ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದಶಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಸಿದ್ಧ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:27 ರಿಂದ 07:59ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:31 ರಿಂದ 11:04ರ ವರೆಗೆ.

ಮೇಷ ರಾಶಿ: ನಿಮ್ಮ ಹಣವು ಅಧಿಕವಾಗಿ ಖರ್ಚಾಗಬಹುದು. ಅದನ್ನು ಸತ್ಕಾರ್ಯಕ್ಕೆ ವ್ಯಯವಾಗುವಂತೆ ಮಾಡಿ. ಆರೋಗ್ಯವಾಗಿದ್ದರೆ ಎಂತಹ ಕಾರ್ಯವನ್ನೂ ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಹೊಗಳಿ ಹೊನ್ನಶೂಲಕ್ಕೆ ಏರಿಸಿದರು ಎಂಬ ಮಾತನ್ನು ನೆನಪಿಡಿ. ಶಿಕ್ಷಕರಾಗಿದ್ದರೆ ನಿಮಗೆ ನಿಮ್ಮ ವಿದ್ಯಾರ್ಥಿಗಳಿಂದ ಉಡುಗೊರೆ ಸಿಗಬಹುದು. ನಿಮ್ಮ ಕುಟುಂಬ ಸದಸ್ಯರ ಸಲಹೆಯನ್ನು ಅನುಸರಿಸುವ ಮೂಲಕ ಅವರಿಗೆ ಸಂತೋಷವನ್ನು ಕೊಡುವಿರಿ. ಸಂಬಂಧಗಳಲ್ಲಿ ನಿಮ್ಮ ನಂಬಿಕೆ ಉಳಿಯುತ್ತದೆ. ಕೆಲಸದಲ್ಲಿ ನಿಯಮಗಳಿಗೆ ಸಂಪೂರ್ಣ ಗಮನವನ್ನು ನೀಡುವುದು ಅವಶ್ಯಕ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ನೀವು ಒಂದು ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಿರಿ. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು.
ವೃಷಭ ರಾಶಿ: ಇಂದು ದೀರ್ಘಪ್ರಯಾಣವನ್ನು ಇಚ್ಛಿಸುವವರು ಆರೋಗ್ಯದ ಮೇಲೂ ಗಮನವಿರಿಕೊಳ್ಳುವುದು ಒಳ್ಳೆಯದು. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಹೊಸದಾಗಿ ವಾಹನವನ್ನು ಚಲಾಯಿಸುತ್ತಿದ್ದರೆ ಎಚ್ಚರವಿರಲಿ. ಇಂದು ನಿಮಗೆ ಅದೃಷ್ಟವು ಪೂರ್ಣವಾಗಿ ಕೈ ಕೊಟ್ಟಂತೆ ತೋರುವುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ನಿಮ್ಮ ಪ್ರಯತ್ನವೇ ಅಧಿಕವಾಗಿ ಇರಲಿದೆ. ವ್ಯಾಪಾರ ಮಾಡುವ ಜನರ ಸಂತೋಷಕ್ಕೆ ಕೊನೆಯೇ ಇರುವುದಿಲ್ಲ. ನಿಮಗೆ ಅಪಾಯವನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಿದರೆ, ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ. ನಿವೃತ್ತಿಯನ್ನು ಪಡೆದ ಕಾರಣ ಮನಸ್ಸಿನಲ್ಲಿ ನಾನಾ ಪ್ರಕಾರದ ಆಲೋಚನೆಗಳು ಬರುವುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ.
ಮಿಥುನ ರಾಶಿ: ನಿಮ್ಮಲ್ಲಿರವ ಅವಗುಣಗಳನ್ನು ನಡುವೆ ನೀವೇ ಅರ್ಥ ಮಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಆಮೆಯ ಗತಿ ಸಾಗುವ ಬದುಕನ್ನು ಕಂಡು ನಿರಾಶರಾಗುವುದು ಬೇಡ. ಮಂದಗತಿ, ಶೀಘ್ರಗತಿ ಬದುಕಿನಲ್ಲಿ ಸಾಮಾನ್ಯವೆಂದು ತಿಳಿಯಿರಿ. ನಿಮಗೆ ಇಂದು ಸಹೋದ್ಯೋಗಿಯ ಮಾತುಗಳು ಇಷ್ಟವಾಗದೇಹೋಗಬಹುದು. ನೀವು ಅಧಿಕಾರದ ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಗುರಿಯನ್ನು ಸರಿಯಾಗಿ ನಿರ್ಧರಿಸಿಕೊಳ್ಳಿ. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ.
ಕರ್ಕ ರಾಶಿ: ಇಂದ ನಿಮಗೆ ಯಾರೋ ಮಾಡಿದ ತಪ್ಪಿಗೆ ನೀವು ತಲೆತಗ್ಗಿಸುವಂತೆ ಆಗುತ್ತದೆ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಮಾಡುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಓದಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರಿ. ನೀವು ಈ ಹಿಂದೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ನೀವು ಅದನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವರು. ಕಿರಿಯರಿಂದ ನೀವು ಸಲ್ಲದ ಮಾತುಗಳನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಹಿರಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು.
ಸಿಂಹ ರಾಶಿ: ನೀವು ಇಂದು ಯಾವುದೋ ವಿಷಯಕ್ಕೆ ಬೇರೆಯವರ ಬಗ್ಗೆ ಮನಸ್ಸಿನಲ್ಲಿ ಕಟ್ಟಿಕೊಂಡ ಗೋಡೆಯನ್ನು ಒಡೆಯುವಿರಿ. ಇದರಿಂದ ನೆಮ್ಮದಿ, ಸಂತೋಷಗಳು ತಾನಾಗಿಯೇ ಬರುವವು. ಸಂಗೀತವು ಮುದುಡಿದ ಮನಸ್ಸನ್ನು ಅರಳಿಸುವುದು. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಹೊಸ ವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡಿ. ಮನೆಯಲ್ಲಿ ಒಪ್ಪುತ್ತಾರೆ. ಆನಂದದ ಕಡಲಲ್ಲಿ ತೇಲುವಿರಿ. ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ಭವಿಷ್ಯಕ್ಕೆ ಹೂಡಿಕೆ ಮಾಡುವಿರಿ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ವ್ಯಾಪಾರಸ್ಥರಿಗೆ ದಿನವು ಅಲ್ಪ ಲಾಭದಾಯಕವಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ನೀವು ತಪ್ಪಿಸುವಿರಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ.
ಕನ್ಯಾ ರಾಶಿ: ನೀವು ಚೆನ್ನಾಗಿ ಮಾತನಾಡುತ್ತೀರೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯಿಯ ಚಪಲಕ್ಕೆ ಅಸಂಬದ್ಧವನ್ನು ಹೇಳುವಿರಿ. ಸದಾ ನಗುಮುಖದಿಂದ ಇರಿ. ವ್ಯಾಪರ ಸುಗಮವಾಗಿ ಸಾಗುವುದು. ನಿಶ್ಚಿಂತೆಯಿಂದ ನಿದ್ರಿಸಬಹುದು. ನಾಳೆಯದನ್ನು ಹಂಬಲಿಸಿ ಇಂದು ಹಾಗೂ ನಾಳೆಯನ್ನು ಹಾಳು ಮಾಡಿಕೊಳ್ಳಬೇಡಿ. ಇಂದು ನಿಮ್ಮ ಕಾರ್ಯದಲ್ಲಿ ಸುಧಾರಣೆ ಇರಲಿದೆ. ನಿಮ್ಮ ದೊಡ್ಡ ಗುರಿಯ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ಕ್ರಿಯಾತ್ಮಕ ಕೆಲಸದಲ್ಲಿ ಉತ್ತಮ ಚಿಂತನೆ ಇರಲಿದೆ. ಭೂಮಿಯ ವ್ಯವಹಾರವನ್ನು ನೀವು ಮಾಡುವುದು ಕಷ್ಟವೆನಿಸಬಹುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗಬಹು. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು.
ತುಲಾ ರಾಶಿ: ಇಂದು ನೀವು ಬೆಟ್ಟವನ್ನೇ ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಖಂಡಿತ ಮಾಡಬೇಡಿ. ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ಸುಂದರವಾಗಿಯೇ ಇರುವ ನೀವು ಇನ್ನೊಂದಿಷ್ಟು ಪಿಟ್ ನೆಸ್ ಗೆಂದು ಹೋಗಿ ಅನಾಹುತ ಮಾಡಿಕೊಳ್ಳವುದು ಬೇಡ. ಮನೆಗೆ ಸಂಬಂಧಿಸಿದ ಕಾರ್ಯದಿಂದ ಹಣವು ವ್ಯಯವಾಗಬಹುದು. ನೀವು ಮಾನಸಿಕ ಸುರಕ್ಷತೆಯಿಂದ ಹೊರಬರಬೇಕಾಗುವುದು. ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ನಿಮ್ಮ ಮುಖ್ಯ ವಿಷಯಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ಯಾರನ್ನೋ ನಿಮಗೆ ಹೋಲಿಸಿಕೊಂಡು ಸಂಕಟಪಡುವಿರಿ. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು.
ವೃಶ್ಚಿಕ ರಾಶಿ: ಇಂದು ನಿಮ್ಮ ದಿನದ ಕೆಲಸವನ್ನು ಒಮ್ಮೆ ಅವಲೋಕಿಸಿ ಅನಂತರ ಕಾರ್ಯದ ಕಡೆ ಮುನ್ನಡೆಯಿರಿ. ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಇರುವುದೂ ಇಲ್ಲವಾದೀತು. ಅನಗತ್ಯ ವಿಷಯಗಳ ಚರ್ಚೆಗೆ ಮಾರ್ಗವನ್ನು ತೆರೆಯಬೇಡಿ. ಅದು ಮತ್ತೆಲ್ಲಿಗೋ ನಿಮ್ಮನ್ನು ಕರೆದೊಯ್ಯವುದು. ನಿಮ್ಮ ಯೋಚನೆಗಳನ್ನು ಸರಿಯಾಗಿ ವ್ಯಕ್ತಪಡಿಸಿ. ಇಂದು ನೀವು ಸಂತೋಷದಿಂದ ಇರುವಿರಿ. ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯ ಜೊತೆ ಉಪಯುಕ್ತವಾದ ವಿಚಾರದಲ್ಲಿ ಚರ್ಚೆ ಮಾಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.
ಧನು ರಾಶಿ: ಇಂದು ನಿಮಗೆ ಮಕ್ಕಳಿಂದ ಸಂತೋಷದ ವಾರ್ತೆ ಗೊತ್ತಾಗುವುದು. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಸುಂದರರೂಪಕ್ಕೆ ಮರುಳಾಗುತ್ತೀರಿ. ಉದ್ಯೋಗದ ನಿಮಿತ್ತ ಪ್ರಯಾಣ ಸಾಧ್ಯತೆಯಿದೆ. ನಿಮ್ಮವರೊಂದಿಗೆ ಕೆಲವು ಸಮಯವನ್ನು ಕಳೆಯಿರಿ. ಉತ್ತಮ ಬಾಂಧವ್ಯವು ಮುಂಬರುವ ಬಾಧೆಯನ್ನು ಕಡಿತಗೊಳಿಸುವುದು. ಇನ್ನೊಬ್ಬರ ಬದುಕನ್ನು ಕೀಳಾಗಿ ನೋಡಲು ಹೋಗಬೇಡಿ. ನೀವೇ ಸರಿಮಾಡಿಕೊಳ್ಳಿ. ನಿಮ್ಮ ಸ್ನೇಹಿತರು ನಿಮಗೆ ಯಾವುದಾದರೂ ಸಲಹೆಯನ್ನು ನೀಡುತ್ತಿದ್ದರೆ ಅದನ್ನು ಗಮನಿಸಿ. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.
ಮಕರ ರಾಶಿ: ಇಂದು ನಿಮ್ಮ ಕೆಟ್ಟ ಆರೋಗ್ಯವನ್ನು ಅರೆಕ್ಷಣದಲ್ಲಿ ಸರಿ ಮಾಡುವುದು ಕಷ್ಟ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಅವಕಾಶಗಳನ್ನು ಸೃಷ್ಟಿಕೊಳ್ಳುವ ಸಾಮರ್ಥ್ಯ ನಿಮಲ್ಲಿದೆ. ಸ್ವಲ್ಪ ಸಮಯ ಅವರಿಗೆ ಕೊಡಿ. ಇಲ್ಲವಾದರೆ ಅವರ ಮನಸ್ಸಿನಲ್ಲಿ ನಕಾರಾತ್ಮಕವಾಗಿಯೇ ಉಳಿಯುತ್ತೀರಿ. ಕೆಲವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಇರಬೇಕಾದೀತು. ನಿಮ್ಮ ಸಂಗಾತಿಗೆ ನೀವು ಉಡುಗೊರೆಯನ್ನು ತಂದುಕೊಡುವಿರಿ. ಅತಿಯಾದ ಉತ್ಸಾಹ, ನಂಬಿಕೆಯಿಂದ ನೀವು ತೊಂದರೆಗೆ ಸಿಲುಕುವಿರಿ. ನಿಮ್ಮ ಮಾರ್ಗವು ನೇರವಾಗಿರಲಿ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.
ಕುಂಭ ರಾಶಿ: ಇಂದು ಉದ್ಯೋಗದಲ್ಲಿ ಹತ್ತಾರು ಕೆಲಸಗಳು ಒಮ್ಮೆ ಬಂದು ಬೀಳಬಹುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ಹೂಡಕೆಗಳನ್ನು ಮಾಡುವಾಗ ದೂರದರ್ಶಿಗಳಾಗಿ ಯೋಚಿಸಿ. ಇಲ್ಲದಿದ್ದರೆ ಮುನಿಸಿಕೊಂಡಾಳು. ಮಕ್ಕಳೊಂದಿಗೆ ಇದ್ದು ಆಯಾಸವನ್ನು ಮರೆಯುವಿರಿ. ಹಳೆಯ ಮಧುರ ನೆನಪುಗಳು ನಿಮ್ಮನ್ನು ಖುಷಿಯಾಗಿಡುವುವು. ವಹಿವಾಟಿನಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಸಾಧ್ಯ. ನಿಮ್ಮ ಮನಶ್ಚಾಂಚಲ್ಯವನ್ನು ಕಡಮೆ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ.
ಮೀನ ರಾಶಿ: ಇಂದು ನಿಮ್ಮಲ್ಲಿರುವ ತಿಳಿವಳಿಕೆಯ ಜೊತೆ ನಿಮ್ಮ ಪ್ರಯತ್ನವೂ ಯಶಸ್ಸಿನ ಮೆಟ್ಟಿಲೇರಲು ಸಹಕಾರಿ. ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ಸಿಟ್ಟು, ಬೇಸರದಿಂದ ಇನ್ನಷ್ಟು ಪರಿಹಾಸ್ಯ ಒಳಗಾಗಬೇಡಿ. ಕೆಲಸ ಮಾಡುತ್ತಿರುವಾಗ ಕಿರಿಕಿರಿ ಎನಿಸದರೆ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮೂಡ್ ಗೆ ಹೋಗಿ ಮನಸೋ ಇಚ್ಛೆ ಸ್ನೇಹಿತರ ಜೊತೆ ಹರಟಿ ಬನ್ನಿ. ಮನೆಯಲ್ಲಿ ಹೆಚ್ಚಿನ ಕೆಲಸಗಳು ನಿಮ್ಮದೇ. ಬೇಸರಗೊಳ್ಳದೇ ಖುಷಿಯಿಂದ ಮಾಡಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ. ಸಹಕಾರದ ಮನೋಭಾವವು ನಿಮ್ಮ ಮನಸ್ಸಿನಲ್ಲಿ ಇರುವುದು. ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ ಕಾಲವನ್ನು ಕಳೆಯುವಿರಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ.