Horoscope 23 March: ದಿನಭವಿಷ್ಯ;ವೃತ್ತಿಯಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿರುವುದು.

ಮೇಷ ರಾಶಿ : ಇಂದಿನ ಲೆಕ್ಕಾಚಾರವನ್ನು ಸರಿಮಾಡಿಕೊಳ್ಳಲು ನಿಮಗೆ ಸಮಯ ಹಿಡಿಯುವುದು. ನಿಮ್ಮಲ್ಲಿರುವ ಯಾವುದಾದರೂ ವಸ್ತುವನ್ನು ಜನರು ಕೇಳಬಹುದು. ಅನವಶ್ಯಕ ಎಂದಾದರೆ ಅದನ್ನು ನೀಡಿ. ಎಲ್ಲದಕ್ಕೂ ನಿರ್ಭಾವುಕರಾಗಿ ವರ್ತಿಸುವುದು ಬೇಡ. ನಿಮ್ಮ ಮೇಲಿನ ಅರೋಪಕ್ಕೆ ಸಮಜಾಯಿಷಿ ಅಗತ್ಯವಿರುವುದು. ಪೂರ್ವಾಗ್ರಹವಿಲ್ಲದೇ ಎಲ್ಲದನ್ನೂ ಒಪ್ಪಿಕೊಳ್ಳುವುದು ಉತ್ತಮ. ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಉದ್ಯೋಗಕ್ಕೆ ಸೇರುವಾಗ ಅಲ್ಪದೂರದ ದೃಷ್ಟಿಯಾದರೂ ಇರಲಿ‌. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು. ಮರೆಯಲ್ಲಿ ಇದ್ದು ನಿಮ್ಮಷ್ಟಕ್ಕೇ ಕೆಲಸ ಮಾಡಿಕೊಳ್ಳುವುದು ಇಷ್ಟವಾಗುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಹೂಡಿಕಯನ್ನು ನವೀಕರಣ ಮಾಡಿಕೊಳ್ಳುವಿರಿ‌.

ವೃಷಭ ರಾಶಿ : ನೀವು ಯಾರಿಗಾದರೂ ತಿಳಿಸಬೇಕಾದ ವಿಚಾರವನ್ನು ತಿಳಿಸದೇ ಸಮಾಧಾನದಿಂದ ಇರಲಾರಿರಿ. ನಿಮ್ಮ ದಿನನಿತ್ಯದ ಕಾರ್ಯಗಳಿಗೆ ಅಡ್ಡಿಗಳು ಬರಬಹುದು. ಆಲಸ್ಯದಿಂದ ನಿಮಗೆ ಯಾವುದನ್ನೂ ಸ್ವೀಕರಿಸುವ ಮಾನಸಿಕತೆಯೂ ಇರದು. ಅನಗತ್ಯ ಸಲಹೆಯನ್ನು ಕೊಡುವುದು ಅತಿಯಾದೀತು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ನಿರೀಕ್ಷಿತ ಪ್ರತಿಸ್ಪಂದವು ನಿಮ್ಮ ಮಾತಿಗೆ ಸಿಗದೇ ಇರುವುದು. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಹೊಸ ವಸ್ತುವಿನ ಖರೀದಿಯಿಂದ ಮೋಸವಾದೀತು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು. ದ್ವೇಷವನ್ನು ಮರೆತು ಪ್ರೀತಿಯಿಂದ ಇರುವಿರಿ. ಹಣವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗುವುದು.

ಮಿಥುನ ರಾಶಿ :ಮಂದಹಾಸದ ಮುಖದಿಂದ ಇಂದು ಸುಂದರವಾಗಿ ಕಾಣುವಿರಿ. ಬಂಧುಗಳ ಜೊತೆಗಿನ ಒಡನಾಟವನ್ನು ನೀವು ಅತಿಯಾಗಿ ಅಪೇಕ್ಷಿಸಲಾರಿರಿ. ನಿಮ್ಮ ಚೌಕಟ್ಟನ್ನು ಬಿಟ್ಟು ಹೊರಬರುವುದು ಇಷ್ಟವಾಗದು. ಉದ್ಯೋಗದ ಸ್ಥಳವನ್ನು ಬದಲಿಸಬೇಕು ಎಂಬ ಇಚ್ಛೆ ಇದ್ದರೂ ಸರಿಯಾದ ಉದ್ಯೋಗವು ಪ್ರಾಪ್ತವಾಗದು. ಸಹೋದರರ ಬಾಂಧವ್ಯವು ಸಡಿಲಾಗುವುದು. ಅಸಮಾಧಾನವನ್ನು ಹೊರಹಾಕಲು ಸನ್ನಿವೇಶವು ಸಿಗಬಹುದು. ಇಂದಿನ‌ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಅನವಶ್ಯಕ ವಿವಾದವನ್ನು ಹುಟ್ಟುಹಾಕಿಕೊಳ್ಳುವಿರಿ‌. ನಿಮ್ಮ ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ನಿಮ್ಮವರಿಗೆ ಸಮಯವನ್ನು ಕೊಡಲಾಗದು.

ಕಟಕ ರಾಶಿ : ಅಪರಿಚಿತ ಸ್ನೇಹಬಳಗವು ನಿಮಗೆ ಸಂತೋಷವನ್ನು ನೀಡುವುದು. ಮನೆಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಸರಿಯಾದ ನಿಖರತೆ ಇರಲಿ. ಹಣಕಾಸಿನ ಅಗತ್ಯತೆಯು ಎಷ್ಟಿದ್ದರೂ ಅದನ್ನು ತಾಳ್ಮೆಯಿಂದ ಸಗವೀಲರಿಸಬೇಕಾಗುವುದು. ಇಂದು ವ್ಯಾಪಾರದಲ್ಲಿ ಆಗುವ ಅಲ್ಪಲಾಭದಿಂದ ತೃಪ್ತಿಯನ್ನು ಕಾಣುವುದು ಅನಿವಾರ್ಯವಾದೀತು. ಉಪಕಾರದ ಸ್ಮರಣೆಯು ಅಲ್ಲಗಳೆದು ಸಂತೋಷದಿಂದ ಇರುವಿರಿ. ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳಬಹುದು. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು.

ಸಿಂಹ ರಾಶಿ : ನಿಮಗೆ ನಿಮ್ಮ ವಸ್ತುಗಳ ಮೇಲೆ ಪ್ರೇಮವು ಅಧಿಕವಾಗಿ ಇರುವುದು. ನಂಬುಗೆಯ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಒಂದನ್ನು ಪಡೆಯಲು ಮತ್ತೊಂದನ್ನು ಬಿಡಬೇಕಾದೀತು. ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳು ಶಾಶ್ವತವಾಗದಂತೆ ನೋಡಿಕೊಳ್ಳಿ. ಇಷ್ಟವಿಲ್ಲದಿದ್ದರೂ ಮಾತನಾಡುವುದು ಅನಿವಾರ್ಯವಾದೀತು. ಒತ್ತಡವನ್ನು ತಣಿಸಿಕೊಳ್ಳಲು ದುರಭ್ಯಾಸವನ್ನು ರೂಢಿಸಿಕೊಳ್ಳಬೇಕಸದೀತು. ಇನ್ನೊಬ್ಬರ ಸ್ವತ್ತನ್ನು ಅಪೇಕ್ಷಿಸುವುದು ಬೇಡ. ಮೋಹದಿಂದ ಹೊರಬರುವುದು ಕಷ್ಟವಾದೀತು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಕುಶಲತೆಯಿಂದ ಕೆಲಸವನ್ನು ಮಾಡಿ. ಮಿತ್ರರಿಂದ ಏನಾದರೂ ಪಡೆಯಬೇಕು ಅನ್ನಿಸುವುದು.

ಕನ್ಯಾ ರಾಶಿ : ಇಂದು ಸಂತೋಷವನ್ನು ತರುವ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳುವಿರಿ. ಬರಬೇಕಾದ ಹಣವು ಬಾರದೇ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಹಳೆಯ ವಸ್ತುಗಳ ದುರಸ್ತಿಯ ಕಡೆ ಗಮನವಿರುವುದು. ನಿಮ್ಮ ಸಂಸ್ಥೆಗೆ ಹೆಚ್ಚಿನ ಮನ್ನಣೆಯು ಸಿಗುವುದು. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಹರಿದು ಹೋದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮೆಚ್ಚುಗೆಯಿಂದ ಅಹಂಕಾರವು ಜಾಗರೂಕವಾದೀತು. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.

ತುಲಾ ರಾಶಿ : ನಿಮಗೆ ಯಾರಿಂದಲಾದರೂ ಹಣವು ದಾನವಾಗಿ ಸಿಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿಯಾಗುವ ಸಾಧ್ಯತೆ ಇದೆ. ನಿಮ್ಮನ್ನು ಯಾರಾದರೂ ಅಳೆಯಬಹುದು. ಅದರ ಬಗ್ಗೆ ಅತಿಯಾದ ನಿರೀಕ್ಷೆ ಬೇಡ. ನೀವು ನಿಮ್ಮ ಸುತ್ತಲಿರುವವರನ್ನು ಬಹಳ ಉತ್ಸಾಹದಿಂದ ಇಡುವಿರಿ. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಕೃತಜ್ಞತೆ ಭಾವವನ್ನು ಪ್ರಕಟಿಸುವಿರಿ. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಸಿಗದ ಹಣದ ಬಗ್ಗೆ ನಿಮಗೆ ಬೇಸರವಿರದು. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ. ನಿಮ್ಮ‌ ದಾಖಲೆಗಳು ಯಾರಿಗಾದರೂ ಸಿಕ್ಕಿ ದುರುಪಯೋಗವಾಗಬಹುದು.

ವೃಶ್ಚಿಕ ರಾಶಿ : ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಗುರಿಯನ್ನು ಇಟ್ಟುಕೊಳ್ಳುವಿರಿ‌. ಯಾರಾದರೂ ನಿಮ್ಮ ಗಮನವನ್ನು ಬೇರೆ ಕಡೆ ಕೊಂಡೊಯ್ಯಬಹುದು. ನಿಮ್ಮ ಬಳಿ ಇರುವ ವಸ್ತುಗಳಿಂದ ನಿಮಗೆ ತೃಪ್ತಿ ಎನಿಸಬಹುದು. ಪ್ರೀತಿಯಿಂದ ಮಾಡಬಹುದಾದುದನ್ನು ಹಾಗೆಯೇ ಮಾಡಿ. ಹಣದಲ್ಲಿ ಖರ್ಚಿನ ಭಾಗವೇ ಹೆಚ್ಚಿರಲಿದೆ. ಕುಟುಂಬದ ಆಸ್ತಿಗಾಗಿ ಮಾತುಕತೆಗಳು ತಾರಕ್ಕೆ ಹೋಗಬಹುದು. ಅಧಿಕಾರವು ಕ್ಷಣಿಕ ಎಂಬ ಭಾವವು ನಿಮ್ಮೊಳಗೆ ಇರಲಿ. ಚಿಕ್ಕ ಕೆಲಸವನ್ನಾದರೂ ಬಹಳ ಅಚ್ಚುಕಟ್ಟಿನಿಂದ ಮಾಡಿಕೊಳ್ಳುವಿರಿ. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಸಂಗಾತಿಯ ಬಗ್ಗೆ ಆರೋಗ್ಯದ ಕಾಳಜಿ ತೋರಿಸುವಿರಿ. ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದೀತು. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು.

ಧನು ರಾಶಿ : ಇಂದು ನಿಮ್ಮ ಉತ್ಸಾಹವು ಬಹಳ‌ ಕೆಲಸಗಳಿಗೆ ಅನುಕೂಲ‌ ಮಾಡಿಕೊಡುವುದು. ಇಂದು ನೀವು ಸಂತೋಷವಾಗಿರಲು ಯಾವುದೇ ಕಾರಣ ಬೇಕಿಲ್ಲ. ನಿಮ್ಮ ಅಭಿಲಾಷೆಯನ್ನು ಹೇಳಿಕೊಳ್ಳುವುದು ಸೂಕ್ತವಾಗುವುದು. ಪ್ರತಿಭೆಯ ಅನಾವರಣಕ್ಕೆ ಇಂದು ಅವಕಾಶವು ಸಿಗಬಹುದು. ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಲೆಕ್ಕಿಸಲಾರಿರಿ. ದಾಂಪತ್ಯದಲ್ಲಿ ತಾಳ್ಮೆಯ ಅವಶ್ಯಕೆ ಎದ್ದು ತೋರಬಹುದು. ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಿಗೆ ಸಮಯವು ಸಿಗದೇ ಕಷ್ಟವಾಗುವುದು. ತಂದೆಯ ಆರೋಗ್ಯವು ವ್ಯತ್ಯಾಸವಾಗಲಿದ್ದು ಸೂಕ್ತ ಚಿಕಿತ್ಸೆಯನ್ನು ಕೊಡಿಸುವಿರಿ. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ನಿಮಗೆ ನೀರನ ಅಭಾವವು ಆಗಬಹುದು.

ಮಕರ ರಾಶಿ : ನೀವು ದೀರ್ಘಕಾಲದ ಆರ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಳ್ಳಲು ಚಿಂತಿಸುವಿರಿ. ನಿಮ್ಮ ಮಕ್ಕಳು ನಿರೀಕ್ಷೆಗಳನ್ನು ಪೂರ ದೊಡ್ಡ ವ್ಯಕ್ತಿಗಳೆಂದು ಯಾರಾದರೂ ಹೇಳಿ ನಿಮಗೆ ವಂಚಿಸಬಹುದು. ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುವಿರಿ. ಬರಬೇಕಾದ ಹಣವು ನಿಮಗೆ ಪೂರ್ತಿಯಾಗಿ ಬಾರದೇ ಬೆರಸರವಾದೀತು. ಚಂಚಲ ಮನಸ್ಸನ್ನು ನಿಯಂತ್ರಿಸಲು ಕಷ್ಟವಾದೀತು. ಇದರಿಂದ ಕೆಲಸದಲ್ಲಿ ಹಿನ್ನಡೆಯಾಗುವುದು. ಕೊಡುಕೊಳ್ಳುವ ವ್ಯವಹಾರವು ಪ್ರಮಾಣಿಕವಾಗಿ ಇರಲಿ. ಉತ್ತಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.‌ ಸಂಗಾತಿಯ ಅಸಹಜ ಮಾತುಗಳಿಂದ ನಿಮಗೆ ಕಷ್ಟವಾಗುವುದು. ಚಿತ್ರಕಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು.

ಕುಂಭ ರಾಶಿ : ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಯಾರಿಂದಲಾದರೂ ಕಿರಿಕಿರಿ ಅನುಭವಿಸುವಿರಿ. ಅಪಮಾನವಾಗುವ ಹೆದರಿಕೆಯು ನಿಮಗೆ ಕಾಡಬಹುದು. ಸ್ನೇಹಿತರ ಜೊತೆ ಸಮಯ ಕಳೆಯುವುದು ಸಂತೋಷವಾದರೂ ಆರ್ಥಿಕತೆಯನ್ನೂ ನೋಡಿಕೊಂಡು ವ್ಯವಹರಿಸಿ. ಇಂದು ಆಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸುವಿರಿ. ವ್ಯವಹಾರದಲ್ಲಿ ಆತ್ಮವಿಶ್ವಾಸದಿಂದ ಇರಿ.‌ ಭಯಪಡುವ ಅವಶ್ಯಕತೆ ಇರುವುದಿಲ್ಲ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ದೃಷ್ಟಿದೋಷವು ನಿಮಗೆ ಅಧಿಕವಾಗಬಹುದು. ಚಿರಪರಿಚಯವು ನಿಮಗೆ ಹೊಸತಾಗಿ ಕಾಣಿಸಬಹುದು. ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಮಾಡಿ. ನಿಮ್ಮ ಹೂಡಿಕೆಯು ಸರಿಯಾದ ಸ್ಥಳದಲ್ಲಿ ಇಲ್ಲದೇ ಇರಬಹುದು.

ಮೀನ ರಾಶಿ :ಇಂದು ನೀವು ಹಲವು ಒತ್ತಡಗಳನ್ನು ಸಹಿಸಿಕೊಳ್ಳಬೇಕಾಗುವುದು. ವೃತ್ತಿಯಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿರುವುದು. ಶ್ರದ್ಧೆಯಿಂದ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ‌. ಕುಟುಂಬದ ಜೊತೆ ಸುಂದರ ಸಮಯವನ್ನು ಕಳೆಯುವುದು ಇಷ್ಟವಾಗುವುದು. ನಿಮಗೆ ಗೌರವವು ಅನಿರೀಕ್ಷಿತವಾಗಿ ಸಿಗುವುದು. ಆರ್ಥಿಕ ಸಮಸ್ಯೆಯನ್ನು ಯಾವುದಾದರೂ ಒಂದು ರೀತಿಯಲ್ಲಿ ಸರಿಮಾಡಿಕೊಳ್ಳುವಿರಿ. ಬಿಡುವಿಲ್ಲದ ದುಡಿಮೆಯು ನಿಮಗೆ ಕಷ್ಟವಾಗಬಹುದು. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಯಾರನ್ನೂ ನೀವು ತಪ್ಪಾಗಿ ಗ್ರಹಿಸುವುದು ಬೇಡ. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವಿರಿ. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ.

Source : https://tv9kannada.com/horoscope/rashi-bhavishya-23th-march-aries-to-pisces-kannada-astrology-predictions-krn-804024.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *