Horoscope 20 March: ದಿನಭವಿಷ್ಯ; ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳ ಕಡೆ ಗಮನ ಹರಿಸುವಿರಿ.

ಮೇಷ ರಾಶಿ : ಇಂದು ನಿಮಗೆ ಜ್ಞಾನದ ಕೊರತೆಯಿಂದ ಅನ್ಯಾಯದ ಕಡೆ ಮನಸ್ಸು ಹೋಗಬಹುದು. ಪ್ರೇಮದಲ್ಲಿ ಸಂಶಯವು ನಿಮ್ಮ ಕಾರ್ಯವನ್ನು ನಿಧಾನ ಮಾಡುವುದು. ಬಹಳದ ದಿನದಿಂದ ನಿರೀಕ್ಷೆಯಲ್ಲಿ ಇರುವ ನಿಮಗೆ ಕೊನೆಗೂ ಉದ್ಯೋಗಕ್ಕಾಗಿ ಅವಕಾಶವು ಪ್ರಾಪ್ತವಾಗಲಿದೆ. ಆಪ್ತರ ಜೊತೆಗಿನ ಮಾತಿನಿಂದ‌ ಮನಸ್ಸು ಹಗುರಾಗುವುದು. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಿದ್ದು ನಿಮಗೆ ಬಹಳ ಸಮಯದ ಅನಂತರ ತಿಳಿದು ಬೇಸರಿಸುವಿರಿ.

ವೃಷಭ ರಾಶಿ : ನಿಮ್ಮ ಚರಾಸ್ತಿಯ ಸ್ವಲ್ಪ ಭಾಗವನ್ನು ಕಳೆದುಕೊಳ್ಳಬೇಕಾಗಬಹುದು. ಯಾರಾದರೂ ನಿಮ್ಮ ಬಗ್ಗೆ ಏನಂದುಕೊಂಡಾರು ಎಂಬ ಭಯವಿರುವುದು. ಧಾರ್ಮಿಕ ವಿಚಾರಕ್ಕೆ ಯಾರ ಜೊತೆಗಾದರೂ ಕಲಹವಾಗಬಹುದು. ಹೊಸ ಮನೆಯ ಪ್ರವೇಶದಲ್ಲಿ‌ ನೀವು ಭಾಗಿಯಾಗುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ಸಂಬಂಧಗಳನ್ನು ನೀವು ಬೇಕಾದುದಕ್ಕೆ ಬಳಸಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇರುವರು. ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ವಾಹನ ಚಾಲನೆಯಲ್ಲಿ ಉತ್ಸಾಹ ಹೆಚ್ಚಿರುವುದು. ಕಳೆದುಕೊಂಡಿದ್ದನ್ನು ಪಡೆಯುವ ಛಲವು ಬರಬಹುದು.

ಮಿಥುನ ರಾಶಿ : ನಿಮ್ಮ‌ ಸಾಧನೆಯನ್ನು ನೀವೇ ಹೇಳಿಕೊಳ್ಳುವುದು ಸರಿಯಲ್ಲ. ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಇನ್ನಷ್ಟು ಬೆಳೆಯುವ ಆಸೆ ಇರುವುದು. ಯಾರದೋ ಅಧೀನರಾಗಿ ಇರುವುದು ನಿಮಗೆ ಇಷ್ಟವಾಗದು. ವ್ಯವಹಾರವು ಹಳಿ ತಪ್ಪಬಹುದು. ಅನಾರೋಗ್ಯದಿಂದ ನೀವು ಬಹಳಷ್ಟು ಸುಧಾರಿಸುವಿರಿ.‌ ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ಲೆಕ್ಕಪತ್ರದಲ್ಲಿ ಮಚ್ಚು ಮರೆ ಬೇಡ.

ಕಟಕ ರಾಶಿ : ವಿದೇಶೀ ಕಂಪನೆಗಳ ನೌಕರರಾಗಿದ್ದರೆ ನಿಮಗೆ ಭವಿಷ್ಯದ ಬಗ್ಗೆ ಭಯವು ಬರಬಹುದು. ‌ಉದ್ಯಮದಲ್ಲಿ ಅಧಿಕಾರಕ್ಕಿಂತ ಚಾಣಾಕ್ಷತೆ ಮುಖ್ಯವಾಗುವುದು. ಇಂದು ನೀವು ಇತರರ ಭಾವನೆಗೆ ಸ್ಪಂದಿಸುವಿರಿ. ಹಸ್ತಕ್ಷೇಪವನ್ನು ಮಾಡಲು ಹಿಂದೇಟು ಹಾಕುವುದು ಉತ್ತಮ. ಸಂಬಂಧಿಕರು ನಿಮ್ಮನ್ನು ಕ್ಷುಲ್ಲಕ ವಿಚಾರಕ್ಕೆ ಟೀಕಿಸಬಹುದು. ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಅಚ್ಚರಿ ಇರುವುದು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪಕ್ಕೆ ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಜಾಡ್ಯವನ್ನು ಬಿಡಬೇಕಾದೀತು. ಮಕ್ಕಳ‌ ಮೇಲಿನ ಮೋಹವನ್ನು ಕಡಿಮೆ‌ಮಾಡಿಕೊಳ್ಳಬೇಕಾಗುವುದು. ವಿನ್ಯಾಸಕಾರರಿಗೆ ಹೊಸ ಕೆಲಸವು ಸಿಗಬಹುದು.

ಸಿಂಹ ರಾಶಿ : ನಿಮ್ಮ ದೃಢವಾದ ಸಂಕಲ್ಪವೇ ಸ್ಪರ್ಧಾತ್ಮಕ ವಿಚಾರಕ್ಕೆ ಬೇಕಾದ ಬಲವನ್ನು ತಂದುಕೊಡುವುದು. ಇಟ್ಟ ಹೆಜ್ಜೆಯನ್ನು ತೆಗೆದಿಡುವ ಅವಶ್ಯಕತೆ ಇಲ್ಲ. ಅಧೀರರಾಗದೇ ಮುನ್ನಗ್ಗಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳುವಿರಿ. ಆರ್ಥಿಕ ಪ್ರಗತಿಯು ಮಧ್ಯಮವಾಗಲಿದೆ.‌ ನ್ಯಾಯಾಲಯದಲ್ಲಿ ನಿರೀಕ್ಷಿತ ಗೆಲವು ಕಷ್ಟವಾದೀತು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ಭೂ ವ್ಯವಹಾರದಲ್ಲಿ ಮನಸ್ತಾಪ ಬರಬಹುದು. ಯಾವುದೇ ನಿಬಂಧನೆಗಳನ್ನು ಇಟ್ಟುಕೊಳ್ಳದೇ ಒಪ್ಪಿಕೊಳ್ಳಿ. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು.

ಕನ್ಯಾ ರಾಶಿ : ನಿಮ್ಮ ದೌರ್ಭಾಗ್ಯಕ್ಕೆ ಯಾರನ್ನೋ ಹಳಿಯುವುದರಲ್ಲಿ ಅರ್ಥವಿಲ್ಲ. ಕಾಲಕ್ಕಾಗಿ ಕಾಯಬೇಕು. ವೃತ್ತಿಯ ಸ್ಥಳದಲ್ಲಿ ಕಲಹವಾಗಬಹುದು. ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಎಲ್ಲವೂ ಇಂದ್ರಜಾಲದಂತೆ ಆಗದು ಎಂಬ ಸತ್ಯವನ್ನು ಮನದಟ್ಟು ಮಾಡಿಕೊಳ್ಳುವ ಅವಶ್ಯಕತೆ ಇರುವುದು. ರಕ್ಷಣೆಯ ವಿಚಾರದಲ್ಲಿ ನೀವು ಸೋಲಬಹುದು. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು. ಕುಚೋದ್ಯ ಮಾಡಲು ಹೋಗಿ ಕೆಂಗಣ್ಣಿಗೆ ಗುರಿಯಾಗುವಿರಿ. ಯಾವುದನ್ನೂ ಸುಲಭಕ್ಕೆ ಇಂದು ನೀವು ಒಪ್ಪಲಾರಿರಿ.

ತುಲಾ ರಾಶಿ : ದೂರ ಪ್ರಯಾಣ ಹೊರಟಿರುವ ನೀವು ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನೂ ಮಾಡಿಕೊಳ್ಳಿ. ಯಾವುದಾದರೂ ಹೊಸ ಖರೀದಿಯ ಕಡೆ ಗಮನ ಅಧಿಕವಾಗಬಹುದು. ಇಂದು ನೀವು ಮಾಡಿದ ಉದ್ಯಮದ ತಂತ್ರಗಳು ಫಲಿಸಬಹುದು. ವಿದ್ಯಾರ್ಥಿಗಳು ಪ್ರಗತಿಯಿಂದ‌ ಖುಷಿಪಡುವರು. ಪ್ರೀತಿಯನ್ನು ಅವಶ್ಯಕತೆಯ ಪೂರೈಕೆಗಷ್ಟೇ ಬಳಸಿಕೊಳ್ಳುವಿರಿ. ಹಣದ ವ್ಯವಹಾರದಲ್ಲಿ ಮುಜುಗರ ಬೇಡ. ಅನ್ಯರ ಕಾರಣದಿಂದ ವಿದೇಶದ ವ್ಯಾಮೋಹವು ಹೆಚ್ಚಾದೀತು. ಒಮ್ಮೆ ನಂಬಿಕೆಯನ್ನು ಇಟ್ಟುಕೊಂಡ ಅನಂತರ ಅನುಮಾನ ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಅಂತಃಕರಣವು ಶುದ್ಧವಿದ್ದರೆ ನಿಮಗೆ ಸಿಗದು ಸಿಕ್ಕಿಯೇ ಸಿಗುವುದು.

ವೃಶ್ಚಿಕ ರಾಶಿ : ಇಂದು ನಿಮಗೆ ಕೆಲವು ವಿಚಾರಕ್ಕೆ ಪಶ್ಚಾತ್ತಾಪ ಪಡುವಿರಿ.‌ ಆದರೆ ಆಡಿದ ಮಾತಿಗೆ ಬೆಲೆಯನ್ನು ತೆರಲೇಬೇಕಾಗುವುದು. ಬಂಧುಗಳ ಜೊತೆ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಇಂದು ನಿಮ್ಮ ಮುಂದಾಳುತ್ವದಲ್ಲಿ ಹೊಸ ಕೆಲಸಗಳು ನಡೆಯಬಹುದು. ಪೂರ್ಣ ಅದೃಷ್ಟವನ್ನೇ ನಂಬಿ ಕಾರ್ಯದಲ್ಲಿ ತೊಡಗುವುದು ಬೇಡ. ಪೂರ್ಣ‌ ಮನಸ್ಸಿನಿಂದ ನಿಮ್ಮ‌ ಎಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಿದರೂ ಅಂದುಕೊಂಡಷ್ಟು ಜಯವು ಸಿಗದು. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಆರ್ಥಿಕ ವಿಚಾರವನ್ನು ಬಹಿರಂಗಪಡಿಸುವುದು ಬೇಡ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಹಠದ ಸ್ವಭಾವವನ್ನು ನಿಮ್ಮ ಕಾರ್ಯದಲ್ಲಿ ತೋರಿಸಿ.

ಧನು ರಾಶಿ : ನೀವು ಇಂದು ಪ್ರೇಮಿಗಳನ್ನು ಒಂದು ಮಾಡಲು ಹೋಗಿ ಸಂಕಷ್ಟದಲ್ಲಿ ಬೀಳುವಿರಿ. ನಿಮ್ಮ ಕೆಲವು ನಿರ್ಧಾರವು ಆತ್ಮಸಂತೋವನ್ನು ಕೊಡುವುದು. ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳ ಕಡೆ ಗಮನ ಹರಿಸುವಿರಿ. ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಇರುವುದು. ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ನೀವಿಟ್ಟ ನಂಬಿಕೆಯೇ ನಿಮಗೆ ಶಾಶ್ವತವಾಗಿ ಸಿಗುವುದು. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು. ಮಕ್ಕಳನ್ನು ನಯದಿಂದ ಸರಿದಾರಿಗೆ ತರಬೇಕಾಗುವುದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು.

ಮಕರ ರಾಶಿ : ನಿಮ್ಮ ಕೈಯಾರೆ ಪ್ರೀತಿಯನ್ನು ಹಾಳುಮಾಡಿಕೊಳ್ಳುವಿರಿ. ತಂದೆಯ ಜೊತೆ ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಬಂಧದಲ್ಲಿಯೇ ವಿವಾಹ ನಿಶ್ಚಯವಾಗಬಹುದು. ಇಂದಿನ ವ್ಯವಹಾರದಲ್ಲಿ ಊಹೆಯು ಸತ್ಯವಾದೀತು. ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾನೂನಿನ ಪಾಠವನ್ನು ಹಿರಿಯರು ಮಾಡುವರು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ಪ್ರತೀಕಾರಕ್ಕೆ ಸಮಯದ ನಿರೀಕ್ಷೆಯಲ್ಲಿ ಇರುವಿರಿ.

ಕುಂಭ ರಾಶಿ : ವ್ಯಾಪಾರದಲ್ಲಿ ನಿಮಗಾದ ಹಿನ್ನಡೆಯು ಅವಮಾನದಂತೆ ಆಗಬಹುದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಸ್ವತಂತ್ರವಾಗಿ ಇರಬೇಕು ಎಂದು ಅನ್ನಿಸುವುದು. ನಿರುದ್ಯೋಗಿಗಳಿಗೆ ಹಲವು ಪ್ರಯತ್ನಗಳ ಅನಂತರ ಕೆಲಸವು ಸಿಗಬಹುದು. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ‌ ಪ್ರಶಂಸೆಯು ಇರಲಿದೆ. ಪಾಲುದಾರಿಕೆಯಲ್ಲಿ ಹಂಚಿಕೆಯು ಸಮವಾಗಿರಲಿ. ಅನಂತರ ಇದೇ ದೊಡ್ಡ ಘಟನೆ ಆಗಬಹುದು.

ಮೀನ ರಾಶಿ : ನಿಮಗೆ ವ್ಯಾವಹಾರಿಕ ಕ್ಷೇತ್ರವು ಸಾಕಾಗಿ, ಅದರಿಂದ ದೂರವಿರಲು ಪ್ರಯತ್ನಿಸುವಿರಿ. ಕುಟುಂಬದ ಸದಸ್ಯರ ಒಡನಾಡವು ಹಿತಕರ ಎನಿಸುವುದು. ಅನ್ಯ ಮೂಲದ ಆದಾಯದಿಂದ ನೀವು ಆರ್ಥಿಕತೆಯಲ್ಲಿ ನೆಮ್ಮದಿ‌ ಕಾಣುವಿರಿ. ಇಂದು ನಿಮ್ಮ ಉದ್ಯೋಗವು ಸಾಮರಸ್ಯದಿಂದ ಸಾಗುವುದು. ಯಾವುದಾದರೂ ಶುಭದ ನಿರೀಕ್ಷೆಯಲ್ಲಿ ಇರಬಹುದು. ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.‌ ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ನೀವು ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನೀವು ಸಾಕಷ್ಟು ಸುಖವನ್ನು ಅನುಭವಿಸಿದ ಮೇಲೆ ಮತ್ತೇನೋ ಬೇಕು ಎಂದೆನಿಸಬಹುದು.

Source : https://tv9kannada.com/horoscope/daily-horoscope-20-march-aries-to-pisces-kannada-astrology-predictions-rks-802031.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *