ಶಾಲಿವಾಹನ ಶಕ ವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿಯಲ್ಲಿ ಉದ್ಯಮದಲ್ಲಿ ಉತ್ತೇಜನ, ಕುಟುಂಬಕ್ಕೆ ನಡೆಸುವ ಜಾಣತನ, ಹಿರಿಯರಿಂದ ಮಾರ್ಗದರ್ಶನ, ಸಂಗಾತಿಯ ಪ್ರೇಮ, ಸಮ್ಮಾನ, ಅವಮಾನಗಳ ಬಗ್ಗೆ ತಿಳಿದುಕೊಳ್ಳಿ. ಶುಭ ತರಲಿ ಈ ದಿನ.
ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಚತುರ್ಥೀ ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಪರಿಘ, ಕರಣ : ಗರಜ, ಸೂರ್ಯೋದಯ – 07 – 02 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:20 – 12:46, ಮಘಂಡ ಕಾಲ 15:38 – 17:04, ಗುಳಿಕ ಕಾಲ08:28 – 09:54
ಮೇಷ ರಾಶಿ: ಸಿಗುವ ಅವಕಾಶ ಮತ್ತು ಸಂಪತ್ತನ್ನು ಧನಾತ್ಮಕ ಬೆಳವಣಿಗೆಯ ಕಡೆ ಉಪಯೋಗಿಸುವಿರಿ. ನಿಮ್ಮ ಆಲಸ್ಯವನ್ನು ಇತರರು ಸುಮ್ಮನೇ ಆಡಿಕೊಂಡಾರು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ವಹಿಸಿಕೊಂಡ ಕೆಲಸವನ್ನು ನಿಶ್ಚಿತ ಸಮಯಕ್ಕೆ ಮುಗಿಸಲು ಆಗದು. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ಪರಿಚಿತರಿಂದ ಉಡುಗೊರೆ ಸಿಗಲಿದೆ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮನವೊಲಿಸುವ ಮಾತುಗಳನ್ನು ಆಡಿ, ಸೌಹರ್ದತೆಯನ್ನು ತರುವಿರಿ. ನಿದ್ರಾಹೀನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿ. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳಲು ಸಮಯ ಬೇಕಾಗುವುದು.
ವೃಷಭ ರಾಶಿ: ಬಂಧುಗಳಿಗೆ ಸತ್ಕಾರ ಮಾಡುವಿರಿ. ಇಂದು ಮಾತನ್ನು ಸುತ್ತಿ ಬಳಸಿ ನಿಧಾನವಾಗಿ ಆಡುವಿರಿ. ಹೇಳಬೇಕಾದ ಅಂಶವನ್ನು ಹೇಳದೇ ಇರುವಿರಿ. ಹಳೆಯ ಗೆಳೆಯರು ನಿಮಗೆ ಅನಿರೀಕ್ಷಿತವಾಗಿ ದೊರೆಯಬಹುದು. ಮನೆಯವರ ಬಗ್ಗೆ ಸದ್ಭಾವ ಬೇಕು. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ವಿದ್ಯಾರ್ಥಿಗಳು ಅಭ್ಯಾಸಕ್ಕೆ ಆಗುವ ತೊಂದರೆಯನ್ನೇ ಯೋಚಿಸುವರು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರಗಳು ಮತ್ತೆ ಮುಖ್ಯಸ್ಥಾನಕ್ಕೆ ಬರುವುವು. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಮನೋರಂಜನೆಗೆ ಭಾಗವಹಿಸುವುದು ಇಷ್ಟವಾಗುವುದು. ನಿಮಗೆ ಕೊಟ್ಟ ಕೆಲಸವನ್ನು ವಿಳಂಬವಾಗಿ ಮಾಡುವಿರಿ. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ನಿಮ್ಮ ನಮಗೆ ಗೊತ್ತಿರಲಿ. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ಹೊಸ ಹೂಡಿಕೆಯ ಬಗ್ಗೆ ಆಸಕ್ತಿಯಿರದು.
ಮಿಥುನ ರಾಶಿ: ಅಮೂಲ್ಯವಾದ ವಸ್ತುಗಳನ್ನು ಯಾವುದೋ ಕಾರ್ಯಕ್ಕೆ ಬಳಸುವಿರಿ. ಉದ್ಯಮದಲ್ಲಿ ನಿಮ್ಮ ತೊಡಗುವಿಕೆ ಎಷ್ಟಿದೆ ಎನ್ನುವುದರ ಮೇಲೆ ಲಾಭವು ನಿರ್ಧಾರವಾಗುವುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಷ್ಟವನ್ನು ಆಲಿಸುವವರಿಲ್ಲ ಎಂಬ ನೋವಿದೆ. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ಗಣ್ಯರ ಭೇಟಿಯನ್ನು ಮಾಡುವಿರಿ. ಅಪರಿಚಿತರು ಸಮಾನ ಶೀಲತೆಯಿಂದ ಪರಿಚಿತರಾಗುವರು. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಭವಿಷ್ಯವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಕೊಟ್ಟ ಕಾರ್ಯವನ್ನು ಸರಿಯಾದ ಕಾಲದಲ್ಲಿ ಮುಗಿಸಿಕೊಡುವಿರಿ.
ಕರ್ಕಾಟಕ ರಾಶಿ: ಪ್ರಯಾಣದಲ್ಲಿ ವ್ಯತ್ಯಯ, ಸರಿಯಾದ ಸಮಯಕ್ಕೆ ಹೋಗಬೇಕಾದ ಸ್ಥಳಕ್ಕೆ ತಲುಪುವುದು ಕಷ್ಟ. ಪ್ರೇಮಿಗಳು ಎಲ್ಲಿಯಾದರೂ ಭೇಟಿಯಾಗಲು ಯೋಚಿಸುವರು. ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ಇಂದು ಒಂದು ಕಾರ್ಯವನ್ನು ಮಾಡುವುದು ಕಷ್ಟ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ನಿಮ್ಮ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಒಂದು ವ್ಯವಸ್ಥಿತ ಚೌಕಟ್ಟಿಗೆ ಬರುವುದು ಕಷ್ಟ. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ಸ್ವಂತ ಭೂಮಿಯಲ್ಲಿ ಏನನ್ನಾದರೂ ಬೆಳೆಯುವ ಬಗ್ಗೆ ಯೋಚಿಸುವಿರಿ. ಒಬ್ಬೊಂಟಿಯಾಗಿ ವಿಹಾರ ಮಾಡುವಿರಿ. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯಲು ಮತ್ತೊಬ್ಬರ ಅವಶ್ಯಕತೆ ಇದೆ.
ಸಿಂಹ ರಾಶಿ: ವಿದ್ಯಾಭ್ಯಾಸದ ಬಗ್ಗೆ ಸಂಪೂರ್ಣ ಗೊಂದಲ ನಿವಾರಣೆ ಮಾಡಿಕೊಳ್ಳುವಿರಿ. ಪೂರ್ವಾರ್ಜಿತ ಸಂಪತ್ತನ್ನೇ ನಂಬಿ ನಿಶ್ಚಿಂತರಾಗುವಿರಿ. ನಿಮ್ಮ ಶ್ರಮದ ಬಗ್ಗೆಯೂ ಗಮನವಿರಲಿ. ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ರಾಜಕೀಯದತ್ತ ಒಲವು ಉಂಟಾದೀತು. ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಒಳಜಗಳದಿಂದ ಮನಸ್ಸಿಗೆ ಎಲ್ಲಿ ಹೋದರೂ ನೆಮ್ಮದಿ ಕಾಣಿಸದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಆದಾಯ ಹೆಚ್ಚು ಬರುವ ಕಡೆ ಧೈರ್ಯವಾಗಿ ಮುನ್ನುಗ್ಗಬಹುದು. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ನಿಮ್ಮ ಪ್ರೇಮಸಂಬಂಧವು ಸಡಿಲಾಗಬಹುದು. ನಿಮ್ಮ ಜವಾಬ್ದಾರಿಗೆ ಬೆನ್ನು ಹಾಕಿಹೋಗುವುದು ಬೇಡ. ಸಣ್ಣ ಅನಾರೋಗ್ಯಕ್ಕೂ ಔಷಧವನ್ನು ಮಾಡಿ. ಬರುವುದನ್ನು ಎದುರಿಸುವ ತಾಕತ್ತನ್ನು ಬೆಳೆಸಿಕೊಳ್ಳಿ.
ಕನ್ಯಾ ರಾಶಿ: ಸಂಪಾದನೆಯ ಹಾದಿಯನ್ನು ಸುಗಮವಾಗಿಸಿಕೊಳ್ಳುವಿರಿ. ಸಣ್ಣ ಉದ್ಯೋಗವಿದ್ದರೂ ನಿರುದ್ಯೋಗದಂತೆ ಅನ್ನಿಸಬಹುದು. ಯಾರ ಜೊತೆಯೂ ಬೆರೆಯಬೇಕು ಎನ್ನುವ ಆಸೆಯೂ ಇರದು. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ವೃತ್ತಿಯ ಬದಲಾವಣೆಯಿಂದ ಉತ್ಸಾಹ ಬರಲಿದೆ. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ನಿಮ್ಮನ್ನು ಶ್ರೇಷ್ಠವೆಂದು ಭಾವಿಸಿ, ಕೆಲಸವನ್ನು ಮಾಡಿ. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಸಮೂಹಕಾರ್ಯದಲ್ಲಿ ನೀವು ಹೆಚ್ಚು ಕಾರ್ಯವನ್ನು ಮಾಡಬೇಕಾಗುವುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಇಂದು ಅಧಿಕ ಮಾತನ್ನು ಆಡುವುದು ಬೇಡ. ಹಣಕಾಸಿನ ಹೂಡಿಕೆಯು ಹೊಸ ತಿರುವನ್ನು ಪಡೆದೀತು. ಖರ್ಚಿನ ಬಗ್ಗೆ ಅಂದಾಜಿರಲಿ.
ತುಲಾ ರಾಶಿ: ನಿಮ್ಮ ಮಾತು ಆಹ್ಲಾದತೆಯನ್ನು ಉಂಟುಮಾಡಲಿ. ಪ್ರಾಮಾಣಿಕತೆಯನ್ನು ನೀವು ಬಿಡದೇ ಮುಂದುವರಿಸಿ. ಭೂಮಿಯ ವ್ಯವಹಾರಕ್ಕೆ ಯಾರನ್ನಾದರೂ ಸಹಾಯಕರನ್ನು ಪಡೆಯುವಿರಿ. ಸ್ವಂತಿಕೆಯನ್ನು ಬೆಳೆಸಿಕೊಳ್ಳುವ ಕಡೆ ನಿಮ್ಮ ಪ್ರಯತ್ನವಿರಲಿ. ದುಃಖವನ್ನು ಕಳೆಯಲು ದುರಭ್ಯಾಸಕ್ಕೆ ಹೋಗಬಹುದು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಸಹೋದ್ಯೋಗಿ ಮಿತ್ರರ ಜೊತೆ ಮಸ್ತಿಯಲ್ಲಿ ಕಾಲ ಕಳೆಯುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಕಾರ್ಯದ ಒತ್ತಡದಿಂದ ಪ್ರೀತಿಯು ಸಡಿಲಾಗುವುದು. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು. ಮಕ್ಕಳ ಭವಿಷ್ಯಕ್ಕೆ ಹಣವನ್ನು ಇಡುವಿರಿ.
ವೃಶ್ಚಿಕ ರಾಶಿ: ವಿವಾಹಕ್ಕೆ ಎಲ್ಲರಿಂದ ಮಾರ್ಗದರ್ಶನ ಪಡೆದು ಅಂತಿಮವಾಗಿ ಒಪ್ಪುವಿರಿ. ಆತುರದ ತೀರ್ಮಾನದಿಂದ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಎಲ್ಲಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಲಿದ್ದೀರಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಪಾಲುದಾರರ ಜೊತೆ ದೂರಪ್ರಯಾಣ ಹಾಗೂ ಮುಂದಿನ ಯೋಜನೆಯ ಬಗ್ಗೆ ಚರ್ಚೆ. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಸತ್ಯವನ್ನು ಮುಚ್ಚಿಟ್ಟರೂ ಯಾವುದೋ ಸಂದರ್ಭದಲ್ಲಿ ಸ್ಫೋಡವೇ ಆಗುವುದು. ಸಂಗಾತಿಯ ಮಾತುಗಳು ನಿಮ್ಮ ಅಭಿಮಾನಕ್ಕೆ ತೊಂದರೆ ಕೊಡಬಹುದು. ನೀವು ಅಪಮಾನವನ್ನೂ ನುಂಗಿಕೊಂಡು ಕಾರ್ಯದಲ್ಲಿ ಮಗ್ನರಾಗಬೇಕಾಗುವುದು. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು. ನಿರುದ್ಯೋಗದ ಭೀತಿ ಕಾಣಿಸುವುದು.
ಧನು ರಾಶಿ: ನಿಮಗೆ ಇಂದು ಬಂಧನದಿಂದ ಮುಕ್ತರಾದಂತಹ ಅನುಭವ ಸಿಗುವುದು. ವಿರೋಧಿಗಳು ನಿಮ್ಮನ್ನು ಯಾವುದಾದರೂ ಕೆಲಸದಲ್ಲಿ ಸಿಕ್ಕಿಸಬಹುದು. ನಂಬಿಕೆ ಬರುವಂತಹ ಮಾತುಗಳನ್ನಾಡಿ ಕೆಲಸವನ್ನು ಸಿದ್ಧಿಸಿಕೊಳ್ಳುವಿರಿ. ಕಾನೂನಿನ ಬಗ್ಗೆ ನಿಮಗೆ ಸರಿಯಾದ ಜ್ಞಾನವಿರಲಿ. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ನಿಮ್ಮ ವಿರೋಧಿಗಳ ಬಗ್ಗೆ ನೀವು ಯೋಚಿಸುವ ಅಗತ್ಯವಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ. ನಿಮ್ಮ ಮಾತಿಗೆ ಸಂಗಾತಿ ಸಿಟ್ಟಾಗುವರು. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ನಿಮ್ಮ ಮುಂದಿರುವ ಆಯ್ಕೆಯನ್ನು ನಿರ್ಧಿರಿಸಲಾಗದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಾಣಿಸಿಕೊಳ್ಳಬಹುದು.
ಮಕರ ರಾಶಿ: ದೂರ ಪ್ರಯಾಣದಲ್ಲಿ ಭೀತಿ ಎದುರಾಗಬಹುದು. ಕೆಲವು ಅನುಭವಿಗಳ ತಜ್ಞತೆಯನ್ನು ಬಳಿಸಿಕೊಳ್ಳಿ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ. ಭೂಮಿಯ ಮೇಲೆ ಹೂಡಿಕೆ ಮಾಡುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ಮಹಾತ್ಮರ ದರ್ಶನದಿಂದ ಮನಸ್ಸಿಗೆ ನೆಮ್ಮದಿ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿಗೆ ಚಟುವಟಿಕೆಗಳಲ್ಲಿ ಸಂತೋಷ ಕಾಣುವಿರಿ. ನಿಮಗೆ ಸಂಬಂಧಿಸಿದ ಕಾರ್ಯವನ್ನು ಮಾತ್ರ ಮಾಡಿ.
ಕುಂಭ ರಾಶಿ: ಸದ್ಯೋ ಭವಿಷ್ಯತ್ತು ನಿಮ್ಮ ಕಣ್ಣಿಗೆ ಕಟ್ಟಿದಂತೆ ಇರಬಹುದು. ಹಲವು ದಿನಗಳ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿ ಮುನ್ನಡೆಸುವಿರಿ. ವೇತನದ ವಿಚಾರದಲ್ಲಿ ಘರ್ಷಣೆಯಾದೀತು. ಪ್ರಯಾಣದಿಂದ ಆಯಾಸಗೊಂಡು ವಿಶ್ರಾಂತಿ ಪಡೆಯುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಕುಟುಂಬವನ್ನು ಸಮಾಧಾನವಾಗಿ ಇಟ್ಟುಕೊಂಡು ಮುನ್ನಡೆಸುವಿರಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನ್ನಾದರೂ ಮಾಡಿಕೊಂಡೀರ. ಇಂದು ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯನ್ನು ಹೆಚ್ಚು ಮಾಡುವಿರಿ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ಪರರಕಾರ್ಯಕ್ಕೆ ಸಹಾಯ ಮಾಡಲಿದ್ದೀರಿ.
ಮೀನ ರಾಶಿ: ನಿಮ್ಮ ಕಾರ್ಯವು ಫಲ ಕೊಡದೇ ಇರಬಹುದು. ಆದರೆ ಪ್ರಯತ್ನವನ್ನು ನಿಲ್ಲಿಸುವುದು ಬೇಡ. ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಿ ಉದ್ಯಮಕ್ಕೆ ಪೂರ್ಕವಾಗಲಿದೆ, ಸಾಹಿತಿಗಳಿಗೆ ಅವಕಾಶಗಳು ಸಿಕ್ಕಿದ್ದು ಅದನ್ನು ಉಪಯೋಗಿಸಿಕೊಳ್ಳುವಿರಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತಾಯಿಯ ಜೊತೆ ವಾಗ್ವಾದ ನಡೆಸುವಿರಿ. ಅನಂತರ ಅದಕ್ಕೆ ಬೇಸರಗೊಳ್ಳುವಿರಿ. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಉಪಕಾರಕ್ಕೆ ಕೃತಜ್ಞತೆಯಾದರೂ ಇರಲಿ. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು.