ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ಸಪ್ತಮೀ ತಿಥಿ, ಭಾನುವಾರ ಸಮಯದ ಹೊಂದಾಣಿಕೆ, ಸಮಾರಂಭದಲ್ಲಿ ಭಾಗಿ, ಅತಿಥಿಗಳ ಆಗಮನ, ಭೂಮಿಯ ಅಭಿವೃದ್ಧಿ ಇವೆಲ್ಲ ಇರಲಿದೆ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಸಪ್ತಮೀ ನಿತ್ಯನಕ್ಷತ್ರ : ಪುಷ್ಯಾ, ಯೋಗ : ಶೂಲಿ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:14 – 18:49, ಯಮಘಂಡ ಕಾಲ 12:30 – 14:04, ಗುಳಿಕ ಕಾಲ 15:39 – 17:14
ಮೇಷ ರಾಶಿ: ಇರುವುದನ್ನು ತೋರಿಸಿಕೊಳ್ಳುವಿರಿ, ಅದೇ ಮುಳ್ಳಾಗಬಹುದು. ಕಷ್ಟಗಳ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇರುವುದು. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ನೀವು ಮಾಡುವ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೃಷಿ ಕಾರ್ಯದಲ್ಲಿ ನೀವು ತೊಡಗುವಿರಿ. ಇದು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವ ಸಮಯ ಕೂಡ. ಇದರಿಂದ ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವರ ನೋವು ಮತ್ತು ನಲಿವಿನಲ್ಲೂ ಭಾಗಿಯಾಗಿ. ಅಚ್ಚರಿಯ ಸುದ್ದಿಗಳು ನಿಮಗಾಗಿ ಇರಲಿವೆ. ತಂದೆಯ ಕಾರಣಕ್ಕಾಗಿ ಧನವನ್ನು ವ್ಯಯಿಸುವಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ಆಪ್ತಸಮಾಲೋಚನೆ ನಡೆಯಲಿದೆ. ಉದ್ಯೋಗದಲ್ಲಿ ಮೇಲ್ಮಟ್ಟಕ್ಕೆ ಹೋಗಲಿದ್ದೀರಿ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ.
ವೃಷಭ ರಾಶಿ: ಮಾತಿನಿಂದ ಆದ ನೋವನ್ನು ಹಿಡಿದಿಟ್ಟುಕೊಳ್ಳುವಿರಿ. ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ಬಹಳ ವರ್ಷಗಳ ಅನಂತರ ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಪ್ರಯೋಜನವಾಗದ ಮಾತುಗಳನ್ನು ಹೇಳಲಾರಿರಿ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಹಣಕಾಸಿನ ವಿಷಯಗಳಲ್ಲಿ ಕೆಲವು ತೊಡಕುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ, ಆದರೆ ನೀವು ಪ್ರತಿಯೊಂದು ಕಷ್ಟವನ್ನು ನಿರ್ಭಯವಾಗಿ ಎದುರಿಸುತ್ತೀರಿ ಮತ್ತು ಪರಿಹಾರವನ್ನೂ ಕಂಡುಕೊಳ್ಳುತ್ತೀರಿ. ಬಲವಂತವಾಗಿ ಯಾರನ್ನೂ ನಿಮ್ಮವರನ್ನಾಗಿ ಮಾಡಿಕೊಳಗಳಬೇಡಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ಮನಸ್ಸು ಭಾರವಾಗಲಿದೆ. ಕೆಲವಾರು ವ್ಯಕ್ತಿತ್ವಗಳು ನಿಮ್ಮನ್ನು ಆಕರ್ಷಿಸಬಹುದು. ಕೆಲವು ಸಂದರ್ಭದಲ್ಲಿ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ.
ಮಿಥುನ ರಾಶಿ: ಅತಿಥಿ ಸತ್ಕಾರವನ್ನು ಬಹಳ ಪ್ರೀತಿಯಿಂದ ಮಾಡುವಿರಿ. ಇಂದು ಸ್ತ್ರೀಯರ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ನೀವಿಂದು ಬದಲಾವಣೆಯನ್ನು ಇಷ್ಟಪಡುತ್ತೀರಿ. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಕೆಲಸಗಳು ಪೂರ್ಣಗೊಳ್ಳುತ್ತವೆ, ಅದು ಸಂತೋಷವನ್ನು ತರುತ್ತದೆ. ಹೊಸ ಆಸ್ತಿಯನ್ನು ಖರೀದಿಸುವ ಯೋಜನೆಗಳಿರುತ್ತವೆ ಮತ್ತು ಕೆಲಸ ವಿಸ್ತರಿಸುತ್ತದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ನಿಮ್ಮ ಯೋಜನೆಗೆ ಆರ್ಥಿಕ ಸಹಾಯ ಸಿಗುವುದು. ಎಂದೋ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ಅತಿಥಿಗಳ ಆಗಮನದಿಂದ ಖುಷಿಯಾಗುವುದು. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ.
ಕರ್ಕಾಟಕ ರಾಶಿ: :ಸಂಗಾತಿಯಿಂದ ಮನಃಕ್ಲೇಶ ಉದ್ಭವಿಸುವುದು. ಇಂದು ಹೊಸ ಉದ್ಯೋಗಕ್ಕೆ ಉತ್ಸಾಹದಿಂದ ಹೋದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ ಮತ್ತು ಒಟ್ಟಿಗೆ ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸುವ ಆಲೋಚನೆ ಇರಬಹುದು. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಸಲಹೆಗಳನ್ನು ಕೊಡಲು ಬರಬಹುದು. ದೈವೀಸಂಪತ್ತಿಗೆ ಆಸೆಪಡಲಿದ್ದೀರಿ. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ಸಮಾಧಾನದಿಂದ ಆಲೋಚಿಸಿ. ಅವಾಚ್ಯ ಶಬ್ದಗಳಿಂದ ಯಾರನ್ನಾದರೂ ನಿಂದಿಸುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ.
ಕರ್ಕಾಟಕ ರಾಶಿ: ನ್ಯಾಯಯುತವಾದ ಸಂಪಾದನೆಯಿಂದ ಧೈರ್ಯ ಬರಲಿದೆ. ಆಹಾರಕ್ಕಾಗಿ ದೂರಪ್ರಯಾಣ ಮಾಡಬೇಕಾಗಬಹುದು. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ. ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುತ್ತೀರಿ. ಕೆಲವು ಕೆಲಸದ ನಿಮಿತ್ತ ಪ್ರಯಾಣಿಸುವ ಸಾಧ್ಯತೆ ಇದೆ. ನಿಮ್ಮ ಮಕ್ಕಳಿಂದ ನಿಮಗೆ ಲಾಭ ಮತ್ತು ಸಂತೋಷ ಸಿಗುತ್ತದೆ. ನಿಮ್ಮ ವಿರೋಧಿಗಳನ್ನು ಸೋಲಿಸುವಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದಿಂದ ಮುಂದುವರಿಯುತ್ತೀರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವು ಆಗಲಿದೆ. ಮನೆಯನ್ನು ಇಂದು ಬದಲಾಯಿಸುವಿರಿ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ವಂಚನೆಯಾಗಬಹುದು. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು.
ಕನ್ಯಾ ರಾಶಿ: :ಸಾಲಕ್ಕೆ ಮಿತ್ರರು ಸಲಹೆ ಕೊಡುವರು. ಇಂದು ವಿದ್ಯಾರ್ಥಿಗೆಳಿಗೆ ಉನ್ನತ ವಿದ್ಯಾಭ್ಯಾಸದ ಬಗ್ಗೆ ಗೊಂದಲದ ಇರಲಿದೆ. ಯಾರದೋ ವಸ್ತುವುದು ಕಾಣೆಯಾದ ಕಾರಣ ನಿಮ್ಮ ಮೇಲೆ ಕಳ್ಳತನದ ಅಪವಾದವು ಬರಬಹುದು. ಮನಸ್ಸು ಪ್ರಸನ್ನವಾಗಿರುತ್ತದೆ. ಹಿತಶತ್ರುಗಳ ಮೇಲೆ ಸಂದೇಹ ಬರಬಹುದು. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಮತ್ತು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲಾಗುತ್ತದೆ. ಸಮಯವು ಆರಂಭಿಕ ಯಶಸ್ಸನ್ನು ತರುತ್ತದೆ. ಅನಿರೀಕ್ಷಿತ ಧನಲಾಭವನ್ನು ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಟ್ಟುಬಿಡಿ. ಆಂತರಿಕ ಕಲಹವು ಇಂದು ಜಗಜ್ಜಾಹಿರವು ಆಗಬಹುದು. ಇಂದಿನ ನಿಮ್ಮ ವಾಸಸ್ಥಾನವು ಮನೆಯಿಂದ ದೂರವಿರಲಿದೆ. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗಿರುತ್ತೀರಿ. ಮಕ್ಕಳು ನಿಮ್ಮ ಪ್ರತಿ ಬದಲಾವಣೆಯನ್ನೂ ಗಮನಿಸುವರು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ಕಲಾವಿದರಿಗೆ ಮನ್ನಣೆ ಸಿಗಲಿದೆ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು.
ತುಲಾ ರಾಶಿ: : ದಾಖಲೆಗಳನ್ನು ಸುರಕ್ಷಿತವಾಗಿಸಿಕೊಳ್ಳಿ. ವಿವಾಹವನ್ನು ಬಹಳ ಆತುರದಿಂದ ಮಾಡಿಕೊಳ್ಳುವಿರಿ. ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನುವತೋರಿಸುವುದು. ಅಧಿಕ ಸುತ್ತಾಟದ ಸುಸ್ತು ನಿಮ್ಮಲ್ಲಿ ಇದ್ದರೂ ಅದನ್ನು ಲೆಕ್ಕಿಸಲಾರಿರಿ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ಹಲವು ರೀತಿಯ ಕೆಲಸಗಳಿಗೆ ಗಮನ ಕೊಡಬೇಕಾಗುತ್ತದೆ. ವೈಯಕ್ತಿಕ ಕೆಲಸದ ಹೊರೆ ಇರುತ್ತದೆ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ. ಈ ಸಮಯದಲ್ಲಿ ಅವುಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಆದರೆ ಭಾವನೆಗಳು ಮತ್ತು ಸೋಮಾರಿತನವು ನಿಮ್ಮನ್ನು ಅವರಿಸಲು ಬಿಡಬೇಡಿ. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ನಿಮ್ಮ ವಾಹನದ ದುರಸ್ತಿಯನ್ನು ಇಂದು ಮಾಡಲಿದ್ದು ಹಣವನ್ನು ಕಳೆದುಕೊಳ್ಳುವಿರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ ಮಾಡಿಕೊಳ್ಳಿ.
ವೃಶ್ಚಿಕ ರಾಶಿ: :ಅಪರಿಚಿತರ ಸಹಾಯದಿಂದ ಆಶ್ಚರ್ಯವಾಗಲಿದೆ. ಇಂದು ನಿಮ್ಮ ಮನೆಯ ಸಂತೋಷದ ವಾತಾವರಣವು ಸಣ್ಣ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಬೇಟೆಯಾಡಲೇ ಬೇಕು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತೀರಿ. ಹಿರಿಯ ಅಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ. ದಿನದ ಮಧ್ಯದಲ್ಲಿ ಹಣಕಾಸಿನ ಲಾಭಗಳು ಸಾಧ್ಯ. ನಿಮ್ಮ ಕೆಲಸವನ್ನು ಇತರರಿಗೆ ಬಿಡುವುದು ಸರಿಯಲ್ಲ. ನಿಃಸ್ವಾರ್ಥ ಬುದ್ಧಿಯಿಂದ ನಿಮ್ಮ ಕೆಲಸವು ಕೈಗೂಡುವುದು. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ. ಸದಾಚಾರವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಅನಾರೋಗ್ಯವು ನಿಮ್ಮ ನಿಷ್ಕಾಳಜಿಯಿಂದ ಹೆಚ್ಚಾಗಲಿದೆ. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ನಿಮ್ಮ ಅಳತೆಯನ್ನು ಅರಿತು ವ್ಯವಹರಿಸಿ.
ಧನು ರಾಶಿ: :ಉದ್ಯೋಗಕ್ಕೆ ದೂರ ಪ್ರಯಾಣ ಅನಿವಾರ್ಯವಾಗಬಹುದು. ಇಂದು ನಿಮಗೆ ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಳ್ಳಿ. ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಪಡುವಿರಿ. ನಿಮ್ಮ ಬೆಂಬಲದಿಂದ ಮನೆಯ ವಾತಾವರಣ ಇನ್ನಷ್ಟು ಸುಂದರವಾಗುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿದೆ, ಈ ದಿನ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸದಲ್ಲಿ ದಕ್ಷತೆಯನ್ನು ಪ್ರದರ್ಶಿಸುವಿರಿ. ಉದ್ಯೋಗವನ್ನು ಬಿಡುವ ಮನಸ್ಸು ಮಾಡುವಿರಿ. ಯಾರಾದರೂ ಆಸೆ ತೋರಿಸಿ ನಿಮ್ಮ ಬಳಿಯಿಂದ ಹಣ ಪಡೆಯುವರು. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ಬಂಧುಗಳು ನಿಮ್ಮ ಬಗ್ಗೆ ಕರುಣೆ ಬರಬಹುದು. ಕೃಷಿಯನ್ನು ಇಷ್ಟಪಟ್ಟು ಮಾಡಲಿದ್ದೀರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ನೀರಿನ ವಿಚಾರದಲ್ಲಿ ಜಾಗರೂಕತೆ ಬೇಕು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವು ನಡೆಯುವುದು.
ಮಕರ ರಾಶಿ: :ಸ್ವಂತ ಉದ್ಯಮಕ್ಕೆ ಪಾಲುದಾರರನ್ನು ಹುಡುಕುವಿರಿ. ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಕಾರ್ಯವನ್ನು ಮಾಡಲು ಯೋಜನೆಯನ್ನು ರೂಪಿಸಲಿದ್ದೀರಿ. ಆಹಾರದ ಅಭಾವವು ನಿಮಗೆ ಆಗಲಿದೆ. ಸಂಯಮದಿಂದ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಇತರ ಕೆಲಸಗಳಲ್ಲಿ ನಿರತರಾಗಿರುವುದರಿಂದ ನಿಮ್ಮ ವೈಯಕ್ತಿಕ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ತುಂಬಾ ಭಾವನಾತ್ಮಕವಾಗಿರುವುದು ಒಳ್ಳೆಯದಲ್ಲ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಭತ್ಯೆಯು ಸಿಗಬಹುದಾಗಿದೆ. ಯಾರಾದರೂ ಚುಚ್ಚಿ ಮಾತನಾಡಬಹುದು. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಯಾರದೋ ಮಧ್ಯ ಪ್ರವೇಶದಿಂದ ಕೋಪಗೊಳ್ಳುವಿರಿ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಶಿಕ್ಷಕರು ವೇತನವನ್ನು ಹೆಚ್ಚಿಸಿಕೊಳ್ಳುವರು. ಕೆಲವನ್ನು ನೀವು ಅನಗತ್ಯವಾಗಿ ತೆಗೆದುಕೊಳ್ಳುವಿರಿ.
ಕುಂಭ ರಾಶಿ: : ಮಕ್ಕಳಿಂದ ದೂರಾಗುವ ಸಾಧ್ಯತೆ ಇರಲಿದೆ. ದುರಭ್ಯಾಸದಿಂದ ಸಮಯ ನಷ್ಟವಾಗುವುದು. ನಿಮಗೆ ಇಂದು ಕೆಲವು ಜವಾಬ್ದಾರಿಗಳು ಬರಬಹುದು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ನಿಕಟ ಸಂಬಂಧಿಯ ಸಹಾಯದಿಂದ, ನಿಮ್ಮ ಯೋಜನೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ದಕ್ಷತೆಯಿಂದ ನೀವು ತೊಂದರೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ಅತಿಯಾದ ಆಲಸ್ಯವು ಒಳ್ಳೆಯದಲ್ಲ. ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ವ್ಯಾಪಾರದಲ್ಲಿ ಸ್ವಲ್ಪ ಲಾಭವನ್ನು ಕಾಣಬಹುದು. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ವ್ಯಾವಹಾರಿಕ ಹಿನ್ನಡೆ ಆಗಲಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು.
ಮೀನ ರಾಶಿ: :ಆತ್ಮೀಯತೆ ಬಂಧನದಿಂದ ಬಿಡುಗಡೆ ಸಾಧ್ಯವಾಗದು. ಇಂದು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವಹದು. ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡಬಹುದು. ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಮ್ಮ ವ್ಯವಹಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲಸವನ್ನು ಸರಿಯಾಗಿ ಮಾಡಿ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಆತುರಪಡಬೇಡಿ. ಹೊಸ ಕೆಲಸವನ್ನು ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಕಳೆಯಿರಿ. ಈ ಸಮಯದಲ್ಲಿ, ಹಣಕ್ಕೆ ಸಂಬಂಧಿಸಿದ ವಿಷಯಗಳು ಸುಧಾರಿಸುತ್ತವೆ. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಹೂಡಿಕೆಯಲ್ಲಿ ನಷ್ಟವಾಗುವುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಮಕ್ಕಳ ಆರೋಗ್ಯಕ್ಕೆ ಖರ್ಚು ಮಾಡಬೇಕಾದೀತು.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1