ್ಲಿ ನೀವು ಅನೇಕ ವಿಚಾರಗಳನ್ನು ಮರೆಯುವಿರಿ. ಮನಸ್ಸಿಗೆ ನೆಮ್ಮದಿ ಸಿಗುವ ಜಾಗಕ್ಕೆ ಹೋಗುವಿರಿ. ಅಪರಿಚಿತರ ಮುಂದೆ ಅಸಭ್ಯ ವರ್ತನೆ ಬೇಡ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *