Horoscope 7 Mar: ದಿನಭವಿಷ್ಯ; ಇಂದು ನೀವು ಶುಭ ಸಮಾರಂಭಗಳಲ್ಲಿ ಅನಿರೀಕ್ಷಿತವಾಗಿ ಭಾಗವಹಿಸುವಿರಿ.

ಮೇಷ ರಾಶಿ: ನಿಮ್ಮ ಮುಕ್ತ ಸ್ವಭಾವವು ಇತರರಿಗೆ ಇಷ್ಟವಾಗದೇ ಇರಬಹುದು. ಅತಿಯಾದ ನಿರೀಕ್ಷೆಯಿಂದ ಸಂಕಟವಾಗಬಹುದು. ಕಾರ್ಯದ ಸ್ಥಳದಲ್ಲಿ ಅಡಚಣೆಯು ಉಂಟಾಗುತ್ತದೆ. ನಿಮ್ಮ ಬಗ್ಗೆ ಬರುವ ಮಾತನ್ನು ಸುಮ್ಮನಿದ್ದು ತಳ್ಳಿಹಾಕುವಿರಿ. ಮಾಡುವ ಕೆಲಸದಲ್ಲಿ ವಿಳಂಬವಾಗಲಿದೆ. ಆತಂಕ ಮತ್ತು ಉದ್ವೇಗ ಇರುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಕೆಲಸದ ಹೊರೆ ಇರುತ್ತದೆ. ಧಾರ್ಮಿಕ ಕರ್ಮವು ನಿಮ್ಮ ಇಷ್ಟಾರ್ಥದ ಸಿದ್ಧಿಗಾಗಿ ಮಾಡುವಿರಿ. ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇದ್ದರೂ ಸಮಯವು ಮಾತ್ರ ಸಿಗದೇಹೋದೀತು. ಹಿತಶತ್ರುಗಳಿಂದ ಸಣ್ಣ ಆಪತ್ತು ಬರಬಹುದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಆಲಸ್ಯದ ಪಟ್ಟದಿಂದ ಕೆಳಗಿಳಿಯುವುದು ಅಸಾಧ್ಯ. ಅನಿರೀಕ್ಷಿತ ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ.

ವೃಷಭ ರಾಶಿ: ಇಂದು ನೀವು ಶುಭ ಸಮಾರಂಭಗಳಲ್ಲಿ ಅನಿರೀಕ್ಷಿತವಾಗಿ ಭಾಗವಹಿಸುವಿರಿ. ಮಕ್ಕಳ ಬೆಂಬಲವನ್ನು ನೀವು ಅಪೇಕ್ಷಿಸದಿದ್ದರೂ ಸಿಗುವುದು. ಒಂದರ‌ಮೇಲೆ ಒಂದರಂತೆ ಆನಾರೋಗ್ಯವು ನಿಮ್ಮನ್ನು ಪೀಡಿಸಬಹುದು. ಸಂಗಾತಿಯ ಮಾತಿಗೆ ವಿರೋಧವನ್ನು ವ್ಯಕ್ತಪಡಿಸುವಿರಿ. ಇನ್ನೊಬ್ಬರ ಮಾತುಗಳನ್ನು ನೀವು ಸಹನೆಯಿಂದ ಆಲಿಸುವಿರಿ. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ. ನಿಮ್ಮ ಸಂಯಮ ಕೆಡಬಹುದು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಯಬಹುದು. ಸರಳ ಮಾರ್ಗದಿಂದ ಕೆಲಸವನ್ನು ಪೂರ್ಣ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಆತಂಕ ಬೇಡ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ಪಶ್ಚಾತ್ತಾಪವು ನಿಮ್ಮ ನೋವನ್ನು ಪರಿಹರಿಸೀತು.

ಮಿಥುನ ರಾಶಿ: ನಿಮ್ಮ ಚರಾಸ್ತಿಯ ಮೌಲ್ಯವು ಕಡಿಮೆ ಆಗುವುದು. ದೊಡ್ಡ ಲಾಭಕ್ಕೆ ನಿಮ್ಮ ಶ್ರಮವು ಹೆಚ್ಚಾಗುವುದು. ಅದೃಷ್ಟದಿಂದ ಸಫಲತೆಯನ್ನು ಕಾಣುವಿರಿ. ಕೆಲವು ಹಂತವನ್ನು ತಲುಪಲು ನಿಮಗೆ ಆಗದೇ ಇರಬಹುದು. ಸ್ನೇಹಿತರಿಂದ ಬೆಂಬಲ ಸಿಗಲಿದೆ. ಮನೆಯಲ್ಲಿ ಮತ್ತು ಹೊರಗೆ ಸಂತೋಷ ಇರುತ್ತದೆ. ದೂರ ಪ್ರಯಾಣ ಹೊರಟ ನಿಮಗೆ ಅಡೆತಡೆಗಳು ಬರಬಹುದು. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ಗಮನ ಇರಲಿ. ನೀವು ವೃತ್ತಿಯನ್ನು ಮಾಡುತ್ತಲೇ ಉನ್ನತ ಪದವಿಯನ್ನು ಪಡೆಯುವಿರಿ. ಯಶಸ್ಸು ನಿಮ್ಮ ಹಿಂದೆ ತಾನಾಗಿಯೇ ಬರುವುದು. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ.

ಕಟಕ ರಾಶಿ: ಇಂದು ನಿಮ್ಮ ಆತುರವು ಕೆಲಸವನ್ನು ಕೆಡಿಸುವುದು. ಯಾರದೋ ಮಾತನ್ನು ಕೇಳಿ ಸಮಸ್ಯೆಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಯಾರ ವಿರೋಧವನ್ನೂ ನೀವು ಕೇಳಲಾರಿರಿ. ಪ್ರೇಮದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾದೀತು. ನೆಮ್ಮದಿಯ ಕೊರತೆಯು ಹೆಚ್ಚು ಕಾಡಬಹುದು. ಯಾವುದಾರೂ ಆಕಸ್ಮಿಕ ಸುದ್ದಿಯಿಂದ ವಿಚಲಿತರಾಗುವುದು ಬೇಡ. ಹೂಡಿಕೆಯ ಬಗ್ಗೆ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರುವುದು. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ನಿಮ್ಮ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿರಲಿದೆ. ಯಾವ ನೋವನ್ನೂ ನಿರ್ಲಕ್ಷಿಸುವುದು ಬೇಡ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸು ತಳಮಳಗೊಳ್ಳುವುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಆಗಬೇಕಾದ ಕಾರ್ಯಗಳ ಪರಿಶೀಲನೆ ಮಾಡುವಿರಿ.

ಸಿಂಹ ರಾಶಿ: ಇಂದು ಯಾವ ಕಡೆಯಿಂದಲಾದರೂ ಅನಗತ್ಯ ವಿವಾದಕ್ಕೆ ಆಸ್ಪದ ಕೊಡಬೇಡಿ. ಸಣ್ಣ ವಿಚಾರಕ್ಕೆ ಮಾನಸಿಕವಾಗಿ ನೀವು ದುರ್ಬಲರಾಗುವಿರಿ. ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಸಾಹಸದ ಕಾರ್ಯಕ್ಕೆ ತೊಡಗುವುದು ಬೇಡ. ಆತಂಕವನ್ನು ಬುದ್ಧಿಪೂರ್ವಕವಾಗಿ ತೆಗೆದುಹಾಕಿಕೊಳ್ಳಬೇಕಾಗುವುದು. ಆದಾಯದಲ್ಲಿ ಇಳಿಕೆಯನ್ನು ನೀವು ಸಹಿಸಲಾರಿರಿ. ಜನರಿಂದ ಮೆಚ್ಚುಗೆಯನ್ನು ನಿರೀಕ್ಷಿಸದಿದ್ದರೂ ಅದು ಬರುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಇಂದು ಕ್ರಮವನ್ನು ಹಾಕುವಿರಿ. ನಿಮ್ಮನ್ನು ಮೆಚ್ಚಿಸಿ ಕೆಲಸಗಳನ್ನು ಇಂದು ಮಾಡಿಸಿಕೊಳ್ಳುವರು. ಗುರಿಯನ್ನು ಯಾರಾದರೂ ತಪಿಸಬಹುದು. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು. ನಿಮ್ಮ ಹಿಂದಿನ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ.

ಕನ್ಯಾ ರಾಶಿ: ಇಂದು ನೀವು ಪುಣ್ಯ ಸ್ಥಳಕ್ಕೆ ಪ್ರವಾಸವನ್ನು ಮಾಡುವಿರಿ. ಸತ್ಸಂಗದಿಂದ ನಿಮ್ಮ ಚಂಚಲವಾದ ಮನಸ್ಸಿಗೆ ನೆಲೆ ಸಿಗುವುದು. ಬಹಳ ದಿನಗಳ‌ ಅನಂತರ ನಿಮ್ಮ ಕೆಲಸಕ್ಕೆ ಮನೆಯವರೆಲ್ಲರ ಬೆಂಬಲವಿರುವುದು. ಕೆಲವು ವಿಚಾರಕ್ಕೆ ಅನುಭವಿಗಳ ಮಾರ್ಗದರ್ಶನದ ಅಗತ್ಯವಿರುವುದು. ಇರುವಷ್ಟು ಹಣದಲ್ಲಿಯೇ ನೀವು ಉಳ್ಳವರಂತೆ ತೋರಿಸುವಿರಿ. ಹೂಡಿಕೆಯಿಂದ ಅಧಿಕ ಲಾಭವನ್ನು ನೀವು ನಿರೀಕ್ಷಿಸಬಹುದು. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವುದು ಸರಿಯಾಗದು. ನೂತನ ಗೃಹ ನಿರ್ಮಾಣದ ಬಗ್ಗೆ ನುರಿತವರ ಜೊತೆ ಚರ್ಚೆಯನ್ನು ನಡೆಸುವು ಯೋಚನೆ ಇರುವುದು. ವಾಹನ ಓಡಾಡವು ಸುಖಕರವಲ್ಲ. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೇ ಹೋದೀತು. ಇಂದು ವಾಸದ ಮನೆಯನ್ನು ಬದಲಿಸುವಿರಿ.

ತುಲಾ ರಾಶಿ: ಇಂದು ನಿಮ್ಮ ಕೆಲಸದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಎಂದೋ ಹಾಕಿಕೊಂಡ ಯೋಜನೆಯು ಇಂದು ಕಾರ್ಯರೂಪಕ್ಕೆ ಬರಲಿದೆ. ವ್ಯಾಪಾರದಲ್ಲಿ ನಿಮ್ಮದೇ ಆದ ಕ್ರಮವನ್ನು ಅನುಸರಿಸುವಿರಿ. ಸಂಗಾತಿಯನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೋಡುವಿರಿ. ಆರೋಗ್ಯವು ಉತ್ತಮವಾಗಿ ಇರುವುದು. ಒಳ್ಳೆಯ ಸಮಯ ನಿಮ್ಮದಾಗಲಿದೆ. ವ್ಯಾಪಾರದಲ್ಲಿ ತೊಡಕು ಬರಬಹುದು. ಆದರೆ ಇದನ್ನು ನಿವಾರಿಸಿಕೊಳ್ಳುವ ತಂತ್ರವು ನಿಮಗೆ ಅನುಭವದಿಂದ ಸಿದ್ಧವಾಗಿರುವುದು. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ತಪ್ಪಿದ ಯೋಚನೆಯಿಂದ ನೀವು ಸರಿಯಾಗಬೆರಕಾಗುವುದು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು.

ವೃಶ್ಚಿಕ ರಾಶಿ: ಇಂದು ಸಾಲ ಕೊಟ್ಟವರನ್ನು ಅನಿರೀಕ್ಷಿತವಾಗಿ ಭೇಟಿಯಾಗುವಿರಿ. ಹಣದ ಬದಲಿಗೆ ಬೇರೇನಾದರೂ ಕೇಳುವಿರಿ. ಮಿತ್ರರ ಸಹಕಾರದಿಂದ ಓಡಾಟದ ಕಾರ್ಯಗಳು ಪೂರ್ಣಗೊಳ್ಳುವುದು. ಹೊಸತನ್ನು ಆರಂಭಿಸಲು ಯೋಜನೆ ರೂಪಿಸುವಿರಿ. ನಿಮ್ಮ ಕೆಲಸದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಸಮಯವು ಅನುಕೂಲಕರವಾಗಿದೆ. ಸೋಮಾರಿತನ ಬಿಟ್ಟು ಕೆಲಸಕ್ಕೆ ಪ್ರಯತ್ನಿಸಿ. ನಿಮ್ಮವರ ಆರೋಗ್ಯದ ವ್ಯತ್ಯಾಸದಿಂದ ಹಣವನ್ನು ಖರ್ಚುಮಾಡಬೇಕಾಗುವುದು. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು.

ಧನು ರಾಶಿ: ಇಂದು ಹಲವಾರು ಕಾರಣದಿಂದ ಕುಟುಂಬದ ಚಿಂತೆಗೆ ಒಳಗಾಗುವಿರಿ. ವ್ಯವಹಾರವನ್ನು ಆತುರಗೊಳ್ಳದೇ ಸಮಾಧಾನ ಚಿತ್ತದಿಂದ ಮಾಡಿ. ನಿಮ್ಮ ಅಗತ್ಯ ವಸ್ತುಗಳು ಕಾಣೆಯಾಗಬಹುದು. ವಿವಾದವಾಗುವ ಸಂಗತಿಯನ್ನು ಪ್ರೋತ್ಸಾಹಿಸಬೇಡಿ. ಯಾವುದಾದರೂ ವ್ಯಕ್ತಿಯ ಪ್ರಭಾವಕ್ಕೆ ಒಳಗಾಗುವಿರಿ. ಯಾರ ಮೇಲಾದರೂ ಪ್ರೀತಿ ಮೂಡಬಹುದು. ಬುದ್ಧಿವಂತಿಕೆಯಿಂದ ಲಾಭ ಹೆಚ್ಚಾಗುತ್ತದೆ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ.

ಮಕರ ರಾಶಿ: ಹೊಸ ವಸ್ತುಗಳ ಖರೀದಿಯಿಂದ ನಿಮಗೆ ಸಂತೋಷವಾಗಲಿದೆ. ಸಹೋದರರಿಂದ ಆರ್ಥಿಕ ಸಹಾಯವು ದೊರೆಯುವುದು. ಕಾನೂನಿನ ವಿಚಾರದಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳಿ. ಮನೆಯಲ್ಲಿ ಗೆಳೆಯರಿಂದ ಸಂತೋಷದ ವಾತಾವರಣ ಇರುತ್ತದೆ. ಇಂದು ನೀವು ಹೊಸ ಉದ್ಯಮ ಆರಂಭಿಸಲು ಯೋಜನೆ ರೂಪಿಸಬಹುದು. ನೀರಿನ ವ್ಯಾಪಾರದಲ್ಲಿ ಲಾಭವಿರುವುದು. ನಿಮ್ಮ ಯೋಜನೆಯು ಪೂರ್ಣ ವ್ಯತ್ಯಾಸವಾದ ಕಾರಣ ಮನೆಯಲ್ಲಿ ಕಲಹವಾಡುವಿರಿ. ಸೂಕ್ತ ಪರಿಹಾರದ ಕಡೆ ಗಮನವಿರಲಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ವಿನೋದಕ್ಕೆಂದು ಆಡಿದ ಮಾತು ಗಂಭೀರ ಸ್ವರೂಪವನ್ನು ಪಡೆದೀತು.

ಕುಂಭ ರಾಶಿ: ಇಂದು ದೂರದ ಬಂಧುಗಳಿಂದ ಸಂತೋಷದ ಸುದ್ದಿಯನ್ನು ಕೇಳುವಿರಿ. ಮನೆಗೆ ಅತಿಥಿಗಳು ಆಗಮಿಸುವುದರಿಂದ ಖರ್ಚು ಹೆಚ್ಚಾದಂತೆ ತೋರುತ್ತದೆ. ಆತ್ಮವಿಶ್ವಾಸ ಕೃತಕವಾಗಿ ತಂದುಕೊಳ್ಳುವಿರಿ. ದೊಡ್ಡ ಅನಾಹುತದಿಂದ ಸಣ್ಣ ಅಂತರದಲ್ಲಿ ತಪ್ಪಿಸಿಕೊಳ್ಳುವಿರಿ. ನಿಮ್ಮ ಬುದ್ಧಿವಂತಿಕೆಯನ್ನು ಸ್ವಲ್ಪ ಬಳಸಿ. ಸ್ನೇಹಿತರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು.

ಮೀನ ರಾಶಿ: ನಿಮ್ಮ ಕಠಿಣ ಪರಿಶ್ರಮದಿಂದ ಫಲಿತಾಂಶವನ್ನು ಪಡೆಯುವಿರಿ. ಸಮಾಜಮುಖೀ ಕಾರ್ಯಗಳನ್ನು ಮಾಡುವ ಆಸಕ್ತಿ ಇರುತ್ತದೆ. ವ್ಯಾಪಾರವು ಅಪೇಕ್ಷಿತ ಲಾಭವನ್ನು ತರುತ್ತದೆ. ಕೆಲವು ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ದಿಕ್ಕು ಬದಲಾಗಬಹುದು. ಶಾರೀರಿಕ‌ ವೇದನೆಯನ್ನು ನಗಣ್ಯ ಮಾಡುವಿರಿ. ಆತಂಕ ಮತ್ತು ಉದ್ವೇಗ ಇರುತ್ತದೆ. ಪ್ರವಾಸದಿಂದ ಉತ್ಸಾಹವು ಹೆಚ್ಚಾಗುವುದು. ಕೆಟ್ಟ ಜನರಿಂದ ದೂರವಿರಿ. ಹೊಸತನಕ್ಕೆ ನೀವು ತೆರೆದುಕೊಳ್ಳುವಿರಾದರೂ ಗೊಂದಲಗಳು ನಿವಾರಣೆಯಾಗದೇ ಇರಬಹುದು. ದಾಂಪತ್ಯದ ವಾಗ್ವಾದವು ಅತಿರೇಕಕ್ಕೆ ಹೋಗಬಹುದು. ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಹೆಚ್ಚು ಎಚ್ಚರಿಕೆ ಬೇಕು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *