Rashi Bhavishya: 2024 ಏಪ್ರಿಲ್ 07 ಭಾನುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:07 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03: 40 ರಿಂದ ಬೆಳಗ್ಗೆ 05:12ರ ವರೆಗೆ.
ಮೇಷ ರಾಶಿ: ನೀವು ಈಗಲೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥರಿಲ್ಲ. ಎಲ್ಲಸಕ್ಕೂ ಕುಟುಂಬದ ಸಹಕಾರವನ್ನು ಪಡೆಯುವಿರಿ. ಸಂಗಾತಿಯ ಸಂಪತ್ತಿನಿಂದ ಖುಷಿಪಡುವಿರಿ. ಬಲವನ್ನು ಪ್ರದರ್ಶಿಸಲು ಉತ್ತಮದಿನ. ಶಿಕ್ಷವೃತ್ತಿಯವರಿಗೆ ಯಶಸ್ಸು ಸಿಗುವ ದಿನ. ಸಂಪತ್ತು ಭಂಡಾರ ಏರುತ್ತಿರುವುದು. ಕಲೆ, ಮನೋರಂಜನೆಗೆ ಹಣವನ್ನು ವ್ಯಯಿಸುವಿರಿ. ನಿಮ್ಮ ಮೇಲಿನ ಪ್ರೀತಿಯಿಂದ ಯಾರಾದರೂ ಅಗತ್ಯ ಸಹಕಾರವನ್ನು ಕೊಡುವರು. ವ್ಯಾಪಾರವನ್ನು ವಿಸ್ತರಿಸಲು ಕುಟುಂಬದ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು. ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದ ಬೇರೆ ಬೇರೆ ಮಜಲುಗಳನ್ನು ಅರಿಯುವಿರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಮುಖ್ಯ ಕೆಲಸವನ್ನು ನೀವು ಮರೆಯುವಿರಿ. ಅಪರಿಚಿತರಿಂದ ನಿಮಗೆ ಕೆಲಸ ಸಿಗಬಹುದು. ಇಂದು ನೀವು ಮಾನಸಿಕವಾಗಿ ತುಂಬಾ ಆಯಾಸವನ್ನು ಅನುಭವಿಸಬಹುದು. ಪ್ರೇಮ ಜೀವನದಲ್ಲಿ ಏರಿಳಿತಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ.
ವೃಷಭ ರಾಶಿ: ಮಾನಸಿಕವಾಗಿ ಉತ್ಸಾಹವು ಭಂಗಗೊಳ್ಳುವ ಸಾಧ್ಯತೆಯಿದೆ. ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಬಂಧುಗಳಿಂದ ಸಹಾಯ ದೊರೆಯಬಹುದು. ತಾಯಿಗೆ ಅನಾರೋಗ್ಯವು ಉಂಟಾಗಬಹುದು. ತಂತ್ರಜ್ಞರಿಗೆ ವೃತ್ತಿಯನ್ನು ಹೊರತುಪಡಿಸಿದ ಕೆಲಸಗಳು ಲಭ್ಯವಾಗಬಹುದು. ವೈರಾಗ್ಯಭಾವವನ್ನು ಉಂಟಾಗಲಿದೆ. ನೀವು ಕೆಲವು ನಿರಾಶಾದಾಯಕ ಮಾಹಿತಿಯನ್ನು ಇಂದು ಪಡೆಯುವಿರಿ. ನಿಮ್ಮ ದೀರ್ಘಾವಧಿಯ ಕಾನೂನು ಪ್ರಕರಣವು ನಿಮ್ಮ ಪರವಾಗಿ ಬಂದಿದ್ದು ಖುಷಿಕೊಡುವುದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳ ನಿರೀಕ್ಷೆಯಲ್ಲಿ ಇರುವಿರಿ. ಶತ್ರುಗಳು ಪ್ರಬಲರಾಗದಂತೆ ನೋಡಿಕೊಳ್ಳಿ. ಕೆಲವು ಸಂಕೀರ್ಣವಾದ ವಿಷಯಗಳನ್ನು ಪರಿಹರಿಸಬಹುದು.
ಮಿಥುನ ರಾಶಿ: ಇಂದು ನಿಮ್ಮ ಪ್ರಭಾವವು ಜನರಿಗೆ ತಾನಾಗಿಯೇ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ನಿಮ್ಮ ಪ್ರತಿಭೆಯನ್ನು ಗುರುತಿಸುವುದೂ ಕಷ್ಟವೇ. ಅನಾರೋಗ್ಯದಿಂದ ಬಳಲುವಿರಿ. ಇಂದು ಆನಾರೋಗ್ಯದ ಕಾರಣದಿಂದ ಸಂಪತ್ತು ನಷ್ಟವಾಗುವುದು. ಪೂರ್ವಪುಣ್ಯ ನಿಮ್ಮನ್ನು ರಕ್ಷಿಸುತ್ತದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಪುತ್ರನಿಂದ ಧನಸಹಾಯ ಸಿಗಲಿದೆ. ಧರ್ಮಕಾರ್ಯಕ್ಕೆ ಧನವ್ಯಯವಾಗಲಿದೆ. ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಭೂಮಿಯ ವ್ಯವಹಾರದಲ್ಲಿ ಬೇಸರ ಬರಬಹುದು. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ನೀವು ಆಡಂಬರದಿಂದ ದೂರವಿರಿ. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಬಂಧುಗಳ ಜೊತೆ ಚರ್ಚಿಸುವಿರಿ. ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಲು ನೀವು ನಿರಾಕರಿಸುವಿರಿ.
ಕರ್ಕಾಟಕ ರಾಶಿ: ನೀವು ನಿಮ್ಮನ್ನು ನೋಡಿಕೊಳ್ಳುವುದು ಉಚಿತ. ಮಾತಿನಿಂದ ಇಂದು ಆಗಬೇಕಾದ ಕೆಲಸವು ಆಗುವುದು. ಕುಟುಂಬದಲ್ಲಿ ಸ್ವಸ್ಥವಾತಾವರಣ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಆರೋಗ್ಯವು ಹದಗೆಡಲಿದೆ. ಹೆಂಡತಿಯ ಕಡೆಯಿಂದ ಸಂಪತ್ತು ಸಿಗಬಹುದು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡೀತು. ಪೂರ್ವಜರ ಪುಣ್ಯ ನಿಮ್ಮನ್ನು ಆಪತ್ತಿಂದ ಕಾಪಾಡಲಿದೆ. ಶಿಕ್ಷಕವೃತ್ತಿಯಲ್ಲಿ ಮಾನಸಿಕ ನೆಮ್ಮದಿ ಇಲ್ಲ. ಧನಾಗಮನವಾಗುವ ಸಾಧ್ಯತೆ ಇದೆ. ಅನಾರೋಗ್ಯದ ಕಾರಣಕ್ಕೆ ಹಣವನ್ನು ವ್ಯಯಿಸುವಿರಿ. ಇಂದು ನೀವು ಯಾರಿಂದಲೋ ಪಡೆದ ಹಣವನ್ನು ಮರಳಿಸುವುದು ಸೂಕ್ತ. ನಿಮ್ಮ ಇಂದಿನ ದಿನಚರಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಕೆಲವು ವಿಶೇಷ ಕೆಲಸಗಳನ್ನು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದು ಇಂದು ಪೂರ್ಣಗೊಳ್ಳುವುದಕ್ಕೆ ಒತ್ತಡವು ಅನಿವಾರ್ಯವಾದೀತು.
ಸಿಂಹ ರಾಶಿ: ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ. ನಿಮ್ಮ ಪ್ರಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ಬಂಧುಗಳ ಆಗಮನವು ಖುಷಿಯನ್ನು ಕೊಡಲಿದೆ. ಅವರೆದುರು ನಿಮ್ಮ ಪ್ರತಿಭೆಯ ಅನಾವರಣವಿಂದು. ಹಳೆಯ ನೋವುಗಳು ಇಂದು ಹೆಚ್ವಾಗಬಹುದು. ಸಂಗಾತಿಯ ಜೊತೆ ಮನಿಸು ಕಾಣಿಸಿಕೊಳ್ಳುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸು ಇಚ್ಛಿಸುವುದು. ಸಹೋದರನಿಂದ ಸಹಾಯ ಸಿಗಲಿದೆ. ವ್ಯಯಿಸುವ ಸಂಪತ್ತಿಗೆ ಕಡಿವಾಣ ಹಾಕಿಕೊಳ್ಳಿ. ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇಂದು ಹಠಾತ್ ಘಟನೆಯ ಬಗ್ಗೆ ಯಾವುದೇ ತಕ್ಷಣದ ನಿರ್ಧಾರ ತೆಗೆದುಕೊಳ್ಳುವುದನ್ನು ಬೇಡ. ನಿಮ್ಮ ಆರೋಗ್ಯ ಸಾಮಾನ್ಯವಾಗಿದ್ದರೂ ಸ್ವಲ್ಪ ಆಯಾಸವೂ ಇರಬಹುದು.
ಕನ್ಯಾ ರಾಶಿ: ಎಷ್ಟೇ ಎಚ್ಷರವಿದ್ದರೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಇಂದು ಹುಟ್ಟಿದ ನೈಜಪ್ರೇಮವೇ ಆಗಿರಬೇಕಿಂದಲ್ಲ. ಕಾಲಿನ ನೋವುಗಳು ಕಾಣಿಸಿಕೊಳ್ಳಬಹುದು. ಔಷಧೋಪಚಾರಗಳಿಂದ ಸರಿ ಮಾಡಿಕೊಳ್ಳಿ. ಅಪರೂಪದವರು ಬಂಧುಗಳಾಗುವರು. ಸಂತಾನವು ವಿಳಂಬವಾದೀತು. ಸಂತಾನನಾಶದ ದುಃಖವು ಬರಬಹುದು. ಕೇಳಿದ ವಿಚಾರವನ್ನೇ ಮತ್ತೆ ಮತ್ತೆ ಮಾನಸಿಕ ಕಿರಿಕಿರಿಯುಂಟಾಗಬಹುದು. ಮಾತನಾಡದೇ ಸುಮ್ಮನಿರುವುದು ಒಳ್ಳೆಯದು. ನಿಮ್ಮ ಸಂಪನ್ಮೂಲಗಳನ್ನು ಕಾಳಜಿಯಿಂದ ರಕ್ಷಿಸಿಕೊಳ್ಳಿ. ಆದಾಯದ ಸ್ವಲ್ಪ ಭಾಗವನ್ನು ಉಳಿಸಲು ಬೇಕಾದ ಚಿಂತನೆ ಇರಲಿದೆ. ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ನಿಮ್ಮ ಮಕ್ಕಳ ಜೀವನವನ್ನು ಸುಧಾರಿಸಲು ನೀವು ಪ್ರಯತ್ನಿಸುತ್ತೀರಿ. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನಿಮ್ಮ ಆಸೆಯೂ ಈಡೇರುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಜನರು ಮಾಡುವಂತೆ ಮಾಡುವಲ್ಲಿ ನೀವು ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗುತ್ತೀರಿ.
ತುಲಾ ರಾಶಿ: ನಿಮ್ಮ ಸಂಗಾತಿಯ ಮುಗ್ಧ ಪ್ರೀತಿಯು ಅರ್ಥವಾಗಿ ಪಶ್ಚಾತ್ತಪಪಡುವಿರಿ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಾಣುವುದು. ಮಕ್ಕಳೇ ಶತ್ರುಗಳಂತೆ ವರ್ತಿಸಿಯಾರು. ತಲೆನೋವು ಕಾಣಿಸಿಕೊಳ್ಳಬಹುದು. ಧರ್ಮಕಾರ್ಯಗಳಲ್ಲಿ ಅನಾಸಕ್ತಿಯೆದ್ದು ತೋರುವುದು. ನೀವಾಡುವ ಮಾತುಗಳನ್ನು ನಿಮ್ಮ ಸಹಾಯಕ್ಕೆ ಇದ್ದವರು ಕೇಳಬಹುದು. ಯಾರ ಮೇಲೂ ಅಸೂಯೆಪಡದೇ ನಿರ್ಮಲಮನಸ್ಸಿನಿಂದ ಇರುವಿರಿ. ಇಂದು ನಿಮ್ಮವರೆ ಮೇಲೆ ಅತಿಯಾದ ಅಕ್ಕರೆ ಇರುವುದು. ಶತ್ರುಗಳು ನಿಮ್ಮ ಹಿಂದೆ ಗಾಸಿಪ್ ಮಾಡಬಹುದು. ಇದು ನಿಮ್ಮ ಪ್ರಚಾರದ ಮೇಲೂ ಪರಿಣಾಮ ಬೀರಬಹುದು. ಅತಿಯಾದ ಕ್ರಮವನ್ನು ತೆಗೆದುಕೊಳ್ಳುವುದು ಬೇಡ. ನಿಮ್ಮ ವ್ಯವಹಾರದ ದೀರ್ಘಾವಧಿಯ ಯೋಜನೆಗಳಿಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ತಾಯಿವು ದೈಹಿಕ ನೋವನ್ನು ಅನುಭವಿಸಬಹುದು. ನಿಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ: ಇಂದು ಅಪ್ರಯೋಜಕ ವಿಷಯಗಳ ಕುರಿತು ಹೆಚ್ಚು ಚರ್ಚೆ ಮಾಡುವಿರಿ. ಅಕಾರಣ ಹಾಗೂ ಶೀಘ್ರ ಕೋಪಿಗಳಾಗುವಿರಿ. ಸತ್ಯವನ್ನು ಅರ್ಥಮಾಡಿಕೊಳ್ಳಲು ಮನಸ್ಸು ನಿಮ್ಮದಾಗಿರುವುದಿಲ್ಲ. ಯಾರನ್ನೂ ಅವಮಾನಿಸಲು ಹೋಗಬೇಡಿ. ಧರ್ಮಕರ್ಮಗಳಲ್ಲಿ ಭಾಗವಹಿಸಿ. ಮಾನಸಿಕ ನೆಮ್ಮದಿಯು ನಿಮ್ಮದಾದೀತು. ನೀವು ಹಿಂಜರಿಕೆಯಿಲ್ಲದೆ ಅಂದುಕೊಂಡ ಕಾರ್ಯದಲ್ಲಿ ಮುಂದುವರಿಯುವಿರಿ. ನಿಮ್ಮ ಬಗ್ಗೆ ನಡೆಯುತ್ತಿರುವ ಅಪಶ್ರುತಿ ಬಗೆಹರಿಯಲಿದೆ. ಕೆಲಸಗಳು ಪೂರ್ಣಗೊಳ್ಳಲು ನೀವು ದೀರ್ಘಕಾಲ ಕಾಯುತ್ತಿದ್ದರೆ, ಅದು ಸಂಭವಿಸಬಹುದು. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಇಂದು ನೀವು ಜನರನ್ನು ಆಕರ್ಷಿಸುವಿರಿ. ಜನರು ನಿಮ್ಮ ಆಲೋಚನಾ ವಿಧಾನವನ್ನು ಇಷ್ಟಪಡುತ್ತಾರೆ. ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಇಂದು ಕೆಲವು ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಪ್ರೀತಿಯ ಜೀವನಕ್ಕೆ ದಿನವು ಸಾಮಾನ್ಯವಾಗಿದೆ.
ಧನು ರಾಶಿ: ಇಂದು ನಿಮ್ಮ ಸುತ್ತಲು ವಿರೋಧಿಗಳು ಹೊಂಚು ಹಾಕಿ ನಿಮ್ಮ ಅವನತಿಯನ್ನುವ ಕಾಯುತ್ತಿರಬಹುದು. ನಿಮಗೆ ಬಂದ ಕಾರ್ಯಗಳನ್ನು ನೀವೇ ಮಾಡಿ. ವಿದ್ಯಾರ್ಥಿಗಳು ಶ್ರಮವಹಿಸಿ ಓದಬೇಕಾಗಿದೆ. ಮಾತುಗಳನ್ನು ಎಚ್ಚರದಿಂದ ಆಡಿ. ಮಾತು ಕಂಟಕಗಳನ್ನು ತಂದೀತು. ನಿಮ್ಮ ಜೀವನಶೈಲಿಯನ್ನು ಆಕರ್ಷಕವಾಗಿಸಲು ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಪೋಷಕರ ಜೊತೆ ಕೆಲವು ವಿಷಯದ ಬಗ್ಗೆ ನೀವು ಕಲಹದ ಸಾಧ್ಯತೆ ಇದೆ. ಮಕ್ಕಳಿಗಾಗಿ ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವಿರೋಧಿಗಳನ್ನು ತತ್ಸಾರ ಮಾಡುವ ಅವಶ್ಯಕತೆ ಇಲ್ಲ. ಮಾತು ನಿಯಂತ್ರಣ ತಪ್ಪಬಹುದು. ಕೆಲಸದ ಸ್ಥಳದಲ್ಲಿ ವಾತಾವರಣವು ನಿಮಗೆ ಅನುಕೂಲಕರವಾಗಿಲ್ಲದಿದ್ದರೆ, ನಿಮ್ಮ ಮನಃಸ್ಥಿತಿಯು ಹದಗೆಡುತ್ತದೆ. ದೈನಂದಿನ ಕೆಲಸದಲ್ಲಿ ಸಮಸ್ಯೆಗಳು ಉಳಿಯಬಹುದು. ನೀವು ಯೋಜಿಸಿದ ನಿಮ್ಮ ಕೆಲಸವೂ ಪೂರ್ಣಗೊಳ್ಳುವುದಿಲ್ಲ. ವಿವಾದಗಳು ತಪ್ಪಿಸಲು ಪ್ರಯತ್ನಿಸಿ.
ಮಕರ ರಾಶಿ: ಇಂದಿನ ದಿನವನ್ನು ಕಳೆಯಲು ಸ್ನೇಹಿತರು ಸಹಾಯ ಮಾಡುವರು. ಹೊಸ ಆರ್ಥಿಕ ವ್ಯವಹಾರಗಳನ್ನು ಇಂದು ನೀವು ಮಾಡಿರಿ. ಸಂಗಾತಿಗೆ ಇಷ್ಟವಾಗುವ ಕೆಲಸವನ್ನು ಮಾಡಿ, ಆಕೆಯ ಸಿಹಿಯಪ್ಪುಗೆಯ ಅನುಭವವನ್ನು ಪಡಯುವಿರಿ. ಅನಾರೋಗ್ಯವು ಹೆಚ್ಚಾಗಬಹುದು, ಕಾಳಜಿಯನ್ನು ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಪ್ರಯತ್ನಿಸಿ. ನೀವು ಕೆಲವು ಸಣ್ಣ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಸರಿಯಾದ ಸಮಯಕ್ಕಾಗಿ ಕಾಯಿರಿ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ನೀವು ಎಲ್ಲರ ಜೊತೆ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು. ಒಳ್ಳೆಯ ಮತ್ತು ಮಧುರವಾದ ಮಾತುಗಳನ್ನು ಹೇಳುವ ಮೂಲಕ ನಿಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೀರಿ.
ಕುಂಭ ರಾಶಿ: ನಿಮ್ಮ ಉತ್ತಮ ಸ್ನೇಹಿತರ ಬಳಗವನ್ನು ಹೊಂದಿರುವ ನೀವು ದಿನದ ಹೆಚ್ಚಿನ ಸಮಯವನ್ನು ಅವರ ಜೊತೆ ಕಳೆಯುವಿರಿ. ನಿಮಗೆ ವೃತ್ತಿಸಂಬಂಧ ಸಮಸ್ಯೆಗಳು ಯಾರದೋ ಮೂಲಕ ಎದುರಾಗಬಹುದು. ನಿಮ್ಮ ಚಾಣಾಕ್ಷ ಬುದ್ಧಿಯಿಂದ ಅದನ್ನು ಪರಿಹರಿಸಿಕೊಳ್ಳುವಿರಿ. ಬಾಕಿ ಉಳಿಸಕೊಂಡ ಕೆಲಸವನ್ನು ಶೀಘ್ರವಾಗಿ ಮುಗಿಸುವಿರಿ. ಕುಟುಂಬದ ಎಲ್ಲರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೀರಿ. ಪ್ರಮುಖ ಕೆಲಸಗಳಲ್ಲಿ ವಿಳಂಬ ಮಾಡಬೇಡಿ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ಮಕ್ಕಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಕಠಿಣ ಪರಿಶ್ರಮದಿಂದ ನಿಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತೀರಿ. ಅದರಿಂದ ನೀವು ಪ್ರಯೋಜನಗಳನ್ನು ಪಡೆಯಬಹುದು.
ಮೀನ ರಾಶಿ: ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವವಾಗಬಹುದು. ಸಹೋದರರ ನಡುವೆ ಮನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು. ಆಪ್ತರ ಭೇಟಿ ಹಾಗೂ ಮಾರ್ಗದರ್ಶನದ ಸುತ್ತಾಟದಲ್ಲಿ ಇಂದು ಮುಕ್ತಾಯಗೊಳ್ಳಲಿದೆ. ಪ್ರಶಂಸೆಗಳು ನಿಮ್ಮನ್ನು ಅರಸಿ ಬರಲಿವೆ. ಆರೋಗ್ಯದ ಬಗ್ಗೆ ನಿಗವಿರಲಿ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಹೆಚ್ಚು ಗಮನಿಸುತ್ತ ಇರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಕೆಲಸಕ್ಕಿಂತ ಇತರರ ಕೆಲಸಗಳ ಮೇಲೆ ಹೆಚ್ಚು ಗಮನವಿರುವುದು. ನಿಮ್ಮ ಮೇಲೆ ದುಷ್ಪರಿಣಾಮ ಬೀರಬಹುದು. ಉದ್ಯಮಿಗಳಿಗೆ ಸಮಯ ಉತ್ತಮವಾಗಿಲ್ಲ. ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಹಳೆಯ ಸಾಲವು ನಿಮಗೆ ಒತ್ತಡವನ್ನು ಉಂಟುಮಾಡಬಹುದು. ಕಚೇರಿಯಲ್ಲಿ ಸಮಸ್ಯೆಗಳಿರಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1