Horoscope Today 07 February 2025: ಹಿರಿಯರು ಆಡಿದ ನಿಮ್ಮ ವಿವಾಹದ ಮಾತುಕತೆಯಿಂದ‌ ಸಂತೋಷ.

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ದಶಮೀ ತಿಥಿ, ಕ್ರೋಧೀ ಸಂವತ್ಸರದ ಉತ್ತರಾಯನ, ಶ್ರವಣಾ ಮಹಾನಕ್ಷತ್ರ ಶುಕ್ರವಾರದಂದು ಅಪರಿಚಿತರ ಪೀಡೆ, ಪಾಲುದಾರಿಕೆಯಲ್ಲಿ ಮನಸ್ತಾಪ, ಸಂಗಾತಿಯ ಕಲಹ, ಪ್ರೇಮ ವೈಫಲ್ಯಗಳು. ಎಲ್ಲಾ ರಾಶಿಗಳ ಭವಿಷ್ಯ ಇಲ್ಲಿದೆ.

Horoscope Today 07 February 2025: ಪ್ರೇಮದಲ್ಲಿ ದುಡುಕಿ, ಒಂಟಿಯಾಗುವಿರಿ

ನಿತ್ಯಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಬ್ರಹ್ಮ, ಕರಣ : ಕೌಲವ, ಸೂರ್ಯೋದಯ – 07 – 00 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:20 – 12:47, ಯಮಘಂಡ ಕಾಲ 15:40 – 17:07, ಗುಳಿಕ ಕಾಲ08:27 – 09:54.

ಮೇಷ ರಾಶಿ: ಇಂದು ನಿಮ್ಮ ಮನೋಭಿಲಾಷೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ. ಸಮುದ್ರದ ತೆರೆ ಕಳೆಯದು, ಸ್ನಾನವಾಗದು ಎನ್ನುವಂತಾಗಬಹುದು. ಮುನ್ನಡೆಯುವುದೊಂದೇ ಮಾರ್ಗ. ಯಾರನ್ನಾದರೂ ಕಡೆಗಣಿಸುವ ಅವಶ್ಯಕತೆ ಇಲ್ಲ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವ ಕಡೆ ನಿಮ್ಮ ಗಮನವಿರುವುದು. ಕೂಡಲೇ ಎಲ್ಲವೂ ಆಗದು.‌ ಉದ್ಯೋಗದ ಕಾರಣಕ್ಕೆ ಪ್ರಯಾಣ ಮಾಡುವ ಅವಕಾಶವಿರುತ್ತದೆ. ವ್ಯಾಪಾರವನ್ನು ಹೆಚ್ಚಿಸಲು ಹೊಸ ಸ್ಥಳದ ಪರಿಶೀಲನೆ ನಡೆಸುವಿರಿ.‌ ಇಂದು ವೃತ್ತಿಗೆ ಸೇರಿದ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಕಛೇರಿಯ ಕೆಲಸದಲ್ಲಿ ನೌಕರರ ಕಾರ್ಯದಕ್ಷತೆತ ಕಾರಣಗಳಿಂದ ನಿಧಾನವಾಗಲಿದೆ. ಕೃಷಿಯಲ್ಲಿ ನೀವು ಹೆಚ್ಚು ಪ್ರಗತಿಯನ್ನು ಸಾಧಿಸುವ ಮನಸ್ಸು ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ‌ ಇಂದು ಸಂತೋಷವು ಇರಲಿದೆ. ‌ಅನುಕಂಪದಿಂದ ಏನನ್ನಾದರೂ ಸಾಧಿಸಿಕೊಳ್ಳುವಿರಿ.

ವೃಷಭ ರಾಶಿ: ಇನ್ನೊಬ್ಬರ ಜೊತೆ ಮಾತನಾಡುವುದು ಸಮಯ ವ್ಯರ್ಥ ಎನಿಸದರೂ ಉದ್ಯಮದ ದೃಷ್ಟಿಯಿಂದ ಕಿಂಚಿತ್ ಲಾಭವೇ. ಬಿಚ್ಚು ಮನಸ್ಸಿನಿಂದ ನೀವು ಮಾತುಗಳನ್ನು ಆಡುವಿರಿ. ಆರ್ಥಿಕ ಲಾಭಕ್ಕೆ ನೂತನ ಮಾರ್ಗಗಳು ತೆರೆದಾವು. ಯಾವುದೋ ಆಲೋಚನೆಯಲ್ಲಿ ವಾಹನ ಚಲಾಯಿಸಿ ದಂಡವನ್ನೂ ಪಡೆಯಬೇಕಾಗಬಹುದು. ಇಂದಿನ ಪರಿಸ್ಥಿಗೆ ತಕ್ಕಹಾಗೆ ಮನಃಸ್ಥಿತಿಯಲ್ಲಿ ಏರಿಳಿತಗಳಿರಬಹುದು. ಉದ್ಯೋಗ ಸಂದರ್ಶನದಿಂದ ಆತಂಕ ದೂರಾಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ರಾಜಕೀಯದಿಂದ ನಿಮಗೆ ಬೇರೆ ಯಾವ ಸೌಕರ್ಯಗಳೂ ಇರಲಾರವು. ಬಾಂಧ್ಯದ ಬಂಧ ಸಡಿಲವಾಗುತ್ತ, ಎಲ್ಲರಿಂದ ದೂರಾಗುಬಿರಿ.‌ ನಿಮ್ಮ ಜವಾಬ್ದಾರಿ ಮುಗಿದಾಗ ಸಾಧನೆಯ ಬೃಹದಾಕರ ನಿಮ್ಮನ್ನು ದಿಗ್ಭ್ರಮೆಗೊಳಿಸೀತು. ನಿಮ್ಮ‌ ಜನಪ್ರಿಯತೆಯು ಕಡಿಮೆ ಆದಂತೆ ತೋರುವುದು. ಸಹೋದ್ಯೋಗಿಗಳಿಂದ ಸಹಾಯವನ್ನು ಪಡೆಯುವಿರಿ.‌ ಸ್ವಾರ್ಥವನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಅಭದ್ರತೆಯನ್ನು ನೀವು ದೂರಮಾಡಿಕೊಳ್ಳುವುದು ಉತ್ತಮ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು.‌

ಮಿಥುನ ರಾಶಿ: ಧಾರ್ಮಿಕ ಆಚರಣೆಯಿಂದ ಮಾನಸಿಕ ಸಮತೋಲನ ಸಿಗುವುದು. ನಿಮ್ಮ ಮಾತನಾಡುವ ಸ್ವಭಾವದಿಂದ ವೃತ್ತಿಯಲ್ಲಿ ಕಿರಿಕಿರಿ ಆಗುವುದು. ಸ್ಥಿರಾಸ್ತಿಯ ಭಾಗಗಳನ್ನು ಬಿಟ್ಟುಕೊಡುವ ಸ್ಥಿತಿ ಬರಬಹುದು. ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ.‌ ನಿಮಗೆ ದೈವದ ಪ್ರತಿಕೂಲವಿದೆ ಎಂದು ಅನ್ನಿಸಲಿದೆ. ಹಿರಿಯರು ಆಡಿದ ನಿಮ್ಮ ವಿವಾಹದ ಮಾತುಕತೆಯಿಂದ‌ ಸಂತೋಷ. ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಕಳೆದುಕೊಂಡ ವಸ್ತುಗಳನ್ನು ಪುನಃ ಸಂಪಾದಿಸುವ ಮಾನಸಿಕ ಸ್ಥಿತಿಯನ್ನು ಹೊಂದಿರುವಿರಿ. ಹಳೆಯ ಹೂಡಿಕೆಯಿಂದ ಲಾಭವನ್ನು ಪಡೆದು ಮತ್ತೆಲ್ಲಿಯಾದರೂ ಇಡಬಹುದು. ನಿಮ್ಮ ದಿನಚರ್ಯೆಯನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗುವುದು. ಕೆಲವು ಒಳ್ಳೆಯ ಅಭ್ಯಾಸಗಳು ಕೈತಪ್ಪಿಹೋಗಬಹುದು. ವಿಷಮಸ್ಥಿತಿಯನ್ನು ಸಮಸ್ಥಿಯನ್ನಾಗಿ ಮಾಡಿಕೊಳ್ಳುವ ವಿಧಾನವು ಗೊತ್ತಿದೆ.

ಕರ್ಕಾಟಕ ರಾಶಿ: ನಿಮ್ಮ ಪ್ರೇಮದ ಕಾರಣ ಪಾಲಕರಿಗೆ ಇರಿಸುಮುರಿಸು. ಜೀವನದಲ್ಲಿ ಬರುವ ಅನಿರೀಕ್ಷಿತ ಬದಲಾವಣೆಗಳನ್ನು ಸ್ವೀಕರಿಸಲು ಸಿದ್ಧರಾಗಬೇಕು. ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಂದು ಒಳ್ಳೆಯ ಸುದ್ದಿ ಇದೆ. ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಗೌಪ್ಯ ಸಂಗತಿಗಳನ್ನು ಹೊರಹಾಕುವಿರಿ. ಮನೆಯ ಸ್ವಚ್ಛತೆಗೆ ಗಮನ ಕೊಡಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು. ಪವಿತ್ರಸ್ಥಳಗಳಿಂದ ನೆಮ್ಮದಿ ನಿಮ್ಮದಾಗುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು. ‌ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ‌ ನಿಮಗೆ ಬೇಸರ ಬರಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು. ನಿಮ್ಮ ಮಾರ್ಯಾದೆಯನ್ನು ಮೀರಿ ವರ್ತಿಸದಿರಿ.

ಸಿಂಹ ರಾಶಿ: ಹತ್ತಿರ ಬಂಧುಗಳು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ಅದಕ್ಕೆ ನಿಮ್ಮದೂ ಸೇರಿದರೆ ಮತ್ತೇನೋ ಆಗುವ ಬದಲು, ಕೇಳದಂತೆ ಸುಮ್ನನಿರಿ. ಕಠಿಣ ಪರಿಶ್ರಮದ ಜೊತೆ ಮಾಡಿದ ಕೆಲಸವು ಆಹ್ಲಾದಕರ ಫಲವನ್ನೇ ನೀಡುವುದು. ಶಾಂತ ಮನಸ್ಸಿನಿಂದ ಸವಾಲುಗಳನ್ನು ನಿಭಾಯಿಸಿ. ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ನಿಮಗೆ ಸ್ಥಾನವಿಲ್ಲದ ಕಡೆ ಇರಲು ಇಷ್ಟವಾಗದು. ಸಿಟ್ಟಿನಿಂದ ಎಲ್ಲರನ್ನೂ ದೂರಮಾಡಿಕೊಳ್ಳುವಿರಿ. ಮನೆಯಲ್ಲಿನ ಅಶಾಂತಿಯ ವಾತಾವರಣವು ಸರಿಮಾಡಿಕೊಳ್ಳಿ. ಹಣಕಾಸಿನ ವ್ಯವಹಾರದಲ್ಲಿ ನೀವು ದಾಖಲೆಯನ್ನು ಇಟ್ಟುಕೊಳ್ಳಿ. ಸಂಗಾತಿಯ ಕೋಪಕ್ಕೆ ಉಪಶಮನದ ಮದ್ದನ್ನು ಅರದೆ ಹಚ್ಚಿ. ತಾಯಿಯು ನಿಮಗೆ ಹಿತವಚನವನ್ನು ಹೇಳುವರು. ಆತ್ಮವಿಶ್ವಾಸದ‌ ಕೊರತೆಯನ್ನು ಸ್ನೇಹಿತರು ತುಂಬುವರು. ಸಂಶೋಧಕರು ಒತ್ತಡದಲ್ಲಿ‌ ಕಾರ್ಯವನ್ನು ಕಾರ್ಯವನ್ನು ಮಾಡುವರು.

ಕನ್ಯಾ ರಾಶಿ: ಅಪರಿಚಿತರು ನಿಮ್ಮನ್ನು ಕಾಡಬಹುದು. ಹಣದ ಹೂಡಿಕೆಗೆ ಪೀಡಿಸಬಹುದು. ಸುಮ್ಮನೇ ಇರಿ ಅಥವಾ ಸಂಪರ್ಕ ಕಡಿತ ಮಾಡಿಕೊಳ್ಳಿ. ಯಾರನ್ನೋ‌ ದೂಷಿಸಿ ನೀವು ದೊಡ್ಡವರಾಗುವುದು ಬೇಡ.‌ ಆಸ್ತಿ ಪಾಲಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳನ್ನು ಪರಿಹರಿಸಿ ಅಥವಾ ಹೊಂದಾಣಿಕೆ ಮಾಡಿಕೊಳ್ಳಿ. ಇಂದು ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ಸಾಲ ಕೊಟ್ಟವರ ಎದುರು ತಲೆ ಮೆರೆಸಿಕೊಂಡು ಓಡಾಡುವಿರಿ. ರಾಜಕೀಯವಾಗಿ ಹಿನ್ನಡೆಯಾಗಬಹುದು. ಹೂಡಿಕೆಯಿಂದ ಬಂದ ಹಣವನ್ನು ಸ್ಥಿರಾಸ್ತಿಗೆ ಹೂಡಿಕೆ ಮಾಡುವುದು ಉತ್ತಮ. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳಬೇಕಾದೀತು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ. ಹಳೆಯ ನೋವುಗಳು ನಿಮ್ಮನ್ನು ಕಾಡುವುಸು. ಶುಭ ಸುದ್ದಿಯ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರುವುದು.

ತುಲಾ ರಾಶಿ: ಮನೆದೇವರ ದರ್ಶನಕ್ಕೆ ಕುಟುಂಬದ ಜೊತೆ ಹೋಗುವ ಯೋಚನೆ ಮಾಡಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳಿ. ಉದ್ಯೋಗಕ್ಕೆ ಬಹಳ ಉಪಯೋಗ. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಿರಿ. ಆನಾರೋಗ್ಯವನ್ನು ನಿರ್ಲಕ್ಷಿಸುವಿರಿ. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡುವುದಿಲ್ಲ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ. ಮಕ್ಕಳಿಗಾಗಿ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು.

ವೃಶ್ಚಿಕ ರಾಶಿ: ಯಾರ ಬಗ್ಗೆಯೂ ಗೊತ್ತಿಲ್ಲದೇ ನಿಂದನೆ ಮಾಡುವಿರಿ. ಧನಸಂಪಾದನೆಗೆಂದು ಹೋಗಿ ಧನನಷ್ಟವನ್ನು ಮಾಡಿಕೊಳ್ಳುವಿರಿ. ಗಡುವಿನೊಳಗೆ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದು.‌ ಮಹಿಳೆಯರು ಸಮಾರಂಭಗಳಿಗೆ ಮನೆಗೆ ಹೋಗುವ ಸಾಧ್ಯತೆ ಇದೆ. ಇಂದಿನ ಆತಂಕವನ್ನು ನೀವು ಸುಲಭವಾಗಿ ಎದುರಿಸುವಿರಿ. ಅಲ್ಪ ಹಣವನ್ನೂ ಸಾಲವಾಗಿ ಪಡೆಯುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಹಲವಾರು ಅನುಭವವನ್ನು ಪಡೆದುಕೊಂಡೂ ಮತ್ತೆ ಅದೇ ತಪ್ಪನ್ನು ಮಾಡುವಿರಿ. ಇಂದು ಬಹು ದಿನಗಳ ಚಿಂತಿತ ಕಾರ್ಯವು ಫಲ ಕೊಡದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ. ಆಪ್ತರ ಬಗೆಗಿನ ಊಹೆಯು ವ್ಯತ್ಯಾಸವಾದೀತು. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ. ಇಂದು ಸಂಗಾತಿಯ ಪ್ರೀತಿಯನ್ನು ನೀವು ಹೆಚ್ಚು ಅನುಭವಿಸುವಿರಿ.

ಧನು ರಾಶಿ: ನಿಮಗೆ ವಿಶ್ವಾಸದ ಕೊರತೆ ಕಾಣಿಸಿಕೊಳ್ಳುವುದು. ಆಪ್ತರು ಅದನ್ನು ಪೂರ್ಣ ಮಾಡುವರು. ಕಚೇರಿಯಲ್ಲಿ ಸವಾಲಿನ ಕೆಲಸಗಳನ್ನು ಪೂರ್ಣಗೊಳಿಸಲು ಹೊಸ ತಂತ್ರವನ್ನು ಮಾಡಿ. ಕುಟುಂಬ ಸದಸ್ಯರ ಜೊತೆ ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮ ಕಂಡು ಅಸೂಯೆ ಪಡುವವರಿಗೆ ಇನ್ನಷ್ಟು ತುಪ್ಪ ಸುರಿಯುವಿರಿ. ಕಛೇರಿಯಲ್ಲಿ ದಿನದಂತೆ ಎಲ್ಲವೂ ಇರದು. ಸಂದರ್ಭಗಳು ಪ್ರತಿಕೂಲವಾಗಿರಲಿವೆ. ಸಮಯವನ್ನು ನೋಡಿ ಕಾರ್ಯವನ್ನು ಮಾಡಿಸಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ಬೀಳಿಸಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು. ವ್ಯರ್ಥ ಓಡಾಟದಿಂದ ಬೇಸರವಾಗುವುದು. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಒತ್ತಡದ ಕಾರ್ಯದಿಂದ ನೀವು ದೂರ ಉಳಿಯುವಿರಿ. ಇಂದು ಯಾರ ಮಾತನ್ನೂ ಪೂರ್ಣವಾಗಿ ನಂಬಲು ಆಗದು. ಲಾಭ ಬರುವ ಕಾರ್ಯದಲ್ಲಿ ಮಾತ್ರ ಇಚ್ಛೆಯು ಇರುವುದು.

ಮಕರ ರಾಶಿ: ಇಂದು ಗೊಂದಲದಿಂದ ನಿಮಗೆ ಯಾವುದನ್ನೂ ಪೂರ್ಣವಾಗಿ ಸ್ವೀಕರಿಸಲಾಗದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ. ತಪ್ಪನ್ನು ಮರೆಮಾಚುವಿರಿ. ಆದರೂ ಗೊತ್ತಾಗುವುದು. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ಪಾಲಿಗೆ ಬಂದಿದ್ದು ಪಂಚಾಮೃತವಾಗಲಿದೆ. ನೆರೆಹೊರೆಯರ ಜೊತೆ ವಾಗ್ವಾದ‌ ಮಾಡುವಿರಿ. ಬಾಡಿಗೆ ಮನೆಯ ಮಾಲಿಕರಿಂದ ನಿಮಗೆ ಏನಾದರೂ ಆಗಬಹುದು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗುವುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ.‌ ಉದ್ಯೋಗದ ಮಿತ್ರರು ಇಂದು ಸಿಗವರು. ಅಂಗಳವನ್ನೇ ಹಾರಲು ಬಾರದವ ಆಕಾಶವನ್ನು ಹಾರಿದಂತೆ ಆಗುವುದು.

ಕುಂಭ ರಾಶಿ: ಇಂದು ಮಾತನಾಡುವ ಇಚ್ಛಾಶಕ್ತಿಯನ್ನು ಕಳೆದುಕೊಳ್ಳುವಿರಿ. ಪರಸ್ಥಳದ ನೋವನ್ನು ನೀವು ನಿಮ್ಮವರ ಜೊತೆ ಹಂಚಿಕೊಳ್ಳುವಿರಿ. ಅಧಿಕಾರಿಗಳ ಜೊತೆ ಸಭ್ಯ ವರ್ತನೆ ಇರಲಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ಸೃಷ್ಟಿಯಾಗುವುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪ ಬೇಡ, ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಿದೇಶೀ ವ್ಯವಹಾರದಿಂದ ನಿಮಗೆ ಲಾಭವಿದೆ. ಕುಟುಂಬದಲ್ಲಿ ನೆಮ್ಮದಿಯ ತಂದುಕೊಳ್ಳುವಿರಿ. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ಅತಿಯಾದ ತಮಾಷೆಯು ಗಂಭೀರರೂಪವನ್ನು ಪಡೆಯಬಹುದು. ಹಣದ ಮೂಲವನ್ನು ಹುಡುಕುವ ಪ್ರಯತ್ನವು ಪೂರ್ಣ ಫಲಿಸದು. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ ಮುಗಸಿಕೊಳ್ಳುವಿರಿ. ಬಹಳ ದಿನಗಳ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವುದು.‌ ಸಾಹಸದ‌ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕ.

ಮೀನ ರಾಶಿ: ಇಂದು ನಿಮಗಾಗುವ ಅಲ್ಪ‌ಲಾಭವೂ ನೆಮ್ಮದಿಯ ಫಲವನ್ನು ಕೊಡವುದು. ನೀವು ಕೆಲಸದಲ್ಲಿ ತೊಂದರೆ ಬಂದು, ಇದು ನಿಮ್ಮ ಕಾರ್ಯಕ್ಷಮತೆಯ ಮೇಲೆ ವಿಪರೀತ ಪರಿಣಾಮವನ್ನು ಬೀರುತ್ತದೆ. ಅಜಾಗರೂಕತೆಯಿಂದ ವ್ಯವಹರಿಸಿ ಹಣ ನಷ್ಟವಾಗುವುದು. ಸಹೋದರ ನಡುವೆ ನಡೆಯುತ್ತಿರುವ ಹಣಕಾಸಿನ ವಿವಾದಗಳನ್ನು ಪರಿಹರಿಸಲು ಸಾಧ್ಯ. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಟದಿಂದ ನೀವು ಸಿಟ್ಟಾಗುವಿರಿ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾಗಬಹುದು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಿರುವುದು.‌ ಯಾರನ್ನೂ ಜೊತೆಗೆ ಕರೆದುಕೊಂಡು ಹೋಗುವ ಅಭ್ಯಾಸವಿಲ್ಲ.‌ ಒಂಟಿಯಾಗಿ ಏನನ್ನೂ ಮಾಡಬಲ್ಲಿರಿ. ಬಂಧುಗಳ ಸಲಹೆಯು ನಿಮ್ಮನ್ನು ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರವನ್ನು ಮೊದಲೇ ಸರಿಮಾಡಿಕೊಳ್ಳುವುದು ಉತ್ತಮ. ಪ್ರೇಮದಲ್ಲಿ ದುಡುಕಿ, ಒಂಟಿಯಾಗುವಿರಿ.

Source:https://tv9kannada.com/horoscope/horoscope-today-february-7-2025-rush-in-love-you-will-be-lonely-in-kannada-ggs-975092.html

Leave a Reply

Your email address will not be published. Required fields are marked *