ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಚತುರ್ದಶೀ ತಿಥಿ, ಮಂಗಳವಾರ, ಆಶ್ಲೇಷಾ ಯೋಗ ನಿಮ್ಮ ಕಷ್ಟದ ಕಾರ್ಯಕ್ಕೆ ಪ್ರೋತ್ಸಾಹ, ಆಲಸ್ಯ, ಶತ್ರುಬಾಧೆ, ಅತಿಥಿ ಸತ್ಕಾರವನ್ನು ಇಂದಿನ ಭವಿಷ್ಯದಿಂದ ತಿಳಿಯಿರಿ. ಎಲ್ಲಾ ರಾಶಿಗಳ ಭವಿಷ್ಯ ಇಲ್ಲಿದೆ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ ನಿತ್ಯನಕ್ಷತ್ರ : ಆಶ್ಲೇಷಾ ಯೋಗ : ಪ್ರೀತಿ, ಕರಣ : ತೈತಿಲ, ಸೂರ್ಯೋದಯ – 06 – 59 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:08, ಯಮಘಂಡ ಕಾಲ 09:53 – 11:20, ಗುಳಿಕ ಕಾಲ12:47 – 14:14.
ಮೇಷ ರಾಶಿ: ಸವಾಲಾಗಿ ಸ್ವೀಕರಿಸಿದ ಕಾರ್ಯದಿಂದ ನಿಮಗೆ ಜಯ ಪ್ರಾಪ್ತಿ. ಎಲ್ಲದಕ್ಕೂ ವಿಧಿಯನ್ನು ದೂರುವುದರಲ್ಲಿ ಅರ್ಥವಿರದು. ಪುರುಷಪ್ರಯತ್ನವೂ ನೂರಕ್ಕೆ ನೂರಿರಲಿ. ನಿಮ್ಮ ನಿರೀಕ್ಷಿತ ಸಮಯವು ಸಮೀಪಿಸುತ್ತಿರುವಂತೆ ನಿಮಗೆ ಅನ್ನಿಸುವುದು. ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಅಮೂಲ್ಯ ವಸ್ತುಗಳ ಖರೀದಿಯಿಂದ ಹಣದ ಉಳಿತಾಯ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ವಿವಾಹಯೋಗವು ಬಂದರೂ ಅದನ್ನು ನೀವು ಸ್ವೀಕರಿಸುವ ರೀತಿ ಭಿನ್ನವಾಗಿ ಇರಲಿದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಅನ್ಯರ ಪ್ರಭಾವಕ್ಕೆ ಸಿಕ್ಕ ಅನಂತರ ಹೊರಬರುವುದು ಕಷ್ಟ. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುಉ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಸಂಗಾತಿಗೆ ಸುಳ್ಳು ಹೇಳಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಪಕ್ಷಪಾತದಿಂದ ನಿಮಗೇ ತೊಂದರೆ ಎದುರಾದೀತು.
ವೃಷಭ ರಾಶಿ: ಇಂದು ವಿನೋದವನ್ನು ಮಾಡಲು ಹೋಗಿ ವಿಷಾದವಾದೀತು. ಶರೀರ ಪೀಡೆಯಿಂದ ಅತಂಕವಾಗಬಹುದು. ವಿಚಿತ್ರ ಸಂಗತಿಗಳು ನಿಮ್ಮನ್ನು ಬದಲಾಯಿಸಬಹುದು. ನಿಮ್ಮ ಬಗ್ಗೆಯೇ ನೀವು ಕೊರಗುತ್ತ ಇರುವಿರಿ. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನವು ಫಲಿಸುವುದು. ಸಿಗದಿರುವುದರ ಬಗ್ಗೆ ಆಸೆಯನ್ನು ಬಿಡುವಿರಿ. ಯಾರಾದರೂ ಬಂದು ನಿಮ್ಮ ಬಳಿ ಕೆಲಸ ಮಾಡಿಕೊಡಲು ಕೇಳಬಹುದು. ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಿ. ಬೇರೆಯವರು ನಿಮ್ಮನ್ನು ಅಳೆಯುವ ಮೊದಲು ನೀವೇ ನಿಮ್ಮನ್ನು ಅಳೆದುಕೊಳ್ಳಿ.
ಮಿಥುನ ರಾಶಿ: ನೀರಿನಿಂದ ಭಯಗೊಳ್ಳುವ ಸಾಧ್ಯತೆ ಇದೆ. ನಿದ್ರೆಯಲ್ಲಿ ಕಂಡ ಸ್ವಪ್ನವು ನಿಮಗೆ ಸಂತೋಷವನ್ನು ಕೊಡುವುದು. ಸಂಗಾತಿಯ ನಡೆಯು ನಿಮಗೆ ಮೆಚ್ಚುಗೆಯಾಗದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಬೆನ್ನು ನೋವಿನ ಸಮಸ್ಯೆಗೆ ಸೂಕ್ತ ಪರಿಹಾರವು ಸಿಕ್ಕೀತು. ಸಂಗಾತಿಗೆ ಇಂದು ಸಂತೋಷವನ್ನು ಕೊಡುವಿರಿ. ಕಾರ್ಯದ ಒತ್ತಡವಿರುವ ಕಾರಣ ಸಮಯದ ಅಭಾವ ಎನಿಸಬಹುದು. ನೀವು ಹಿರಿಯರ ಜೊತೆ ಸಣ್ಣ ವಿಚಾರಕ್ಕೂ ವಾಗ್ವಾದಕ್ಕೆ ಇಳಿಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮನಸ್ಸನ್ನು ಖಾಲಿ ಬಿಡದೇ ಏನಾದರೊಂದು ಕಾರ್ಯದಲ್ಲಿ ತೊಡಗಿಸಿ.
ಕರ್ಕಾಟಕ ರಾಶಿ: ನೀವು ಸರಳವಾದ ಮಾರ್ಗವನ್ನು ಇಂದು ಆಯ್ಕೆ ಮಾಡಿಕೊಳ್ಳಲಾರಿರಿ. ನಿಮ್ಮ ಮಾತುಗಳು ಸ್ವಾರ್ಥದಿಂದ ಕೂಡಿರುವುದು. ಆಪ್ತರಿಗೆ ಬೇಸರವನ್ನು ಕೊಟ್ಟು, ಅನಂತರ ಸಮಾಧಾನ ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಸಹೋದರನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ಸಂಗಾತಿಗೆ ಕಿರಿಕಿರಿ ಎನಿಸಬಹುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ ಮಾಡದು. ನಿಮ್ಮನ್ನು ಇಷ್ಟವಿಲ್ಲದ ಕಡೆ ವರ್ಗಾವಣೆಯಾಗುವುದು. ಉದ್ಯೋಗದ ಸ್ಥಳದಲ್ಲಿ ಕಹಿ ಅನುಭವವಾದೀತು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು. ಯಾರದೋ ತಪ್ಪಿನಿಂದ ನಿಮಗೆ ದೋಷವು ಅಂಟಿಕೊಂಡಿದ್ದು ತಿಳಿದುಬರುವುದು. ದುರಭ್ಯಾಸದಿಂದ ಆರ್ಥಿಕ ನಷ್ಟವಾಗುತ್ತದೆ. ಉತ್ತಮ ಅವಕಾಶಗಳಿಂದಲೂ ನೀವು ವಂಚಿತರಾಗುವಿರಿ. ಕುಟುಂಬದ ನಡವಳಿಕೆಯು ನಿಮಗೆ ಅರ್ಥವಾಗದೇ ಹೋದೀತು. ದುರಭ್ಯಾಸದ ಕಡೆ ನಿಮ್ಮ ಗಮನವು ಇರಲಿದೆ. ನಿಮ್ಮ ಚಿಂತನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ.
ಸಿಂಹ ರಾಶಿ: ಸಣ್ಣ ಆದಾಯ ಮೂಲವನ್ನು ಕಡೆಗಣಿಸಬಹುದು. ನಿಮ್ಮ ಕ್ರಮಬದ್ಧವಾದ ನಡೆಗಳು ನಿಮಗೇ ಅಡ್ಡಗಾಲಾದಂತೆ ತೋರುವುದು. ಏನಾದರೂ ಮಾಡುತ್ತ ನಿಮ್ಮ ಮನಸ್ಸಿಗೆ ಕೆಲಸವನ್ನು ಕೊಡುವಿರಿ. ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ವೃತ್ತಿಯಲ್ಲಿ ಕೆಲವು ಸಂತೋಷದ ಕ್ಷಣಗಳು ನಿಮ್ಮದಾಗಲಿವೆ. ಮನೋವಿಕಾರವನ್ನು ಎಲ್ಲರೆದುರೂ ತೋರಿಸುವುದು ಬೇಡ. ನಿಮ್ಮದು ಅಂದುಕೊಂಡವು ವಸ್ತುವು ದೂರವಾಗಬಹುದು. ಪರರ ದುಃಖಕ್ಕೆ ಸ್ಪಂದನೆ ಇರಲಿ. ಆಪ್ತರ ಮೇಲೆ ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಇಂದು ಅತಿಯಾದ ನಿದ್ರೆಯಿಂದ ಜಾಡ್ಯವು ಬರುವುದು. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು.
ಕನ್ಯಾ ರಾಶಿ: ನಂಬಿಸಲು ಸುಳ್ಳುಗಳನ್ನು ಹೇಳುವಿರಿ. ಕೈ ಮೀರಿದ ಅನಂತರ ನಿಮಗೆ ಯಾವ ವಿಚಾರವನ್ನೂ ಏನನ್ನೂ ಮಾಡಲಾಗದು. ಒತ್ತಡಗಳು ನಾನಾ ಭಾಗಗಳಿಂದ ಬರಬಹುದು. ಕೆಲಸವಿಲ್ಲದೆ ಕಡೆ ನೀವು ಇರಲಾರಿರಿ. ಅಧಿಕಾರವರ್ಗದಿಂದ ಶೋಷಣೆಗೆ ಒಳಗಾಗುವಿರಿ. ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ವಿರುದ್ಧ ಬೀಳಬಹುದು. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ಇಷ್ಟ ದೇವರನ್ನು ಪ್ರಾರ್ಥಿಸಿ ನೀವು ಮುಂದಿನ ಕಾರ್ಯಗಳಿಗೆ ತೆರಳುವಿರಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಲಿದೆ. ಅದನ್ನು ಗಂಭಿರವಾಗಿ ತೆಗೆದುಕೊಳ್ಳುವುದು ಬೇಡ. ಬದುಕಿಗೆ ತಿರುವು ಬರುವ ಸಾಧ್ಯತೆ ಇದೆ. ಇಂದಿನ ಕಾರ್ಯವು ನಿಮಗೆ ಸಮಾಧಾನ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಇರಲಿದೆ.
ತುಲಾ ರಾಶಿ: ಸಮಚಿತ್ತತೆಯನ್ನು ಕಾಪಾಡಿಕೊಳ್ಳಲು ಅಧ್ಯಾತ್ಮಬೇಕಾಗುತ್ತದೆ. ನಾಲ್ಕಾರು ಕಾರ್ಯಗಳನ್ನು ಒಂದೇ ಸಮನಾಗಿ ಕೊಂಡೊಯ್ಯುವ ಚಾಣಕ್ಷತೆ ನಿಮಗೆ ಇರಲಿದೆ. ಗುಟ್ಟನ್ನು ಯಾರೇ ಒತ್ತಾಯ ಮಾಡಿದರೂ ಬಿಟ್ಟುಕೊಡಲಾರಿರಿ. ಇಂದು ನೀವು ಸಂತೋಷ ಆಗದೇಹೋಗಬಹುದು. ನಿಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಮಾತುಗಳು ಎಲ್ಲ ಕಡೆ ಇರಲಿವೆ. ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆಯುವಿರಿ. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಗೌರವದಿಂದ ನಡೆದುಕೊಳ್ಳುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡು ನಿಮ್ಮನ್ನು ರಕ್ಷಿಸಿಕೊಳ್ಳುವಿರಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಯಾರ ಜೊತೆಯೂ ಭೇದಭಾವ ಎಣಿಸುವ ಅವಶ್ಯಕತೆ ಬರದಂತೆ ನೋಡಿ. ನೆಚ್ಚಿನ ತಾಣವು ನಿಮಗೆ ಹೊಸ ಉತ್ಸಾಹವನ್ನು ನೀಡುವುದು.
ವೃಶ್ಚಿಕ ರಾಶಿ: ನೀವು ಕ್ರಮಿಸುವ ದೂರದ ಬಗ್ಗೆ ಗೊತ್ತಿರಲಿ. ಮಕ್ಕಳನ್ನು ಅತಿಯಾದ ಸಲುಗೆಯಿಂದ ಬೆಳೆಸಿ ಕಷ್ಟಪಡುವಿರಿ. ಹೊಸ ಪ್ರದೇಶಕ್ಕೆ ಬಹಳ ದಿನಗಳ ಅನಂತರ ಹೋಗಲಿದ್ದು, ಬಹಳ ನೆಮ್ಮದಿಯನ್ನು ಪಡೆಯುವಿರಿ. ದುಃಖಗಳು ನೀವು ತಂದುಕೊಂಡದ್ದು ಎಂಬುದನ್ನು ಮರೆಯುವಿರಿ. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ನಿಮ್ಮ ಕಾರ್ಯಕ್ಕೆ ಧನಸಹಾಯವನ್ನು ಸಾಲವಾಗಿ ಪಡೆಯುವಿರಿ. ತಪ್ಪುಗಳನ್ನು ಒಪ್ಪಿಕೊಂಡು ಸರಿಮಾಡಿಕೊಳ್ಳುವಿರಿ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳಲು ಕಷ್ಟವಾದೀತು. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಯಾರ ಬಗ್ಗೆಯೂ ಅನಗತ್ಯ ಟೀಕೆಗಳು ಬೇಡ. ನೌಕರರ ವಿಚಾರದಲ್ಲಿ ಅಸಮಾಧಾನವಿರಲಿದೆ. ಆಧ್ಯಾತ್ಮದ ಕಡೆ ಮನಸ್ಸು ಇರಬಹುದು. ಇನ್ನೊಬ್ಬರಿಗೆ ಹೋಲಿಸಿಕೊಂಡು ಸಂಕಟಪಡುವಿರಿ.
ಧನು ರಾಶಿ: ಅಧಿಕಾರದಲ್ಲಿ ಇರುವ ನಿಮ್ಮಮೇಲೆ ನಾನಾ ಒತ್ತಡಗಳು ಬರಬಹುದು. ನಿಮ್ಮವರ ರಕ್ಷಣೆಯ ಹೊಣೆಯು ನಿಮ್ಮ ವರ್ತನೆಯಲ್ಲಿ ಇರಲಿದೆ. ಹಿತಶತ್ರುಗಳ ಬಾಧೆಯು ನಿಮಗೆ ಇನ್ನಷ್ಟು ಬೆಳೆಯಲು ಉತ್ತೇಜನವನ್ನು ಕೊಡುವುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಅಧಿಕಾರಿಗಳಿಗೆ ಹೇಳುವರು. ಹೇಳಿದ್ದು ಮತ್ತು ಮಾಡಿದ್ದಕ್ಕೂ ವ್ಯತ್ಯಾಸವಿರುವುದು. ಯಾರಾದರೂ ನಿಮ್ಮನ್ನು ಛೇಡಿಸಬಹುದು. ವಾಹನ ಖರೀದಿಗೆ ಗೊಂದಲದ ಮನಸ್ಸು ಬೇಡ. ವೃತ್ತಿಯನ್ನೇ ಬದಲಾಯಿಸುವ ಆಸೆ ಬರಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ತಾತ್ಕಾಲಿಕ ಪ್ರೇಮವು ಕೊನೆಯಾಗುವುದು. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ. ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರುವುದು. ಹೂಡಿಕೆಯ ವಿಚಾರವನ್ನು ಸ್ನೇಹಿತರ ಮೂಲಕ ಗೊತ್ತುಮಾಡಿಕೊಳ್ಳುವಿರಿ. ಸಿಟ್ಟಿನಿಂದ ಕೂಗಾಡುವಿರಿ. ಸಹೋದರನ ಕಡೆಯಿಂದ ಸಹಾಯವನ್ನು ಅಪೇಕ್ಷಿಸುವಿರಿ.
ಮಕರ ರಾಶಿ: ಆತ್ಮವಿಶ್ವಾಸದಿಂಸ ಸ್ಪರ್ಧೆಯನ್ನು ಗೆಲ್ಲುವಿರಿ. ಅಪರಿಚಿತರ ಜೊತೆ ಸಲುಗೆಯ ಸಂಪರ್ಕ ಏರ್ಪಡಲಿದೆ. ತಂದೆ ಮಕ್ಕಳ ಕಲಹವು ಮಿತಿಯನ್ನು ಮೀರಬಹುದು. ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ಪುಣ್ಯಕ್ಷೇತ್ರದ ದರ್ಶನದಿಂದ ಮನಸ್ಸು ಪಾವನವಾಗಲಿದೆ. ಹೊಸ ಉದ್ಯೋಗಕ್ಕೆ ನಿಮ್ಮ ಮನಸ್ಸು ತೆರದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸತ್ಯದ ಮಾತಿನಿಂದ ನಿಮಗೇ ಸಂಕಷ್ಟವು ಬರಬಹುದು. ಸಮಾಜದಿಂದ ಸಿಗುವ ಗೌರವವೂ ನಿಮಗೆ ಬಾರದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಅನಾರೋಗ್ಯವು ಚಿಕಿತ್ಸೆಯ ಮೂಲಕ ಸರಿಮಾಡಿಕೊಳ್ಳಬೇಕಾಗುವುದು. ನಿಮ್ಮಿಂದ ಆಗದ್ದನ್ನು ಅನ್ಯರು ಮಾಡಿಮುಗಿಸುವರು. ಎಂದೋ ಮನಸ್ಸಿನಲ್ಲಿ ಕೇಳಿಕೊಂಡಿದ್ದು ಇಂದು ಫಲಿಸುವುದು. ಇಂದು ನಿಮ್ಮಿಂದ ಕುಟುಂಬವು ಸಂತೋಷವಾಗಿರುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಚಿಂತೆಗೊಳ್ಳುವಿರಿ. ಉತ್ತಮ ಕಾಲದ ನಿರೀಕ್ಷೆಯಲ್ಲಿ ನೀವು ಇರುವಿರಿ. ದುಂದುವೆಚ್ಚವನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುವಿರಿ.
ಕುಂಭ ರಾಶಿ: ವಸ್ತುಗಳ ಉತ್ಪನ್ನದಲ್ಲಿ ಕೆಲಸ ಮಾಡುವವರಿಗೆ ಶ್ರಮ ಅಧಿಕ. ಉತ್ತಮ ಮಾತಿನಿಂದ ಸಜ್ಜನರನ್ನು ಸಂಪಾದಿಸಿಕೊಳ್ಳುವಿರಿ. ಸಮಾಜದ ಲಾಭಕ್ಕಾಗಿ ಕಾರ್ಯವನ್ನು ಮಾಡುವಿರಿ. ಸ್ತ್ರೀಯರಿಗೆ ಕೃಷಿಯ ಬಗ್ಗೆ ಆಸಕ್ತಿ ಬರಬಹುದು. ಅಪರಿವಿತರು ನಿಮ್ಮ ಜೊತೆ ಪರಿಚಿತರಂತೆ ಮಾತನಾಡಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೇಳದೇ ಯಾರಿಗೂ ಉಪದೇಶವನ್ನು ನೀಡುವುದು ಬೇಡ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಕಛೇರಿಯ ಒತ್ತಡವನ್ನು ಮನೆಯವರೆಗೂ ತರುವುದು ಬೇಡ. ಹಣ ಸಂಪಾದನೆಗೆ ನಿಮ್ಮ ತಂತ್ರಗಳು ಫಲಿಸದು. ಇಂದಿನ ಆದಾಯದಿಂದ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವಿರಿ. ನೀವು ಪರಿಚಿತರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ವರ್ತಿಸಿ. ಪ್ರೀತಿಯ ವಿಚಾರದಲ್ಲಿ ಇಂದು ಬೇಸರವಾಗಬಹುದು. ನಿಮಗೆ ಅಗೌರವ ತೋರಬಹುದು.
ಮೀನ ರಾಶಿ: ಉದ್ಯಮದಿಂದ ಆರ್ಥಿಕ ಲಾಭ ಹಾಗೂ ದುಂದು ವೆಚ್ಚವೂ ಆಗಲಿದೆ. ದೇವರ ಮೇಲಿನ ನಂಬಿಕೆಯು ಕ್ಷೀಣವಾಗುವ ಸಾಧ್ಯತೆ ಇದೆ. ನಿಮ್ಮ ಉನ್ನತಿಯನ್ನು ಇಷ್ಟಪಡುವವರು ಜೊತೆಗಿರುವರು. ನೌಕರರ ಅಭಾವವನ್ನು ನೀಗಿಸಲು ಈಗಿಂದಲೇ ಪ್ರಯತ್ನ ಮಾಡಿ. ನಿಮ್ಮದಾದ ಸ್ವತಂತ್ರ ಆದಾಯವನ್ನು ಇಟ್ಟುಕೊಳ್ಳಿ. ಖಾಸಗಿ ವೃತ್ತಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಾತನಾಡುವಿರಿ. ಶತ್ರುಗಳಿಗೆ ನೀವೇ ಕೇಂದ್ರಬಿಂದು ಆಗಿರಬಹುದು. ನಿಮ್ಮ ಯೋಜನೆಗೆ ತಗುಲುವ ಲೆಕ್ಕಾಚಾರವು ತಪ್ಪಾಗಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ನಿಮಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು. ಅಧ್ಯಾತ್ಮದಲ್ಲಿ ಹೆಚ್ಚು ಮನಸ್ಸು ಇರುವುದು. ನಿಮ್ಮ ವ್ಯಾಪಾರದಿಂದ ಅಧಿಕ ಲಾಭವು ಸಿಗುವುದು. ಅಧಿಕಾರಿ ವರ್ಗದವರ ಕಣ್ಣು ನಿಮ್ಮ ಮೇಲೆ ಇರಲಿದೆ. ಸಣ್ಣ ಅಹಂಕಾರವು ನಿಮ್ಮನ್ನು ಕೆಡಿಸಬಹುದು.