ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ, ಶನಿವಾರ ನೋವಿಗೆ ಸ್ಪಂದನೆ, ಆನಾರೋಗ್ಯದಿಂದ ಮುಕ್ತಿ, ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿ ಇದೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವಜ್ರ, ಕರಣ: ಕೌಲವ, ಸೂರ್ಯೋದಯ – 06: 07 am, ಸೂರ್ಯಾಸ್ತ – 06 : 50 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:18 – 10:54, ಯಮಘಂಡ ಕಾಲ 14:04 – 15:40, ಗುಳಿಕ ಕಾಲ 06:08 – 07:43
ಮೇಷ ರಾಶಿ: ಹಿರಿಯರ ಎಚ್ಚರಿಕೆಯನ್ನು ಅನುಸರಿಸದೇ ಆಪತ್ತಿನಲ್ಲಿ ಸಿಕ್ಕಿಬೀಳುಬಿರಿ. ಹೋರಾಟದ ಸ್ವಭಾವವು ಎದ್ದು ತೋರುವುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ. ನಿಮ್ಮನ್ನು ವಿಮರ್ಶೆ ಮಾಡಬಾರದು ಎಂಬ ಧೋರಣೆ ಖಂಡಿತಾ ಸರಿಯಲ್ಲ. ಇಷ್ಟದವರ ಭೇಟಿಗೆ ಅವಕಾಶವಿದ್ದರೂ ಆಗದು. ಯಾವುದೇ ನೆಪ ಹೇಳದೆ ಚಟುವಟಿಕೆಯಿಂದ ಇರಲು ಪ್ರಯತ್ನಿಸಿ. ಹೊಸದೊಂದು ಗೆಳೆತನವಾಗಿ. ಅಧ್ಯಯನದಿಂದ ನಿಮ್ಮನ್ನು ಚಂಚಲವಾಗಿಸುವ ಅನಗತ್ಯ ವಾದಗಳನ್ನು ಬಿಡಿ. ಕುಟುಂಬದ ಜೊತೆ ಹಾಸ್ಯ ಮತ್ತು ಸಂತೋಷ ಕಾಲವನ್ನು ಕಳೆಯುವಿರಿ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ಕೃಷಿಯ ಬಗ್ಗೆ ಸ್ವಲ್ಪ ಆಸಕ್ತಿಯು ಇರುವುದು. ಯಾವುದೇ ನಿರ್ಬಂಧಗಳನ್ನು ಕೂಡಲೇ ಒಪ್ಪುವುದಿಲ್ಲ.
ವೃಷಭ ರಾಶಿ: ತಾತ್ಕಾಲಿಕ ಉದ್ಯೋಗದಿಂದ ಬಿಡುಗಡೆ ಸಿಗಲಿದೆ. ನೀವು ಅದೃಷ್ಟದ ನಿರೀಕ್ಷೆಯಲ್ಲಿ ಇರುವಿರಿ. ಯಾರನ್ನಾದರೂ ಮೆಚ್ಚಿಸಿ ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸುವಿರಿ. ಆಯಾಸವು ನಿಮ್ಮ ಉತ್ಸಾಹವನ್ನು ತಿನ್ನಬಹುದು. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ಬಹಳ ಏಕಾಗ್ರತೆಯಿಂದ ಇರಬೇಕು. ಹೊಸಬರ ಜತೆಗೆ ಅತಿಯಾದ ಸಲುಗೆ ಬೇಡ. ನಿಮ್ಮ ಮಿತಿಯನ್ನು ಅರಿತು, ಯಾರಿಗಾದರೂ ಮಾತು ನೀಡಿ. ಕುಟುಂಬ ವ್ಯವಸ್ಥೆ ಸರಿಯಾಗಲು ಕೆಲವನ್ನು ಬಿಟ್ಟುಕೊಡಬೇಕಾದೀತು. ಒತ್ತಡದ ಕರೆಗಳಿಂದ ನಿಮಗೆ ಕಷ್ಟವಾಗಲಿದೆ. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಶಾರೀರಿಕ ಆಯಾಸದಿಂದ ಆರೋಗ್ಯವು ಕುಗ್ಗೀತು. ಗೌಪ್ಯವಿಚಾರವನ್ನು ತಿಳಿಯುವ ಆಸಕ್ತಿ ಹೆಚ್ಚಾಗಲಿದೆ. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿಯಂತೆ ವರ್ತಿಸುವಿರಿ.
ಮಿಥುನ ರಾಶಿ: ಸಮೂಹದಲ್ಲಿ ಮಾಡುವ ಕಾರ್ಯದಿಂದ ಯಶಸ್ಸು ಸಿಗಲಿದೆ. ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರ ಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಮೂಲಸ್ಥಾನದಿಂದ ದೂರ ಹೋಗುವ ಸಾಧ್ಯತೆ ಇದೆ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ಸ್ವಾವಲಂಬನೆಯ ಕಾರಣಕ್ಕೆ ನಿಮ್ಮಲ್ಲೊಂದು ಹೊಸ ಆತ್ಮವಿಶ್ವಾಸ ಮೂಡಲಿದೆ. ಉದ್ಯೋಗದಾತರು ನಿಮ್ಮಿಂದ ನಿರೀಕ್ಷೆ ಮಾಡುವ ಬೆಂಬಲ ನೀಡುವಲ್ಲಿ ಸಫಲರಾಗುತ್ತೀರಿ. ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ನೀವು ನಿಮ್ಮವರಿಗೆ ಕೊಡುವ ಸೂಚನೆ ಸರಿಯಾಗಿರಲಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಆಪ್ತರ ಭೇಟಿಯು ನಿಮಗೆ ಸಂತೋಷವನ್ನು ಕೊಡಲಿದೆ. ಹಿಂದಿನ ಹೂಡಿಕೆಗಳು ಬಹಳ ಆದಾಯವು ಸಿಗಲಿದೆ. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ತಾಳ್ಮೆಯ ಅಗತ್ಯತೆಯ ಮನವರಿಕೆ ಅಗತ್ಯ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು.
ಕರ್ಕಾಟಕ ರಾಶಿ: ಹಲವು ಕಾರ್ಯಗಳ ಒತ್ತಡದಿಂದ ಹೊರಬರಲು ಮನೋರಂಜನೆಗೆ ಮೀಸಲಿಡಬೇಕಾಗಬಹುದು. ವಿದ್ಯಾರ್ಥಿಗಳ ಒಟ್ಟಾರೆ ಕಾರ್ಯಕ್ಷಮತೆ ಗಮನಾರ್ಹ ಸುಧಾರಣೆ ಇರಲಿದೆ. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಯಾರಿಗೂ ಹೇಳಿಕೊಳ್ಳಲು ಸಾಧ್ಯವಾಗದಂಥ ಮಾನಸಿಕ ತೊಳಲಾಟಕ್ಕೆ ಸಿಲುಕಿಕೊಳ್ಳುತ್ತೀರಿ. ಶತ್ರುಗಳಿಂದ ನಿಮಗೆ ಸಿಗಬೇಕಾದುದು ಸಿಗಲಿದೆ. ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯುವಿರಿ. ಶತ್ರುಗಳು ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬರಬಹುದು. ಉದ್ವೇಗದಿಂದ ಏನನ್ನಾದರೂ ಮಾಡಿಕೊಂಡೀರ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಟ್ಟೆಯ ಸ್ವಾಸ್ಥ್ಯವು ಕೆಡುವ ಸಾಧ್ಯತೆಯಿದೆ. ಹಿರಿಯರ ವಿಚಾರದಲ್ಲಿ ಅನಾದರ ತೋರಿದಂತೆ ಕಾಣಿಸುವುದು. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿಯು ಇರಲಿದ್ದು ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಿರಿ.
ಸಿಂಹ ರಾಶಿ: ಜೊತೆಗಿರುವವರ ಬಗ್ಗೆ ಸರಿಯಾದ ಜ್ಞಾನವಿಲ್ಲದೇ ಮಾತನಾಡುವಿರಿ. ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮಿಂದ ಆದ ಸಹಾಯವನ್ನು ಮಾಡಲಿದ್ದೀರಿ. ಸೋದರಿಯರ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮಾರ್ಗದರ್ಶನದ ಕೊರತೆಯಿಂದ ನಿಮ್ಮ ದಿಕ್ಕು ತಪ್ಪಲಿದೆ. ಚರ್ಮದ ಸಮಸ್ಯೆ ಇರುವವರು ಆಹಾರ ಸೇವನೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಉದ್ಯೋಗಸ್ಥಾನದಲ್ಲಿ ಕೆಲವು ಮಾತುಗಳು ನಿಮ್ಮ ವಿರುದ್ಧವಾಗಿಯೂ ಇರಬಹುದು. ಅಪರಿಚಿತರ ಕರೆಯಿಂದ ಭಯಗೊಳ್ಳುವಿರಿ. ನೀವು ದೇಶದಿಂದ ಹೊರಗೆ ಹೋಗುವ ಬಗ್ಗೆ ಯೋಚಿಸಬಹುದು. ಸ್ಥಿರಾಸ್ತಿಯ ಆಧಾರದ ಮೇಲೆ ಸಾಲವನ್ನು ಮಾಡಬೇಕಾಗಬಹುದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು.
ಕನ್ಯಾ ರಾಶಿ: ಶೈಕ್ಷಣಿಕ ವ್ಯವಸ್ಥೆಯು ನಿಮ್ಮ ಸೇವೆಯನ್ನು ಬಯಸಬಹುದು. ಇಂದು ನಿಮ್ಮ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯು ದ್ವೇಷವಾಗಿ ಬದಲಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ಪರಸ್ಪರ ಸಂವಹನದಿಂದ ಮಾನಸಿಕ ಭಿಮ್ನತೆ ದೂರಾಗಬಹುದು. ಸ್ವಾರ್ಥದ ಹಣೆಪಟ್ಟಿ ನಿಮ್ಮ ಹೆಸರಿಗೆ ಬೀಳಬಹುದು. ಯಾವುದೇ ಸ್ಪಷ್ಟನೆ ನೀಡಿದರೂ ಪ್ರಯೋಜನ ಆಗುವುದಿಲ್ಲ. ಸಹೋದ್ಯೋಗಿಗಳ ಜತೆಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ನಿಮ್ಮ ವಿರುದ್ಧ ದೂರು ಹೇಳುವ ಸಾಧ್ಯತೆ ಕೂಡ ಇದೆ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ದೂರದ ಪ್ರಯಾಣವನ್ನು ಮಾಡುವ ನಿರ್ಧಾರವನ್ನು ಮಾಡಲಿದ್ದೀರಿ. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಯಾರ ಮೇಲೂ ಆಪಾದನೆ ಬೇಡ. ಸಂತಾನ ಬಗ್ಗೆ ಕುಟುಂಬದಿಂದ ಒತ್ತಡ ಬರಬಹುದು.
ತುಲಾ ರಾಶಿ: ಉದ್ಯಮದ ಲೆಕ್ಕಾಚಾರಗಳು ಉಲ್ಟಾ ಆಗಲಿದೆ. ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸಿ, ಕೆಲವು ದಿನಗಳ ಅನಂತರ ನಡೆಸುವುದು ಉತ್ತಮ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ವಿಫಲತೆಯನ್ನು ನಕಾರಾತ್ಮಕವಾಗಿ ಸ್ವೀಕರಿಸುವುದು ಬೇಡ. ಯಾವುದೇ ಸಾಲಕ್ಕೆ ಪ್ರಯತ್ನಿಸಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಗೋಚರಿಸುತ್ತವೆ. ತೀರಾ ಆಪ್ತರಿಗೆ ಸಹಾಯದ ಅಗತ್ಯ ಬೀಳುತ್ತದೆ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದೋ ಇಲ್ಲವೋ ಎನ್ನುವ ಭಯವು ಕಾಡಲಿದೆ. ಅಪಮಾನವನ್ನು ಎದುರಿಸಬೇಕಾಗಬಹುದು ಎಂಬ ಆತಂಕವೂ ಮನೆ ಮಾಡಿರುತ್ತದೆ. ಪರರ ಇಷ್ಟದಂತೆ ಜೀವನ ಮಾಡಲಾಗದು. ಹಣಕಾಸು ನಿರ್ವಹಣೆ ಮತ್ತು ಸಕಾರಾತ್ಮಕ ಕ್ರಮಗಳು ಏಳಿಗೆಗೆ ದಾರಿ ಮಾಡಿಕೊಡುತ್ತದೆ. ನಿಮ್ಮ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು.
ವೃಶ್ಚಿಕ ರಾಶಿ: : ಪ್ರಾಯೋಗಿಕ ಕಾರ್ಯದಲ್ಲಿ ಬಹಳ ಆಸಕ್ತಿಯಿಂದ ತೊಡಗುವಿರಿ. ಅತಿಯಾದ ಚಿಂತನೆಯು ನಿಮ್ಮ ಮಾನಸಿಕ ಸ್ಥಿತಿಯನ್ನು ದುರ್ಬಲ ಮಾಡುವುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ನಿಮ್ಮ ಸಾಮರ್ಥ್ಯದಿಂದ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮಾತಿನ ಮೂಲಕ ಇತರರನ್ನು ಮೋಡಿ ಮಾಡಲಿದ್ದೀರಿ. ಯಾರನ್ನೂ ಮಟ್ಟಹಾಕುವ ಕೆಲಸಕ್ಕಿಂತ ನಿಮ್ಮ ಬೆಳವಣಿಗೆಯ ಬಗ್ಗೆ ಒತ್ತು ಇರಲಿ. ಗೊತ್ತಿರಬೇಕಾದ ಎಷ್ಟೋ ವಿಚಾರಗಳು ಗೊತ್ತಲ್ಲವೆಂದು ಬೇಸರ ಪಡಬೇಕಾಗಿಬರಬಹುದು. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಅದರಿಂದ ಸಂಪೂರ್ಣ ಹೊರಬರುವ ಮಾರ್ಗಗಳನ್ನು ಅನುಸರಿಸಿ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ವ್ಯವಧಾನದ ಕೊರತೆಯನ್ನು ಎದುರಿಸುವಿರಿ. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು.
ಧನು ರಾಶಿ: ಮನಸ್ಸಿನ ಹಠಕ್ಕೆ ತಂತ್ರದ ಮೂಲಕ ಸಾಂತ್ವನ ಅವಶ್ಯಕ. ಇಂದು ನಿಮ್ಮ ಆಸ್ತಿಯ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯವಲ್ಲ. ನಿಮ್ಮ ಅಗತ್ಯತೆಗಳ ಯಾದಿಯು ತುಂಬಾ ದೊಡ್ಡದಿದ್ದು ಅದನ್ನು ಪೂರೈಸಲು ಸತತ ಪ್ರಯತ್ನವನ್ನು ಮಾಡುವಿರಿ. ಹಿಂದೆ ಸಹಾಯ ಮಾಡಿದ ವ್ಯಕ್ತಿಗಳು ಈಗ ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಶಕ್ತಿಯ ಪ್ರದರ್ಶನವನ್ನು ಇಂದು ಮಾಡುವಿರಿ. ಹಗಲಿರುಳು ದುಡಿಯುವ ನಿಮ್ಮ ಗುಣ ಮೇಲಧಿಕಾರಿಗಳ ಗಮನಕ್ಕೆ ಬಂದು, ಮೆಚ್ಚುಗೆಯ ಮಾತುಗಳನ್ನಾಡಲಿದ್ದಾರೆ. ಅಪರಿಚಿತರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಅನಾಹುತವಾದೀತು. ಅಹಂಕಾರವು ತಾನಾಗಿಯೇ ತೋರ್ಪಡುವುದು. ಅಲ್ಪ ಧನಲಾಭಕ್ಕೆ ಹೆಚ್ಚು ಶ್ರಮವಹಿಸುವಿರಿ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗುವುದು. ಇಂದು ನಿಮ್ಮ ಶತ್ರುಗಳು ಅಸಮಾಧಾನಗೊಳ್ಳುವರು. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ.
ಮಕರ ರಾಶಿ: ಕೆಲವರನ್ನು ದೂರ ಮಾಡಿಕೊಳ್ಳದೇ ಯಶಸ್ಸು ಸಾಧ್ಯವಾಗದು. ಅಪರಿಚಿತರೂ ಆಪ್ತರಂತೆ ವರ್ತಿಸಬಹುದು. ನಿಮ್ಮ ಎಲ್ಲ ವಿಚಾರಗಳನ್ನು ಬಿಟ್ಟುಕೊಡುವಿರಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ನಿದ್ರೆಯಿಲ್ಲದೇ ಮನಸ್ಸು ಕಿರಿಕಿರಿಯನ್ನು ಅನುಭವಿಸುವುದು. ಎಲ್ಲವೂ ಸರಿಯಾಗಿ ಇರಬೇಕು ಎಂಬ ಪ್ರಯತ್ನ ಸರಿ. ಆದರೆ ಅದಕ್ಕಾಗಿ ಎಲ್ಲರನ್ನೂ ದೂಷಿಸುವುದು ಉತ್ತಮ ನಾಯಕತ್ವವಾಗದು. ವಿಷಾದದ ವಾತಾವರಣದಿಂದ ಹೊರಬರಲು ಕಷ್ಟವಾಗುವುದು. ಉದ್ಯೋಗ ಸ್ಥಳದಲ್ಲಿನ ದೌರ್ಬಲ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ವ್ಯಾಪಾರಸ್ಥರು ತಮ್ಮ ಗೆಳೆಯರ ಸಲಹೆಯನ್ನು ಆಲಿಸಬೇಕು. ನಕಾರಾತ್ಮಕ ಆಲೋಚನೆಗಳು ನಿಮ್ಮ ಗಮನವನ್ನು ಕಳೆದುಕೊಳ್ಳಲು ಕಾರಣವಾಗಬಹುದು. ನಿಮ್ಮನ್ನು ನಿಮ್ಮವರೇ ಅನುಮಾನಿಸಬಹುದು. ಏನನ್ನೂ ಹೇಳದೇ ನಿಮ್ಮಷ್ಟಕ್ಕೆ ಗಮನಿಸಿ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ.
ಕುಂಭ ರಾಶಿ: ನಿಮ್ಮ ಸುರಕ್ಷತೆಯ ಬಗ್ಗೆ ಗಮನ ಅಧಿಕ ಅವಶ್ಯಕ. ನಿಮ್ಮ ಸಂಬಂಧದಲ್ಲಿ ಕೆಲವು ಮಾತುಗಳು ಒಡಕು ತರುವಂತಹವು ಆಗಿರುತ್ತವೆ. ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ನಿರುದ್ಯೋಗಿಗಳ ದುಃಖ ದೂರಾಗಲಿದೆ. ಸರ್ಕಾರಿ ಕಾಗದ ಪತ್ರಗಳನ್ನು ಯಾರಿಗೆ ತೋರಿಸುವ ಮುನ್ನ ಒಮ್ಮೆ ಅದರಲ್ಲಿರುವ ಅಂಶಗಳನ್ನು ಕೇಳುತ್ತಿರುವ ವ್ಯಕ್ತಿಗಳ ಹಿನ್ನೆಲೆ ತಿಳಿದುಕೊಳ್ಳಿ. ನಿಮ್ಮ ಅತ್ಯುತ್ಸಾಹದಿಂದ ಮಹತ್ತರ ಮಾಹಿತಿಗಳು ಅಪಾತ್ರರಿಗೆ ಹಂಚಿಕೆಯಾಗಲಿದೆ. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮ ಸಾಮರ್ಥ್ಯವನ್ನು ನೋಡಿಕೊಂಡು ತೀರ್ಮಾನಕ್ಕೆ ಬನ್ನಿ. ಇನ್ನೊಬ್ಬರ ವಸ್ತುಗಳನ್ನು ಬಹಳ ಜಾಗರೂಕತೆಯಿಂದ ಇಟ್ಟುಕೊಳ್ಳಿ. ಯಾರೂ ಇರದ ಪ್ರದೇಶದಲ್ಲಿ ನೀವೇ ದೊಡ್ಡವರಾಗುವಿರಿ. ಎಂದೋ ಸ್ಥಗಿತಗೊಂಡ ಕೆಲಸವನ್ನು ಪೂರ್ಣ ಮಾಡುವಿರಿ.
ಮೀನ ರಾಶಿ: ಯಾವುದೇ ಬದಲಾವಣೆಯನ್ನೂ ಕೂಡಲೇ ಬಯಸುವಿರಿ. ಇಂದು ನಿಮ್ಮ ಆಸಕ್ತಿಯ ವಿಚಾರವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವಿರಿ. ಹಣದ ಕೊರತೆಯಿಂದ ಸಾಲವನ್ನು ಮಾಡುವ ಸಾಧ್ಯತೆಯಿದೆ. ಹೊಸ ಯೋಜನೆಗಳಲ್ಲಿ ವಿಘ್ನ ಕಂಡುಬರುತ್ತಿದೆ. ನಿಶ್ಚಿತ ಆದಾಯದಲ್ಲಿ ಗಣನೀಯ ಇಳಿಕೆಯಾಗಿ, ಚಿಂತೆಗೆ ಕಾರಣವಾಗುತ್ತದೆ. ಅಲಂಕಾರಕ್ಕೆ ಸಮಯವನ್ನು ಕೊಡುವಿರಿ. ದೇವಾಲಯದ ಪಾರುಪತ್ತೆದಾರರಿಗೆ ಹೊಸ ಸವಾಲುಗಳು ಎದುರಾಗಲಿವೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ದ್ವಂದ್ವ ಎದುರಾಗುವುದು. ಸಂಗಾತಿಯ ಮಾತುಗಳನ್ನು ನೀವು ಸಹಿಸಲಾರಿರಿ. ನೀವು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳುವ ಬಗ್ಗೆ ಚಿಂತಿಸುವಿರಿ. ಅನಪೇಕ್ಷಿತ ಮಾತುಗಳನ್ನು ನೀವು ಯಾರ ಜೊತೆಯೂ ಆಡುವುದು ಬೇಡ. ಇಂದಿನ ಕಾರ್ಯವನ್ನು ಸಾಧನೆ ಮಾಡಲು ಹೆಚ್ಚಿನ ಓಡಾಟವು ಬರಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1