ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಮಂಗಳವಾರ ಫಲಿತಾಂಶದ ತಳಮಳ, ಅಧಿಕಾರದ ಗತ್ತು, ಮಾತಿನ ಬಂಧನ, ಅನವಶ್ಯಕ ಖರೀದಿ, ಧಾರ್ಮಿಕದಲ್ಲಿ ಭಾಗಿ, ಆಕ್ಷೇಪ, ದಾಖಲೆಯ ಸಂಗ್ರಹ ಇವೆಲ್ಲ ಈ ದಿನದ ವಿಶೇಷ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೇವತೀ, ಯೋಗ : ಅತಿಗಂಡ, ಕರಣ : ತೈತಿಲ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:34 – 17:06, ಗುಳಿಕ ಕಾಲ 12:30 – 14:02, ಯಮಗಂಡ ಕಾಲ 09:26 – 10:58
ಮೇಷ ರಾಶಿ :
ದಾಖಲೆ ಮಾಡಲು ಏನನ್ನೂ ಮಾಡದೇ, ಎಲ್ಲವೂ ದಾಖಲಾಗುವಂತೆ ಮಾಡಿ. ಆರ್ಥಿಕ ವ್ಯವಹಾರವನ್ನು ಮಾಡುವವರಿಗೆ ಅವಕಾಶ, ಆದಾಯವೂ ಹೆಚ್ಚಾಗುವುದು. ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ವಿರೋಧಿಗಳು ನಿಮ್ಮ ಬೆನ್ನು ಬಿಡದೇ ಪೀಡಿಸಬಹುದು. ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡಬಹುದು. ನಿಮಗೆ ಸಿಕ್ಕ ದೊಡ್ಡ ಯೋಜನೆಗಳನ್ನು ನಿರ್ವಹಣೆಯ ಭಯದಿಂದ ಕೈ ಬಿಡುವಿರಿ. ಪ್ರಯಾಣದ ಆಯಾಸದಿಂದ ಉತ್ಸಾಹ ಕಡಿಮೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಸಾಹಿತ್ಯಾಸಕ್ತರು ಪ್ರಸಿದ್ಧಿಯನ್ನು ಹೆಚ್ಚು ಬಯಸುವರು. ಅಧ್ಯಾತ್ಮದ ಬಲವೇ ನಿಮ್ಮ ಸಂತೋಷಕ್ಕೆ ಕಾರಣ. ಸಂಸ್ಥೆಯ ಪಾಲುದಾರಿಕೆಗಾಗಿ ಇಂದು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ.
ವೃಷಭ ರಾಶಿ :
ಅಲ್ಪ ಸಹಾಯವಾದರೂ ಆದರೆ ಕುಟುಂಬದ ಭಾರ ಕಡಿಮೆಯಾಗಲಿದೆ. ಪರಿಶ್ರಮದ ಗಳಿಕೆಯನ್ನು ಉಳಿಸಿಕೊಳ್ಳುವುದು ಉತ್ತಮ. ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ನಿಮ್ಮ ಚರಾಸ್ತಿಗಳೇ ನಿಮಗೆ ಆಧಾರವಾಗಬಹುದು. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ನಿಮ್ಮವರಿಂದ ನಿಮಗೆ ಕಿರಿಕಿರಿ ಉಂಟಾಗುವುದು. ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು. ಮನೆಗೆ ಬೇಕಾದ ವಸ್ತುಗಳನ್ನು ಇಂದು ನೀವು ಖರೀದಿಸುವಿರಿ. ಪ್ರಾಮಾಣಿಕ ಪ್ರಯತ್ನದ ಫಲ ಇಂದು ಅರಿವಾಗುವುದು. ಅನಾರೋಗ್ಯವು ನಿಮ್ಮ ಅನ್ಯ ಚಟುವಟಿಕೆಗೆ ಮಾರಕವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ವೃತ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ :
ಬೇರೆ ಸ್ಥಳಕ್ಕೆ ಹೋಗಬೇಕಾದ ಕಾರಣ ಸ್ವಂತ ಮನೆಯನ್ನು ಭೋಗ್ಯಕ್ಕೆ ಕೊಡುವುದು ಉತ್ತಮಯೋಚನೆ, ಮಾರಾಟ ಬೇಡ. ಮಕ್ಕಳ ಕ್ಷೇಮದ ಬಗ್ಗೆ ಅತಿಯಾದ ಕಾಳಜಿ ಇರುವುದು. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಆಲಂಕಾರಿಕ ದ್ರವ್ಯಗಳಿಂದ ನಿಮಗೆ ನಷ್ಟ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳಿಂದ ತೊಂದರೆ ಬತಬಹುದು. ಹೊಸತನ್ನು ಮಾಡಲು ನಿಮಗೆ ಇಚ್ಛಾಶಕ್ತಿಯ ಕೊರತೆ ಇರಲಿ. ಸಂಗಾತಿಯ ಕಾರಣದಿಂದ ನಿಮ್ಮ ಮರ್ಯಾದೆಗೆ ತೊಂದರೆ. ಕೆಲಸಕ್ಕೆ ಹಾಕಿದ ಅರ್ಜಿಯಿಂದ ಪ್ರತ್ಯುತ್ತರ ಬರದೇ ಹೋಗುವುದು. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಪರೋಪಕರಾದಿಂದ ಸಂತೋಷವಂತೂ ಸಿಗುವುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ.
ಕರ್ಕಾಟಕ ರಾಶಿ :
ಭೂಮಿಯನ್ನು ಖರೀದಿಸುವವರ ಜೊತೆ ಒಳ ಒಪ್ಪಂದ ಮಾಡಿಕೊಳ್ಳಬಹುದು. ಅತಿಥಿ ಸತ್ಕಾರದಿಂದ ನಿಮಗೆ ಸಂತೋಷ. ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ನೀರಿನಿಂದ ನಿಮಗೆ ಆಪತ್ತು ಬರಬಹುದು. ಪ್ರಭಾವಿ ವ್ಯಕ್ತಿಗಳ ಒಡನಾಟ ಅನಿರೀಕ್ಷಿತವಾಗಿ ಲಭ್ಯ. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಹಿತಶತ್ರುಗಳಿಂದ ಹೆಚ್ಚು ವಿಘ್ನಗಳು ಬಂದರೂ ನಿಮಗೆ ಅದು ಗೊತ್ತಾಗದೇ ಇರಬಹುದು. ಉದ್ಯಮವು ಸ್ವಲ್ಪ ಹಿನ್ನಡೆಯನ್ನು ಪಡೆಯಬಹುದು. ಅಂದುಕೊಂಡಿದ್ದನ್ನು ಸಾಧಿಸುತ್ತೇನೆ ಎಂಬ ಉತ್ಸಾಹ ಇರುವುದು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ. ನಿಮಗೆ ಬರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ.
ಸಿಂಹ ರಾಶಿ :
ನಿಮ್ಮ ತಪ್ಪಿಗೆ ಯಾರಿಗೆ ಸ್ಪಷ್ಟತೆ ಕೊಡಬೇಕು ಎನ್ನುವುದು ಗೊತ್ತಾಗದು. ಸಾಹಿತ್ಯಾಸಕ್ತಿಯುಳ್ಳವರಿಗೆ ಹೊಸ ದಿಕ್ಕು ತೋಚುವುದು. ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ. ನಿಮ್ಮ ಮೇಲಿನ ನಂಬಿಕೆಯು ನಷ್ಟವಾಗಬಹುದು. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸಬಹುದು. ಕಾರ್ಮಿಕರಿಂದ ವೇತನ ಅಧಿಕ ಮಾಡಲು ಒತ್ತಡವು ಬರಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನೇ ಸಂದೇಹಪಡುವಂತೆ ಮಾಡುವುದು. ಸುಲಭವಾಗಿ ಮಾಡುವ ಕೆಲಸವನ್ನು ನೀವು ಕ್ಲಿಷ್ಟಕರ ಮಾಡಿಕೊಳ್ಳುವಿರಿ. ನಿಮ್ಮ ಪೂರ್ವನಿರ್ಧಾರನ್ನು ಬದಲಿಸಿಕೊಳ್ಳಲು ನೀವು ಒಪ್ಪುವುದಿಲ್ಲ. ಒತ್ತಾಯಕ್ಕೆ ಮಾಡುವ ಧಾರ್ಮಿಕ ಕಾರ್ಯದಿಂದ ನಿಮಗೆ ಸಂತೋಷವಿರದು, ಪುಣ್ಯವೂ ಇರದು. ಉತ್ತಮವಾದ ಭೂಮಿಯನ್ನು ನೀವು ಖರೀದಿಸಲು ಮುಂದಾಗುವಿರಿ. ಅಪರಿಚಿತ ಸಂದೇಶಕ್ಕೆ ನೀವು ಗಾಬರಿಯಾಗುವಿರಿ. ಮನೋರಂಜನೆ ಕಡೆ ಹೆಚ್ಚುಗಮನವು ಇರಬಹುದು. ಯಾರನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ.
ಕನ್ಯಾ ರಾಶಿ :
ತಮಾಷೆಯನ್ನು ಪೂರ್ಣವಾದ ಮನಸ್ಸಿನಿಂದ ಮಾಡಲಾಗದು. ಇಂದು ನಿಮ್ಮದೇ ಆದ ಒರಟುತನವು ಇತರರಿಗೆ ಕಷ್ಟಕೊಡುವುದು. ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಸಾಲಗಾರ ಬಾಧೆಯು ಕಡಿಮೆ ಇರುವುದರಿಂದ ಕೊಡಬೇಕಾದ ಹಣವನ್ನು ಯಾವುದಾರೂ ಮೂಲದಿಂದ ಸಂಗ್ರಹಿಸಿಕೊಳ್ಳಿ. ಪರಿಚಿರಿಂದ ಒಂದು ಸಂಸ್ಥೆಯನ್ನು ಸೇರಿ ಕೆಲಸ ಮಾಡುವಿರಿ. ಮನೆಯಿಂದ ಇಂದು ದೂರವಿರಬೇಕಾಗುವುದು. ಮನೋರಂಜನೆಗೆ ಅವಕಾಶಗಳಿದ್ದರೂ ಯಾವದೋ ಆಲೋಚನೆಯನ್ನು ಮಾಡುತ್ತ ಇರುವಿರಿ. ಆಕ್ಷೇಪಕ್ಕೆ ಪ್ರತಿಯಾದ ಆಕ್ಷೇಪ ಮಾಡದೇ ಸ್ವಾವಲೋಕನ ಮಾಡಿಕೊಳ್ಳಿ. ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಸೂಕ್ತ ವೇದಿಕೆಯು ನಿಮಗೆ ಲಭ್ಯವಾಗಬಹುದು. ವಿವಾಹಯೋಗವು ಬಂದಿರುವುದರಿಂದ ಇನ್ನು ಹಿಂಜರಿಕೆ ಬೇಡ. ಸಾಮರಸ್ಯಕ್ಕೆ ಯಾವುದೋ ಒಂದು ಕಾರ್ಯವನ್ನು ಮಾಡಿಕೊಂಡು ನಿರುದ್ಯೋಗದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಿಕೊಳ್ಳುವಿರಿ.
ತುಲಾ ರಾಶಿ :
ವಿದ್ಯಾರ್ಥಿಗಳ ಪ್ರವಾಸ ಯೋಜನೆ ಎಲ್ಲವೂ ಬದಲಾಗಲಿದೆ. ಇಂದು ನೀವು ವ್ಯವಸ್ಥೆಯನ್ನು ಸರಿ ಮಾಡುವ ಯೋಜನೆ ಹಾಕಿಕೊಳ್ಳುವಿರಿ. ಮಾತನ್ನು ಕೇಳಿ, ತೊಂದರೆಯನ್ನು ತಪ್ಪಿಸಿಕೊಳ್ಳುವಿರಿ. ಇಷ್ಟ ವಸ್ತುಗಳನ್ನು ಖರೀದಿಸುವ ಸುದಿನ ಇಂದು. ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗುವಿರಿ. ಸಹನೆಯ ಮಿತಿಯು ಬೀರಬಹುದು. ಹದತಪ್ಪಿದ ಮಾತು ನಿಮಗೆ ಕಷ್ಟಕೊಡುವುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾದೀತು. ಅಗೌರವ ಸಿಗುವ ಕಡೆ ನೀವು ಹೋಗಲಾರಿರಿ. ಸಾಲ ತೀರಿಸುವ ನಿಮ್ಮ ಯೋಜನೆ ಪೂರ್ಣ ಸಫಲವಾಗದು. ದಾನವನ್ನು ಹೆಚ್ಚು ನಿಮ್ಮ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ಮಾತಿಗೆ ಪ್ರತಿಕ್ರಿಯೆ ಕೊಡದೇ ಇರುವುದು ಅನಾದರ ಎಂಬ ಭಾವನೆ ಬರಲಿದೆ. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು. ಪೂರ್ಣಪ್ರಮಾಣದ ಕೃಷಿಗೆ ಒತ್ತುಕೊಡುವಿರಿ. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ಬಾಕಿ ಉಳಿದ ಕೆಲಸಗಳ ಕಡೆ ಇಂದು ಗಮನಕೊಟ್ಟು ಮುಗಿಸಬೇಕಾದ ಒತ್ತಡ ಇರುವುದು. ನಿಮ್ಮ ಅಮೂಲ್ಯ ವಸ್ತುಗಳು ನಷ್ಟವಾಗಬಹುದು.
ವೃಶ್ಚಿಕ ರಾಶಿ :
ಅಧಿಕಾರದ ಹಸ್ತಾಂತರವನ್ನು ಬೇಸರದಿಂದ ಮಡುವಿರಿ. ವಿಳಂಬವಾದ ಕಾರ್ಯಕ್ಕೆ ದಂಡಕಟ್ಟುವ ಸಂದರ್ಭ ಬರಲಿದೆ. ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ನೀವು ಕುಟುಂಬಕ್ಕೆ ಸಮಯವನ್ನು ಕೊಡುವುದು ಕಷ್ಟವಾದೀತು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಕೇಳುವ ಸಂದರ್ಭವೂ ಬರಬಹುದು. ರಕ್ತದ ಒತ್ತಡದಲ್ಲಿ ವ್ಯತ್ಯಾಸವಾಗಿ ವೈದ್ಯರನ್ನು ಕಾಣಬೇಕಾಗುವುದು. ಅಂದುಕೊಂಡ ಸಮಯಕ್ಕೆ ನಿಮ್ಮ ಕೆಲಸಗಳು ಮುಕ್ತಾಯ ಆಗದೇ ಹೋಗಬಹುದು. ಬಂಧುಗಳಿಗೆ ನಿಮ್ಮ ಕಡೆಯಿಂದ ಸಹಾಯವು ಸಿಗಲಿದೆ. ಅಧಿಕಾರವನ್ನು ನೀವು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವಿರಿ. ನಿಮ್ಮ ಮೇಲೆ ಬರುವ ಆಪಾದನೆಯನ್ನು ಮೆಲ್ಲಗೆ ತಪ್ಪಿಸಿಕೊಳ್ಳುವಿರಿ. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ತೊಂದರೆಗಳು ಆಗಬಹುದು. ನಿಯಮವನ್ನು ಮೀರಿ ವರ್ತಿಸುವುದು ಬೇಡ. ನಿಮ್ಮ ಸಂಗಾತಿಯ ಬೆಂಬಲದಿಂದ ಖುಷಿ.
ಧನು ರಾಶಿ :
ಏಕಾಂಗಿಯಾಗಿ ಹೋರಾಟದಂತೆ ಕೆಲಸ ಮಾಡುವಿರಿ. ವ್ಯಾಪಾರಕ್ಕೆ ಬೇಕಾದ ಹಣಕಾಸಿನ ಸಂಗ್ರಹವನ್ನು ನಾಲ್ಕಾರು ಜನರಿಂದ ಪಡೆಯುವಿರಿ. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು. ಮನೆಯವರ ಮೇಲಿನ ಕೋಪಕ್ಕೆ ಏನೂ ಮಾಡಲಾಗದ ಸ್ಥಿತಿ. ಹಲ್ಲುಕಿತ್ತ ಹಾವಿನಂತಹ ಸ್ಥಿತಿ ಬರುವುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತೊಡಿಸುವಿರಿ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಬಹುದು. ಸಾಲದ ವಿಚಾರವು ಮನೆಯಲ್ಲಿ ಕಲಹವಾಗುವಂತೆ ಮಾಡಬಹುದು. ಆದೇಶವನ್ನು ಶಿರಸಾ ವಹಿಸಿ ಮಾಡುವಿರಿ. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ.
ಮಕರ ರಾಶಿ :
ಎಲ್ಲ ಪ್ರಶ್ನೆಗೆ ಉತ್ತರ ಕೊಟ್ಟು ಸಮಾಧಾನಪಡಿಸಲಾಗದು. ನಿಮ್ಮ ಮಾತು ನಡೆಯುವಂತೆ ಅಪರಿಚಿತ ಮಹಿಳೆಯರಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕುಬಿರಿ. ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ವೇಗವನ್ನು ಹೆಚ್ಚಿಸುವಿರಿ. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ನೀವೇ ವ್ಯವಸ್ಥೆಯಿಂದ ಹೊರನಡೆದರೆ ನೆಮ್ಮದಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಇಂದು ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರುವಿರಿ. ನಿಮ್ಮ ಇಂದಿನ ಅಸಹಾಯಕ ಸ್ಥಿತಿಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದು ಕಷ್ಟ. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ.
ಕುಂಭ ರಾಶಿ :
ನಿರಪೇಕ್ಷೆ ಇದ್ದರೂ ನಿಮಗೆ ತೊಂದರೆ. ಕೂಡಿಟ್ಟ ಹಣದಿಂದ ವಾಹನ ಖರೀದಿ ಮಾಡುವ ಯೋಚನೆ ಬರುವುದು. ನಿಮ್ಮ ವ್ಯಾಪಾರದಲ್ಲಿ ಲಾಭವು ಕಡಿಮೆ ಕಾಣಿಸುವುದು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡುವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಭೂಮಿಯ ವ್ಯವಹಾರವು ಮಕ್ಕಳ ಸಹಾಯದಿಂದ ಕೈಗೂಡುವುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಕರುಬುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ವಿಶ್ವಾಸವನ್ನು ಪತ್ರದ ಮೂಲಕ ವ್ಯಕ್ತಪಡಿಸುವಿರಿ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಆಂತರಿಕ ವ್ಯವಹಾರದಲ್ಲಿ ನಿಷ್ಣಾತರಾಗುವಿರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ.
ಮೀನ ರಾಶಿ :
ಯಾರೋ ಮಾಡಿದ ಕಾರ್ಯದಿಂದ ಹೆಸರು ಬರಲಿದೆ. ಕೃಷಿಯಿಂದ ಇಂದು ಆಗಬೇಕಾದ ಲಾಭ ಪೂರ್ಣವಾಗದು. ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ಯಾರ ಪ್ರಶಂಸೆಯನ್ನು ನೀವೂ ನಂಬಲಾರಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು. ಬರಬೇಕಾದ ಹಣವು ವಿಳಂಬವಾಗಬಹುದು. ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಆಗದವರ ಕಣ್ತಪ್ಪಿಕೊಂಡು ಓಡಾಡಲು ಆಗದು. ಅತಿಯಾದ ಪ್ರೀತಿಯೇ ನಿಮಗೆ ತೊಂದರೆ ಕೊಟ್ಟೀತು ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ನಿರ್ಧಾರಗಳು ಅಸ್ಪಷ್ಟವಾಗಿ ಇರುವುದು ಬೇಡ. ಅನಗತ್ಯ ಹಸ್ತಕ್ಷೇಪದಿಂದ ನಿಮ್ಮ ಗೌರವ ಕಡಿಮೆ ಆಗಬಹುದು.
Views: 38