Horoscope 21 April: ರಾಶಿ ಭವಿಷ್ಯ; ಸಾಲವನ್ನು ಮಾಡುವ ಸ್ಥಿತಿ ಅನಿರೀಕ್ಷಿತವಾಗಿ ಎದುರಾಗಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾ ಫಲ್ಗುಣೀ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:13 ರಿಂದ 06:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:05 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ.

ಮೇಷ ರಾಶಿ: ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಮಕ್ಕಳ ಜೊತೆ ಕಾಲ‌ಕಳೆಯಬೇಕಾಗುವುದು. ಅನಿಶ್ಚಯವಾಗಿದ್ದ ನಿಮ್ಮ ವಿವಾಹವು ಇಂದು ನಿಶ್ಚಯವಾಗಲಿದೆ. ನಿದ್ರಾಹೀನತೆಯಿಂದ ಆರೋಗ್ಯವು ಹಾಳಾಗಬಹುದು. ಸ್ನೇಹಿತರೊಂದಿಗೆ ಪ್ರಯಾಣವನ್ನು ಮಾಡುವಿರಿ. ಸ್ತ್ರೀರಿಂದ ಅಪಮಾನವಾಗಬಹುದು. ಬರಬೇಕಾದ ಸಂಪತ್ತು ಬರಲಿದೆ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಬೇಕೆಂದೇ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಯಾರನ್ನೂ ಹತ್ತಿರ ಬಿಟ್ಟಕೊಳ್ಳಲಾರಿರಿ. ಸುಖದ ನಿರೀಕ್ಷೆಯು ನಿಮ್ಮನ್ನು ಸಂತೋಷದಿಂದ ಇಡುವುದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ.

ವೃಷಭ ರಾಶಿ: ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಹೊಸತನವನ್ನು ರೂಢಿಸಿಕೊಳ್ಳುವ ನಿಮ್ಮ ಆಸಕ್ತಿಯನ್ನು ಕಂಡ ಜನರಿಂದ ಮೆಚ್ಚುಗೆಯನ್ನು ಗಳಿಸುವಿರಿ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಗಳನ್ನು ಮಾಡಿರಿ. ಸಂತಸದ ವಾರ್ತೆ ನಿಮ್ಮನ್ನು ಅರಸಿ ಬರಬಹುದು. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಸೂಕ್ಷ್ಮತೆಯನ್ನು ಅರಿತು ವ್ಯವಹಾರವನ್ನು ಮಾಡಿ. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ನೀವು ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ: ನಿಮಗೇ ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹಿಂಜರಿಕೆ ಉಂಟಾಗಬಹುದು.‌ ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಕೊಳ್ಳುವಿರಿ. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ನಿಮ್ಮ ಶ್ರಮವು ಯಾರಿಗೂ ಕಾಣಿಸದೇ ಹೋಗಬಹುದು. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ನಿಮಗೆ ಆಗದವರ ಮೇಲೆ ಸಲ್ಲದ ದೂರನ್ನು ಕೊಡುವಿರಿ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ.

ಕರ್ಕ ರಾಶಿ: ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಏಕಾಗ್ರತೆಯ ಕೊರತೆ ನಿಮ್ಮನ್ನು ಬಹಳವಾಗಿ ಕಾಡಬಹುದು. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ‌ ಮುಂದಿನ ಯೋಜನೆಗೆ ಸಹಕರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಸಭೆಗಳಿಗೆ ಭಾಗವಹಿಸಲು ಆಹ್ವಾನವು ಬರಬಹುದು. ಸಂಗಾತಿಯಿಂದ ಹಣವನ್ನು ಪಡೆಯಲಿದ್ದೀರಿ. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.

ಸಿಂಹ ರಾಶಿ: ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಾಯಿಸುವಿರಿ. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ನಾಲ್ಕು ಜನರ ಮಾತುಗಳನ್ನು ಕೇಳಿ ಸರಿ ಯಾವುದು ಎನ್ನುವ ಗೊಂದಲಕ್ಕೆ ನೀವು ಬರಬಹುದು. ಇಂದು ಉದ್ಯೋಗಿಗಳಿಗೆ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶವು ಸಿಗುವುದು. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ನೀರಿನಿಂದ ಭಯವು ಉಂಟಾಗುವುದು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ವಾಹನದಿಂದ ನಷ್ಟವಾಗುವುದು.

ಕನ್ಯಾ ರಾಶಿ: ನಿಮ್ಮನ್ನು ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳಿ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಯಾರನ್ನೋ ನಂಬಿ ಮೋಸಹೋಗುವ ಸಾಧ್ಯತೆ ಇರುತ್ತದೆ. ಗಳಿಕೆ ಭರದಲ್ಲಿ ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಲು ಶ್ರಮವನ್ನು ವಹಿಸಬೇಕು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಒಂಟಿಯಾಗಿ ದಿನವನ್ನು ಕಳೆಯದೇ ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಹಳೆಯ ವಾಹನವನ್ನು ಪಡೆದುಕೊಳ್ಳುವಿರಿ. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳಬೇಕಾಗುವುದು. ಬೇಡವಾದುದರ ಬಗ್ಗೆ ಆಸೆ ಬೇಡ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.

ತುಲಾ ರಾಶಿ: ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ ಎನ್ನುವ ಸತ್ಯವು ಅರಿವಿಗೆ ಬರಲಿದೆ. ದುಃಖಿಸುವ ಅಗತ್ಯವಿಲ್ಲ. ಅವನ ಸೃಷ್ಟಿಯಲ್ಲಿ ಎಲ್ಲವೂ ಸಹಜವೇ. ತಂದೆಯಿಂದ ಧನಸಹಾಯ ಆಗಲಿದೆ. ಸಂಗಾತಿಯ ಅನ್ವೇಷಣೆಯಲ್ಲಿ ನೀವು ತೊಡಗಿಕೊಳ್ಳುವಿರಿ. ಯಾರ ಮೇಲಾದರೂ ಪ್ರೀತಿಯು ಉಂಟಾಗಬಹುದು. ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು. ಸ್ನೇಹತರ ಜೊತೆ ಮೋಜಿನಲ್ಲಿ ದಿನವನ್ನು ಮುಗಿಸುವಿರಿ. ಜಾಹಿರಾತು ವಿಭಾಗದಲ್ಲಿ ಇರುವವರಿಗೆ ಅವಕಾಶವು ಹೆಚ್ಚು ಸಿಗಬಹುದು. ಅಹಂಕಾರದಿಂದ ದೂರವಿರಲು ಆಗದು. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು.

ವೃಶ್ಚಿಕ ರಾಶಿ: ಇಂದು ಮನಸ್ಸು ಹಾಗು ದೇಹವು ವಿಶ್ರಾಂತಿಯನ್ನು ಬಯಸಲಿವೆ. ಮನೆಯಲ್ಲಿ ನಡೆಯುವ ಕಲಹದಿಂದ ನೀವು ಬೇಸರಗೊಳ್ಳಬಹುದು. ನಿಮ್ಮ ಮಾತನ್ನೇ ಎಲ್ಲರೂ ಪಾಲಿಸಬೇಕು ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ. ಅನಿವಾರ್ಯದ ಪ್ರಯಾಣವು ನಿಮ್ಮನ್ನು ಹೈರಾಣ ಮಾಡುವುದು. ಆರ್ಥಿಕವಾದ ಹೂಡಿಕೆಯತ್ತ ನಿಮ್ಮ ಗಮನ ಹರಿಸುವಿರಿ. ಶೇರ್ ಮಾರುಕಟ್ಟೆಯಲ್ಲಿ ಹಣವನ್ನು ಹೂಡಲು ತಜ್ಞರನ್ನು ಸಂಪರ್ಕಿಸಿ. ನಿಮ್ಮ ಕುಟುಂಬ ಸದಸ್ಯರಿಗೆ ಸಮಯ ನೀಡಿ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ.

ಧನು ರಾಶಿ: ಸುಮ್ಮನೆಯೂ ಯಾರನ್ನೂ ಅಪಮಾನ ಮಾಡುವುದು ಬೇಡ. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಬಂಧುಗಳ‌ ಕಡೆಯಿಂದ ಅನಿರೀಕ್ಷಿತ ಸುದ್ದಿಯನ್ನು ನೀವು ಕೇಳಬೇಕಾಗಬಹುದು. ಕುಟುಂಬದವರ ಜೊತೆ ಪ್ರೀತಿಯಿಂದ ಮಾತನಾಡಿ. ಉದ್ಯೋಗದ ಸ್ಥಳದಲ್ಲಿ ಸ್ವಲ್ಪ ಹಿನ್ನಡೆಯ ಸಾಧ್ಯತೆ ಇದೆ. ಉತ್ತಮ ಮಾತುಗಳು ನಿಮ್ಮ ನೆಮ್ಮದಿಗೆ ಸಹಾಯಕವಾಗಲಿದೆ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರಬಹುದು. ಉತ್ತಮ ಕೆಲಸವನ್ನು ನಷ್ಟ ಮಾಡಿಕೊಳ್ಳುವಿರಿ. ಯಂತ್ರದ ವ್ಯಾಪಾರದಿಂದ ನಿಮಗೆ ಲಾಭವು ಅಧಿಕವಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ವಿದೇಶದ ಜೊತೆಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು.

ಮಕರ ರಾಶಿ: ಸಂಗಾತಿಯ ಮಾತುಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ವೇಗವಾಗಿ ಹಣದಲ್ಲಿ ಅಭಿವೃದ್ಧಿಯ ಕಾಣುವ ಬಗ್ಗೆ ಬಯಕೆ ಇರವುದು. ನಿಮ್ಮ ಸಂತೋಷದಾಯಕ ಮತ್ತು ಶಕ್ತಿಯುತ ವರ್ತನೆಯು ನಿಮ್ಮವರಿಗೆ ಸಂತೋಷವನ್ನು ಕೊಡುವುದು. ಪ್ರೀತಿಯ ವಿಷಯಗಳಲ್ಲಿ ತಪ್ಪು ಮಾಡಿಕೊಳ್ಳುವ ಸಾಧ್ಯತೆ ಇದೆ. ನೀವು ತಮ್ಮ ಹಠಮಾರಿತನದಿಂದ ಬೇರೆಯವರ ಹೃದಯವನ್ನು ನೋಯಿಸಬಹುದು. ನೇರ ಮಾತುಗಳು ನಿಮ್ಮ ಬೇರೆ ಮುಖವನ್ನು ತೋರಿಸುವುದು. ದಿನನಿತ್ಯದ ಬಳಕೆಯ ವಸ್ತುಗಳ ವ್ಯಾಪಾರ ಮಾಡುವವರ ಮಾರಾಟ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ ರಾಶಿ: ಇಂದು ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲವು ಬಲವನ್ನು ಕೊಡುವುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತನಾಡಿಕೊಳ್ಳಬಹುದು. ಯಾರಿಗೂ ಸಲಹೆಯನ್ನು ಕೊಡಲು ಇಂದು ಹೋಗಬೇಡಿ. ನಿಮ್ಮನ್ನೇ ಗುರಿಯಾಗಿಸಿಯಾರು. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ದೂರದ ಪ್ರಯಾಣ ಸುಖಕರವಲ್ಲ. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಬಹುದು. ಇಂದು ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಓಡಾಡಬೇಕಾಗುವುದು. ಸ್ನೇಹಿತರು ನಿಮಗೆ ಸುಳ್ಳು ಹೇಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.

ಮೀನ ರಾಶಿ: ಇಂದು ಹಣದ ವಿಚಾರವಾಗಿ ಸಣ್ಣ ಕಲಹಗಳು ಸಂಗಾತಿಯ ನಡುವೆ ನಡೆಯಬಹುದು. ವೃತ್ತಿಯಲ್ಲಿ ನಿಮಗೆ ಸಂತೋಷದ ವಾತಾವರಣವು ಇರಲಿದೆ. ಸಮಾರಂಭಗಳಿಗೆ ಹೋಗಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾಗಲಿದೆ. ಸ್ವಂತ ಉದ್ಯೋಗಿಗಳಿಗೆ ಶುಭವಾಗಲಿದೆ. ಕಛೇರಿ ಕೆಲಸದಿಂದ ನಿಮ್ಮ ಸ್ವಂತ ಕೆಲಸಕ್ಕೆ ತೊಂದರೆಯಾಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವರು. ಮನೆಯವರ ವಿವಾಹದ ಕಾರ್ಯಕ್ಕೆ ಓಡಾಟ ಮಾಡಬೇಕಾದೀತು. ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಸಂಗಾತಿಯ ಜೊತೆ ಭಿನ್ನಮತವು ಬರಬಹುದು.

Source : https://tv9kannada.com/horoscope/rashi-bhavishya-april-21th-aries-to-pisces-spiritual-in-kannada-ggs-819231.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *