ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12 ರಿಂದ ಮಧ್ಯಾಹ್ನ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:41 ರಿಂದ ಸಂಜೆ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12 ರ ವರೆಗೆ.
![](https://samagrasuddi.co.in/wp-content/uploads/2024/03/image-140.png)
ಮೇಷ ರಾಶಿ: ಇಂದು ನಿಮ್ಮ ಆತ್ಮವಿಶ್ವಾಸದ ನಿರೀಕ್ಷೆಗಳು ನಿಮ್ಮ ಭರವಸೆಗಳನ್ನು ಪೂರೈಸುವುವು. ಹೆಚ್ಚು ಖರೀದಿಸಲು ಧಾವಿಸುವ ಮೊದಲು ನಿಮ್ಮ ಬಳಿ ಇರುವುದನ್ನು ಬಳಸಿ. ನೀವು ಇಂದು ಏನು ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನಿಮ್ಮ ಕುಟುಂಬದ ಸದಸ್ಯರು ನಿರ್ಧರಿಸಬಹುದು.. ಪ್ರೀತಿಯ ವ್ಯವಹಾರಗಳಲ್ಲಿ ಬಲವಂತ ಬೇಡ. ಇಂದು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ಇನ್ನೊಬ್ಬರ ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗುವುದು.
ವೃಷಭ ರಾಶಿ: ಇಂದು ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಹಣಗಳಿಕೆಯ ಹೊಸ ಮಾರ್ಗವು ಆಶಾದಾಯಕ ಆಗಿರುತ್ತದೆ. ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಮುಖ್ಯವಾಗುವಿರಿ. ಇಂದು ನಿಮ್ಮ ಪ್ರೇಮಿಯು ಅನಗತ್ಯ ಬೇಡಿಕೆಯನ್ನು ಇಡಬಹುದು. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ಹಾಗಾಗಿ ನಿಮ್ಮ ಮನಃಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಅಸತ್ಯವಾದ ನಿಮ್ಮ ಮಾತನ್ನು ನಂಬುವವರಿದ್ದಾರೆ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ವ್ಯಾಪಾರವನ್ನು ನಮ್ರರಾಗಿ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ.
ಮಿಥುನ ರಾಶಿ: ಕ್ರಿಯಾತ್ಮಕವಾದ ಯೋಜನೆಯ ಬಗ್ಗೆ ಆಸಕ್ತಿಯು ಹೆಚ್ಚುವುದು. ಸೋಮಾರಿಯಾಗಿ ಕುಳಿತುಕೊಳ್ಳುವ ನಿಮ್ಮ ಅಭ್ಯಾಸದಿಂದ ಮಾನಸಿಕ ಶಾಂತಿಯೂ ಹಾಳಾಗುವುದು. ನಿಮ್ಮ ತಂದೆಯ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಹಣದ ಪ್ರಯೋಜನವನ್ನು ನೀಡುತ್ತದೆ. ಕೌಟುಂಬಿಕ ಕಾರ್ಯಗಳು ಮತ್ತು ಪ್ರಮುಖ ಸಮಾರಂಭಗಳಿಗೆ ಪವಿತ್ರ ದಿನ. ಕೆಲಸದಲ್ಲಿ ತಲೆನೋವು ಕಾಣಸಿಕೊಳ್ಳಲಿದ್ದು ಎಲ್ಲ ಕಾರ್ಯಗಳೂ ವ್ಯತ್ಯಾಸ ಆಗಬಹುದು. ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ ಕಾನೂನಾತ್ಮಕ ತೊಂದರೆಗಳನ್ನು ಪರಿಹರಿಸಿಕೊಳ್ಳಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು. ನಿಮ್ಮ ಕಾರ್ಯದ ಪರಿಶೀಲನೆಗೆ ಅಧಿಕಾರಿಗಳು ಬರಬಹುದು. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡಲಡುವರು. ಶುಭ ಕಾರ್ಯಗಳಿಗೆ ನೀವು ಪ್ರೇರಣೆ ಕೊಡುವಿರಿ.
ಕರ್ಕಾಟಕ ರಾಶಿ: ಇಂದು ನಿಮ್ಮ ಆರೋಗ್ಯದ ವಿಚಾರದಲ್ಲಿ ಅನಾದರ ಬೇಡ. ದುರಭ್ಯಾಸಗಳ ಕಡೆ ಗಮನವು ಬರಬಹುದು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಖರ್ಚಾಗಬಹುದು. ಮಕ್ಕಳ ಅಭ್ಯಾಸದ ಮಟ್ಟವು ತಿಳಿಯುವುದು. ದಿನದ ಮಧ್ಯದಲ್ಲಿ ವಿಶ್ರಾಂತಿಯ ಅವಶ್ಯಕತೆ ಬರಬಹುದು. ಇತರ ಚಟುವಟಿಕೆಗಳು ನಿಮ್ಮನ್ನು ದಿನವಿಡೀ ಬಿಡುವಿಲ್ಲದಂತೆ ಇರುತ್ತವೆ. ನಿಮ್ಮ ಮಾತು ಅರ್ಥಪೂರ್ಣವಾಗಿ ಇರಲಿ. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಸ್ವಪ್ರತಿಷ್ಠೆಯನ್ನು ಬಿಡುವುದು ಉತ್ತಮ. ಧನವ್ಯಯವಾದರೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು. ನೆಮ್ಮದಿಯ ಸೂತ್ರವನ್ನು ನೀವೇ ಕಂಡುಕೊಳ್ಳಬೇಕು.
ಸಿಂಹ ರಾಶಿ: ಇಂದು ನೀವು ಯಾವ ಸಂದರ್ಭದಲ್ಲಿಯೂ ಖಿನ್ನತೆಗೆ ಸಿಲುಕದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಿದೆ. ನೀವು ಆರ್ಥಿಕವಾಗಿ ವ್ಯವಹರಿಸುವರ ಜೊತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿಯು ಇಂದು ಮನೆಯಲ್ಲಿ ಸಂತೋಷ-ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾರೆ. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಏನಾದರೂ ಹೇಳಲು ಬರಬಹುದು. ಕಾರ್ಯದಲ್ಲಿ ಎಲ್ಲವೂ ನಿಮ್ಮ ಪರವಾಗಿದ್ದಂತೆ ತೋರುತ್ತದೆ. ಇತರರ ಜೊತೆ ನೀವು ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಶತ್ರುಗಳು ನಿಮ್ಮನ್ನು ಗೆಲ್ಲಲು ಪ್ರಯತ್ನಿಸಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ಮಕ್ಕಳ ಉದ್ಯಮಕ್ಕೆ ನೀವು ಸಹಾಯ ಮಾಡುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವು ಆಗಬಹುದು. ಧನಾತ್ಮಕ ಚಿಂತನೆಯಿಂದ ಕಳೆದುಕೊಂಡ ಉತ್ಸಾಹವು ಮತ್ತೆ ಬರುವುದು.
ಕನ್ಯಾ ರಾಶಿ: ನೀವು ಇಂದು ಮಾನಸಿಕವಾಗಿ ಅತ್ಯಂತ ದುರ್ಬಲರಾದಂತೆ ಕಾಣಿಸುವುದು. ಆದ್ದರಿಂದ ನೀವು ನೋವಿನಲ್ಲಿ ಒದ್ದಾಡುವ ಸಂದರ್ಭಗಳಿಂದ ಹೆಚ್ಚು ಇರುವುದು. ದೊಡ್ಡ ಯೋಜನೆಗಳಿಂದ ನಿಮ್ಮ ಗಮನ ಸೆಳೆಯುವರು. ಯಾವುದೆ ಅದರೂ ಹೂಡಿಕೆ ಮಾಡುವ ಮೊದಲು ವ್ಯಕ್ತಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸಿ. ಸಂಬಂಧಿಗಳು ಕೆಲವು ಒತ್ತಡ ಸೃಷ್ಟಿಸಬಹುದು. ಪರಿಸ್ಥಿತಿಯನ್ನು ನಿಯಂತ್ರಿಸಲು ನಿಮ್ಮ ಶಾಂತತೆ ಕಾಯ್ದುಕೊಳ್ಳಿ. ಯಾವುದೇ ಆತುರದ ನಿರ್ಧಾರ ನಿಮಗೆ ದುಬಾರಿಯಾಗುತ್ತದೆ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು ಅವುಗಳನ್ನು ಹಾಳುಮಾಡಬಹುದು. ಒಡಕುಗಳಿಗೆ ಅವಕಾಶವನ್ನು ಕೊಡುವುದು ಬೇಡ. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ವಾಹನವನ್ನು ಖರೀದಿಸಲು ನೀವು ಸಮಯದ ನಿರೀಕ್ಷೆಯಲ್ಲಿ ಇರುವಿರಿ. ಮಗುವಿನ ಆರೋಗ್ಯದ ಚಿಂತೆ ಇಂದು ಕಾಡಬಹುದು.
ತುಲಾ ರಾಶಿ: ಮಕ್ಕಳು ನಿಮ್ನ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಎಂಬ ಕೋಪವು ಇರುತ್ತದೆ. ಕೋಪವು ಇಂದು ನಿಯಂತ್ರಣ ತಪ್ಪಿ ಬರಬಹುದು. ಇಂದು ಆದ ಆಯಾಸದಿಂದ ಶಕ್ತಿಯು ಕುಂಠಿತವಾಗುವುದು. ತುರ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯು ಕಡಿಮೆ ಇರುವುದು. ಯಾವುದನ್ನೂ ಬೇಗನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ಇಂದು ಹಣದ ನಷ್ಟವು ಸಂಭವಿಸಬಹುದು. ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿದ್ದಷ್ಟು ಉತ್ತಮ. ಇಂದು ನಿಮ್ಮ ಅತ್ಯುತ್ತಮ ನಡವಳಿಕೆಯಿಂದ ಖ್ಯಾತಿಯನ್ನು ಪಡೆಯುವಿರಿ. ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು.
ವೃಶ್ಚಿಕ ರಾಶಿ: ನೀವು ಇಂದು ಕೆಲವರಿಗೆ ಸ್ವಾರ್ಥಕ್ಕಾಗಿ ಕೆಲವನ್ನು ಮಾಡಿಕೊಡಬೇಕಾಗಬಹುದು. ನಿಮ್ಮ ಊಹಾ ಶಕ್ತಿಯು ನಿಮ್ಮ ದಾರಿಯನ್ನು ತಪ್ಪಿಸಬಹುದು. ಎಲ್ಲ ಹೂಡಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗುವುದು. ನಿಮ್ಮ ಸಾಮಾಜಿಕ ಜೀವನವನ್ನು ಬಹಳ ಮುತುವರ್ಜಿಯಿಂದ ನಿಭಾಯಿಸಬೇಕು. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ. ಕುಟುಂಬದ ಜೊತೆಗೆ ಯಾವುದಾದರೂ ಸಮಾರಂಭಕ್ಕೆ ಹೋಗುವಿರಿ. ಸಂಗಾತಿಯ ಪ್ರೀತಿ ನಿಜವಾಗಿಯೂ ಭಾವುಕವಾದುದು ಎಂದು ಗೊತ್ತಾಗುವುದು. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಕೊಡುವ ಮನಸ್ಸಿರುವುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಂಗಲ ಕಾರ್ಯಕ್ಕೆ ಸಾಲವನ್ನು ಮಾಡಬೇಕಾಗುವುದು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು. ವ್ಯಾಪಾರಸ್ಥರಿಗೆ ಸಾಮಾನ್ಯವಾಗಿ ಇರುವುದು.
ಧನು ರಾಶಿ: ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ಯಾರದೋ ಮೂಲಕ ಸಿಗಲಿದೆ. ಯಾವುನ್ನಾದರೂ ಒಪ್ಪಿಕೊಳ್ಳುವ ಮೊದಲು ಆಗಬಹುದಾದ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಿಮಗೆ ಆತ್ಮಸಾಕ್ಷಿಯೇ ನಿಜವಾದ ಬಲವಾಗಲಿದೆ. ಸಮಯವು ತುಂಬಾ ವೇಗವಾಗಿ ಓಡುತ್ತಿರುವಂತೆ ಅನ್ನಿಸುವುದು. ನಿಮ್ಮ ಅಮೂಲ್ಯ ಸಮಯವನ್ನು ಬಳಸಲು ಕಲಿಯಿರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡುವಿರಿ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ ಪಾಲಿಗೆ ಬರುವುದು. ಅನಪೇಕ್ಷಿತ ಮಾತುಗಳ ಕಡೆ ಗಮನ ಬೇಡ.
ಮಕರ ರಾಶಿ: ಇಂದು ನಿಮ್ಮ ಒತ್ತಡದ ಸಮಯವು ನಿಮ್ಮ ಸಹನೆಯನ್ನು ವ್ಯತ್ಯಾಸ ಮಾಡಬಹುದು. ಹಿಂದಿನ ಬಂಡವಾಳದಿಂದ ಆದಾಯವನ್ನು ನಿರೀಕ್ಷಿಸಿದ್ದಲ್ಲಿ ಅಲ್ಪ ಸಿಗಬಹುದು. ಗೃಹ ಜೀವನ ಶಾಂತಿಯುತವಾಗಿರುವುದು. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯೋರ್ವರು ಸಂಧಿಸುವರು. ಇಂದು ಅನುಕೂಲಕರವಾದ ದಿನವಾಗಿ ಕಾರ್ಯದಲ್ಲಿ ಸೂಕ್ತವಾಗಿ ಬಳಸಿಕೊಳ್ಳಿ. ಇಂದು ನೀವು ಉತ್ತಮ ವಿಚಾರಗಳನ್ನು ತುಂಬಿಕೊಳ್ಳುವಿರಿ. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಆಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು.
ಕುಂಭ ರಾಶಿ: ನೀವು ಅನ್ಯರನ್ನು ಟೀಕಿಸುವ ಅಭ್ಯಾಸದಿಂದ ನೀವೇ ಟೀಕೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಹಾಸ್ಯವು ಇತರರಿಗೆ ತೊಂದರೆ ಕೊಡಬಹುದು. ಹಣದ ಪರಿಸ್ಥಿತಿಯು ಸ್ವಲ್ಪ ಚೇತರಿಸಿದಂತೆ ಕಾಣಿಸುತ್ತದೆ. ಪತ್ನಿಯೆ ಜೊತೆ ಹೊರಗೆ ಸುತ್ತಾಡಲು ಹೋಗಿ ಆನಂದಿಸುವಿರಿ. ಇಂದು ನಿಮ್ಮ ತಿಳುವಳಿಕೆಯ ಪರೀಕ್ಷೆಯು ಆಗಬಹುದು. ನೀವು ಭವಿಷ್ಯದಲ್ಲಿ ವಿಷಾದಿಸುವ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಇಷ್ಟದ ವಸ್ತುಗಳು ಕಣ್ಮರೆಯಾಗಬಹುದು. ಅಗತ್ಯದ ಕಾರ್ಯವನ್ನು ಇತರರ ಸಹಾಯವನ್ನು ಪಡೆದು ಮುಗಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಸಂಗಾತಿಯ ಜೊತೆ ಕುಳಿತು ದುಃಖದಿಂದ ಸಮಾಧಾನ ಮಾಡುವಿರಿ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದಲೂ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ತಂದೆಯ ಮಾತು ನಿಮಗೆ ಹಿತವೆನಿಸೀತು.
ಮೀನ ರಾಶಿ: ಇಂದು ನೀವು ಪೂರ್ಣ ಯಶಸ್ಸನ್ನು ಪಡೆಯುವ ಹಂತದಲ್ಲಿ ಸೋಲುವಿರಿ. ನಿಮ್ಮ ಹಣವನ್ನು ಒಂದು ಸುರಕ್ಷಿತ ಸ್ಥಳದಲ್ಲಿರಿಸುವಿರಿ. ಮಕ್ಕಳ ಜೊತೆಗಿನ ನಿಮ್ಮ ಕಠಿಣ ವರ್ತನೆ ನಿಮಗೆ ಸಿಟ್ಟನ್ನು ತರಿಸಬಹುದು. ನಿಮಗೆ ತಾಳ್ಮೆಯ ಗೋಡೆಯ ಅವಶ್ಯಕತೆ ಇದೆ. ಅನ್ಯರ ವ್ಯಕ್ತಿಯ ಹಸ್ತಕ್ಷೇಪವನ್ನು ನೀವು ಸಹಿಸಲಾರಿರಿ. ಸ್ವಾಭಿಮಾನಕ್ಕೆ ಅಡ್ಡಪಡಿಸಲು ಕೊಡುವುದಿಲ್ಲ. ನಿಮ್ಮ ಕೈಕೆಳಗಿನವರು ಏನು ಹೇಳುತ್ತಾರೆಂದು ಕೇಳಿ. ನಿಮ್ಮ ಸ್ಪರ್ಧಾತ್ಮಕ ಸ್ವಭಾವವು ಎಲ್ಲವನ್ನೂ ಪಡೆಯಬೇಕು ಎನ್ನುವ ಆಸೆಯು ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1