Horoscope 21 March: ದಿನಭವಿಷ್ಯ; ನೀವು ದೀರ್ಘಕಾಲ ಆಶಿಸುತ್ತಿದ್ದ ಬಡ್ತಿಯು ನಿಮ್ಮ ಹಾದಿಗೆ ಬರಬಹುದು.

ಮೇಷ ರಾಶಿ : ಇಂದು ನಿಮ್ಮ ತಜ್ಞತೆಯು ಉಪಯೋಗಕ್ಕೆ ಬರುವುದು. ಕಾಲಹರಣ ಮಾಡದೇ ಏನಾದರೂ ಸದುಪಯೋಗವಾಗುವ ವಿಚಾರಕ್ಕೆ ಒತ್ತು ಕೊಡಿ. ಇಂದು ಹೂಡಿಕೆ ಮಾಡಲು ಉತ್ತಮ ದಿನವಲ್ಲ. ಮನೆಯಲ್ಲಿ ವಾತಾವರಣ ಸ್ವಲ್ಪ ಉದ್ವಿಗ್ನವಾಗಿರುತ್ತದೆ. ಕುಟುಂಬ ಸದಸ್ಯರ ಜೊತೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಅಧಿಕಾರಿಗಳ ಕಡೆಯಿಂದ ನಿಮ್ಮ ಬಗ್ಗೆ ವಿಚಾರಣೆ ಇರಬಹುದು. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ.ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೌಟುಂಬಿಕ ವ್ಯವಹಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ.

ವೃಷಭ ರಾಶಿ : ಹತ್ತಾರು ಕೆಲಸಗಳಿದ್ದರೂ ಆಲಸ್ಯದಿಂದ ಇರುವುದು ನಿಮಗೆ ಅಭ್ಯಾಸವಾಗಿರುವುದು. ಯಾರನ್ನೋ ನೋಯಿಸಿರುವುದು ನಿಮ್ಮ ಕಡೆಗೇ ಬರಬಹುದು. ತಂದೆಯ ಆರೋಗ್ಯದ ಕುಸಿತದಿಂದಾಗಿ ಚಿಂತೆ ಮಾಡುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ಎಲ್ಲರ ಮೇಲೂ ಸಿಟ್ಟಾಗುವಿರಿ. ಮನಸ್ಸು ಸ್ತಿಮಿತವನ್ನು ತಪ್ಪಬಹುದು. ಸಹನೆಯು ನಿಮ್ಮ ಅಸ್ತ್ರವಾಗಬೇಕಾಗಬಹುದು. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು. ಸಹವಾಸವನ್ನು ಯೋಗ್ಯತೆಗೆ ಅನುಸಾರವಾಗಿ ಮಾಡುವಿರಿ.

ಮಿಥುನ ರಾಶಿ : ಇಂದು ಎಲ್ಲಿಗೋ ಹೊರಟ ನೀವು ದಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆಗಿನ ಸಲುಗೆಯು ವಿಪರೀತ ಪರಿಣಾಮವನ್ನು ಬೀರುವುದು. ಕೆಲಸದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಇಂದು ಹಿರಿಯರಿಂದ ಯಾವುದೇ ವಿಶೇಷ ಬೆಂಬಲವನ್ನು ಪಡೆಯುವುದಿಲ್ಲ. ಈ ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಎಲ್ಲದಕ್ಕೂ ಅಡ್ಡಿಯನ್ನು ಕೊಡುವುದು ಬೇಡ. ಇದರಿಂದ ನಿಮ್ಮ ವ್ಯಕ್ತಿತ್ವವೇ ಕಳೆಗುಂದಬಹುದು. ದೈವಾರಾಧನೆಯಲ್ಲಿ ಮನಸ್ಸು ಮುಳುಗುವುದು.

ಕಟಕ ರಾಶಿ : ಇಂದು ನಿಮಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣ ಮನಸ್ಸಿನಿಂದ ಮಾಡಲಾಗದು. ಯಾವುದೋ ಅನವಶ್ಯಕ ಆಲೋಚನೆಗಳು ಬರಬಹುದು. ಇಂದು ವೈಯಕ್ತಿಕ ಸಂಬಂಧಗಳು ಉತ್ತಮವಾಗಿಸಿಕೊಳ್ಳುವಿರಿ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಇರುತ್ತದೆ. ಇಂದುಬನಿಮ್ಮ ಸಂಗಾತಿ ಕೂಡ ಉತ್ತಮ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಅತಿಯಾದ ಒತ್ತಡ ಬಂದಾಗ ಸ್ವಲ್ಪ ಸಮಯ ಸುಮ್ಮನೆ ಕುಳಿತು ಅನಂತರ ಆರಂಭಿಸಿ.

ಸಿಂಹ ರಾಶಿ : ಭವಿಷ್ಯಕ್ಕೆ ಅಗತ್ಯವಿರುವ ಹಣ, ಅಧಿಕಾರಗಳ ಬಗ್ಗೆ ಯೋಚನೆ ಅಧಿಕವಾಗುವುದು. ವೃತ್ತಿಗೆ ಸಂಬಂಧಿಸಿದಂತೆ ಕೆಲವು ಅನುಕೂಲಕರ ಘಟನೆಗಳು ನಿಮ್ಮದಾಗುವುದು. ಬುದ್ಧಿವಂತಿಕೆಯಿಂದ ಇಂದು ಉತ್ತಮ ಯಶಸ್ಸನ್ನು ಸಾಧಿಸಬಹುದು. ಶತ್ರುಗಳಿಗೆ ನೀವು ಸೂಕ್ತವಾದ ಉತ್ತರವನ್ನು ನೀಡುತ್ತೀರಿ. ಇಂದು ಸಂಪತ್ತಿನ ಹೆಚ್ಚಳವಾಗಲಿದೆ ಮತ್ತು ಇತ್ತೀಚಿನ ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯಬಹುದು. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ಯಾರದ್ದಾದರೂ ಪ್ರಭಾವವನ್ನು ಬಳಸಿಕೊಂಡು ಅಧಿಕಾರವನ್ನು ಪಡೆಯುವಿರಿ. ನಿಮ್ಮ ಮಾತಿನಿಂದ ಯಾವುದನ್ನೂ ಪೂರ್ಣವಾಗಿ ತಿಳಿಸಲಾಗದು.

ಕನ್ಯಾ ರಾಶಿ : ಕೃಷಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ನೀವು ಏನಾದರೂ ಆವಿಷ್ಕಾರ ಮಾಡುವ ಸಂಭವವಿದೆ. ಜನಜಾಗರಣಕ್ಕೆ ನಿಮ್ಮದೇ ಆದ ಕೊಡುಗೆ ಇರುವುದು. ಇಂದು ಅತಿಯಾದ ಆತ್ಮವಿಶ್ವಾಸದಿಂದ ಆಗುವ ತೊಂದರೆಯನ್ನು ನೀವೇ ನೋಡುವಿರಿ. ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಉತ್ತಮ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಲಿದೆ. ಕುಟುಂಬ ಜೀವನ ಸಾಮಾನ್ಯವಾಗಿರಲಿದೆ. ಮುಳ್ಳಿನಿಂದ ತೆಗೆಯಬೇಕಾದುದನ್ನು ಚಾಕುವನ್ನು ಇಟ್ಟುಕೊಳ್ಳುವುದು ಸರಿಯಾಗದು. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ನಿಮ್ಮ ದುರಾಲೋಚನೆಯು ಕೆಲವರಿಗೆ ಇಷ್ಟವಾಗದು.

ತುಲಾ ರಾಶಿ : ಇಂದು ನಿಮ್ಮೊಳಗೆ ಅನಿರೀಕ್ಷಿತ ಉದ್ಯೋಗವು ಕಾಣಿಸಿಕೊಳ್ಳಬಹುದು. ರಾಜಕೀಯ ವ್ಯಕ್ತಿಗಳ ಜೊತೆ ನೀವು ಸಂಧಾನ ಮಾಡಿಕೊಳ್ಳುವಿರಿ. ಇಂದು ಸಂಗಾತಿಯನ್ನು ಹುಡುಕುತ್ತಿದ್ದರೆ ನಿಮಗೆ ನಿರಾಶೆಯಾಗುತ್ತದೆ. ಕೆಲಸದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೆರೆಹೊರೆಯರ ಜೊತೆ ಹೊಂದಾಣಿಕೆಯ ಮನಃಸ್ಥಿತಿಯಲ್ಲಿಯೇ ಇರಬೇಕಾಗುವುದು. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ನಿಮ್ಮದಲ್ಲದುದರ ಬಗ್ಗೆ ನಿಮಗೆ ಮೋಹ ಬೇಡ.

ವೃಶ್ಚಿಕ ರಾಶಿ : ನೀವು ನೌಕರರಿಗೆ ಸಿಗಬೇಕಾದ ನ್ಯಾಯದ ಪರವಾಗಿ ಇರುವಿರಿ. ನಿರ್ಮಾಣದ ಕಾರ್ಯದಲ್ಲಿ ತೊಡಗಿದವರಿಗೆ ಅಪಯಶಸ್ಸು ಸಿಗಬಹುದು. ಇಂದು ಸ್ವಲ್ಪ ಸಮಯದವರೆಗೆ, ನಿಮ್ಮ ಸಂಗಾತಿಯ ಜೊತೆ ಸಂಬಂಧ ಸರಿಯಾಗಿ ಆಗುತ್ತಿಲ್ಲ. ಅವರ ಆಕ್ರಮಣಕಾರಿ ಸ್ವಭಾವದಿಂದಾಗಿ ನಿಮ್ಮಿಬ್ಬರ ನಡುವಿನ ಅಂತರವು ಗಣನೀಯವಾಗಿ ಹೆಚ್ಚಾಗಿದೆ,. ಆದರೆ ಇಂದು ಅವರ ಮನಃಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗಿದೆ. ಏಕೆಂದರೆ ನಿಮ್ಮ ಪ್ರಯತ್ನದಿಂದಾಗಿ ಹೊಸ ಆದಾಯದ ಮೂಲವಿರುತ್ತದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಯಾರದೋ ಕಾರಣಕ್ಕೆ ನೀವು ಸಿಟ್ಟಗುವುದು ಬೇಡ. ಕಲ್ಪನಾ ಜಗತ್ತಿನಿಂದ ಹೊರಬನ್ನಿ.

ಧನು ರಾಶಿ : ಸ್ವಾರ್ಥದ ಕಾರಣದಿಂದ ನೀವು ಜನರನ್ನು ಕಳೆದುಕೊಳ್ಳುವಿರಿ. ದುಷ್ಟರ ಸಹವಾಸವು ನಿಮ್ಮನ್ನು ಬದಲಾವಣೆ ಮಾಡುವುದು. ಸಂಸಾರದ ಸುಖವು ನಿಮ್ಮ ಎಲ್ಲ ನೋವನ್ನೂ ನಾಶ ಮಾಡುವುದು. ಇಂದು ನೀವು ಸಕ್ರಿಯರಾಗಿ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗಿಗಳಿಗೆ ಇದು ಶುಭ ದಿನವಾಗಿರುತ್ತದೆ. ನೀವು ದೀರ್ಘಕಾಲ ಆಶಿಸುತ್ತಿದ್ದ ಬಡ್ತಿಯು ನಿಮ್ಮ ಹಾದಿಗೆ ಬರಬಹುದು. ವ್ಯಾಪಾರಿಗಳಿಗೆ ಅಧಿಕ ಲಾಭವನ್ನು ಪಡೆಯಬಹುದು. ಹೇಗಾದರೂ, ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ ಧೈರ್ಯವು ಕುಂದಬಹುದು. ಸ್ವಂತ ಉದ್ಯಮದ ಕಾರಣಕ್ಕೆ ಹೊರಗೆ ಹೋಗಬೇಕಾಗುವುದು. ಸುಮ್ಮನೆ ಆಗದ ಕೆಲಸಕ್ಕೆ ಕೈಸುಟ್ಟುಕೊಳ್ಳುವಿರಿ.

ಮಕರ ರಾಶಿ : ಅನೇಕ ಒತ್ತಡಗಳಿಂದ ನಿಮ್ಮ ಉದ್ಯಮವನ್ನು ಬದಲಿಸಿಕೊಳ್ಳುವಿರಿ. ಸಂಗಾತಿಯ ನಡುವಿ ಭಿನ್ನಾಭಿಪ್ರಾಯಕ್ಕೆ ಸರಿಯಾದ ಕಾರಣವೇ ಇರದು. ನೀವು ಕೆಲವು ಸಂದರ್ಭದಲ್ಲಿ ಇಂದು ಎಡವುವ ಸಾಧನೆ ಇದೆ. ವಿಶೇಷವಾಗಿ ವ್ಯಾಪಾರಸ್ಥರು ಇಂದು ತಮ್ಮ ಸಂಪರ್ಕಗಳನ್ನು ಹೆಚ್ಚಿಸಲು ಅವಕಾಶವನ್ನು ಪಡೆಯಬಹುದು. ಕೆಲಸದಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು. ಪರೀಕ್ಷೆಯ ಆತಂಕವು ನಿಮ್ಮನ್ನು ಕಾಡುವುದು.

ಕುಂಭ ರಾಶಿ :ಯಾವ ವ್ಯಾಪಾರದ ವಿಚಾರಕ್ಕೂ ಪ್ರಾಮಾಣಿಕತೆ ಇರಲಿ. ಅದೇ ನಿಮ್ಮನ್ನು ಕಾಪಾಡಬಹುದು. ಬಂಧುಗಳು ಮನೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಬಹುದು. ಪರೀಕ್ಷೆಯನ್ನು ಏಕಾಗ್ರತೆಯಿಂದ ಎದುರಿಸಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ಇಂದು ನೀವು ತುಂಬಾ ಭಾವನಾತ್ಮಕತೆಯನ್ನು ಅನುಭವಿಸುವಿರಿ. ಸಣ್ಣ ವಿಷಯವೂ ನೋಯಿಸಬಹುದು. ನೀವು ತುಂಬಾ ಅಸಮಾಧಾನಗೊಂಡಿದ್ದರೂ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ನೋವಿಗೆ ಸ್ಪಂದಿಸುವ ಸ್ವಭಾವವು ನಿಮಗೆ ಇಷ್ಟವಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ.

ಮೀನ ರಾಶಿ : ಇಂದು ನಿಮಗೆ ನ್ಯಾಯಾಲಯದ ವಿಚಾರಕ್ಕೆ ಬಂಧುಗಳ ಬೆಂಬಲವು ಇರುವುದು. ಸಹಾಯದ ಮಾಡುವ ಸ್ಥಿತಿಯು ನಿಮಗೆ ಇರಲಿದೆ. ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಿರಿ. ಇಂದು ನಿಮ್ಮ ಮನಃಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಇಂದಿನ ಪ್ರಮುಖ ಕೆಲಸವನ್ನು ನಾಳೆ ಮುಂದೂಡುವುದು ನಿಮಗೆ ಸರಿಹೊಂದದು. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದ ತೀರ್ಮಾನವು ಬೇಡ. ನಿಮ್ಮ ಏಕಾಂತದ ವಿಚಾರವು ಬಹಿರಂಗವಾಗಬಹುದು.

Source : https://tv9kannada.com/horoscope/rashi-bhavishya-21-march-aries-to-pisces-kannada-astrology-predictions-krn-802690.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *