Horoscope Today 04 August: ಇಂದು ಈ ರಾಶಿಯವರಿಗೆ ಮತ್ತೊಂದು ಪ್ರೇಮವಾಗುವ ಸಾಧ್ಯತೆ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಕ್ಲ, ಕರಣ : ತೈತಿಲ, ಸೂರ್ಯೋದಯ – 06 – 17 am, ಸೂರ್ಯಾಸ್ತ – 06 : 59 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 07:53 – 09:28 ಗುಳಿಕ ಕಾಲ 14:14 – 15:49 ಯಮಗಂಡ ಕಾಲ 11:04 – 12:39

ಮೇಷ ರಾಶಿ: ತಂದೆಯ ಮಾತುಗಳು ಸತ್ಯವೆನಿಸುವುದು. ನಿಮ್ಮ ವೈವಾಹಿಕ ಜೀವನಕ್ಕೆ ಯಾರಿಂದಲೂ ಪೂರ್ಣ ಒಪ್ಪಿಗೆ ಸಿಗದು. ಇಷ್ಟು ದಿನ ನಿಮ್ಮದೂ ಎಂದ ಕೊಂಡ ವಸ್ತುವು ಇನ್ನೊಬ್ಬರ ಸ್ವತ್ತಾಗುವ ಸಾಧ್ಯತೆ ಇದೆ. ನೀವು ಮಾಡಬೇಕೆಂದುಕೊಂಡ ಕೆಲಸವು ವಿಪರೀತ ಪರಿಣಾಮವನ್ನು ಬೀರೀತು. ಎಲ್ಲದಕ್ಕೂ ಅಪಾರ್ಥ ಮಾಡಿಕೊಳ್ಳುತ್ತಾ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಸಾಲಬಾಧೆಯು ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ದುರಾಸೆಯಿಂದ ಕೊಡಬೇಕಾದ ಹಣವನ್ನು ಪೂರ್ತಿಯಾಗಿ ಕೊಡಲಾರಿರಿ. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ವಿಚಾರದಲ್ಲಿ ಜೊತೆಯಾಗಬಹುದು. ನಿಮ್ಮ ಅನುಭವವು ನಿಮಗೆ ನೆಮ್ಮದಿಯನ್ನೂ ಕಾರ್ಯದಲ್ಲಿ ಯಶಸ್ಸನ್ನೂ ಕೊಡುವುದು. ಉದ್ವಿಗ್ನಕ್ಕೆ ಸಿಲುಕದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆ ಇರುವುದು. ವ್ಯಸನಕ್ಕೆ ತುತ್ತಾಗಿ ಆರೋಗ್ಯವನ್ನು ಕಳೆದುಕೊಳ್ಳುವಿರಿ. ಭೂಮಿಯ ಉತ್ಪನ್ನದಿಂದ ಕೃಷಿಯ ಉತ್ಪಾದನೆಯಿಂದ ಲಾಭ ಸಿಗಲಿದೆ. ದೂರುವವರ ಬಗ್ಗೆ ಗಮನ ಮಾತ್ರ ಇರಲಿ.

ಮಿಥುನ ರಾಶಿ: ದಾಂಪತ್ಯದ ಗುಟ್ಟನ್ನು ಹೊರತರಲು ಸ್ನೇಹಿತರು ಪ್ರಯತ್ನಿಸುವರು. ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ಆತುರದ ತೀರ್ಮಾನ ಹಾಗೂ ಒತ್ತಡಕ್ಕೆ ಸಿಲುಕದೇ ಜಾಗರೂಕರಾಗುರಿ. ಇಂದು ನಿಮ್ಮ ಸಾಲವು ಮರಳಿಬರಹುದು. ಸ್ನೇಹಿತರು ತಮ್ಮ ಜೊತೆ ಕರೆದುಕೊಂಡು ಹೋಗಬಹುದು. ಹಣವು ವ್ಯರ್ಥವಾಗುವದು ನಿಮ್ಮದಾಗಿರುತ್ತದೆ. ನಿಮ್ಮ ವಿರುದ್ಧ ಸಲ್ಲದ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲವನ್ನೂ ನೀವು ಸಮರ್ಥಿಸಿಕೊಳ್ಳುವಿರಿ. ದೈನಂದಿನ ಕೆಲಸಗಳು ನಿಮಗೆ ಭಾರವೆನಿಸಬಹುದು.‌ ಎಲ್ಲದಕ್ಕೂ ಸಿದ್ಧನಿದ್ದರೆ ಸಮಸ್ಯೆಗಳು ಏನೂ ಮಾಡಲಾರವು. ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ರೀತಿ ಬೇರೆಯಾದೀತು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ನೂತನ ಗೃಹದ ಖರೀದಿಯಲ್ಲಿ ಆಸಕ್ತಿ ಇರುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ. ಇನ್ನೊಬ್ಬರ ಸಂಕಟಕ್ಕೆ ಪಶ್ಚಾತ್ತಾಪ ಪಡುವಿರಿ.

ಮಿಥುನ ರಾಶಿ: ನಿಮ್ಮನ್ನೇ ನೀವು ವಂಚಿಸಿಕೊಂಡರೆ ಯಾರು ಏನು ಮಾಡಬಹುದು. ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ನಿಮ್ಮವರೇ ಆದರೂ ಅವರ ಜೊತೆ ಹೆಚ್ಚಿನ ವ್ಯವಹಾರವು ಬೇಡಿ. ಹಣದ ವಿಚಾರವು ಯಾರನ್ನೂ ಬಿಡದು. ಮಕ್ಕಳ ಜೊತೆ ವೈಮನಸ್ಯ ಬರಬಹುದು. ಒಳ್ಳೆಯ ವ್ಯಕ್ತಿಗಳ ಜೊತೆ ಕೆಲವು ಸಮಯ ಕಳೆದುಹೋಗುವುದು. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಸಿಗಲಿವೆ. ಪ್ರಯಾಣ ಸುಖಕರವಿದ್ದರೂ ಖರ್ಚು ಅಧಿಕವಾಗುವುದು. ಹಠದ ಸ್ವಭಾವವನ್ನು ಕಡಿಮೆ‌ ಮಾಡಿಕೊಳ್ಳಬೇಕಾಗಬಹುದು. ಇನ್ನೊಬ್ಬರ ರಹಸ್ಯ ವಿಚಾರಗಳನ್ನು ನೀವು ಕೇಳಲು ಆಸಕ್ತರಾಗುವಿರಿ. ಔಷಧದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ.

ಕರ್ಕಾಟಕ ರಾಶಿ: ನಿರ್ದಿಷ್ಟವಾದ ಕೆಲಸಗಳಿಲ್ಲದೇ ಎಲ್ಲಿಗೂ ಹೋಗುವುದು ಬೇಡ. ಜನರು ತಪ್ಪು ತಿಳಿಯಬಹುದು. ನಿಮ್ಮ ಉದ್ಯಮಕ್ಕೆ ಯಾರಾದರೂ ಬೆನ್ನೆಲುಬಾಗಿ ಬರಬಹುದು. ಯಾರ ಬಗ್ಗೆಯೂ ಗೊತ್ತಿಲ್ಲದೇ ಮಾತನಾಡುವುದು ಬೇಡ. ನಿಮಗೆ ಅನುರೂಪದ ಸಂಬಂಧ ಹುಡುಕಲು ತಂದೆಯ ಓಡಾಟ ನಿಮಗೆ ಬೇಸರ ತರಿಸುವುದು. ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸಲು ಕಷ್ಟವಾದರೂ ಅನಿವಾರ್ಯವಾಗಿ ಬಿಡಬೇಕಾದೀತು.‌ ಮನೆಯ ಕೆಲಸದಲ್ಲಿ ನೀವು ಇಂದು ಮಗ್ನರಾಗಿರುವಿರಿ. ಆತ್ಮವಿಶ್ವಾಸವು ಪೂರ್ತಿಯಾಗಿ ನಿಮ್ಮನ್ನು ಆವರಿಸಿಲ್ಲ. ಮಕ್ಕಳ ಆರೋಗ್ಯದ ಮೇಲೆ ಗಮನವಿರುವುದು ಮುಖ್ಯ. ಅಸ್ಪಷ್ಟವಾದ ಯೋಚನೆಗಳು ನಿಮಗೆ ಕಿರಿಕಿರಿ ಉಂಟುಮಾಡಿಯಾವು. ಸಾಮಾಜಿಕ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅದೇ ಉತ್ತಮವಾದುದೂ ಕೂಡ. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ. ಹಗುರವಾದಷ್ಟು ಎತ್ತರಕ್ಕೆ ಏರಬಹುದು.

ಸಿಂಹ ರಾಶಿ:
ನಿಮ್ಮ ಹೊಸ ಯೋಜನೆಗೆ ಸಾಲರೂಪದ ಹಣ ಸಿಗಲಿದ್ದು ನಿಜವಾದ ಜವಾಬ್ದಾರಿ ಆರಂಭವಾಗಲಿದೆ. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ನಿಮ್ಮ ಗುರಿಗಳು ಸ್ಪಷ್ಟವಾಗಿ ಇದ್ದರೂ ಇನ್ನೊಬ್ಬರ ಪ್ರೋತ್ಸಾಹವನ್ನು ನೀವು ಬಯಸುವಿರಿ. ಪ್ರಯಾಣವು‌ ಇಂದು ನಿಮಗೆ ಇಷ್ಟವಾಗದೇ ಹೋಗುವುದು. ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿದೆ. ನಕಾರಾತ್ಮಕ ಆಲೋಚನೆಗಳು ಸಂಗಾತಿಯ ಕಡೆಯಿಂದ ನಿಮಗೆ ಬರಬಹುದು. ನೀವು ಇಂದು ಹೆಚ್ಚು ಕೆಲಸವನ್ನೂ ಕಡಿಮೆ ಮಾತುಗಳನ್ನೂ ಆಡುವುದು ಮುಖ್ಯ. ಪ್ರಮುಖ ಜನರ ಭೇಟಿಯಿಂದ ಉದ್ಯೋಗಕ್ಕೆ ಹೊಸ ಬಲವೂ ಬರಲಿದೆ. ಕುಟುಂಬದ ಹಿರಿಯರು ನಿಮ್ಮ ಜೊತೆ ಸಮಯವನ್ನು ಕಳೆಯಲು ಇಷ್ಟಪಡುವರು. ಕ್ರೀಡಾಸಕ್ತರಿಗೆ ಶುಭ ಸಮಾಚಾರ ಹಾಗೂ ಅವಕಾಶಗಳ ರಹದಾರಿ ತೆರೆಯುವುದು. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಂಡು ಅವರಿಂದ ದೂರವೂ ಆಗಬಹುದು. ವಾಹನ ಖರೀದಿಗೆ ನಿಮಗೆ ಸಮಯವಿದೆ. ಆತುರ ಬೇಡ. ಅಸಹಾಯಕರಾಗಿ ಕುಳಿತು ಮತ್ತಷ್ಟು ಹತಾಶರಾಗುವ ಅವಶ್ಯಕತೆ ಇಲ್ಲ.

ಕನ್ಯಾ ರಾಶಿ: ನೀವು ಮಾಡಿದ ದಾನವು ಅಪಪ್ರಚಾರ ಪಡೆಯುವುದು. ಹೊಸ ವಿದ್ಯುತ್ ಉಪಕರಣಗಳು ನಿಮಗೆ ಸಂತೋಷವನ್ನು ಕೊಡುತ್ತವೆ. ಇನ್ನೊಬ್ಬರಿಗೆ ಬಗ್ಗೆ ಮಾತನಾಡುವಾಗ ಪೂರ್ವಾಪರ ಆಲೋಚನೆ ಬೇಕು. ಜೀವನದ ಗುರಿಯು ಇನ್ನಷ್ಟು ದೂರವಾಗುವುದು. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಹೊರ ಹಾಕಿಯಾರು. ಸಂಗಾತಿಯ ನೋವಿಗೆ ಸ್ಪಂದಿಸಿವುದು ಕಷ್ಟವಾದೀತು. ವ್ಯಾಪಾರವು ಇಂದು ಚೆನ್ನಾಗಿ ಆಗಲಿದೆ. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡಿಕೊಳ್ಳುವುದು ಉತ್ತಮ. ಉದ್ವೇಗದಿಂದ ನೀವು ಯಾರ ಬಳಿಯೂ ಮಾತನಾಡಲಾರಿರಿ. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವಿರಿ. ಆದರೆ ಪಾಲುದಾರಿಕೆಯನ್ನು ಮಾಡುವಾಗ ಹಲವು ಬಾರಿ ಯೋಚಿಸಿ. ರಮಣೀಯ ಸ್ಥಳಕ್ಕೆ ನೀವು ಹೋಗಲಿದ್ದೀರಿ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದೇಶದಲ್ಲಿ ಉನ್ನತ ಅಭ್ಯಾಸಕ್ಕೆ ಅವಕಾಶ ಸಿಗುವುದು. ಉದ್ಯೋಗವು ನಿಮ್ಮನ್ನು ಪ್ರಯಾಣ ಮಾಡಿಸುವುದು.

ತುಲಾ ರಾಶಿ:
ಪರಿಸ್ಥಿತಿಗೆ ತಕ್ಕಂತೆ ಮಾತನಾಡುವುದನ್ನು ಚೆನ್ನಾಗಿ ಅಭ್ಯಾಸ ಮಾಡುವಿರಿ. ಪದಾಧಿಕಾರವು ತಪ್ಪುವ ಸಾಧ್ಯತೆ ಇದೆ. ಇಂದು ನೀವು ಬೆಟ್ಟವನ್ನೇ ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಖಂಡಿತ ಮಾಡಬೇಡಿ. ಅಪರಿಚಿತ ವಿಷಯಕ್ಕೆ ಮೌನವಾಗಿ ಇರುವಿರಿ. ನಿಮಗೆ ಆಗಬೇಕಾದ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಆಗದೇ ಕೋಪ ಬರುವುದು. ಸ್ನೇಹಿತರು ಸರಿಯಾಗಿ ಪ್ರತಿಕ್ರಯಿಸಿಲ್ಲ ಎಂಬ ಕಾರಣಕ್ಕಾಗಿ ನೀವು ಬೇಸರಗೊಳ್ಳುವಿರಿ. ಆರ್ಥಿಕ ವಿಚಾರಕ್ಕೆ ಅಪವಾದವು ಬರುವ ಸಾಧ್ಯತೆ ಇದೆ. ಆಪ್ತರಿಗೆ ಏನನ್ನಾದರೂ ಕೊಡುವಿರಿ. ನೀವು ಇಂದು ಬದಲಾಗಲು ಯೋಚಿಸುತ್ತಿದ್ದರೆ ನಿಮ್ಮವರು ಅದನ್ನು ಬಿಟ್ಟುಕೊಡರು. ವಿದ್ಯಾರ್ಥಿಗಳು ಓದಿನ‌ ಕಡೆಗೆ ಗಮನ ಕೊಡಲು ಕಷ್ಟವಾದೀತು. ಭೂಮಿಯ ವ್ಯವಹಾರದಲ್ಲಿ ಆತುರ ಬೇಡ. ನಿಮ್ಮ ವಿವಾಹವು ದೈವದ ಇಚ್ಛೆಯಂತೆ ಆಗಿದ್ದು ಅದನ್ನು ನಂಬಿ ನಡೆಯಿರಿ. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಪ್ರತ್ಯೇಕವಾಗಿ ಕಂಡರೂ ಯಾವುದೇ ನಿರ್ಧಾರಕ್ಕೆ ಬರುವುದು ಬೇಡ.

ವೃಶ್ಚಿಕ ರಾಶಿ: ನೀವೇ ಯಶಸ್ಸಿನ ಹಿಂದೆ ಬಲವಾಗಿ ಇದ್ದರೂ ಯಾರೂ ಹೆಸರನ್ನು ಹೇಳರು. ದುಸ್ಸಾಹಸಗಳು ನಿಮ್ಮ ಧೈರ್ಯವನ್ನು ಕೆಡಿಸಬಹುದು. ಅನ್ಯ ಕಾರ್ಯಗಳಿಂದ ನಿಮ್ಮ ಸಮಯವು ವ್ಯರ್ಥವಾಗಿ ನಿಮ್ಮ ಕೆಲಸಕ್ಕೆ ಸಮಯದ ಅಭಾವವಾದೀತು. ನಿಮ್ಮ ತಪ್ಪಿಗೆ ತಂಡವು ದಂಡ ತೆರಬೇಕಾದೀತು. ಕಲಾವಿದರಿಗೆ ಅದರಲ್ಲಿಯೂ ನಟರಿಗೆ ಹೆಚ್ಚಿನ ಆದ್ಯತೆ ಸಿಗುವುದು. ಇಂದು ನೀವು ಮಾತು ಕಡಿಮೆ ಮಾಡಿದಷ್ಟೂ ನಿಮಗೆ ಅನುಕೂಲವಿದೆ. ಅವಿವಾಹಿತರು ವಿವಾಹಕ್ಕೆ ಮಾಂಗಲ್ಯ ಭಾಗ್ಯ ಬರಲಿದೆ. ಆಯ ಕಟ್ಟಿನ ಸ್ಥಳದಲ್ಲಿರುವವರಿಗೆ ತೊಂದರೆ, ಒತ್ತಡ. ವ್ಯಾಪಾರವು ಅಧಿಕ ಲಾಭವನ್ನು ಗಳಿಸಬಹುದು. ಸಮಯಕ್ಕೆ ಅನುಸಾರವಾಗಿ ನೀವು ಕೆಲಸಗಳನ್ನು ಮಾಡಿ. ಆಪದ್ಧನವನ್ನು ಕೂಡಿಡುವಿರಿ. ವೃತ್ತಿಯನ್ನು ನೀವು ಇಷ್ಟಪಡುವಿರಿ. ಆಹಾರವನ್ನು ಕೇಳಿ ಬಂದವರಿಗೆ ಕಿಂಚಿತ್ತಾದರೂ ದಾನ ಮಾಡುವಿರಿ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಸೇವಾ ಮನೋಭಾವದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಅಧಿಕಾರಿಗಳಿಂದ ಅಪಮಾನವೂ ಆದೀತು.

ಧನು ರಾಶಿ: ಬಂಧುಗಳ ಇಂಗಿತವು ನಿಮಗೆ ಬೇಸರ ತರಿಸುವುದು. ದುರಭ್ಯಾಸವಿಲ್ಲದೇ ಇರುವುದೇ ದೊಡ್ಡ ಯೋಗ್ಯತೆ. ಅವರನ್ನು ಕಳೆದುಕೊಳ್ಳುವುದು ಬೇಡ. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಎಲ್ಲರ ಜೊತೆ ಬೆರೆಯುವ ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋದೀತು. ನಿಮಗೆ ಬೇಕಾದುದನ್ನು ಮನೆಯಲ್ಲಿ ಮಾಡಿಕೊಂಡು ತಿನ್ನುವಿರಿ. ಕಷ್ಟವೋ ಸುಖವೋ ಹೊತ್ತ ಜವಾಬ್ದಾರಿಗೆ ನ್ಯಾಯವನ್ನು ಕೊಡಬೇಕು. ನಿಮ್ಮ ಕೆಲಸವನ್ನು ನೀವೇ ಮಾಡಲು ಇಷ್ಟಪಡುವಿರಿ. ನೇರವಾದ ಮಾತು ಕೆಲವರಿಗೆ ಅಸಹ್ಯವಾದೀತು. ನಿಮ್ಮ ನುಡಿಗಳ ಮೇಲೆ ನಿಗಾ ಇರಲಿ. ಅಪರೂಪದ ಬಂಧುಗಳನ್ನು ಭೇಟಿಯಾಗುವಿರಿ. ಅಭಿನಯಾದಿ ಕಲಾವಿದರಿಗೆ ಅನುಕೂಲಕರ ಸಂದರ್ಭಗಳು ಎದುರಾಗುವುವು. ನಿಮ್ಮನ್ನು ಕೆಲವರ ಮಾತು ಕೆರಳಿಸೀತು. ತಾಳ್ಮೆ ಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ಸಪ್ಪೆ ಎನಿಸುವಂತೆ ಮಾತನಾಡಬೇಡಿ.

ಮಕರ ರಾಶಿ: ನಿಮ್ಮ ವ್ಯಾಪಾರ ವಹಿವಾಟನ್ನು ತಡವಾಗಿ ಆರಂಭಿಸಿ ಕೆಲವು ನಷ್ಟವನ್ನು ಮಾಡಿಕೊಳ್ಳುವಿರಿ. ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ನಿಮ್ಮ ಪ್ರಯಾಣವನ್ನು ನಿಲ್ಲಿಸುವುದು ಬೇಡ. ಸ್ನೇಹಿತರಿಂದ ನೀವು ದೂರವಿರುವ ಯೋಚನೆ ಮಾಡುವಿರಿ. ವಿವಾಹ ಸಮಾರಂಭಕ್ಕೆ ಹೋಗಿಬರುವಿರಿ. ನಿಮಗೆ ಬೆಂಬಲವನ್ನು ಕುಟುಂಬದವರು ಕೊಡುವರು. ಬದ್ಧತೆಗೆ ಬೆಲೆ ಕೊಡಬೇಕಾಗುವುದು. ವ್ಯವಹಾರವನ್ನು ಶುದ್ಧವಾಗಿ ಮಾಡುವುದು ನಿಮಗೆ ಬಹಳ ಪ್ರಿಯವಾದ ಸಂಗತಿಯಾಗಲಿದೆ. ನಿಮ್ಮ ವ್ಯವಹಾರವನ್ನು ಪ್ರಶಂಸಿಸುವರು. ಅನಗತ್ಯ ಓಡಾಟದಿಂದ ನೀವು ಸಿಟ್ಟಗೊಳ್ಳಬಹುದು. ಅಕಸ್ಮಾತ್ ಬಂದ ಕೆಲವು ಘಟನೆಗೆ ಪ್ರತಿಕ್ರಿಯೆ ಕಷ್ಟವಾಗಬಹುದು. ಯಾರೋ‌ ಮಾಡಿದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾದೀತು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ.

ಕುಂಭ ರಾಶಿ: ಉದ್ಯೋಗಸ್ಥರಿಗೆ ಬರಬೇಕಾದ ಹಳೆಯ ಹಣ ನಿಮ್ಮ ಕೈ ಸೇರುವುದು. ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಏನು ಮಾಡಬೇಕು ಎಂಬ ಭ್ರಾಂತಿಯೂ ಕಾಡುವುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅನಾರೋಗ್ಯದ ಕಾರಣಕ್ಕೆ ಉತ್ಸಾಹ ಭಂಗವಾಗಲಿದೆ. ಜೀವನೋಪಾಯಕ್ಕೆ ಯಾವುದಾದರೊಂದು ವೃತ್ತಿಯನ್ನು ಆಶ್ರಯಿಸುವುದು ಉತ್ತಮ. ವಿವಾದಗಳು ಶಾಂತವಾಗಿವಂತೆ ನೋಡಿಕೊಳ್ಳಿ. ಇಲ್ಲವಾದರೆ ಅದರ ಪರಿಣಾಮವು ಭಯಂಕರವಾದೀತು. ನಿಮ್ಮ ಸಂಪತ್ತನ್ನು ತಿಳಿಸುವುದು ಬೇಡ. ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ಸಂಪರ್ಕ ಮಾಡಿಯಾರು. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಹಳೆಯ ಗೆಳತನವು ಮತ್ತೆ ಒಂದಾಗುವುದು.

ಮೀನ ರಾಶಿ: ಹೆಚ್ಚಿನ ಹೂಡಿಕೆಗೆ ಮನಸ್ಸು ಮಾಡಿ ಅನಂತರ ಮನಸ್ಸು ಬದಲಾಗುವುದು. ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಸಹನೆಯನ್ನೇ ನಿಮ್ಮ ಉತ್ತಮ ಆಯುಧವಾಗಿ ಮಾಡಿಕೊಳ್ಳಿ. ಎಲ್ಲವನ್ನೂ ಎದುರಿಸಲು ಸಾಧ್ಯವಾಗುವುದು. ವಿಶೇಷ ಸಮಾರಂಭಕ್ಕೆ ಆಹ್ವಾನ ಬರಬಹುದು. ಅನ್ಯರ ನೋವಿಗೆ ಅಲ್ಪ ಸ್ಪಂದನೆ ಇರುವುದು. ನೀವು ನಿಮ್ಮ ಘನತೆಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ. ಸಮಯಕ್ಕೆ ಸರಿಯಾಗಿ ನಿಮಗೆ ಅವಶ್ಯಕತೆ ಇರುವುದು ಬಂದು ಒದಗಬಹುದು. ಏಕಾಂತದಿಂದ ನಿಮಗೆ ನೆಮ್ಮದಿಯು ಸಿಗಬಹುದು. ಆಪ್ತರನ್ನು ನೀವು ಭೇಟಿಯಾಗಲಿದ್ದೀರಿ. ಗುಟ್ಟನ್ನು ಸಮಯ ನೋಡಿ ಹೇಳಿ. ನಿಮಗೆ ಗೊತ್ತಿಲ್ಲದೇ ಮೋಜಿನಲ್ಲಿ ಸೇರಿ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಬೇಕಾದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಿ. ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ‌ ಕಾಲವನ್ನು ಕಳೆಯುವಿರಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು.

Views: 45

Leave a Reply

Your email address will not be published. Required fields are marked *