Horoscope 30 March: ದಿನಭವಿಷ್ಯ; ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಸ್ವೀಕರಿಸುತ್ತೀರಿ.

ಮೇಷ ರಾಶಿ: ಇಂದು ನಿಮ್ಮ ಅಹಂಕಾರದಿಂದ ಕೋಪವು ಹೆಚ್ಚಾಗುವುದು. ಕೆಲವು ಜನರು ನಿಮ್ಮ ಮುಂದೆ ಅಸಹಜವಾಗಿ ವರ್ತಿಸಿದ್ದು ನಿಮಗೆ ಅಚ್ಚರಿಯಾಗಬಹುದು. ಆದಾಯವು ಉತ್ತಮವಾಗಿದ್ದು ಅದನ್ನು ಯಾರ ಬಳಿಯಾದರೂ ಗೊತ್ತಾಗದೇ ಹೇಳಿಕೊಳ್ಳುವಿರಿ. ಕಾನೂನು ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುವ ನಂಬಿಕೆ ಹೆಚ್ಚಾಗುವುದು. ಇಂದು ನಿಮ್ಮ ಕಾರ್ಯದಲ್ಲಿ ಆತುರಗೊಂಡರೆ, ಅಸ್ತವ್ಯಸ್ತವೇ ಆಗಬಹುದು. ನಿಮ್ಮ ಆದಾಯ ಮತ್ತು ಖರ್ಚಿಗೆ ನೀವು ಯೋಜನೆ ಸಿದ್ಧಪಡಿಸಿದರೆ ಅದು ನಿಮಗೆ ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಪ್ರಯತ್ನಗಳಲ್ಲಿ ನೀವು ತೊಡಗಿರುವಿರಿ. ಇದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದೋ ಕೆಲಸವನ್ನು ಮಾಡಿಕೊಡಬೇಕಾಗುವುದು. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಅಚಾತುರ್ಯದಿಂದ ತಪ್ಪನ್ನು ಮಾಡಿ, ಪಶ್ಚಾತ್ತಾಪ ಪಡುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ.

ವೃಷಭ ರಾಶಿ: ಗೊತ್ತಿಲ್ಲದ ವಿಚಾರಕ್ಕೆ ಮೌನವಾಗಿರುವುದು ಒಳ್ಳೆಯದು. ಅಪರಿಚಿತ ವ್ಯಕ್ತಿಗಳ ಭೇಟಿಯಿಂದ ಹೊಸ ಉತ್ಸಾಹ ಇರುವುದು. ಪ್ರತಿಕೂಲ ಸಂದರ್ಭದಲ್ಲೂ ಉದ್ವಿಗ್ನಗೊಳ್ಳದಿರುವುದು. ಅಭ್ಯಾಸಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅವಕಾಶಗಳು ಸೃಷ್ಟಿಯಾಗುವುದು. ಈ ಸಮಯದಲ್ಲಿ, ನಿಮ್ಮ ಗುರಿಯಿಂದ ವಿಮುಖರಾಗಬೇಡಿ. ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಸ್ವೀಕರಿಸುತ್ತೀರಿ. ವ್ಯಾಪಾರ ಯೋಜನೆಯನ್ನು ಪೂರ್ಣಗೊಳಿಸಲು ನೀವು ಹೆಚ್ಚು ಗಮನ ಹರಿಸಬೇಕು. ಆರ್ಥಿಕ ಯೋಜನೆಗಳಿಗೆ ಉತ್ತೇಜನ ದೊರೆಯಲಿದೆ. ನಿಮ್ಮ ಕೆಲವು ಹೊಸ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಇನ್ನೊಬ್ಬರನ್ನು ಸರಿ ಮಾಡಲು ಹೋಗಿ ನೀವೇ ಹಾಳಾಗಬಹುದು.

ಮಿಥುನ ರಾಶಿ: ಇಂದು ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕತೆ ಇರಲಿದೆ. ಭೂಮಿಯ ಖರೀದಿಯನ್ನು ಬಹಳ ಗೌಪ್ಯವಾಗಿ ಮಾಡಿಕೊಳ್ಳುವಿರಿ. ಸಣ್ಣ ಅನಾರೋಗ್ಯವೂ ನಿರ್ಲಕ್ಷ್ಯದಿಂದ ದೊಡ್ಡ ತೊಂದರೆಯಾಗಬಹುದು. ನೀವು ಕೆಲಸದ ನಿಮಿತ್ತ ಪ್ರವಾಸಕ್ಕೆ ಹೋಗಬಹುದು. ಕುಟುಂಬದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಯಾವುದೇ ಹೊರಗಿನವರಿಗೆ ಬಹಿರಂಗಪಡಿಸುವುದು ಬೇಡ. ಯಾರಾದರೂ ಲಾಭ ಪಡೆಯಲು ಪ್ರಯತ್ನಿಸಬಹುದು. ಸ್ಪರ್ಧಾಮನೋಭಾವವಿಲ್ಲದೇ ಎಲ್ಲರ ಜೊತೆ ಖುಷಿಯಿಂದ ಭಾಗವಹಿಸಿ. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ನಿಮಗೆ ಅಭದ್ರತೆಯು ಕಾಡಬಹುದು.

ಕಟಕ ರಾಶಿ: ನಿಮ್ಮ ಹಲವು ದಿನಗಳ ಹೂಡಿಕೆಯ ಕಾರಣದಿಂದ ಇಂದು ಲಾಭವು ಸಿಗಲಿದೆ. ನಿಮ್ಮ ವೈಯಕ್ತಿಕ ಕೆಲಸವನ್ನು ಪೂರ್ಣಮಾಡಿಕೊಳ್ಳುವಿರಿ. ಮನೆಯವರ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಸರಿಯಾದ ನಿರ್ಧಾರವು ನಿಮ್ಮನ್ನು ಸರಿಯಾದ ದಾರಿಯಲ್ಲಿ ಇರಿಸುವುದು. ನೀವು ಸಾಮಾಜಿಕ ಹೆಚ್ಚು ಚಟುವಟಿಕೆಯಿಂದ ಇರುವಿರಿ. ಧಾರ್ಮಿಕ ಕಾರ್ಯಗಳಿಗೆ ಶ್ರದ್ಧೆಯು ಕಡಿಮೆ ಆದಂತೆ ತೋರುವುದು. ನೀವು ದೂರದ ಪ್ರಯಾಣವನ್ನು ಮಾಡುವುದಾದರೆ, ಅದು ನಿಮಗೆ ಅನುಕೂಲಕರವೇ. ವ್ಯವಹಾರದಲ್ಲಿ ಕೆಲವು ಹಳೆಯ ಯೋಜನೆಗಳಿಂದ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಸದಸ್ಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು.

ಸಿಂಹ ರಾಶಿ: ಮನೆಯಲ್ಲಿ ಎಲ್ಲರೂ ಸೇರಿಕೊಂಡು ಬಹಳ ಸಂತೋಷದಿಂದ ದಿನವನ್ನು ಕಳೆಯುವಿರಿ.‌ ನಕಾರಾತ್ಮಕ ಮಾತುಗಳಿದ್ದರೂ ನಿಮ್ಮ ಮನೋಬಲವು ಅದನ್ನು ಕಾಪಾಡುತ್ತದೆ. ಹೊಸಬರಿಗೆ ತಕ್ಕಂತೆ ನೀವು ಬದಲಾಗಿ ವಿರಿ. ನಿಮ್ಮ ಸೌಕರ್ಯಗಳಿಗೆ ನೀವು ಸಂಪೂರ್ಣ ಒತ್ತು ನೀಡುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ನೀವು ಕೆಲಸಕ್ಕೆ ಯೋಗ್ಯವಾದ ಗೌರವವನ್ನೂ ಪಡೆಯಬಹುದು. ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುವುದು. ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತದೆ. ದೊಡ್ಡ ಮೊತ್ತದ ವ್ಯವಹಾರವನ್ನು ಮಾಡುವಾಗ ಭಯವಿರುವುದು. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳನ್ನು ತಂದುಕೊಡುವುದು.

ಕನ್ಯಾ ರಾಶಿ: ಮೋಜಿನ‌ ಕಾರಣದಿಂದ ಹಣವನ್ನು ಕಳೆದುಕೊಳ್ಳುವಿರಿ. ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಹೆಚ್ಚಿನ ವಿಷಯಗಳ ಮೇಲೆ ನೀವು ಹಿಡಿತ ಸಾಧಿಸಲು ಸಾಧ್ಯವಿದೆ. ಸಂಗಾತಿಯ ಒತ್ತಡದಿಂದ ಕೆಲವು ತೀರ್ಮಾನವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುವುದು. ಕೆಲಸದ ವೇಗವು ನಿರೀಕ್ಷೆಯಂತೆ ಇರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ನೀವು ಚಿಂತನಶೀಲವಾಗಿ ಕೆಲಸ ಮಾಡಿದರೆ, ಅದು ನಿಮಗೆ ಉತ್ತಮ. ಕಾನೂನಾತ್ಮಕ ವಿಷಯಕ್ಕೆ ಸರಿಯಾದ ಸಲಹೆಯನ್ನು ಪಡೆಯುವಿರಿ. ನೀವು ಸ್ನೇಹಿತನೊಂದಿಗೆ ಯಾವುದೇ ವಿವಾದವನ್ನು ಹೊಂದಿದ್ದರೆ, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ. ಒಬ್ಬರಾದರೂ ಸುಮ್ಮನಿದ್ದರೆ ಕಲಹವು ಶಾಂತವಾಗುವುದು.

ತುಲಾ ರಾಶಿ: ವೃತ್ತಿಯನ್ನೂ ಅಧ್ಯಯನವನ್ನೂ ಮಾಡುವವರಿಗೆ ಗೊಂದಲವಿರುವುದು. ವಿದೇಶಕ್ಕೆ ಹೋಗಲು ಬಯಸುವವರಿಗೆ ಅವಕಾಶಗಳು ಸಿಗಲಿವೆ. ಸಣ್ಣ ವಿಷಯಗಳಿಗೆ ವಿಚಲಿತರಾಗುವುದು ಸೂಕ್ತವಲ್ಲ. ಇದು ನಿಮ್ಮ ದಕ್ಷತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೈನಂದಿನ ದಿನಚರಿಯನ್ನು ವ್ಯವಸ್ಥಿತವಾಗಿರಿಸುವುದು ಮುಖ್ಯ. ನಿಮ್ಮ ಮನಸ್ಸನ್ನು ಸಹ ನಿಯಂತ್ರಿಸಿ. ಯಾರಿಗಾದರೂ ದಾನ ಮಾಡುವುದು ನಿಮಗೆ ಇಷ್ಟವಾಗುವುದು. ಎಲ್ಲ ಸನ್ನಿವೇಶಗಳನ್ನು ನಿಭಾಯಿಸಲು ಪ್ರಯತ್ನಿಸಬೇಕಾಗುತ್ತದೆ. ಕುಟುಂಬದ ಸದಸ್ಯರಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಪಡೆಯಬಹುದು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೊಬ್ಬರಿಗೆ ಹೇರುವುದು ಬೇಡ.

ವೃಶ್ಚಿಕ ರಾಶಿ: ನಿಮ್ಮನ್ನು ದಾರಿತಪ್ಪಿಸುವ ಸಾಧ್ಯತೆ ಇದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಪಾರದಲ್ಲಿ ಚಟುವಟಿಕೆಗಳನ್ನು ಯೋಜಿಸಿ. ಗೃಹ ಬಳಕೆಯ ವಸ್ತುಗಳನ್ನು ಮಾರಾ ಮಾಡುವವರಿಗೆ ಲಾಭವು ಸಿಗುವುದು. ನಿಮ್ಮ ವೃತ್ತಿಜೀವನದಲ್ಲಿ ಮುಂದುವರಿಯಲು, ನೀವು ಕೆಲವು ವಿಷಯಗಳಲ್ಲಿ ಚಾಣಾಕ್ಷರಾಗಬೇಕು. ಇಂದು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ನ್ಯಾಯಾಲಯದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ವ್ಯವಹಾರದಲ್ಲಿ ಪಾಲುದಾರರಾಗುವುದು ಉತ್ತಮ, ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ಸದ್ಯ ತಳ್ಳಿಹಾಕುವಿರಿ.

ಧನು ರಾಶಿ: ಇಂದು ನಿಮ್ಮವರ ಮಾತುಗಳು ಗೊಂದಲವನ್ನು ತರಿಸಬಹುದು. ನಿಮ್ಮ ಹಳೆಯ ತಪ್ಪುಗಳೇ ನಿಮಗೆ ತೊಂದರೆ ಉಂಟುಮಾಡುವುದು. ಎಂತಹ ಹಣಕಾಸಿನ ವಹಿವಾಟು ಮಾಡುವಾಗ ಖಚಿತವಾಗಿ ಇಲ್ಲದೇ ಮಾಡುವುದು ಬೇಡ. ಸಂಬಂಧಗಳ ನಡುವಿನ ಸಮಸ್ಯೆಯನ್ನು ಮಾತುಕತೆಯಿಂದ ಪರಿಹಾರ ಸಿಗಲಿದೆ. ಆಸ್ತಿಯ ಸಮಸ್ಯೆಯನ್ನು ದೂರಮಾಡಿಕೊಳ್ಳಬಹುದು. ನೀವು ಯಾರಿಗಾದರೂ ಮಾತುಕೊಟ್ಟರೆ, ಅದನ್ನು ಪೂರೈಸಲು ಪ್ರಯತ್ನಿಸುವಿರಿ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗುವುದು. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು.

ಮಕರ ರಾಶಿ: ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನದ ಅವಶ್ಯಕತೆ ಇರುವುದು. ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದ ಕೆಲವು ತೊಂದರೆಗೆ ಪರಿಹಾರವನ್ನು ಬೇಗ ಕಂಡುಕೊಳ್ಳಬೇಕಾಗುವುದು. ನಕಾರಾತ್ಮಕ ಚಿಂತನೆಯನ್ನು ನಿಮಗೆ ಕೆಲವರು ತುಂಬಬಹುದು. ಅಂತಹ ಜನರ ಸಹವಾಸದಿಂದ ದೂರವಿರಬೇಕಾಗುವುದು. ನೀವು ಕೆಲವು ಹೊಸಬರನ್ನು ಭೇಟಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಿರುವಿರಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ರಾಜಕೀಯವಾಗಿ ಒತ್ತಡಗಳು ಬರಬಹುದು. ಅದನ್ನು ತಾಳ್ಮೆಯಿಂದ ಎದುರಿಸಬೇಕು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು.

ಕುಂಭ ರಾಶಿ: ಇಂದು ನಿಮ್ಮ ಬಗ್ಗೆ ಕುಟುಂಬದ ಸದಸ್ಯರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ಅದನ್ನು ಪೂರೈಸುವ ಬಗ್ಗೆ ಹೆಚ್ಚು ಸಮಯವನ್ನು ಕೊಡುವಿರಿ. ನೀವು ನಿಮ್ಮನ್ನು ಅಸಡ್ಡೆ ಮಾಡಿಕೊಳ್ಳುತ್ತಿದ್ದ ವಿಷಯಗಳ ಪರಿಣಾಮಗಳು ದೂರವಾಗುತ್ತವೆ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಏಕಾಗ್ರತೆಯನ್ನು ಹೆಚ್ಚಿಸುವುದು ಮುಖ್ಯ. ಸಂಶೋಧನಾತ್ಮಕ ವಿಚಾರಕ್ಕೆ ನಿಮ್ಮಿಂದ ಅಧಿಕ ಪ್ರಯತ್ನವಿರುವುದು. ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಡಿಲಬಿಡುವುದು ಬೇಡ. ನಿಮ್ಮ ವಿರೋಧಿಗಳಲ್ಲಿ ಒಬ್ಬರು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಬಂಧುಗಳಿಂದ ಕೆಲಸವು ಹಾಳಾಗಬಹುದು.

ಮೀನ ರಾಶಿ: ಇಂದು ನಿಮ್ಮ ಸಮಯವನ್ನು ಉಪಯೋಗಕ್ಕೆ ಬಾರದ ಚಟುವಟಿಕೆಗಳಲ್ಲಿ ವ್ಯರ್ಥ ಮಾಡುವಿರಿ. ನಿಮ್ಮ ಇಂದಿನ ಮಾತುಗಳು ನಿಮ್ಮ ಬಗ್ಗೆ ಹೇಳುವುದು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸವಾಲನ್ನು ಎದುರಿಸುವ ಉತ್ಸಾಹವಿರುವುದು. ಅದಕ್ಕೆ ತಗುಲುವ ಖರ್ಚುಗಳನ್ನೂ ನಿಯಂತ್ರಣದಲ್ಲಿಡಿ. ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು, ಅದಕ್ಕೆ ಸಂಬಂಧಿಸಿದ ಯೋಜನೆಯ ಪೂಋಣ ಮಾಹಿತಿ ಇರಲಿ. ನೀವು ಇಂದು ಹೊರಗಿನವರಿಗೆ ಯಾವುದೇ ಆಂತರಿಕ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಬಾರದು. ರಕ್ತ ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ನಿಮ್ಮ ಯೋಜನೆಗಳನ್ನು ನೀವು ವೇಗಗೊಳಿಸುತ್ತೀರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಇಂದು ನೀವು ದೇವರ ಆರಾಧನೆಯಲ್ಲಿ ಮಗ್ನರಾಗುವಿರಿ.

Source : https://tv9kannada.com/horoscope/daily-horoscope-2024-aries-to-pisces-astrology-30th-march-in-kannada-ggs-808381.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *