Horoscope 6 April: ದಿನಭವಿಷ್ಯ; ಶನಿವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ.

Rashi Bhavishya: 2024 ಏಪ್ರಿಲ್​​ 06  ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:30ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:40 ರಿಂದ 03:40 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06: 26 ರಿಂದ ಬೆಳಗ್ಗೆ 07:58ರ ವರೆಗೆ.

ಮೇಷ ರಾಶಿ :ಹಿಂದೆ ನೆಟ್ಟ ಗಿಡಗಳು, ಬೆಳೆದು ಮರವಾಗಿ ಫಲವನ್ನು ಮತ್ತೆಂದೋ ಕೊಡುವಂತೆ, ಎಂದೋ ಮಾಡಿದ ಸತ್ಕಾರ್ಯ ಇಂದು ಫಲ ಕೊಡುವುದು ನಿಮಗೆ. ಕಳೆದುಹೋದ ಬಗ್ಗೆ ನೆನೆನೆನೆದು ಕೊರಗಿ ಕಣ್ಣೀರಾಗುವುದಕ್ಕಿಂತ ಉತ್ತಮ ಆಲೋಚನೆಗಳಿಂದ ಮುಂದಿನದನ್ನು ಚಿಂತಿಸಿ. ನಿಮ್ಮ ಕುಟುಂಬದ ವಾತಾವರಣವು ಸ್ವಲ್ಪ ಆತಂಕದಿಂದ‌ ಕೂಡಿರಬಹುದು. ಕೆಲಸದಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಸಲಹೆಯನ್ನು ಕೊಡಲು ಹೋಗಬೇಡಿ. ನೀವು ಸುಲಭವಾಗಿ ಜನರ ವಿಶ್ವಾಸವನ್ನು ಗಳಿಸುವಿರಿ. ನಿಮ್ಮ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆದರೆ ಅದರ ಬಗ್ಗೆ ಸಾಕಷ್ಟು ಯೋಚಿಸಿ ಮುಂದುವರಿಯಿರಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು.

ವೃಷಭ ರಾಶಿ :ಅದೃಷ್ಟವನ್ನು ಹುಡುಕುತ್ತಿದ್ದರೆ ಇಂದು ಸ್ವಾಗತಿಸಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು.ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ನಿಮ್ಮ ಕೆಲಸದ ಮೇಲೆ ನೀವು ಸಂಪೂರ್ಣ ಗಮನವಿಲ್ಲದೇ ಯಾವುದೋ ಯೋಚನೆಯಲ್ಲಿ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಸೌಕರ್ಯವು ಹೆಚ್ಚಾಗುತ್ತದೆ ಎಂದು ಖುಷಿ ಪಡುವ ಬದಲು ಆಲಸ್ಯದತ್ತ ನಿಮ್ಮ ನಡೆ ಇರಲಿದೆ. ಆಲಸ್ಯದಿಂದ ಎದ್ದಾಗ ಮಾತ್ರ ನೀವು ನಿಮ್ಮ ಅನೇಕ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರ ಅಗತ್ಯತೆಗಳ ಬಗ್ಗೆ ನೀವು ಗಮನ ಹರಿಸಬೇಕು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ. ಸಹೋದ್ಯೋಗಿಗಳಿಂದ ಅನಿವಾರ್ಯವಾಗಿ ಸಹಾಯವನ್ನು ಪಡೆಯುವಿರಿ.‌

ಮಿಥುನ ರಾಶಿ :ಇಂದು ನೀವು ನಿಚ್ಚಲ ಮನಸ್ಸಿನಿಂದ ವಿಚಲಿತರಾಗುವುದು ಬೇಡ. ಶೈಕ್ಷಣಿಕವಾದ ಪ್ರಗತಿಯನ್ನು ಸಾಧಿಸಬೇಕಾಗಬಹಿದು. ನಿಮ್ಮ ಕಿವಿ ಮಾತುಗಳು ಅನೇಕರಿಗೆ ಸ್ಫೂರ್ತಿಯಾಗಬಹುದು. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಇಂದು ನಿಮ್ಮ ಪ್ರಮುಖ ಕೆಲಸಗಳು ವೇಗದಿಂದ ಸಾಗುವುದು. ನಿಮಗೆ ಅಯಾಚಿತವಾಗಿ ಬರುವ ಶುಭಸಂದರ್ಭವನ್ನು ಸಂತೋಷಿಸುವಿರಿ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌ ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು. ನಿಮ್ಮ ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ.

ಕರ್ಕಾಟಕ ರಾಶಿ :ಇಂದು ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಹನಿ ನೀರ ಸುರಿಸುವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಯಾರಿಗಾದರೂ ಕಾದು ಸಮಯವು ಹಾಳಾಗುವುದು. ನಿಮಗೆ ಸಂಬಂಧಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳುವುದು ಕಷ್ಟವಾದೀತು. ನ್ಯಾಯಾಂಗದ ವಿಷಯಗಳಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಶುದ್ಧ ಮನಸ್ಸಿನಂತೆ ತೋರಿದರೂ ಅಂತರಂಗದಲ್ಲಿ ಕಲ್ಮಶವು ಹೆಚ್ಚಿರುವುದು. ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು.

ಸಿಂಹ ರಾಶಿ :ಇನ್ನೊಬ್ಬರ ಸುಖವನ್ನು ಕಸಿದುಕೊಂಡು ಯಾವ ಸುಖವನ್ನು ಅನುಭವಿಸುವಿರಿ? ನಿಮ್ಮ ಬಗೆಗಿನ ಸದ್ಭಾವಗಳು ಬದಲಾದಾವು. ರಸಿಕತೆಯಲ್ಲಿ ಸ್ಥಾನವನ್ನೂ, ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ನೀವು ಆರಾಮಾಗಿದ್ದೀರಿ ಎಂದು ತೋರಿಸಲು ಹೋಗಬೇಡಿ‌. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಜಗಳ ನಿಮಗಾಗುವಂತಹ ಕಾರ್ಯವನ್ನು ಒಪ್ಪಿಕೊಳ್ಳಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಅತಿಯಾದ ಕಾರ್ಯದಿಂದ ನಿಮಗೆ ತೊಂದರೆಯಾದೀತು. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವಿರಿ. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.

ಕನ್ಯಾ ರಾಶಿ :ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ನಿಮ್ಮ ಜೀವನವನ್ನು ನೀವೇ ಲಘುವಾಗಿ ಕಾಣುವುದು ಬೇಡ. ನಿಮ್ಮ ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಒಳ್ಳೆಯವರ ಸಂಗ ಸಿಗಬಹುದು.‌ ಸಿಗದಿದ್ದರೆ ನೀವೇ ಹೋಗಿ.‌ ಒಳ್ಳೆಯ ಪುಸ್ತಕವನ್ನು ತಂದು ಓದಿ. ಸ್ನೇಹಿತನ‌ ಕೆಲಸವನ್ನು ಅದು ಮಾಡುವುದು. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೇ ಎಲ್ಲವನ್ನೂ ಹೊರಹಾಕುವಿರಿ. ನೀವು ಮನೆಯ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಇರಲಿದೆ. ನಿಮ್ಮ ಆದಾಯವು ಮೊದಲಿಗಿಂತ ಉತ್ತಮವಾಗಿದ್ದು ಅದನ್ನು ಒಂದು ಕಡೆ ಸ್ಥಿರವಾಗಿಸಿಕೊಳ್ಳಿ. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ರಾಜಕೀಯವಾಗಿ ಹಿನ್ನಡೆಯಾಗಬಹುದು. ನಿಮ್ಮದಾದ ದ್ವೀಪವನ್ನು ಮಾಡಿಕೊಂಡು ನೀವಿರುವಿರಿ.

ತುಲಾ ರಾಶಿ :ನೀವು ಇಂದು ಅನುಮಾನ ಬರುವಂತಹ ಹಾವಭಾವದಲ್ಲಿ ಇರುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ಮನಸ್ಸಿನ ಶಕ್ತಿ ದ್ವಿಗಣವಾಗುವುದು. ನಕಾರಾತ್ಮಕತೆ ಆಲೋಚನೆಗಳೂ ದೂರವಾಗುವುದು. ಹಣದ ಸಮಸ್ಯೆಗಳು ಎದುರಾಗಬಹುದು. ವಿಶ್ವಾಸಘಾತಕ ಕಾರ್ಯಗಳಿಗೆ ಮುನ್ನುಗ್ಗಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಇಷ್ಟಪಡಲಾರಿರಿ. ಎಲ್ಲರ ಜೊತೆ ಬೆರೆಯುವುದು ನಿಮಗೆ ಖುಷಿಯ ವಿಚಾರವಾಗಲಿದೆ. ನಿಮ್ಮ ಹಿರಿಯರ ಜೊತೆ ಗೌರವವನ್ನು ಕಾಪಾಡಿಕೊಳ್ಳಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.

ವೃಶ್ಚಿಕ ರಾಶಿ :ನಿಮಗೆ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ಇಂದು ಮನವರಿಕೆಯಾಗಲಿದೆ. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿರುವುದು. ಸಿಟ್ಟಿನ ಮೂಟೆಯನ್ನು ಕೆಳಗಿಳಿಸಿ. ಆಗ ಸಿಗುವ ಆನಂದಕ್ಕೆ ಬೆಲೆಯೆಷ್ಟು? ನಿಮ್ಮ ಆಲೋಚನೆಗಳನ್ನು ಇತರ ಜೊತೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ‌ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ.

ಧನು ರಾಶಿ :ಸಣ್ಣ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಲಾತ್ಮಕ ಮತ್ತು ಸೃಜನಶೀಲ ವ್ಯಕ್ತಿತ್ವಕ್ಕೆ ಬಹಳಷ್ಟು ಮೆಚ್ಚುಗೆ ಬರಲಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಫಲವು ಸಿಗಲಿದೆ. ನಿಮ್ಮ ಯಾವುದೇ ಸಂಬಂಧದ ಜೊತೆ ರಾಜಿ ಮಾಡಿಕೊಳ್ಳಲು ಹೋಗಬಹುದು. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯು ಇರುವುದು. ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ಪ್ರೀತಿಪಾತ್ರರ ಜೊತೆ ನಿಮ್ಮ ಆಪ್ತತೆ ಹೆಚ್ಚಾಗಬಹುದು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು.

ಮಕರ ರಾಶಿ :ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಹಣದ‌ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮಗೆ ಕಲಿಸಿದವರ ಒಡನಾಟವು ಬೆಳೆಯುವುದು. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ನೀವು ಸಮವಲ್ಲದಿದ್ದರೂ ತೊಂದರೆಯಾಗದಂತೆ ನಿಭಾಯಿಸುವಿರಿ. ಅದು ನಿಮಗೆ ಒಳ್ಳೆಯದು. ಇಲ್ಲವಾದರೆ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ನೆರೆಹೊರೆಯರ ಜೊತೆ ವಾಗ್ವಾದ‌ ಮಾಡುವಿರಿ. ಬಾಡಿಗೆ ಮನೆಯ ಮಾಲಿಕರಿಂದ ನಿಮಗೆ ಏನಾದರೂ ಆಗಬಹುದು.

ಕುಂಭ ರಾಶಿ :ಇಂದು ನಿಮ್ಮವರ ಕೆಲವು ಮಾತುಗಳು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುವು‌. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡಗಳು ಕಾಣಿಸಿಕೊಳ್ಳುವುದು. ಸಮಾಧಾನದಿಂದ ನಿಭಾಯಿಸಿ. ಕಾಲು ಕೆರೆದುಕೊಂಡು ಪತ್ನಿಯ ಜೊತೆ ಜಗಳವಾಡಬೇಡಿ. ಇಂದು ನೀವು ಬೇರೆ ಬೇರೆ ಕಾರಣಗಳಿಂದ ವಿಶ್ರಾಂತಿ ಪಡೆಯುವುದಿಲ್ಲ. ಕೌಟುಂಬಿಕ ಕಲಹದಿಂದಾಗಿ ನಿಮ್ಮ ತಲೆನೋವು ಇರುತ್ತದೆ. ಇದರಿಂದ ನೀವು ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮ್ಮ ವಿನಂತಿಯನ್ನು ಯಾರೂ ಪುರಸ್ಕರಿಸದೇ ಇರಬಹುದು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು.

ಮೀನ ರಾಶಿ :ಇಂದು ನೀವು ಧಾರ್ಮಿಕ ಕಾರ್ಯಗಳಿಗೆ ಹಣವನ್ನು ನೀಡುತ್ತೀರಿ. ಇದರಿಂದ ನೀವು ದಿವ್ಯವಾದ ಆನಂದವೊಂದು ನಿಮ್ಮದಾಗಲಿದೆ. ಹಾಸ್ಯಪ್ರವೃತ್ತಿಯುಳ್ಳ ನೀವು ಇತರರನ್ನೂ ನಗೆಗಡಲಲ್ಲಿ ತೆಲಿಸುವಿರಿ. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನೀವು ಕ್ರಿಯಾ ಯೋಜನೆಯನ್ನು ತಯಾರಿಸಿದರೆ ಯಶಸ್ಸಿಗೆ ಸಮೀಪವಾಗುವಿರಿ. ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು ತಮ್ಮ ಪ್ರಯತ್ನಗಳಲ್ಲಿ ಯಾವುದೇ ಸಡಿಲಿತೆ ಬೇಡ. ದೂರದ ಪ್ರಯಾಣಕ್ಕೆ ಹೋಗುವ ಯೋಗ ಆಕಸ್ಮಿಕವಾಗಿ ಬರಬಹುದು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಟದಿಂದ ನೀವು ಸಿಟ್ಟಾಗುವಿರಿ.

Source: https://tv9kannada.com/horoscope/strology-2024-april-6th-aries-to-pisces-nitya-bhavishya-in-kannada-rbj-811968.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *