2024 ಮೇ 06 ರ ದಿನ ಭವಿಷ್ಯ: ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಸೋಮವಾರದ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:44 ರಿಂದ 09:19ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:29 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ.
ಮೇಷ ರಾಶಿ : ವಿವಾದಗಳಿಂದ ನೀವು ಆತಂಕದಲ್ಲಿ ಇರುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪಾಲುದಾರರ ಕೈಜೋಡಿಸುವ ಮುನ್ನ ಯೋಚಿಸಿ. ದೇವಿಯನ್ನು ಆರಾಧಿಸಿ ಇಷ್ಟಾರ್ಥವನ್ನು ನೀಡುವಳು. ಕಛೇರಿಯಲ್ಲಿ ನಿಮಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಆಗುವುದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ.
ವೃಷಭ ರಾಶಿ : ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಪ್ರಯತ್ನದಲ್ಲಿ ಇರುವಿರಿ. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲ ದಿನ. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನದ ಸಾಧ್ಯತೆ. ನಿಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಸಮಾಧಾನದಿಂದ ಇರಬೇಕಾದ ಅವಶ್ಯಕತೆ ಇದೆ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ಉದ್ಯೋಗದಲ್ಲಿ ಆಗುವ ಬದಲಾವಣೆಗಳನ್ನು ನೀವು ಸಹಿಸುವುದು ಕಷ್ಟವಾದೀತು. ಕಾನೂನಾತ್ಮಕ ವಿಚಾರದಲ್ಲಿ ಹಿನ್ನಡೆಯಾಗುವುದು. ಮಿತ್ರರ ಕೋಪಕ್ಕೆ ಕ್ಷಮೆಯನ್ನು ಕೇಳುವಿರಿ. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.
ಮಿಥುನ ರಾಶಿ : ನಿಮಗೆ ಮಕ್ಕಳ ವಿದ್ಯಾಭ್ಯಾಸದ ಚಿಂತೆ ಹೆಚ್ಚಾಗುವುದು. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ಸಂಗಾತಿಯ ಜೊತೆ ತಾಳ್ಮೆಂದಿರಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಗಟ್ಟಿತನವೇ ನಿಮಗೆ ಧೈರ್ಯ ಕೊಡಲಿದೆ. ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಉದ್ಯೋಗಿಗಳು ಹಣ ಹೂಡಿಕೆ ಮಾಡಿದರೆ ನಷ್ಟವನ್ನು ಅನುಭವಿಸಬೇಕಾದೀತು. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ. ಸ್ವತಂತ್ರವಾಗಿ ಇರಲು ಬಿಡಿ. ಭೂಮಿಯ ಖರೀದಿಯಲ್ಲಿ ಎಡವುವಿರಿ. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು.
ಕಟಕ ರಾಶಿ : ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದು ಸಾಧಿಸುವಿರಿ. ದ್ವಿಚಕ್ರ ಸವಾರರು ಜಾಗರೂಕತೆಯಿಂದ ಇರಬೇಕು. ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು. ದಾಂಪತ್ಯ ಜೀವನದಲ್ಲಿ ಬಿಸಿಲು ನೆರಳಿನ ವಾತಾವರಣವಿರುತ್ತದೆ. ಸಂಗಾತಿಯ ಬಂಧುಗಳು ಮನೆಗೆ ಆಗಮಿಸಬಹುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು.
ಸಿಂಹ ರಾಶಿ : ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಫಲಾ ಅಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಒಳ್ಳೆಯದು. ಅದರಿಂದ ಹೆಚ್ಚಿನ ಲಾಭವು ಸಿಗಲಿದೆ. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ಸಹೋದ್ಯೋಗಿ ಹಾಗೂ ಸಂಬಂಧಿಕರ ಬೆಂಬಲವನ್ನು ನೀವು ಪಡೆಯಬಹುದು. ನೀವಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ಇಂದಿನ ಓಡಾಟದ ದಣಿವು ನಿಮ್ಮ ಉತ್ಸಾಹವನ್ನು ಕುಗ್ಗಿಸೀತು. ಅಪವಾದದಿಂದ ನಿಮಗೆ ಭಯವಾಗಲಿದೆ. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಕ್ಲಿಷ್ಟ ಎನಿಸದು.
ಕನ್ಯಾ ರಾಶಿ : ನೀವು ಅಧಿಕಾರವನ್ನು ಪಡೆಯಲು ಬೇರೆ ರೀತಿಯಲ್ಲಿ ಶ್ರಮಿಸುವಿರಿ. ತಪ್ಪು ತಿಳುವಳಿಕೆಯಿಂದ ಸಂಬಂಧ ಕೊನೆಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಕಾಲ ಕಳೆದು ಖುಷಿಕೊಡುವಿರಿ. ಅತಿಯಾದ ಕಾರ್ಯಗಳಿಂದ ಸುಸ್ತಾಗಬಹುದು. ರಪ್ತಿನ ವಿಷಯದಲ್ಲಿ ನಿಮ್ಮನ್ನು ಹೆಚ್ಚು ಸಮಯ ಕಾಯುವಂತೆ ಮಾಡುತ್ತದೆ. ಮನೆಯಲ್ಲಿ ಇಂದು ಸಹಜ ವಾತಾವರಣ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಎಲ್ಲದಕ್ಕೂ ನೀವು ಉತ್ತರಿಸಬೇಕಾದ ಅವಶ್ಯಕತೆ ಇಲ್ಲ. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಬಂಧುಗಳು ನಿಮ್ಮವರ ಬಗ್ಗೆ ಆಡಿಕೊಳ್ಳುವಾಗ ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ವಿರಾಮವನ್ನು ಪಡೆದು ಸುತ್ತಾಡಲು ಹೋಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು.
ತುಲಾ ರಾಶಿ : ನೀವು ಇಂದು ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದಾಂಪತ್ಯದಲ್ಲಿ ಸುಖವು ಇರಲಿದೆ. ಚರ್ಚೆಗಳಿಗೆ ಆಸ್ಪದ ನೀಡದಿರಿ. ನೂತನ ಮಿತ್ರರ ಭೇಟಿ ಆಗವುದು. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಮನೆಯ ನಿರ್ಮಾಣವು ಅಪೂರ್ಣವಾಗಿ ನಿಲ್ಲುವುದು. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿಯನ್ನು ವಹಿಸಬೇಕಾದೀತು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರಗತಿಯು ಆಗಲಿದೆ. ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಧನವನ್ನು ಸಂಪಾದಿಸುವಿರಿ. ಮಂಗಲಕಾರ್ಯದಲ್ಲಿ ಇಂದು ನೀವು ಸಂತೋಷದಿಂದ ಪಾಲ್ಗೊಳ್ಳುವಿರಿ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು. ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು.
ವೃಶ್ಚಿಕ ರಾಶಿ : ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀಯರು ಪುರುಷರನ್ನೂ ಪುರುಷರು ಸ್ತ್ರೀಯರನ್ನು ದ್ವೇಷಿಸುವರು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ಬಂಧು ಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಗುರು ಹಿರಿಯರೊಂದಿಗೆ ಸಮಾಲೋಚನೆಯನ್ನು ಮಾಡಲಿದ್ದೀರಿ. ಪಾರದರ್ಶಕತೆಗೆ ಆದ್ಯತೆ ನೀಡುವವರು ನೀವು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವು ಬರಲಿದೆ. ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ಮನೆಯ ನಿರ್ಮಾಣ ಕಾರ್ಯವು ಬಹಳ ವಿಳಂಬದಂತೆ ಅನ್ನಿಸುವುದು. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಜವಾಬ್ದಾರಿಯನ್ನು ನಯವಾಗಿ ತಳ್ಳಿಹಾಕುವಿರಿ.
ಧನು ರಾಶಿ : ನಿಮ್ಮ ಸಹೋದರರಿಂದ ನಿಮಗೆ ಸಹಾಯ ಸಿಗಬಹುದು. ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನೀವು ನಿಯಮಬದ್ಧವಾಗಿ ಮಾಡುವುದು ಉತ್ತಮ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ಕಾಣಬಹುದು. ಕಲಾವಿದರಿಗೆ ಯಶಸ್ಸು ದೊರೆಯಲಿದೆ. ಹೆಚ್ಚಿನವಾದ ವಾದ ವಿವಾದಗಳನ್ನು ಮಾಡುವುದು ಖಂಡಿತ ಬೇಡ. ದೇವಿ ಸರಸ್ವತಿಯನ್ನು ಸ್ಮರಿಸಿ. ರಾಜಕೀಯವಾಗಿ ನೀವು ಹಿಂದುಳಿದಂತೆ ಅನ್ನಿಸಬಹುದು. ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಿ. ಭೂವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಸೂಕ್ತವಾಗಿದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ನೀವು ಯಾವುದನ್ನೂ ಇಂದು ಗಂಭೀರವಾಗಿ ತೆಗೆದುಕೊಳ್ಳಲಾರಿರಿ.
ಮಕರ ರಾಶಿ : ಇಂದು ನೀವು ಬೇರೆಯವರ ಕಷ್ಟಕ್ಕೆ ಯಾವುದಾದರೊಂದು ರೀತಿಯಲ್ಲಿ ನೆರವಾಗುವಿರಿ. ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಯಸ್ಸು ಇರುತ್ತದೆ. ಕೋಪದಿಂದ ಯಾವ ಕಾರ್ಯ ಸಾಧನೆಗಳು ನಿಮ್ಮಿಂದ ಆಗದು. ಎಲೆಕ್ಟ್ರಾನಿಕ್ ಸಂವಹನ ಕ್ಷೇತ್ರದಲ್ಲಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಉದ್ಯಮದ ಮಿತ್ರನನ್ನು ಮನೆಗೆ ಆಹ್ವಾನಿಸುವಿರಿ. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು.
ಕುಂಭ ರಾಶಿ : ಇಂದು ನೀವು ದೇವತಾ ಕಾರ್ಯಗಳಲ್ಲಿ ತೊಡಗುವಿರಿ. ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿಯಾಗುವುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಬಹುದು. ಕೈಗೊಂಡ ಕಾರ್ಯಗಳಲ್ಲಿ ಸಫಲತೆಯನ್ನು ಅನುಭವಿಸುವಿರಿ. ಹಣದ ಒಳ ಅರಿವು ಮಂದಗತಿಯಲ್ಲಿ ಇರುತ್ತದೆ. ಅಧಿಕ ಓಡಾಟ ಹೆಚ್ಚು ಆಯಾಸವನ್ನು ತರಿಸಬಹುದು. ಸರ್ಕಾರಿ ಕಛೇರಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ಆಗಬೇಕಾದ ನಿಮ್ಮ ಕೆಲಸವು ಬೇಗನೆ ಮುಗಿಯುವುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಆದಾಯವು ಕಡಿಮೆ ಆದಂತೆ ಅನ್ನಿಸುವುದು.
ಮೀನ ರಾಶಿ : ಇಂದು ನೀವು ಸ್ವಂತ ಕಾರ್ಯದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ವ್ಯವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ಆಲೋಚಿಸದೇ ಯಾವುದೇ ಸಾಹಸದ ಕಾರ್ಯದಲ್ಲಿ ತೊಡಗುವುದು ಬೇಡ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಗುರಿಯ ಕಡೆ ಮುಖ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಇಂದು ನಿಮಗೆ ಆಗಲಿದೆ. ಅನ್ಯರ ಮಾತಿಗೆ ಬಲಿಯಾಗಬೇಡಿ. ಉದ್ಯೋಗಸ್ಥ ಮಹಿಳೆಯರು ವರ್ಗಾವಣೆಗೆ ಪ್ರಯತ್ನಿಸುವಿರಿ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಸಹೋದ್ಯೋಗಿಗಳು ನಿಮ್ಮನ್ನು ಎಲ್ಲದಕ್ಕೂ ಬೊಟ್ಟು ಮಾಡಿ ತೋರಿಸಿಯಾರು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1