2024 ಜೂನ್ 04ರ ದಿನ ಭವಿಷ್ಯ: ಮಂಗಳವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
![](https://samagrasuddi.co.in/wp-content/uploads/2024/03/image-140.png)
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ 15:45 ರಿಂದ 17:22 ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 2:31 ರಿಂದ ಬೆಳಿಗ್ಗೆ 14:08ರ ವರೆಗೆ.
ಮೇಷ ರಾಶಿ :ಇಂದು ನಿಮ್ಮ ವೈವಾಹಿಕ ಜೀವನಕ್ಕೆ ಒಳ್ಳೆಯ ಸುದ್ದಿಯನ್ನು ಇರುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ಅದು ಕೊನೆಗೊಳ್ಳುತ್ತದೆ. ಸಂಬಂಧಗಳಲ್ಲಿ ನಿಮ್ಮ ನಂಬಿಕೆ ಉಳಿಯುತ್ತದೆ. ಕೆಲಸದಲ್ಲಿ ನಿಯಮಗಳಿಗೆ ಸಂಪೂರ್ಣ ಗಮನವನ್ನು ನೀಡುವುದು ಅವಶ್ಯಕ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ನೀವು ಒಂದು ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಿರಿ. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು. ನಂಬಿಕೆಯಲ್ಲಿ ಪಕ್ವತೆ ಇರಲಿದೆ. ದೂರುವವರ ಬಗ್ಗೆ ಗಮನ ಮಾತ್ರ ಇರಲಿ. ಏನನ್ನೂ ಹೇಳುವುದು ಬೇಡ. ಕಾಲವೇ ಅದಕ್ಕೆ ಉತ್ತರಿಸುತ್ತದೆ.
ವೃಷಭ ರಾಶಿ :ಇಂದು ಯಾರದ್ದೋ ಮಾತನ್ನು ಕೇಳಿ ಕೆಲಸವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಇಂದು ನಿಮ್ಮ ಆರೋಗ್ಯ ಮತ್ತು ಸಂತೋಷಕ್ಕೆ ಸ್ವಲ್ಪ ಅಡ್ಡಿಯಾಗಬಹುದು. ಅವಿವೇಕದಿಂದ ಮಾಡಿದ ಕೆಲಸದಲ್ಲಿ ನಷ್ಟ ಮತ್ತು ಹತಾಶೆಯ ಸನ್ನಿವೇಶಗಳಿಂದ ನೀವು ಇಂದು ಸ್ವಲ್ಪ ದುಃಖಿಯಾಗುವಿರಿ. ನಿಮಗೆ ಅಪಾಯವನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಿದರೆ, ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ. ನಿಮ್ಮನ್ನು ಆಡಿಕೊಳ್ಳುವರು. ನಿವೃತ್ತಿಯನ್ನು ಪಡೆದ ಕಾರಣ ಮನಸ್ಸಿನಲ್ಲಿ ನಾನಾ ಪ್ರಕಾರದ ಆಲೋಚನೆಗಳು ಬರುವುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ. ಹಳೆಯದರ ಬಗ್ಗೆ ತತ್ಸಾರ ಭಾವ ಮೂಡುವುದು.
ಮಿಥುನ ರಾಶಿ :ನಿಮ್ಮಲ್ಲಿವರ ಅವಗುಣಗಳನ್ನು ನೀವೇ ಅರ್ಥ ಮಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವ ಆಶ್ವಾಸನೆ ನೀಡಿ. ಇಂದು ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಂದು ನೀವು ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಜೀವನೋಪಾಯದ ಕ್ಷೇತ್ರದಲ್ಲಿ ನೀವು ಯಾವುದೇ ಹೊಸ ಪ್ರಯತ್ನವನ್ನು ಮಾಡುತ್ತಿದ್ದರೆ, ಅದು ಇಂದು ಫಲ ನೀಡುತ್ತದೆ. ನೀವು ಅಧಿಕಾರದ ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯೇ ಹೆಚ್ಚಾಗುವುದು. ನಿಮ್ಮ ಗುರಿಯನ್ನು ಸರಿಯಾಗಿ ನಿರ್ಧರಿಸಿಕೊಳ್ಳಿ. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ.
ಕರ್ಕ ರಾಶಿ :ಇಂದ ನಿಮಗೆ ಯಾರೋ ಮಾಡಿದ ತಪ್ಪಿಗೆ ನೀವು ತಲೆತಗ್ಗಿಸುವಂತೆ ಆಗುತ್ತದೆ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಗಣನೀಯ ಆರ್ಥಿಕ ಪ್ರಯೋಜನಗಳನ್ನು ನೀವು ಪಡೆಯಬಹುದು. ಇಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶಗಳು ಸಿಗುತ್ತವೆ. ನೀವು ಈ ಹಿಂದೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ನೀವು ಅದನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವರು. ಕಿರಿಯರಿಂದ ನೀವು ಸಲ್ಲದ ಮಾತುಗಳನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ. ಹಿರಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿರ್ವಹಿಸುವಿರಿ.
ಸಿಂಹ ರಾಶಿ :ನೀವು ಇಂದು ಯಾವುದೋ ವಿಷಯಕ್ಕೆ ಬೇರೆಯವರ ಬಗ್ಗೆ ಮನಸ್ಸಿನಲ್ಲಿ ಕಟ್ಟಿಕೊಂಡ ಗೋಡೆಯನ್ನು ಒಡೆಯುವಿರಿ. ಇದರಿಂದ ನೆಮ್ಮದಿ, ಸಂತೋಷಗಳು ತಾನಾಗಿಯೇ ಬರುವುವು. ಇಂದು ನೀವು ಈ ಎಲ್ಲವನ್ನು ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಉತ್ತಮ ವೈದ್ಯರಿಂದ ಸಲಹೆ ಪಡೆಯಲು ಸಮಯವನ್ನು ಕಳೆಯುತ್ತೀರಿ. ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ಭವಿಷ್ಯಕ್ಕೆ ಹೂಡಿಕೆ ಮಾಡುವಿರಿ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ನಿಮಗೆ ಹಿಡಿಸದ ವ್ಯವಹಾರವನ್ನು ಕಠೋರವಾಗಿ ಠೀಕಿಸುವಿರಿ. ವ್ಯಾಪಾರಸ್ಥರಿಗೆ ದಿನವು ಅಲ್ಪ ಲಾಭದಾಯಕವಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ನೀವು ತಪ್ಪಿಸುವಿರಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಯಾವುದೂ ಅಂತ್ಯವಲ್ಲ. ಮತ್ತೊಂದರ ಆರಂಭವೂ ಆಗಬಹುದು.
ಕನ್ಯಾ ರಾಶಿ :ನೀವು ಚೆನ್ನಾಗಿ ಮಾತನಾಡುತ್ತೀರೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯಿಯ ಚಪಲಕ್ಕೆ ಅಸಂಬದ್ಧವನ್ನು ಹೇಳುವಿರಿ. ಸದಾ ನಗುಮುಖದಿಂದ ಇರಿ. ವ್ಯಾಪರ ವಹಿವಾಟು ಸುಗಮವಾಗಿ ಸಾಗುವುದು. ನಿಶ್ಚಿಂತೆಯಿಂದ ನಿದ್ರಿಸಬಹುದು. ವಹಿವಾಟಿಗೆ ಸಂಬಂಧಿಸಿದ ಯಾವುದೇ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಇಂದು ಅದು ನರಕವಾಗಬಹುದು. ಇಂದು ನೀವು ಕೈಯಲ್ಲಿ ಸಾಕಷ್ಟು ಹಣದಿಂದ ಸಂತೋಷವಾಗಿರುತ್ತೀರಿ. ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು. ಭೂಮಿಯ ವ್ಯವಹಾರವನ್ನು ನೀವು ಮಾಡುವುದು ಕಷ್ಟವೆನಿಸಬಹುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗಬಹು. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ.
ತುಲಾ ರಾಶಿ :ಇಂದು ನೀವು ಬೆಟ್ಟವನ್ನೇ ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಖಂಡಿತ ಮಾಡಬೇಡಿ. ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಏನೇ ಪ್ರಯತ್ನಗಳು ನಡೆಯುತ್ತಿರುತ್ತವೆ. ಇಂದು ಅಲ್ಪ ಯಶಸ್ಸನ್ನು ಕಾಣುವರು. ನಿಮ್ಮ ಮಕ್ಕಳ ಕಡೆಯವರು ಕೂಡ ಇಂದು ಬಲವಾಗಿ ಕಾಣುತ್ತಾರೆ. ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ನಿಮ್ಮ ಮುಖ್ಯ ವಿಷಯಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ಸ್ಪರ್ಧಾತ್ಮಕ ಕ್ರಿಯೆಯಲ್ಲಿ ಸೋಲಾಗುವುದು. ಯಾರನ್ನೋ ನಿಮಗೆ ಹೋಲಿಸಿಕೊಂಡು ಸಂಕಟಪಡುವಿರಿ. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು.
ವೃಶ್ಚಿಕ ರಾಶಿ :ಇಂದು ನಿಮ್ಮ ದಿನದ ಕೆಲಸವನ್ನು ಒಮ್ಮೆ ಅವಲೋಕಿಸಿ ಅನಂತರ ಕಾರ್ಯದ ಕಡೆ ಮುನ್ನಡೆಯಿರಿ. ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಇರುವುದೂ ಇಲ್ಲವಾದೀತು. ನಿಮ್ಮ ಮಾತಿನ ಸೌಮ್ಯತೆ ಇಂದು ನಿಮ್ಮ ಗೌರವಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸ್ಪರ್ಧೆಗಳಲ್ಲಿ ವಿಶೇಷ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರಬಲ ವೈರಿಗಳನ್ನು ನೀವು ಮೆಟ್ಟಿನಿಲ್ಲುವ ಛಾತಿ ಇರಲಿದೆ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.
ಧನು ರಾಶಿ :ಇಂದು ನಿಮ್ಮ ಮಕ್ಕಳಿಂದ ಸಂತೋಷದ ವಾರ್ತೆ ಗೊತ್ತಾಗುವುದು. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಇಂದು ನೀವು ಸುಂದರರೂಪಕ್ಕೆ ಮರುಳಾಗುತ್ತೀರಿ. ಉದ್ಯೋಗದ ನಿಮಿತ್ತ ಪ್ರಯಾಣ ಸಾಧ್ಯತೆಯಿದೆ. ನಿಮ್ಮ ಮಕ್ಕಳ ಜವಾಬ್ದಾರಿಗಳನ್ನು ನೀವು ಪೂರೈಸಬಲ್ಲಿರಿ. ವಿದೇಶಿ ಪ್ರಯಾಣದ ಪರಿಸ್ಥಿತಿಯು ಆಹ್ಲಾದಕರ ಮತ್ತು ಲಾಭದಾಯಕವಾಗಿ ಕಾಣುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಯಾವುದಾದರೂ ಸಲಹೆಯನ್ನು ನೀಡುತ್ತಿದ್ದರೆ ಅದನ್ನು ಗಮನಿಸಿ. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.
ಮಕರ ರಾಶಿ :ಇಂದು ನಿಮ್ಮ ಕೆಟ್ಟ ಆರೋಗ್ಯವನ್ನು ಅರೆಕ್ಷಣದಲ್ಲಿ ಸರಿ ಮಾಡುವುದು ಕಷ್ಟ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಅವಕಾಶಗಳನ್ನು ಸೃಷ್ಟಿಕೊಳ್ಳುವ ಸಾಮರ್ಥ್ಯ ನಿಮಲ್ಲಿದೆ. ನಿಮ್ಮ ಬಾಕಿಯಿರುವ ಕೆಲವು ಕೆಲಸಗಳು ಪೂರ್ಣಗೊಳ್ಳುವುದರಿಂದ ಇಂದು ನೀವು ಕೆಲವು ಯೋಜನೆಗಳನ್ನು ಮಾಡಬಹುದು. ಇಂದು ನೀವು ಶುಭ ಕಾರ್ಯಗಳನ್ನು ಪ್ರಚಾರ ಮಾಡುವಲ್ಲಿ ಪಾಲ್ಗೊಳ್ಳುವ ಸೌಭಾಗ್ಯವನ್ನು ಪಡೆಯುತ್ತೀರಿ. ಅತಿಯಾದ ಉತ್ಸಾಹ, ನಂಬಿಕೆಯಿಂದ ನೀವು ತೊಂದರೆಗೆ ಸಿಲುಕುವಿರಿ. ನಿಮ್ಮ ಮಾರ್ಗವು ನೇರವಾಗಿರಲಿ. ಜೊತೆಗಾರರು ನೀವು ಮಾಡುವ ಕಾರ್ಯಕ್ಕೆ ನಿರುತ್ಸಾಹ ತೋರಿಸುವರು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.
ಕುಂಭ ರಾಶಿ :ಇಂದು ಉದ್ಯೋಗದಲ್ಲಿ ಹತ್ತಾರು ಕೆಲಸಗಳು ಒಮ್ಮೆ ಬಂದು ಬೀಳಬಹುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ರಾಜಕೀಯ ಕ್ಷೇತ್ರದಲ್ಲಿ ನೀವು ಯಾವುದೇ ಪ್ರಯತ್ನಗಳನ್ನು ಮಾಡುತ್ತಿದ್ದೀರಿ. ಇಂದು ನೀವು ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ಮೈತ್ರಿಗಳಿದ್ದರೆ ಅವುಗಳಿಂದ ಇಂದು ನೀವು ಲಾಭ ಪಡೆಯಬಹುದು. ನಿಮ್ಮ ಮನಶ್ಚಾಂಚಲ್ಯವನ್ನು ಕಡಮೆ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ.
ಮೀನ ರಾಶಿ :ಇಂದು ನಿಮ್ಮಲ್ಲಿರುವ ತಿಳಿವಳಿಕೆಯ ಜೊತೆ ನಿಮ್ಮ ಪ್ರಯತ್ನವೂ ಯಶಸ್ಸಿನ ಮೆಟ್ಟಿಲೇರಲು ಸಹಕಾರಿ. ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ಸಿಟ್ಟಿನಿಂದ ಇನ್ನಷ್ಟು ಪರಿಹಾಸ್ಯಕ್ಕೆ ಒಳಗಾಗಬೇಡಿ. ನೋವನ್ನು ನಲಿವಾಗಿ ಬದಲಿಸುವ ಕಲೆಯನ್ನು ನೀವು ಬಲ್ಲಿರಿ. ಮಕ್ಕಳ ಕಾರಣದಿಂದಾಗಿ, ನೀವು ಇಂದು ಕೆಲವು ನಿರಾಶಾದಾಯಕ ಮಾಹಿತಿಯನ್ನು ಪಡೆಯಬಹುದು. ಅದು ನಿಮ್ಮನ್ನು ಸ್ವಲ್ಪ ಚಿಂತಿತರನ್ನಾಗಿ ಮಾಡುತ್ತದೆ. ಬೇಸರಗೊಳ್ಳದೇ ಖುಷಿಯಿಂದ ಮಾಡಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ. ಸಹಕಾರದ ಮನೋಭಾವವು ನಿಮ್ಮ ಮನಸ್ಸಿನಲ್ಲಿ ಇರುವುದು. ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ ಕಾಲವನ್ನು ಕಳೆಯುವಿರಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ.