ಇಂದು ಶಿವರಾತ್ರಿ. ಎಲ್ಲರಿಗೂ ಶಿವರಾತ್ರಿಯ ಶಿವಕಾಮನೆಗಳು. ಮಾಘ ಕೃಷ್ಣ ಚತುರ್ದಶೀ ಶಿವನಿಗೆ ಪ್ರಿಯವಾದ ದಿನ. ಲಯಕರ್ತನಾದ ಶಿವನು ಎಲ್ಲರ ಸಂಕಷ್ಟಗಳನ್ನು ನಾಶಮಾಡಲಿ. ಕೇಳಿದ್ದನ್ನು ನೀಡುವ, ಶೀಘ್ರವಾಗಿ ಭಕ್ತರ ಅಭೀಷ್ಟಗಳನ್ನು ಪೂರೈಸುವ ಶಿವನಿಗೆ ಅಭಿಷೇಕ ಮಾಡಿ, ಆತನನ್ನು ಸಂಪ್ರೀತಿ ಗೊಳಿಸಿ. ಎಲ್ಲರಿಗೂ ಶಿವಾಶಯಗಳು.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಪರಿಘ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:14 ರಿಂದ ಮಧ್ಯಾಹ್ನ 12:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:11ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:15 ರಿಂದ 09:45ರ ವರೆಗೆ.
ಮೇಷ ರಾಶಿ: ನಿಮಗೆ ಸೇರಿದ್ದನ್ನು ಮಾತ್ರ ಬಳಸಿಕೊಳ್ಳಿ. ಯಾರದೋ ಮಾತು ನಿಮಗೆ ಅದ್ಭುತವೆನಿಸಬಹುದು. ಅದನ್ನು ಅನಿಸರಿಸಲು ಹೋಗಿ ಕೆಡುವಿರಿ. ಯಾರಿಂದಲಾದರೂ ಮನಸ್ತಾಪವು ಕಾಣಿಸಿಕೊಳ್ಳಬಹುದು. ದೇಹಾಯಾಸದ ಕಡೆಗೆ ಅಧಿಕ ಗಮನ ಅಗತ್ಯ. ಹೋರಾಟದ ಮನೋಭಾವವು ಇಂದು ಎದ್ದು ತೋರುವುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು ಅವಶ್ಯಕ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ಕೆಲವರ ಮೇಲಿನ ದೀರ್ಘದ್ವೇಷವನ್ನು ಕಡಿಮೆಮಾಡಿಕೊಳ್ಳುವಿರಿ.
ವೃಷಭ ರಾಶಿ: ಇಂದು ನೀವು ಪ್ರಯತ್ನಿಸುವ ಕಾರ್ಯಗಳಲ್ಲಿ ಅನಾನುಕೂಲತೆ ಕಾಣಿಸುವುದು. ದೀರ್ಘವಾದ ವಾಹನ ಚಾಲನೆ ಮಾಡುವುದು ಬೇಡ. ಅನಿರೀಕ್ಷಿತವಾಗಿ ಉದ್ಯೋಗಾವಕಾಶ ಸಿಕ್ಕರೂ ಅದನ್ನು ಬಳಸಿಕೊಳ್ಳುವಲ್ಲಿ ಸೋಲುವಿರಿ. ಇಂದು ಅನಿವಾರ್ಯತೆಯನ್ನು ಅವಶ್ಯಕತೆಯನ್ನಾಗಿ ಮಾಡಿಕೊಳ್ಳುವಿರಿ. ನಿಮ್ಮವರ ಮೇಲೆ ಕಾಳಜಿಯು ಅಧಿಕಾದೀತು. ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಮಾದರಿಯಾದೀತು. ಅನಪೇಕ್ಷಿತ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಇರದು.
ಮಿಥುನ ರಾಶಿ: ಇಂದು ನೀವು ಸರಳ ಸಂಗತಿಗಳನ್ನು ಸಂಕೀರ್ಣವಾಗಿಸಿಕೊಳ್ಳುವಿರಿ. ಸ್ಥಿರಾಸ್ತಿಯ ಬಗ್ಗೆ ನಿಮಗೆ ಸಂಪೂರ್ಣ ಹಕ್ಕು ಸಿಗಬಹುದು. ಪ್ರೀತಿಯಿಂದ ಗೆಲ್ಲುವ ಬಗ್ಗೆ ಆಲೋಚಿಸಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಏಕಾಂಗಿಯಾಗಬಹುದು. ಕ್ರೀಡೆಯ ವಿಚಾರದಲ್ಲಿ ಸಹೋದರರ ನಡುವೆ ಮನಸ್ತಾಪವು ಉಂಟಾಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನಿಮಗೆ ಯಾರಾದರೂ ಭಯವನ್ನು ಉಂಟುಮಾಡಬಹುದು. ನಿಮ್ಮ ನಿಷ್ಕಾಳಜಿಯು ಅನೇಕ ವೈಷಮ್ಯಕ್ಕೆ ಕಾರಣವಾಗುವುದು.
ಕಟಕ ರಾಶಿ: ನೀವು ಎಲ್ಲವನ್ನೂ ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಮಾತನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬರಬಬಹುದು. ಸಂಗಾತಿಗೆ ನಿಮ್ಮ ಆರ್ಥಿಕತೆಯನ್ನು ವಿವರಿಸುವಿರಿ. ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆ ಆದಂತೆ ತೋರುವುದು. ನಿಮ್ಮ ತಾಯಿ ಆರೋಗ್ಯಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ದುಂದುವೆಚ್ಚದ ಕಡೆ ಗಮನವಿರಲಿ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ನಾನಾ ಚಿಂತೆಗಳು ಹುಟ್ಟಬಹುದು. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಒತ್ತಾಯದಿಂದ ಯಾವುದನ್ನೂ ಮಾಡಬೇಡಿ, ಮಾಡಿಸಿಕೊಳ್ಳುವುದೂ ಬೇಡ.
ಸಿಂಹ ರಾಶಿ: ನಿಮ್ಮ ಸ್ವಂತಿಕೆಯನ್ನು ಗುರುತಿಸಿಕೊಳ್ಳಿ. ಅದನ್ನು ಬಿಟ್ಟು ವಿಚಲಿತರಾಗವುದು ಬೇಡ. ಪಾಲುದಾರಿಕೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವಿರಿ. ನಿಮ್ಮ ಮೃದುಸ್ವಭಾವವು ಕೆಲವು ಕಡೆಗಳಲ್ಲಿ ಪ್ರಯೋಜನಕ್ಕೆ ಬಾರದು. ಪ್ರತ್ಯಕ್ಷವಾದ ವಿಚಾರವಾದರೂ ಪೂರ್ಣವಾಗಿ ನಂಬಬೇಕಿಲ್ಲ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು. ಯಾವುದನ್ನಾದರೂ ನಿಮಗೆ ಬೇಕಾದಷ್ಟು ಮಾತ್ರವೇ ಬಳಸಿಕೊಳ್ಳಿ. ಸಿಗದಿದ್ದುದರ ಬಗ್ಗೆ ಬೇಸರ ಬೇಡ. ಹೊಸ ಯೋಜನೆಯಲ್ಲಿ ನೀವು ಇಂದು ಹೆಚ್ಚು ಮಗ್ನರಾಗಿರುವಿರಿ.
ಕನ್ಯಾ ರಾಶಿ: ಇಂದು ನಿಮ್ಮ ಮಾತಿಗೆ ಪ್ರಶಂಸೆ ಸಿಗಬಹುದು. ಭವಿಷ್ಯದ ಬಗ್ಗೆ ಸರಿಯಾದ ನಿರ್ಧಾರವನ್ನು ಹಲವರ ಅಭಿಪ್ರಾಯದ ಮೂಲಕ ಪಡೆದುಕೊಳ್ಳುವಿರಿ. ನಿಮ್ಮ ಅಯುಸ್ಸು ವ್ಯರ್ಥವಾದಂತೆ ಅನ್ನಿಸೀತು. ಬಹಳ ದಿನದ ಬೇಸರವು ಕಡಿಮೆಯಾಗುವುದು. ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ಆರೋಗ್ಯದಲ್ಲಿ ಸುಧಾರಣೆ ಇರಲಿದ್ದು ಕಾರ್ಯಕ್ಕೆ ತಯಾರಾಗುವಿರಿ. ಬೇಕಾದಷ್ಟು ಅನುಕೂಲತೆಗಳಿದ್ದರೂ ಬೇಕೆಂಬ ಆಸೆಯು ನಿಮ್ಮನ್ನು ಬಿಡದು. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ಕುತರ್ಕವನ್ನು ಮಾಡಿ ಎಲ್ಲರಿಂದ ದೂರಾಗುವಿರಿ.
ತುಲಾ ರಾಶಿ: ಇಂದು ವೃತ್ತಿಯಲ್ಲಿ ಆಕಸ್ಮಿಕ ತಿರುವುಗಳು ಕಾಣಿಸಿಕೊಳ್ಳುವುದು. ವಿದ್ಯಾಭ್ಯಾಸದಲ್ಲಿ ಗಣನೀಯ ಏರಿಕೆಯಿಂದ ಖುಷಿಯಾಗಲಿದೆ. ಪ್ರಯಾಣದಿಂದ ನಿಮ್ಮ ವಸ್ತುಗಳ ನಷ್ಟವಾಗಲಿದೆ. ಯಾರನ್ನೋ ನಂಬಿ ಜವಾಬ್ದಾರಿಯನ್ನು ಕೊಡುವುದು ಬೇಡ. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಮಗೆ ಇಷ್ಟವಾಗಬಹುದು. ಮಾನಸಿಕ ಆಘಾತವು ಇಂದು ಅನಿರೀಕ್ಷಿತ ಆಗಬಹುದು. ಬಾಂಧವರ ನಡುವೆ ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ನಿಮ್ಮ ವರ್ತನೆಗಳು ಯಾರ ಮೇಲಾದರೂ ಪ್ರಭಾವ ಬೀರಬಹುದು. ಮೇಲಧಿಕಾರಿಗಳ ಜೊತೆ ಸಭ್ಯತೆಯಿಂದ ವರ್ತಿಸಿ. ವಿವಾಹದ ವಿಳಂಬದಿಂದ ನಿಮಗೆ ಬೇಸರವಾದೀತು. ನಿಮ್ಮ ತಪ್ಪಿನಿಂದ ಹಿರಿಯರ ಕೆಂಗಣ್ಣಿಗೆ ಗುರಿಯಾಗುವಿರಿ. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು.
ವೃಶ್ಚಿಕ ರಾಶಿ: ನಿಮ್ಮ ಉದ್ಯೋಗದ ಸ್ಥಳವನ್ನು ಬದಲಾಬಣೆ ಮಾಡುವ ಅನಿವಾರ್ಯತೆ ಬರಬಹುದು. ಒಂದು ಕಡೆ ಕುಳಿತುಕೊಳ್ಳಲು ಕಷ್ಟವಾಗುವುದು. ನಿಮ್ಮ ನಿರ್ಧಾರಕ್ಕೆ ಬೆಲೆ ಬರವ ತನಕ ಸುಮ್ಮನಿರಲಾರಿರಿ. ವಾಹನ ಖರೀದಿಸುವ ಬಗ್ಗೆ ಹೆಚ್ಚು ಆಸಕ್ತಿ ಇರುವುದು. ನೀವು ಒತ್ತಡವನ್ನು ಕಡಿಮೆ ಮಾಡಿಕೊಂಡು ಕಾರ್ಯವನ್ನು ಮಾಡಬೇಕೆಂದು ಅಂದುಕೊಳ್ಳುವಾಗಲೇ ಹಲವಾರು ಕಾರ್ಯಗಳು ಬಂದು ಸೇರಬಹುದು. ಅನಿರೀಕ್ಷಿತ ಗೆಲುವು ಸಿಗುವುದು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿಯು ಸಿಗಬಹುದು. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ.
ಧನು ರಾಶಿ: ನಿಮ್ಮ ಮುಕ್ತವಾದ ಮಾತುಕತೆ ನಿಮಗೆ ಇಷ್ಟವಾಗುವುದು. ಭೂಮಿಯ ವ್ಯವಹಾರದಲ್ಲಿ ನಿರೀಕ್ಷಿತ ಲಾಭವು ಆಗದು. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾರಿಂದಲಾದರೂ ಸಹಕಾರ ಸಿಗುವುದು. ಇಂದು ನಿಮ್ಮ ಬಲವಾದ ಇಚ್ಛಾಶಕ್ತಿಯಿಂದ ತೊಡಕುಗಳನ್ನು ನಿವಾರಿಸಿಕೊಂಡು ಕಾರ್ಯವನ್ನು ಸಾಧಿಸುವಿರಿ. ಹಿತಶತ್ರುಗಳ ತೊಂದರೆಯ ನಡುವೆಯೂ ನಿಮ್ಮ ಅಭಿವೃದ್ಧಿಯು ಆಗಲಿದೆ. ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು. ಇದರಿಂದ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ಕೆಲವರ ಬಗೆಗಿನ ಮನೋಭಾವವನ್ನು ತಿದ್ದಿಕೊಳ್ಳಬೇಕಾಗುವುದು. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ.
ಮಕರ ರಾಶಿ: ಇಂದು ನಿಮಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪೂರ್ಣತೆಯೇ ಹೆಚ್ಚು ಕಾಣಿಸಿಕೊಳ್ಳುವುದು. ಮಕ್ಕಳ ವಿದ್ಯಾಭ್ಯಾಸವು ಹಿಂದುಳಿದಂತೆ ಕಾಣಿಸುವುದು. ಸರ್ಕಾರಿ ಅಧಿಕಾರಿಗಳ ಒಡನಾಟವನ್ನು ಇಟ್ಟುಕೊಳ್ಳುವಿರಿ. ಕಷ್ಟಪಟ್ಟು ಪ್ರಯತ್ನಿಸಿ, ನಿಮಗೆ ಅದೃಷ್ಟದ ಬೆಂಬಲವೂ ಸಿಗಲಿದೆ. ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಸ್ನೇಹಿತರಿಗೆ ಸ್ಪಂದಿಸಬೇಕಾಗುವುದು. ಸತ್ಯಸಂಗತಿಯನ್ನು ನಂಬುವ ಸ್ಥಿತಿಯಲ್ಲಿ ನೀವಿರಲಾರಿರಿ. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ.
ಕುಂಭ ರಾಶಿ: ಇಂದು ಯಾರಾದರೂ ನಿಮ್ಮ ಆರ್ಥಿಕತೆಯ ಬಗ್ಗೆ ಮಾತನಾಡಿಕೊಳ್ಳಬಹುದು. ಬಾಂಧವ್ಯವನ್ನು ಇಂದು ಹೆಚ್ಚು ಇಷ್ಟಪಡುವಿರಿ. ನಿಮ್ಮ ಮಾತಿನಿಂದ ಇಂದು ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಅನವಶ್ಯಕವಾಗಿ ಹಣ ಖರ್ಚು ಮಾಡುವವರಿಗೆ ಇಂದು ಹಣದ ಬೆಲೆ ಅರ್ಥವಾಗಬಹುದು. ನೀವು ಪ್ರೀತಿಯ ಮನಃಸ್ಥಿತಿಯಲ್ಲಿರುವಿರಿ. ಸಮಯವು ಬೇಕಾಗಬಹುದು. ಅಧಿಕ ಖರ್ಚಿನಿಂದ ಇಂದಿನ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೆ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಕೆಲವರಿಂದ ದೂರವಿರಲು ನೀವು ಇಚ್ಛಿಸುವಿರಿ. ಬೇಕಾದಷ್ಟು ಅವಕಾಶಗಳಿದ್ದರೂ ಯಾವುದನ್ನೂ ಬಳಸಿಕೊಳ್ಳದೇ ಸುಮ್ಮನಾಗುವಿರಿ.
ಮೀನ ರಾಶಿ: ಇಂದು ನೀವು ಆರ್ಥಿಕ ಸುಧಾರಣೆಯ ಕಡೆ ಗಮನ ಕೊಡುವಿರಿ. ನಿಮಗೆ ಮಕ್ಕಳಿಂದ ಬೇಕಾದ ಸಹಕಾರವು ಪ್ರಾಪ್ತವಾಗಲಿದೆ. ಇಂದು ಭೋಗ ಜೀವನವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಸಂತೋಷದ ಜೀವನಕ್ಕಾಗಿ ಮೊಂಡುತನವನ್ನು ಬಿಡಬೇಕಾಗುವುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಂಗಾತಿಯ ಜೊತೆ ವಾದದ ಸಾಧ್ಯತೆಯು ಬರಲಿದೆ. ಸ್ತ್ರೀಯರಿಗೆ ನಾನಾ ರೀತಿಯಿಂದ ಅನುಕೂಲವಾಗಬಹುದು. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದ್ದು ಸಂತೋಷವಾಗುವುದು. ಕಾಕತಳೀಯದಂತೆ ಕೆಲವು ಘಟನೆಗಳು ನಡೆಯಬಹುದು. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಬೆರೆಯುವುದು ಕಷ್ಟವಾದೀತು. ಸಾದಿಷ್ಟವಾದ ಭೋಜನದಿಂದ ಸಂತೃಪ್ತಿ ಇರಲಿದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1