Horoscope Today 08 April: ಈ ರಾಶಿಯವರ ಕೋಪ ಸುಲಭಕ್ಕೆ ಶಾಂತವಾಗದು.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಮಂಗಳವಾರ ಕುಟುಂಬದ ಮೇಲೆ‌ ಅಕ್ಕರೆ, ಮುಂದಡಿಗೆ ಧೈರ್ಯ, ಮಿತಿಮೀರಿದ ಮಾತು ಇದೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 08 April: ಈ ರಾಶಿಯವರ ಕೋಪ ಸುಲಭಕ್ಕೆ ಶಾಂತವಾಗದು

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಧೃರಿ, ಕರಣ : ಬಾಲವ, ಸೂರ್ಯೋದಯ – 06: 24 am, ಸೂರ್ಯಾಸ್ತ – 06:44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:12, ಯಮಘಂಡ ಕಾಲ 09:30 – 11:02, ಗುಳಿಕ ಕಾಲ 12:35 – 14:07

ಮೇಷ ರಾಶಿ: ನೀವು ಮಾಡುವ ಕೆಲಸದ ಮೇಲೆ ಗಮನವಿರದೇ ಮತ್ತೆಲ್ಲೋ ಇರುವಿರಿ. ನಿಮ್ಮ ಆತ್ಮವಿಶ್ವಾಸವೇ ಎಲ್ಲ ಕಾರ್ಯಗಳನ್ನು ಅನಾಯಾಸವಾಗಿ ಮಾಡುವಂತೆ ಮಾಡುತ್ತದೆ. ಹೊಸ ಸ್ನೇಹಿತರನ್ನು ಪಡೆಯುವಿರಿ. ಹೊಸ ಗೆಳೆತನದಲ್ಲಿ ಆಸಕ್ತಿ. ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವಿರಿ. ವಿದ್ಯಾರ್ಥಿಗಳು ಯಂತ್ರೋಪಕರಣಗಳನ್ನು ಪಡೆದು ಆನಂದಿಸುವರು. ಕೆಲಸವನ್ನು ನಿರ್ಧರಿಸುವಾಗ ಯಾವುದೇ ಒತ್ತಡಗಳಿಗೆ ಅವಕಾಶ ಕೊಡಬೇಡಿ. ಒಪ್ಪಂದವನ್ನು ಕೇವಲ ಪತ್ರದ‌ ಮೇಲೆ ಮಾತ್ರವಲ್ಲ, ಮನಸ್ಸಿನಲ್ಲಿ ಕೂಡ ದೃಢಪಡಿಸಿ. ಸಮಯವನ್ನು ಹಾಗೇ ವ್ಯರ್ಥವಾಗಿ ಕಳಡಯಬೇಡಿ. ಸ್ನೇಹಿತರ ಬೆಂಬಲವು ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಮಹತ್ವದ ಕೊಡುಗೆಯಿಂದಾಗಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಕೊಡುಗೆಗಳನ್ನು ಕಾಣಬಹುದು. ರಾಜಕೀಯದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ಸಿಗಬಹುದು. ಹಳೆಯ ಯಂತ್ರಗಳ ದುರಸ್ತಿಗೆ ಹಣವು ಖರ್ಚಾಗುವುದು.

ವೃಷಭ ರಾಶಿ: ವಿವಾಹ ಯೋಗವನ್ನು ಯಾವ ಕಾರಣಗಳಿಂದಲೂ ತಳ್ಳಿಹಾಕಬೇಡಿ. ಇದು ಮುಂದೆ ಸಂಕಷ್ಟ ತರುವುದು. ಇಂದು ನಿಮಗೆ ನಿನ್ನೊಬ್ಬರ ಕೆಲಸದ ಕಡೆ ಗಮನ ಹರಿಸಲಾಗದಷ್ಟು ಒತ್ತಡ ಇರಲಿದೆ. ಅನ್ಯರ ಕಾರ್ಯದ ಸಹವಾಸ ಬೇಡ. ನೀವು ನಿಮ್ಮ ಅಂತರಂಗವನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದು ನಿಲ್ಲದು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಸಾಧನೆಯ ಫಲಿತಾಂಶದ ಬಗ್ಗೆ ಅಂಜಿಕೆ ಇರುವುದು. ಪ್ರೀತಿಯಿಂದ ಎಲ್ಲರೊಂದಿಗೆ ಮಾತನಾಡಿ. ಕುಟುಂಬದ ಮೋಜಿನ ಚಟುವಟಿಕೆಗಳನ್ನು ಮಾಡುತ್ತ ಕಾಲ ಕಳೆಯುವಿರಿ. ಮನೆಯ ನಿರ್ವಹಣೆಯ ಕೆಲಸದಲ್ಲಿಯೂ ನೀವು ಆಸಕ್ತಿ ಇರುವುದು. ಸ್ವಂತ ಕೆಲಸವನ್ನು ಬಹಳ ಅಚ್ಚು ಕಟ್ಟಾಗಿ ಮಾಡಿ ಮುಗಿಸುವಿರಿ. ವ್ಯಾಪಾರ ವಲಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು. ಕೆಲವು ರೀತಿಯ ಹಾನಿಯ ಬಗ್ಗೆಯೂ ಚಿಂತಿಸುವುದು ಅಗತ್ಯ. ಸರ್ಕಾರಿ ಕೆಲಸದಲ್ಲಿ ಯಾವುದೇ ತೊಂದರೆ ಇಲ್ಲ.

ಮಿಥುನ ರಾಶಿ: ಸ್ನೇಹವು ದೂರಾಗಿದ್ದು ನಿಮಗೆ ಸಂಕಟ. ಇಂದು ನಿಮ್ಮ ಸಂಗಾತಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸೋಲಬಹುದು. ಮನೆಯ ಕಾರ್ಯಗಳಲ್ಲಿ ಮಗ್ನರಾಗಿ ಆಯಾಸವನ್ನು ತರಿಸಿಕೊಳ್ಳುವಿರಿ. ನಿಮ್ಮ ತಿಳಿವಳಿಕೆಯ ಮಟ್ಟ ಎಷ್ಟೆಂದು ನಿಮ್ಮ ವರ್ತನೆಯಿಂದ ತಿಳಿಯುತ್ತದೆ. ಮಾನಸಿಕ ಒತ್ತಡಕ್ಕೆ ಸಿಲುಕದೇ ನಿಶ್ಚಿಂತೆಯಿಂದ ಇರಲು ಪ್ರಯತ್ನಿಸಿ. ಇಂದು ನಿಮ್ಮ ದಕ್ಷತೆಯಿಂದ ಉತ್ತಮ ರೀತಿಯಲ್ಲಿ ಅನೇಕ ವಿಷಯಗಳನ್ನು ಸಾಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಖಾಸಗಿ ಉದ್ಯೋಗದಲ್ಲಿ ಬಯಸದೇ ಉನ್ನತ ಸ್ಥಾನಕ್ಕೆ ಏರಿದ್ದು ನಂಬಲು ಕಷ್ಟವಾಗಕಿದೆ. ಹೂಡಿಕೆ ಮಾಡಲು ಯಾವುದೇ ಯೋಜನೆ ಇದ್ದರೆ, ಅದು ಲಾಭದಾಯಕವಾಗಿರುತ್ತದೆ. ಆಪ್ತ ಸ್ನೇಹಿತರ ಬೆಂಬಲವೂ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೆಲವೊಮ್ಮೆ ಸ್ವಭಾವದಲ್ಲಿ ಭ್ರಮೆಯಿಂದ ಕೋಪದ ಸ್ಥಿತಿ ಇರಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿ.

ಕರ್ಕಾಟಕ ರಾಶಿ: ಅನೀರಕ್ಷಿತ ಲಾಭದಿಂದ ನಿಮ್ಮ ಸಾಲದ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.‌ ಇಂದು ನಿಮ್ಮ ಇಷ್ಟದವರ ಜೊತೆ ಖುಷಿಯಿಂದ ವ್ಯವಹರಿಸಿ. ಕೆಲವು ಮಾತುಗಳಿಂದ ಅವರಿಗೆ ನೋವಾಗಬಹುದು.‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ಎಷ್ಟೋ ದಿನದ ನಿಮ್ಮ ಜಟಿಲತೆಗಳು ಮಂದಗತಿಯಲ್ಲಿ ಸಾಗುತ್ತಿದ್ದು ಇಂದು ವೇಗವನ್ನು ಪಡೆಯುತ್ತದೆ. ನಿಮ್ಮ ಸುತ್ತಲಿನ ಜಗತ್ತಿಗೆ ನೀವು ಅಚ್ಚರಿಯ ಆಸಾಮಿಯಾಗುತ್ತೀರಿ. ದೂರದ ಪ್ರಯಾಣಕ್ಕೆ ಸಕಾರಣ ಸಿಕ್ಕಿದ್ದು, ಕುಟುಂಬದ ಜೊತೆ ಪ್ರಯಾಣ ಮಾಡುವಿರಿ. ಮನೆ ಮತ್ತು ವ್ಯವಹಾರದಲ್ಲಿ ಸರಿಯಾದ ಸಾಮರಸ್ಯ ಇರುತ್ತದೆ. ಇಂದು ಮನೆಯ ಎಲ್ಲ ಸದಸ್ಯರು ಪರಸ್ಪರ ಆನಂದಿಸುವರು. ಮಗುವಿನ ಚಟುವಟಿಕೆಗಳು ಮತ್ತು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಭೂಮಿ ಅಥವಾ ವಾಹನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.

ಸಿಂಹ ರಾಶಿ: ಇಂದಿನ ಕೆಲವು ಸಂದರ್ಭದಲ್ಲಿ ಮಾತಿಗಿಂತ ಮೌನವೇ ಉತ್ತಮವಾಗಲಿದೆ. ಇಂದು ಸಂಗಾತಿಯಿಲ್ಲದೇ ಚಟಪಡಿಸುವ ಸ್ಥಿತಿ ಬಂದೀತು. ಬಹಳ ದಿನಗಳ ಅನಂತರ ಮನೆಯ ಕಡೆ ಹೋಗುವಿರಿ. ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ವ್ಯಾಪಾರಸ್ಥರು ಗ್ರಾಹಕರ ಜೊತೆಗೆ ಸಮಾಧಾನದಿಂದ‌ ಮಾತನಾಡಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಎಂದೋ ಉಳಿಸಿಟ್ಟ ಕಾಸು ಇಂದು ತುರ್ತಿಮನ ಕಾಲಕ್ಕೆ ಬಳಕೆಗೆ ಬರುತ್ತದೆ. ಇಂದು ನಿಮ್ಮ ಮನಸ್ಸಿಗೆ ಹಿತವಾದ ಯಾವುದಾರೂ ಒಂದು ಕೆಲಸವನ್ನು ಮಾಡಿ. ಸಮಯವು ನಿಮಗಾಗಿ ಅವಕಾಶವನ್ನು ಕೊಡಬಹುದು. ಹಲವು ದಿನಗಳ ಅನಂತರ ಭಾರದ ಮನಸ್ಸು ಹಗುರಾಗುವುದು. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ಯೋಜನೆಯನ್ನು ಪ್ರಾರಂಭಿಸಬೇಡಿ.

ಕನ್ಯಾ ರಾಶಿ: ಅನವಶ್ಯ ಆಲೋಚನೆ ಹಾಗೂ ಚಿಂತೆಯಿಂದ ನಿಮಗೂ ನಿಮ್ಮ ಸಂಗಾತಿಗೂ ಕಿರಿಕಿರಿ. ಇಂದು ಕಾರ್ಯದಲ್ಲಿನ ಬದ್ಧತೆಯಿಂದ ಎಲ್ಲರೂ ಅಚ್ಚರಿಪಡುತ್ತಾರೆ. ಹಣದ ಹೂಡಿಕೆಯ ಮಾರ್ಗಗಳನ್ನು ಅನ್ಯರ ಮೂಲಕ ಪಡೆದುಕೊಳ್ಳುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ನಿಮ್ಮ ನೋವನ್ನು ಆಲಿಸುವ ಕಿವಿಗಳ ಕೊರತೆ ಇದೆ. ನೀವು ನೀಡುವ ಅಭಿಪ್ರಾಯಗಳು ಬಾಲಿಶ ಎಂದು ಮನೆಯವರಿಗೆ ಅನ್ನಿಸಬಹುದು. ಹೂಡಕೆ ಮಾಡಿದರೂ ಅದರ ಪ್ರಮಾಣ ಕಡಿಮೆ ಇರಲಿ. ನಿಮ್ಮ ಭವಿಷ್ಯದ ಯೋಜನೆಯ ಸರಿಯಾದ ಚಿತ್ರಣವು ನಿಮ್ಮಲ್ಲಿ ಇರಲಿ. ತಪ್ಪುಗಳೇ ಇಂದು ಹೆಚ್ಚು ಕಾಣಿಸುವುದು. ನಿಮ್ಮ ಕೆಲಸದ ಸಾಮರ್ಥ್ಯದ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವಿರಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆದು, ಅಧ್ಯಯನವನ್ನು ನಿರ್ಲಕ್ಷಿಸಬಹುದು. ನೌಕರರಿಂದ ಕೆಲವು ಅಡಚಣೆಗಳೂ ಇರಬಹುದು.

ತುಲಾ ರಾಶಿ: ನಿಮ್ಮ ಮಾತು ಪ್ರಾಮುಖ್ಯವನ್ನು ಪಡೆಯಬೇಕು ಎಂಬುದು ಆಗದು. ಒತ್ತಡದಿಂದಲೂ ಇದು ಸಾಧ್ಯವಾಗದು. ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಪ್ರೀತಿಸುವುದನ್ನು ಕಲಿತರೆ ನಿಮ್ಮ ಸುತ್ತಲು ಎಂತಹದೇ ನಕಾರಾತ್ಮಕ ಅಂಶಗಳಿರಲಿ ಅವುಗಳು ಸಕಾರಾತ್ಮಕವಾಗಿ ನಿಮಗೆ ತೋರುತ್ತವೆ. ವಾಹನ ಸೌಕರ್ಯವನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸುವಿರಿ. ನಿಮ್ಮ ನೆಚ್ಚಿನ ಕೆಲಸಗಳು ತೃಪ್ತಿಕರ ರೀತಿಯಲ್ಲಿ ಪೂರ್ಣಗೊಳ್ಳುವುದು. ಸಂಬಂಧಿಕರ ಜೊತೆ ಸಂತೋಷದ ಸಮಯವನ್ನು ಕಳೆಯುವಿರಿ. ನಿಮ್ಮದಲ್ಲದ ತಪ್ಪಿನಿಂದ ನಿಮಗೆ ಕಷ್ಟ. ಕೆಲವು ಆರ್ಥಿಕ ಸಮಸ್ಯೆಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.‌

ವೃಶ್ಚಿಕ ರಾಶಿ: ಎಂದೋ ಆದ ತಪ್ಪಿ ಇಂದು ಬೆಳಕಿಗೆ ಬಂದು ನಿಮಗೆ ಅಪಮಾನ. ಇಂದು ಯಾವುದನ್ನೂ ಅತಿರೇಕ ಮಾಡಿಕೊಳ್ಳುವುದು ಬೇಡ. ಭವಿಷ್ಯದಲ್ಲಿ ಭರವಸೆಯನ್ನು ಇಟ್ಟು ಮುಂದಡಿ ಇಡುವುದು ಅನಿವಾರ್ಯ.‌ ಇಂದಿನ ಜೀವನ ಸಂತೋಷದಿಂದ ಕೂಡಿರುವುದು. ಅತ್ಯಾಪ್ತರಿಂದ ಅಪರೂಪದ ಬಹುಮಾನ ಸಿಗಲಿದೆ. ಆರ್ಥಿಕತೆಯ ಬಗ್ಗೆ ಯಾರಲ್ಲಿಯೂ ಹೇಳಲಾರಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯಾಗುವುದು. ನಿಮ್ಮ ಜೀವನದ ದಿಕ್ಕಿಗೆ ಹೊಸ ಮಾರ್ಗವೂ ಸೇರ್ಪಡೆಯಾಗುವುದು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಿ. ಮನೆಯಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಮಾಡಿಸುವಿರಿ. ಸರ್ಕಾರದ ವಿರುದ್ಧ ಸಮಾಧಾನ ನಿಮಗೆ ಇದ್ದು, ಅದನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅವಶ್ಯಕ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ.

ಧನು ರಾಶಿ: ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕತೆಯಿಂದ ಇರಿ. ನಿಮ್ಮನ್ನು ಗಮನಿಸುತ್ತಲೇ ಕೆಲವರು ಇರುವರು.‌ ಒಂಟಿಯಾಗಿ ಎಲ್ಲಿಯೂ ಇರುವುದು ಬೇಡ. ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಸುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿಕೊಂಡು ಜೀವನವನ್ನು ಸಾಗಿಸಿ. ಅನೇಕ ಬದಲಾವಣೆಗಳು ನಿಮ್ಮ ಜೀವನಕ್ಕೆ ಅಗತ್ಯವಿದೆ. ಎಲ್ಲವನ್ನೂ ಸರಿ ಮಾಡಬಲ್ಲೆನೆಂಬ ಮನಃಸ್ಥಿತಿಯಿಂದ ಹೊರಗುಳಿದು ಯೋಚಿಸಿ. ಯಾರ ಜೊತೆಗೆ ಅಸಭ್ಯ ವರ್ತನೆ ಬೇಡ. ಏಟು ತಿನ್ನಬೇಕಾದೀತು. ನಿಮ್ಮ ಸಾಮರ್ಥ್ಯವನ್ನು ಸಮಾಜದ ಎದುರು ತೆರೆದಿಡುವಿರಿ. ಉಳಿತಾಯಕ್ಕೆ ಬೇಕಾದ ಅನುಕೂಲವು ಸೃಷ್ಟಿಯಾಗುವುದು. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ.

ಮಕರ ರಾಶಿ: ನಿಮಗೆ ಯೋಗ್ಯವಾದ ಸ್ಥಾನ ಪ್ರಾಪ್ತಿಯಾಗುವುದು. ಯಾರ ಮಾತನ್ನೂ ಗಂಭೀರವಾಗಿ ತೆಗೆದುಕೊಳ್ಳಲಾರಿರಿ. ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ದೂರದ‌ ಪ್ರಯಾಣವನ್ನು ಮಾಡಬೇಡಿ. ಹಣದ ಅಗತ್ಯತೆ ಇಂದು ತುಂಬಾ ಕಾಡಲಿದೆ. ಸಂಗಾತಿಯ ಜೊತೆ ಸಂತೋಷದಿಂದ ಕಳೆಯಲು ಇಚ್ಛಿಸುವಿರಿ. ಮಹಿಳಾ ಉದ್ಯಮಕ್ಕೆ ಆರ್ಥಿಕಬೆಂಬಲ ಸಿಗುವುದು. ಕಛೇರಿಯಲ್ಲಿ ನಿಮ್ಮ‌ ಮೇಲಿನ ಅಭಿಪ್ರಾಯ ಬದಲಾಗಬಹುದು. ನೀವು ಸಂಬಂಧಗಳನ್ನು ಬಳಸದೇ ಸಡಿಲಾಗಬಹುದು. ವಿದ್ಯಾರ್ಥಿಗಳು ಅಧ್ಯಯನ ಮಾಡುವುದರ ಕಡೆ ಇರುವುದು. ಕಛೇರಿಯಲ್ಲಿ ನೀವು ಬಹಳ ಚಿಂತನಶೀಲವಾಗಿ ಕೆಲಸ ಮಾಡುವಿರಿ. ನಿಮ್ಮ ಮೇಲೆ ಯಾರಾದರೂ ಪಿತೂರಿ ಮಾಡಬಹುದು. ವಿದ್ಯಾಕ್ಷೇತ್ರದ ಉದ್ಯಮಕ್ಕೆ ಹಿನ್ನಡೆ. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಯುವಕರು ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸನ್ನು ಸಾಧಿಸುವರು.

ಕುಂಭ ರಾಶಿ: ಹಣಕಾಸಿನ ವಿಚಾರದಲ್ಲಿ ಅಸಮಾಧಾನ. ಕಲಹ ಮಾಡಿ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವಿರಿ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ಬಂದೀತು. ಉತ್ಸವದಲ್ಲಿ ಪಾಲ್ಗೊಳ್ಳುವಿರಿ ಹಾಗೂ ಮಿತ್ರರ ಜೊತೆ ಇಂದು ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆ ಕಾಲದ ಮಿತಿಯಿಲ್ಲದೇ ಹರಟೆಯನ್ನು ಹೊಡೆಯುವಿರಿ. ವಾಹನ ಅಪಘಾತದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಹಣಕಾಸಿನ ವೆಚ್ಚಕ್ಕೆ ಕಡಿವಾಣ ಅಗತ್ಯ. ನಿಮ್ಮ ಕೆಲಸವನ್ನು ಇತರರ ಜೊತೆ ಹಂಚಿಕೊಳ್ಳಲು ಕಲಿಯಿರಿ. ಅದು ನಿಮ್ಮ ಕೆಲಸದ ಹೊರೆಯನ್ನು ತಗ್ಗಿಸುತ್ತದೆ. ನಿಮ್ಮ ಕಾರ್ಯಕ್ಕೆ ಸಮಾಜದಿಂದ ಪುರಸ್ಕಾರ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ.

ಮೀನ ರಾಶಿ: ನಿಮ್ಮ ನಾಯಕತ್ವಕ್ಕೆ ಇತರರ ಬೆಂಬಲದಿಂದ ಸ್ಫೂರ್ತಿಸಿಗಲಿದ್ದು, ಇನ್ನಷ್ಟು ಉತ್ಸಾಹ ಬರಲಿದೆ. ನಿಮ್ಮ ಸಂಗಾತಿಯ ಆರೋಗ್ಯವು ಕೆಟ್ಟ ಕಾರಣ ನಿಮ್ಮ ಮಾನಸಿಕ ಸ್ಥಿತಿಯು ಸ್ತಿಮಿತದಲ್ಲಿ ಇರದು. ನಿಮ್ಮ ಆಸಕ್ತಿಗೆ ಯೋಗ್ಯವಾದ ಕಾರ್ಯವು ಸಿಗುವತನಕ ಕಾಯಬೇಕಾಗುವುದು. ಸ್ಪರ್ಧೆಗಳಲ್ಲಿ ಗಮನಾರ್ಹ ಫಲಿತಾಂಶ ನಿಮ್ಮದಾಗಲಿದೆ. ನಿಮ್ಮವರ ಜೊತೆ ಆನಂದದಿಂದ ಕಾಲವನ್ನು ಕಳೆಯುವಿರಿ. ಪರಸ್ಪರ ಚರ್ಚೆಯ ಮೂಲಕ ಹಳೆಯ ಹಲವು ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ವಿಶೇಷ ಪ್ರತಿಭೆಯು ಜನರಗೆ ಗೊತ್ತಾದೀತು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಎಚ್ಚರಿಕೆಯಿಂದ ಯೋಚಿಸಿ ಮುಂದುವರಿಯಿರಿ. ನಿಮ್ಮ ವಿರುದ್ಧದ ಮಾತುಗಳಿಗೆ ಕಿವಿಗೊಡಲು ಸಮಯ ಮತ್ತು ಆಸಕ್ತಿ ಎರಡೂ ಇರದು. ಪ್ರೀತಿಯಲ್ಲಿ ಪಾರದರ್ಶಕತೆ ಇರುವುದು ಬಹಳ ಮುಖ್ಯ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಆರೋಗ್ಯದಲ್ಲಿ ಜಾಗರೂಕತೆ ಅವಶ್ಯವಾಗಿ ಇರಲಿ.

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *