ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಶುಕ್ಲ / ಬ್ರಹ್ಮ, ಸೋಮವಾರ ವಾಗಿಂದ್ರಿಯದ ಹತೋಟಿ ಸಾಧನೆ, ಒಳ್ಳೆಯ ಮಾತುಗಳಿಂದ ಸಹಕಾರ, ಹಿರಿಯರ ಸೇವೆ ಇದು ಈ ದಿನದ ವಿಶೇಷ.

ಮಾರ್ಚ್ 03: ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಶುಕ್ಲ / ಬ್ರಹ್ಮ, ಕರಣ : ವಣಿಜ, ಸೂರ್ಯೋದಯ – 06 – 49 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:18 – 09:47, ಯಮಘಂಡ ಕಾಲ 11:16 – 12:45, ಗುಳಿಕ ಕಾಲ 14:13 – 15:42.
ಮೇಷ ರಾಶಿ: ಮಕ್ಕಳನ್ನು ಉತ್ತಮ ಶಿಕ್ಷಣದ ಕಡೆಗೆ ಬರುವಂತೆ ಬುದ್ಧಿವಾದ ಹೇಳಬೇಕಾದೀತು. ಯಾರ ನಡುವೆಯೂ ವಾಗ್ವಾದಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಮಿತ್ರರ ಸಹಕಾರವನ್ನು ನೆನಪಿಸಿಕೊಳ್ಳುವಿರಿ. ಪ್ರಮಾಣಿಕತೆಯನ್ನು ಹಣಕಾಸಿನ ವ್ಯವಹಾರವನ್ನು ಕೊಡಬಹುದು. ನೀವು ಯಾರ ಪರವಿರೋಧವೂ ಇಲ್ಲದೇ ತಟಸ್ಥರಾಗಿ ಇರುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಜವಾಬ್ದಾರಿಯನ್ನು ಸಡಿಲಮಾಡಿಕೊಂಡು ತಪ್ಪಿಗೆ ದಾರಿಮಾಡಿಕೊಡುವಿರಿ. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು.
ವೃಷಭ ರಾಶಿ: ಸ್ಥಿರಾಸ್ತಿಯ ಮೇಲೆ ಹೂಡಿಕೆ ಮಾಡಿ ಅದರ ಕಡೆಗೆ ಹೆಚ್ಚು ಚಿಂತೆ ಇರಲಿದೆ. ನಿಮ್ಮ ಕಾರ್ಯದ ಒತ್ತಡದಿಂದ ನಿಮ್ಮ ಕುಟುಂಬದ ಅಗತ್ಯಗಳನ್ನು ನಿರ್ಲಕ್ಷಿಸಬೇಡಿ. ಉದ್ಯೋಗದಲ್ಲಿ ಶ್ರಮವಿದ್ದರೂ ಯಶಸ್ಸು ನಿಮ್ಮದಾಗದು. ಕೆಲವು ಸನ್ನಿವೇಶವನ್ನು ನೀವಾಗಿಯೇ ಸೃಷ್ಟಿಸಿಕೊಳ್ಳುವಿರಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವಿರಿ. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ಧಾರ್ಮಿಕಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಇಂದಿನ ಅಗತ್ಯವೂ ಇದೆ. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಅಸಭ್ಯ ಮಾತುಗಳನ್ನು ಕಡಿಮೆ ಮಾಡಿ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು.
ಮಿಥುನ ರಾಶಿ: ಇಂದು ಕೆಲವು ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗುವುದು. ನೀರಿಗೆ ಬಿದ್ದಾದಮೇಲೆ ಈಜಿ ದಡ ಸೇರುವುದೊಂದೇ ಇರುವುದು. ನೀವು ಐಚ್ಛಿಕ ಫಲಿತಾಂಶವನ್ನು ಪಡೆಯಲು ಪ್ರಯತ್ನವು ಹೆಚ್ಚು ಬೇಕು. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ಕುಟುಂಬವೇ ನಿಮ್ಮ ಶಕ್ತಿ. ಸರಿಯಾದುದನ್ನು ಆಯ್ಕೆ ಮಾಡುವುದು ನಿಮ್ಮಿಂದಾಗದು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ವಿಚಾರಗಳೇ ನಿಮ್ಮ ಕಿವಿಗೆ ಬೀಳಬಹುದು.
ಕರ್ಕಾಟಕ ರಾಶಿ: ಹೊಸ ಉದ್ಯಮವನ್ನು ಆರಂಭಿಸುವ ಮೊದಲು ನಕಾರ ಹಾಗೂ ಸಕಾರಾತ್ಮಕವಾಗಿ ಆಲೋಚಿಸಿ. ಸ್ನೇಹಿತರ ಜೊತೆ ಬೆರೆಯಲು ಮನೆಯಲ್ಲಿ ಒಪ್ಪಿಗೆ ಸಿಗದಿರಬಹುದು. ಸುಳ್ಳನ್ನು ಹೇಳಿ ಸಿಕ್ಕಿಹಾಕಿಕೊಳ್ಳುವಿರಿ. ಹಣಕಾಸಿನ ಹಿನ್ನಡೆ ತಪ್ಪಿನ ಅರಿವಾಗುವುದು. ಸಾಧಿಸುವ ವಿಧಾನವವನ್ನು ಹೇಳಿಕೊಳ್ಳುವುದು ಬೇಡ. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಉದ್ಯಮವನ್ನು ಬಿಟ್ಟು ಬೇರೆಯ ಕಾರ್ಯವನ್ನು ಮಾಡಲು ಆಗದು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಪೆಟ್ಟಾಗುವ ಸಾಧ್ಯತೆ ಇದೆ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ನಿಂದನೆಯಾಗಬಹುದು. ಅವಿವಾಹಿತರಿಗೆ ವಿವಾಹದ ಬಗ್ಗೆ ಚಿಂತೆಯಾದೀತು.
ಸಿಂಹ ರಾಶಿ: ನೀವು ಎದುರಿಸುತ್ತಿರುವ ಮಾನಸಿಕ ಒತ್ತಡಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ವಿಶ್ರಾಂತಿ ಪಡೆಯಿರಿ. ವ್ಯವಹಾರದ ಲಾಭವನ್ನು ಹೆಚ್ಚಿಸುವ ಕುರಿತು ಸ್ನೇಹಿತರಿಂದ ಸಲಹೆ ಪಡೆಯಿರಿ. ಹಿತಶತ್ರುಗಳಿಂದ ನಿಮ್ಮ ವಿವಾಹವು ತಪ್ಪಬಹುದು. ಸ್ಥಗಿತಗೊಂಡಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ವಿರೋಧಿಗಳು ಸೋಲುತ್ತಾರೆ. ಪ್ರಯಾಣಕ್ಕೆ ತೊಂದರೆಯಾಗಬಹುದು. ತಾಳ್ಮೆ ಮತ್ತು ಸಂಯಮ ಮೇಲುಗೈ ಸಾಧಿಸುತ್ತದೆ. ಕಛೇರಿಯಿಂದ ನಿಮಗೆ ತಿಳಿಯಬೇಕಾದ ವಿಚಾರವು ತಿಳಿಯದೇಹೋಗಬಹುದು. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಮರಳಿಬಾರದ ಚಿಂತೆಯೂ ಇರುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಬೆನ್ನು ನೋವು ನಿಮ್ಮನ್ನು ಬಾಧಿಸೀತು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು.
ಕನ್ಯಾ ರಾಶಿ: ನೀವು ದಿನದ ಕಾರ್ಯದ ಯಾದಿಯನ್ನು ಮಾಡಿ ಅನಂತರ ಕಾರ್ಯವನ್ನು ಆರಂಭಿಸಿ. ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಮುಖ್ಯವಾದ ಕಾರ್ಯದ ಕಡೆ ಗಮನ ಕೊಡಬೇಕಾಗುವುದು. ಸ್ನೇಹಿತರು ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಏನೇ ಬಂದರೂ ಇರುವ ಸತ್ಯವನ್ನು ಹೇಳಲು ಇಂದು ನೀವು ಹಿಂಜರಿಯಲಾರಿರಿ. ತನ್ನಿಂದ ತನ್ನವರಿಗೆ ತೊಂದರೆಯಾಗುವುದೆಂಬ ಭಯವೂ ಕಾಡಬಹುದು. ಅಮೂಲ್ಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ಅಪರಿಚಿತರನ್ನು ನಂಬಿ ಅನಂತರ ಚಿಂತೆಗೆ ಬೀಳುವಿರಿ. ಪ್ರಯತ್ನಗಳಲ್ಲಿ ಸೋಮಾರಿತನ ಮತ್ತು ವಿಳಂಬ ಬೇಡ ಪ್ರಭಾವಿ ವ್ಯಕ್ತಿಗಳ ಸಹಾಯಕರಾಗಿ ಹೋಗುವ ಅವಕಾಶಗಳು ಸಿಗಬಹುದು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ಕಾಡಬಹುದು. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ.
ತುಲಾ ರಾಶಿ: ನಿಮಗೆ ಹಿಂದೆ ಮಾಡಿದ ಹೂಡಿಕೆಗಳು ಇಂದು ಪ್ರಯೋಜನಕ್ಕೆ ಬರಲಿದ್ದು, ಅದನ್ನು ಮತ್ತೆಲ್ಲಿಯಾದರೂ ಹಾಕುವ ಬಗ್ಗೆ ಯೋಜನೆ ತಯಾರಾಗಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ನಿಮ್ಮ ಭಯವೇ ಶಕ್ತಿಯನ್ನು ಬೇಕಾದ ಶಕ್ತಿಯನ್ನು ಕೊಡದೆ ಕುಗ್ಗಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಅಧಿಕವಾಗಿ ಕೊಡುವುದು ಒಳ್ಳೆಯದಲ್ಲ. ಕೋಪ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ನೀವು ಪ್ರೀತಿಪಾತ್ರರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರದ ಚಿಂತೆ ದೂರವಾಗಲಿದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹಾಸಿಗೆ ಇರುವಷ್ಟು ಕಾಲು ಚಾಚಿದರೆ ಸುಖ. ಆಪತ್ಕಾಲಕ್ಕೆ ಬೇಕಾದ ಹಣವನ್ನು ತೆಗೆದಿರಿಸುವಿರಿ. ಸ್ತ್ರೀಯರು ಆಭರಣಗಳನ್ನು ಜತನದಿಂದ ಇರಿಕೊಳ್ಳಿ. ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು.
ವೃಶ್ಚಿಕ ರಾಶಿ: ನೀವು ವಾಸ್ತವಕ್ಕೆ ಯೋಗ್ಯವಾದ ರೀತಿಯಲ್ಲಿ ನಿಮ್ಮ ಮಾತುಗಳನ್ನು ಆಡುವುದು ಮುಖ್ಯ. ಭಯವನ್ನು ದೂರಮಾಡಿಕೊಳ್ಳಲು ಬೇಕಾದ ಮನೋಭೂಮಿಕೆಯನ್ನು ತಯಾರು ಮಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಅಜಾಗರೂಕತೆ ಇರುವುದು. ನಿರುದ್ಯೋಗ ದೂರವಾಗುತ್ತದೆ. ವ್ಯಾಪಾರ ಪ್ರವಾಸ ಯಶಸ್ವಿಯಾಗಲಿದೆ. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಯಾರಿಂದ ಬಂದರೂ ಉಡುಗೊರೆಗಳನ್ನು ಸ್ವೀಕರಿಸುವಿರಿ. ಅಪಾಯ ಸೂಚನೆಯನ್ನು ಧಿಕ್ಕರಿಸಲೊಲ್ಲಿರಿ. ಗಳನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ನಿಮಗೆ ಸವಾಲಿನ ಸವಾಲಿನ ಸಂಗತಿಯಾಗಿದೆ. ಸಂಗಾತಿಯ ಮಾತಿನ ಬಗ್ಗೆ ನಿಮಗೆ ಪೂರ್ಣ ನಂಬಿಕೆ ಇರದು. ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗಲಿದೆ.
ಧನು ರಾಶಿ: ಇಂದು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ತೀರ್ಮಾನದಂತೆ ಮುಂದಿನ ಹೆಜ್ಜೆಯನ್ನು ಇಡುವಿರಿ. ಆತ್ಮವಿಶ್ವಾಸದ ಕೊರತೆಯಿಂದ ಕಾರ್ಯಗಳು ಸಂಕೀರ್ಣವಾಗುವುದು. ನಿಮ್ಮ ಪ್ರಗತಿಗೆ ಅಡ್ಡಿಯಾಗಲು ನಿಮ್ಮ ದ್ವಂದ್ವ ಮನಸ್ಸು ಕಾರಣವಾಗಬಹುದು. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸ ಇರುತ್ತದೆ. ಪೂರ್ವ ಕರ್ಮಗಳು ಫಲ ನೀಡುವುದು ನಿಮ್ಮ ಅನುಭವಕ್ಕೆ ಬಂದರೂ ಒಪ್ಪಿಕೊಳ್ಳಲಾರಿರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ವ್ಯಾಪಾರದಲ್ಲಿ ಅಪೇಕ್ಷಿತ ಲಾಭ ದೊರೆಯಲಿದೆ. ಇಂದು ನಿಮ್ಮ ಕೆಲಸಕ್ಕೆ ಇತರರ ಹಸ್ತಕ್ಷೇಪವು ಇರಲಿದ್ದು ಅದನ್ನು ಸಹಿಸುವುದು ಆಗದು. ನಿಮ್ಮ ಸ್ವಾಭಿಮಾನವನ್ನು ಎಲ್ಲ ಕಡೆಗಳಲ್ಲಿ ಪ್ರದರ್ಶಿಸಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಣಕಾಸಿನ ವ್ಯವಹಾರದ ಪ್ರತಿನಿಧಿಗಳು ಅಂದುಕೊಂಡ ಕೆಲಸವನ್ನು ಸಾಧಿಸಿಕೊಳ್ಳುವರು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಇರಲಿದೆ.
ಮಕರ ರಾಶಿ: ಇಂದು ನಿಮ್ಮ ಅನುಮಾನದ ಮನಸ್ಸನ್ನು ಕಡಿಮೆಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ಮನಸ್ಸು ಅತಿಯಾದ ಚಾಂಚಲ್ಯವನ್ನು ಇಟ್ಟುಕೊಳ್ಳುವುರು. ಉದ್ಯಮಿಗಳು ಇಂದು ಆಪ್ತ ಸ್ನೇಹಿತರ ಸಹಾಯದಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ಬಹಳ ದಿನಗಳ ಅನಂತರ ಅತಿಥಿಗಳ ಆಗಮನ ಇರುತ್ತದೆ. ನೀವು ಯಾರಿಂದಲಾದರೂ ಉತ್ಸಾಹ ಬರುವ ಮಾಹಿತಿಯನ್ನು ಪಡೆಯುವಿರಿ. ಸ್ವಾಭಿಮಾನ ಹಾಗೇ ಉಳಿಯುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಮಕ್ಕಳ ಪ್ರಗತಿಯಲ್ಲಿ ಸಂತೋಷಪಡಲು ಸಾಧ್ಯ. ನಿಮ್ಮ ತೊಂದರೆಗಳಿಗೆ ಬೇರೆ ರೀತಿಯ ಪರಿಹಾರಕ್ಕೆ ಕಂಡುಕೊಳ್ಳುವಿರಿ. ನಿಮ್ಮ ದ್ವಂದ್ವ ಯೋಚನೆಯಿಂದ ಇಂದು ನಿಮ್ಮ ಕೆಲಸಗಳು ಹಾದಿ ತಪ್ಪಬಹುದು. ಕಾರ್ಯದ ಕಾರಣ ಸಂಭ್ರಮವನ್ನು ಕಳೆದುಕೊಳ್ಳಬೇಕಾಗುವುದು. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು.
ಕುಂಭ ರಾಶಿ: ನಿಮ್ಮ ಸ್ವಾಸ್ಥ್ಯ, ಶುಚಿತ್ವದ ಬಗ್ಗೆ ಹೆಚ್ಚು ಆದ್ಯತೆ ಇರಲಿ. ನಿಮ್ಮ ಆದಾಯದ ನಿಜವಾದ ಸತ್ಯವು ಇಂದು ಗೊತ್ತಾಗುವುದು. ನಿಮ್ಮ ಪ್ರೀತಿಪಾತ್ರರ ಜೊತೆ ಮಧುರವಾದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಶತ್ರುಗಳು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವರು. ಕಳೆದುಕೊಂಡ ವಸ್ತುವಿನ ಚಿಂತೆಯನ್ನು ನೀವು ಬಿಡುವುದು ಕಷ್ಟವಾದೀತು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ವ್ಯಾಪಾರದ ನಿಮಿತ್ತ ಹೊರಗೆ ಹೋಗಬೇಕಾಗಬಹುದು. ಮಾತಿನಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಿ. ಆರಾಮಾಗಿ ಹಣ ಗಳಿಸಲಾಗುವುದು. ಅನಗತ್ಯ ಖರ್ಚುಗಳು ಒಂದಾದಮೇಲೆ ಒಂದು ಬರಲಿದ್ದು ಕಷ್ಟವಾದೀತು. ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ಔಷಧಗಳ ವ್ಯತ್ಯಾಸದಿಂದ ಮತ್ತೇನಾದರೂ ಆದೀತು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸಮಯವು ಎಷ್ಟೇ ಇದ್ದರೂ ಕೆಲಸವನ್ನು ಮಾಡಿಕೊಳ್ಳಲಾಗದು.
ಮೀನ ರಾಶಿ: ನಿಮಗೆ ಸಂತರಿಗೆ ಸಮನಾದ ವ್ಯಕ್ತಿಗಳ ಸಹವಾಸ ಸಿಗಲಿದೆ. ಇದರಿಂದ ನಿಮ್ಮ ಮನಸ್ಸು ಸಕಾರಾತ್ಮಕವಾಗಿ ಬದಲಾವಣೆಯನ್ನು ಪಡೆಯುವುದು. ದಿನದಲ್ಲಿ ಬರುವ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಅನಾವಶ್ಯಕ ಮಾತುಗಳಿಂದ ಮೌನವಾಗಿರುವುದು ತೊಂದರೆಗಳಿಂದ ದೂರ ಉಳಿಯಬಹುದು. ಪ್ರಣಯದಲ್ಲಿ ಇಂದು ಸಮಯ ಕಳೆಯಲಾಗುವುದು. ನಿಮ್ಮ ಶ್ರಮಕ್ಕೆ ಫಲವನ್ನು ಇಂದೇ ನಿರೀಕ್ಷಿಸಬೇಡಿ. ಕಾರ್ಯಯಿಂದ ಸಂತಸವಿರುತ್ತದೆ. ವ್ಯಾಪಾರದಲ್ಲಿ ಯಾವುದೇ ಉದ್ವೇಗವಿಲ್ಲದೇ ಚೆನ್ನಾಗಿ ನಡೆಯುತ್ತದೆ. ಕಾರ್ಯದ ಒತ್ತಡದಿಂದ ನೀವು ವಿಶ್ರಾಂತಿಯನ್ನು ಪಡೆಯುವುದು ಕಷ್ಟವಾದೀತು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಇಂದಿನ ಬಹುಪಾಲು ಸಮಯವನ್ನು ಅನ್ಯ ಚಿಂತನೆಯಲ್ಲಿ ಕಳೆಯುವಿರಿ. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಮುನ್ನುಗ್ಗಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು.