Rashi Bhavishya: 2024 ಏಪ್ರಿಲ್ 19 ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾ ಫಲ್ಗುಣೀ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:59 ರಿಂದ 12:32ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:13 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:51 ರಿಂದ 09:25ರ ವರೆಗೆ.
ಮೇಷ ರಾಶಿ : ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರಿರಿ. ಇದಕ್ಕಾಗಿ ಯಾರಿಂದಲಾದರೂ ಅಪಮಾನ ಆಗಬಹುದು. ಆರ್ಥಿಕವಾಗಿ ನಿಮ್ಮನ್ನು ಯಾರಾದರೂ ಕೇಳಬಹುದು. ಸಿಕ್ಕಿದ್ದನ್ನು ಸದುಪಯೋಗ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿ. ಮಾತನ್ನು ಉಳಿಸಿಕೊಂಡು ಗೆಲ್ಲುವಿರಿ. ವಿದ್ಯಾರ್ಥಿಗಳ ಸಾಧನೆಯ ಹಾದಿಯು ಸುಗಮವಾಗುವುದು. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರವೊರುವುದು. ಮನದಲ್ಲಿ ಆತಂಕವಿದ್ದರೂ ಶಾಂತಿಯಿಂದ ವರ್ತಿಸುವಿರಿ. ಅವಶ್ಯಕವೆನಿಸಿದ ಹೂಡಕೆಗಳನ್ನು ಮಾಡಿ. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ಯಾರಾದರೂ ಸುಮ್ಮನೆ ನಿಮ್ಮ ಜೊತೆ ಜಗಳಕ್ಕೆ ಬರಬಹುದು.
ವೃಷಭ ರಾಶಿ : ಕರಕುಶಲಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುವುದು ಇಂದು. ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ಹಣಕಾಸನ್ನು ಹೊಂದಿಸುವುದು ಇಂದು ಕಷ್ಟವಾಗುವುದು. ಇಂದು ಮನಬಿಚ್ಚಿ ಮಾತನಾಡಿ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ವಿದೇಶಕ್ಕೆ ತೆರಳಬಹುದು. ಮಕ್ಕಳಿಗೆ ಪ್ರಸಿದ್ಧ ಸಂಸ್ಥೆಯ ಅಧಿಕಾರವು ಸಿಗಬಹುದು. ನಿಮ್ಮ ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾತ್ರ ಮಾಡಿ. ನಿರ್ಧಾರವನ್ನು ಬದಲಿಸುವುದು ಸರಿಕಾಣದು. ಆಸ್ತಿಯ ವಿಚಾರದಲ್ಲಿ ನೀವು ಆಸಕ್ತಿಯನ್ನು ಕಳೆದುಕೊಳ್ಳುವಿರಿ. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಅಹಂಕಾರವಾದೀತು.
ಮಿಥುನ ರಾಶಿ : ನಿಮಗೆ ಸಹೋದರ ಬಗೆಗೆ ವಿಶ್ವಾಸವು ಇರದು. ಏನೇ ಆದರೂ ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ನಷ್ಟವನ್ನು ಮರೆಮಾಚಲು ತಂತ್ರವನ್ನು ಹೂಡುವಿರಿ. ಕೊಡಬೇಕಾದವರಿಗೆ ಗೌರವವನ್ನು ಕೊಡಿ. ನಿಧಾನಗತಿಯಲ್ಲಿ ಕೆಲಸವನ್ನು ಆರಂಭಿಸುವಿರಿ. ಪ್ರಯಾಣವೊಂದನ್ನು ಮುಂದೂಡಿ. ಗೃಹನಿರ್ಮಾಣದ ವಸ್ತುಗಳನ್ನು ಮಾರಾಟ ಮಾಡುವವರು ಅಧಿಕ ಲಾಭವನ್ನು ಪಡೆಯುವರು. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು. ಅಕಸ್ಮಾತ್ ಹಣವು ಸಿಗುವುದು.
ಕರ್ಕ ರಾಶಿ : ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯವಾಗುವುದು. ಮನೆಯ ಕೆಲಸದಲ್ಲಿ ಆಸಕ್ತಿ ಹೆಚ್ಚಿರುವುದು. ಇದರಿಂದ ತುರ್ತು ಕೆಲಸಗಳನ್ನು ಮರೆಯಬಹುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲ ದಿನಗಳಿಂದ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂತಾನದ ಲಾಭವು ನಿಮ್ಮ ಸಂತೋಷವನ್ನು ದ್ವಿಗುಣ ಮಾಡುವುದು. ವಂಶದ ಹಿರಿಯರಿಗೆ ಸೇರಿದ ಆಸ್ತಿಯಲ್ಲಿನ ಪಾಲು ದೊರೆಯುತ್ತದೆ. ಅವಶ್ಯಕತೆ ಇದ್ದಲ್ಲಿ ಉದ್ಯೋಗ ಬದಲಿಸಬಹುದು. ಹಣಕಾಸಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ನೀವು ಎಲ್ಲವನ್ನು ತಿಳಿದವರಂತೆ ನಿಮ್ಮ ನಡವಳಿಕೆ ಇರುವುದು. ಯಾರದೋ ತಪ್ಪಿನ ಕಾರಣ ವಾಹನದಿಂದ ಬೀಳುವ ಸಾಧ್ಯತೆ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಇನ್ನೊಬ್ಬರನ್ನು ಮುಚ್ಚಿಸಲು ಹೋಗಿ ಸಮಯ ಹಾಳು ಮಾಡುವಿರಿ.
ಸಿಂಹ ರಾಶಿ : ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ನಿಮ್ಮ ಶ್ರಮಕ್ಕೆ ಕೂಡಲೇ ಫಲ ಸಿಗುತ್ತದೆ ಎನ್ನುವ ಧಾವಂತ ಬೇಡ. ತಾಳ್ಮೆಯ ಅವಶ್ಯಕತೆ ಇದೆ. ದಾಂಪತ್ಯದಲ್ಲಿ ಮಕ್ಕಳು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ನಿಮ್ಮ ಜವಾಬ್ದಾರಿಯನ್ನು ಮತ್ತೆ ಪಡೆಯುವಿರಿ. ಇಂದು ಅನಾಯಾಸವಾಗಿ ಆದಾಯ ದೊರೆಯುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವುದು ನಿಮಗೆ ಖುಷಿ ಕೊಡುವುದು. ಸಂಗಾತಿಯ ಸಹಕಾರದಿಂದ ನೀವು ಗೆಲುವಾಗಿ ಇರುವಿರಿ. ಗೌರವವಿಲ್ಲದೆ ಕಡೆ ಹೋಗಲು ನೀವು ಬಯಸುವುದಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ. ಇನ್ನೊಬ್ಬರ ಬಗ್ಗೆ ಏನೇನೋ ಕಲ್ಪನೆಗಳು ಇರಬಹುದು.
ಕನ್ಯಾ ರಾಶಿ : ನಿಮಗೆ ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಆದರೆ ಯಾವುದು? ಹೇಗೆ ಎನ್ನುವ ಬಗ್ಗೆ ಚಿತ್ರಣವಿಲ್ಲ. ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ಬೇಡದ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಪ್ರೋತ್ಸಾಹಿಸಬಹುದು. ಇಂದು ನೀವು ಎಲ್ಲರ ಜೊತೆ ಸ್ನೇಹದಿಂದ ಇರುವಿರಿ. ಕೆಲಸ ಕಾರ್ಯದಿಂದ ಸಮಾಜದಲ್ಲಿ ಗುರುತಿಸುವಿರಿ. ವಿದ್ಯಾರ್ಥಿಗಳ ಬಗ್ಗೆ ಯೋಚಿಸದೆ ಕರ್ತವ್ಯದಲ್ಲಿ ಭ್ರಷ್ಟರಾಗುವಿರಿ. ಸಂತೃಪ್ತಿಯ ಜೀವನವು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ. ಯಾರ ಬಳಿ ಏನನ್ನು ಹೇಳಬೇಕು ಎನ್ನುವ ಹಿಡಿತ ಬೇಕಾದೀತು.
ತುಲಾ ರಾಶಿ : ಇಂದು ವಾತಾವರಣದ ವ್ಯತ್ಯಾಸದಿಂದ ನಿಮ್ಮ ಆರೋಗ್ಯವು ಕೆಡುವುದು. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಪ್ರಯತ್ನಗಳು ಬದಲಾಗಬೇಕು. ನಿಮ್ಮ ಮಕ್ಕಳ ಧೈರ್ಯವನ್ನು ಹೆಚ್ಚು ಮಾಡುವುದು ಅನಿವಾರ್ಯ. ನಿಮ್ಮ ಪ್ರತಿಯೊಂದು ವಿಚಾರವನ್ನು ಟೀಕಿಸಿಯಾರು. ಸ್ವತಂತ್ರವಾಗಿ ಇಂದಿನ ಕಾರ್ಯವನ್ನು ನೀವು ನಿರ್ವಹಿಸುವಿರಿ. ನೂತನ ವಾಹನವನ್ನು ಖರೀದಿಸುವಿರಿ. ಕುಟುಂಬದಲ್ಲಿ ಸಾಮರಸ್ಯವು ಕಾಣಿಸುವುದು. ಮನಸಿಗೆ ಹಿತವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವಿರಿ. ಉದ್ಯೋಗಕ್ಕಾಗಿ ಪರದಾಡುತ್ತಿರುವವರು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುವಿರಿ. ವ್ಯಾಪಾರಸ್ಥರು ಹೊಸತನ್ನು ಮಾಡಲು ಇಚ್ಛಿಸುವಿರಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ವೇಗದಲ್ಲಿ ವಾಹನವನ್ನು ಚಲಾಯಿಸುವುದು ಬೇಡ.
ವೃಶ್ಚಿಕ ರಾಶಿ : ನಿಮ್ಮ ವೃತ್ತಿಯಲ್ಲಿ ಸಮಯ ಬದಲಾವಣೆ ಆಗಿ ಕಿರಿಕಿರಿ ಅಗವುದು. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಖರೀದಿಸುವರು. ಬಹಳದಿನಗಿಂದ ಗಮನ ಕೊಡದೆ ಇರುವ ಕಡೆ ಗಮನ ಹರಿಸಿ. ದುಡುಕಿ ಅಪಯಶಸ್ಸನ್ನು ತಂದುಕೊಳ್ಳಬೇಡಿ. ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ. ಅಗಲವು ದಿನಗಳ ಭೂವಿವಾದಕ್ಕೆ ಅಂತ್ಯ ಸಿಗಲಿದೆ. ಮಕ್ಕಳ ಜೊತೆಯಲ್ಲಿ ಸಂತಸದಿಂದ ಕಾಲಕಳೆಯುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ವಾಗ್ವಾದ ಇರುತ್ತದೆ. ಆತ್ಮೀಯರಿಗೆ ಆರ್ಥಿಕ ಸಹಾಯ ಮಾಡುವಿರಿ. ಬಹಳ ದಿನಗಳಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಸಣ್ಣ ವ್ಯಾಪಾರಿಗಳು ವ್ಯವಹಾರ ಹೆಚ್ಚಳದ ಬಗ್ಗೆ ಗಮನಹರಿಸಬೇಕು. ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು.
ಧನು ರಾಶಿ : ಇಂದು ನೀವು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಉದ್ಯುಕ್ತರಾಗುವಿರಿ. ಮನೆಗೆ ಖರ್ಚು ಮಾಡುವಾಗ ನಿಮ್ಮ ಆರ್ಥಿಕಸ್ಥಿತಿಯನ್ನೂ ಗಮನಿಸಿ. ನೆರೆಹೊರೆಯವರ ಜೊತೆ ಸಣ್ಣ ವಿಚಾರಕ್ಕೆ ಜಗಳ ಆಗಬಹುದು. ದಾಂಪತ್ಯದಲ್ಲಿ ಉಂಟಾದ ವೈಮನಸ್ಸನ್ನು ಮೊದಲು ಸರಿಮಾಡಿಕೊಂಡು ಮುನ್ನಡೆಯಿರಿ. ಜಾಗರೂಕತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ಭವಿಷ್ಯದ ಬಗ್ಗೆ ಕಾಳಜಿಯೂ ಗೊಂದಲೂ ಇರುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕೆ ಸೂಕ್ತ ಭೂಮಿಯನ್ನು ಆಯ್ಕೆ ಮಾಡುವಿರಿ. ಸಂಗಾತಿಯ ಬಗ್ಗೆ ಇದ್ದ ಬೇಸರವು ಮಾಯವಾಗಲಿದೆ. ಕೆಲಸದ ಬಗ್ಗೆ ಉತ್ಸಾಹದಿಂದ ಇರಬೇಕು. ಆತ್ಮವಿಶ್ವಾಸದ ಕೊರತೆಯಿಂದ ನಿಮ್ಮ ಕಾರ್ಯವು ವಿಳಂಬವಾಗಬಹುದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ನಿಮ್ಮ ಶ್ರಮವು ದುರುಪಯೋಗವಾಗುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು.
ಮಕರ ರಾಶಿ : ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಇನ್ನೊಬ್ಬರನ್ನು ನಿಂದಿಸುವುದು ಬೇಡ. ಅವರೇ ಅವರ ಕರ್ಮದ ಫಲವನ್ನು ಉಣ್ಣುವರು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳನ್ನು ಕೈಗೊಳ್ಳಬೇಡಿ. ನಿದ್ರಾಹೀನತೆಯ ಕಾರಣ ಒತ್ತಡ ಎನಿಅಬಹುದು. ಯಾರಿಂದಲೂ ಕೂಡಲೇ ಬದಲಾವಣೆಯನ್ನು ಬಯಸುವುದು ಬೇಡ. ಮನಸ್ಸು ಒಳ್ಳೆಯದಾದರೂ ದುಡುಕಿ ಮಾತನಾಡಿದರೆ ಕೆಟ್ಟದ್ದಾದೀತು. ಸಾಲದ ವ್ಯವಹಾರದಿಂದ ದೂರವಿರಿ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು.
ಕುಂಭ ರಾಶಿ : ನಿಮ್ಮ ಗುರಿಯನ್ನು ಯಾರಾದರೂ ಬದಲಿಸಬಹುದು. ಗುರಿಯತ್ತ ನಿಮ್ಮ ಗಮನವನ್ನು ಇಟ್ಟುಕೊಳ್ಳಿ. ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಪುಣ್ಯ ಸ್ಥಳಗಳಿಗೆ ನೀವು ಹೋಗುವಿರಿ. ಉದರ ಬಾಧೆಯು ನಿಮಗೆ ಕಷ್ಟವಾದೀತು. ಸ್ವಭಾವದ ಕಾರಣ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಪ್ರವಾಸ ಮಾಡಲು ಸಾದ್ಯವಾಗುವುದಿಲ್ಲ. ಉದ್ಯಮಿಗಳು ಹೂಡಿಕೆಯ ಬಗ್ಗೆ ಚಿಂತಾಮಗ್ನರಾಗುವರು. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ಅಜ್ಞಾನದಿಂದ ಕೆಲಸದಲ್ಲಿ ಲೋಪವಾಗಬಹುದು.
ಮೀನ ರಾಶಿ : ಇಂದು ನೀವು ಬಯಸಿದ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂತೋಷ ಇರುತ್ತದೆ. ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಹೆಚ್ಚು ಅನುಕೂಲ. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಈ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುಬೇಕು. ಉದ್ಯೋಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಎದುರಾಗುತ್ತವೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1