Horoscope Today 12 June: ಈ ರಾಶಿಯವರಿಗೆ ಪ್ರೀತಿಯಿಂದಾದ ಸಣ್ಣ ನೋವೂ ಸಹಿಸಲು ಅಸಾಧ್ಯ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ : ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ವರೀಯಾನ್, ಕರಣ: ಬಾಲವ ಸೂರ್ಯೋದಯ – 06 : 04 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:10 – 15:47, ಯಮಘಂಡ ಕಾಲ 06:05 – 07:42, ಗುಳಿಕ ಕಾಲ 09:19 – 10:56

ಮೇಷ ರಾಶಿ: ನಿಮಗೇ ಸಿಗುವ ಸಂದರ್ಭವಿರುವಾಗ, ನೀವಾಗಿಯೇ ಹೋಗಿ, ಎಡವಿ ಬಿದ್ದು ಗಾಯ ಮಾಡಿಕೊಳ್ಳುವಿರಿ. ಎಲ್ಲವನ್ನೂ ಕಳೆದುಕೊಳ್ಳುವುದಕ್ಕಿಂತ ಅಲ್ಪವನ್ನು ಉಳಿಸಿಕೊಳ್ಳುವುದು ಜಾಣತನ. ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ಪರರಿಂದ ಆದ ಪ್ರಚೋದನೆಯು ತಾತ್ಕಾಲಿಕವಾಗಿ ಉಪಶಮನವಾಗಲಿದೆ. ಯೋಜನೆಯನ್ನು ಸಾಕಾರಗೊಳಿಸಲು ಒಳ್ಳೆಯ ಕಾಲ ದುಡಿಮೆಗೆ ತಕ್ಕ ಫಲ ಸಿಗಲಿದೆ. ಹಣದ ವ್ಯವಹಾರದಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ಕೆಲಸವು ಬಹಳ ನಿಧಾನವಾಗುವುದು. ಬೇಸರವೂ ಬರಬಹುದು. ಉದ್ಯೋಗಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳಬೇಡಿ. ವಿದ್ಯಾಭ್ಯಾಸದ ಬಗದಗೆ ಅತಿಯಾದ ಚಿಂತೆ ಬೇಡ. ಆಗುವುದು ಆಗಿಯೇ ಆಗುವುದು ಎಂಬ ಸತ್ಯ ತಿಳಿದಿರಿಲಿ. ಆರೋಗ್ಯವು ಹಾಳಾಗಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹಿನ್ನಡೆಯಾಗುವುದು.

ವೃಷಭ ರಾಶಿ: ಸ್ವಂತಕ್ಕಾಗಿ ಏನನ್ನಾದರೂ ಮಾಡಲು ಹೋದರೆ ಸಿಗದು. ಆದರೆ ಪರರಿಗಾಗಿ ಬಯಸಿದ್ದು ನಿಮ್ಮ ಪಾಲಾಗಬಹುದು. ಆದಾಯವನ್ನು ಭೂಮಿಯ ಖರೀದಿಗೆ ಹಾಕುವ ಯೋಜನೆ ಬರುವುದು. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಸಿಗುವ ಮನ್ನಣೆಯು ಮತ್ತೇನನ್ನೋ ಬಯಸುವ ಸಂದೇಹ ಬರಲಿದೆ. ಬದಲಾಗಲಿರುವ ಆಪ್ತರ ವರ್ತನೆಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ಹಣದ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಕುಟುಂಬದ ಆತ್ಮೀಯರ ಬೆಂಬಲ ದೊರೆಯಲಿದೆ. ಹೊಸ ಉತ್ಸಾಹದಿಂದ ದಿನ ಪ್ರಾರಂಭವಾಗುತ್ತದೆ. ದುಃಸ್ವಪ್ನವು ನಿಮ್ಮನ್ನು ಚಿಂತಿತರನ್ನಾಗಿ ಮಾಡುವುದು. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ. ಯಾವ ನಕಾರಾತ್ಮಕ ಆಲೋಚನೆಗಳಿಗೂ ಸ್ಪಂದಿಸಲಾರಿರಿ.

ಮಿಥುನ ರಾಶಿ: ಆರ್ಥಿಕವಾಗಿ ಹಿನ್ನಡೆಯಿದ್ದರೂ ಅದನ್ನು ನಿರ್ವಹಿಸುವ ಜಾಣತನ ಗೊತ್ತಾಗಲಿದೆ. ಇಂದು ಶ್ರಮಕ್ಕೆ ಯೋಗ್ಯವಾದ ಫಲವು ಸಿಗದೇ ಬೇಸರಬರಬಹುದು. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಯಾರಿಂದಲಾದರೂ ನಿಮಗೆ ಮುಖ್ಯ ಸ್ಥಾನ ದೊರೆಯಬಹುದು. ಒಳ್ಳೆಯ ಮನಸ್ಸಿನ ಪ್ರಯತ್ನಕ್ಕೆ ದೈವಾನುಕೂಲ ಲಭಿಸುವುದು. ಹಣಕಾಸಿನಲ್ಲಿ ಬಂಡವಾಳ ಹೂಡಿಕೆಗೆ ಸಮಯ ಸೂಕ್ತ. ಕುಟುಂಬದಲ್ಲಿ ಸಂತೋಷದ ಕ್ಷಣಗಳ ಅನುಭವ. ದೀರ್ಘಕಾಲದ ಅನಂತರ ಸ್ನೇಹಿತರ ಜೊತೆ ಭೇಟಿಯಾಗಬಹುದು. ನಿಮಗೆ ಅದನ್ನು ಹಿತಶತ್ರುಗಳೇ ಮಾಡುವಂತೆ ಮಾಡುತ್ತಾರೆ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೀಳರಿಮೆ ಬರಬಹುದು. ಅನ್ಯರು ಮಾಡುವ ಕುಚೋದ್ಯವು ನಿಮಗೆ ಸಹಿಸಲಾಗದು. ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು.

ಕರ್ಕಾಟಕ ರಾಶಿ: ಅದೃಷ್ಟದ ಮೂಲಕ ನಿಮ್ಮ ಕಲ್ಪನೆ ಸಾಕಾರವಾಗಲಿದೆ. ಇಂದು ನೀವು ಯಾರ ಮಾತಿನ ಮೇಲೂ ಪೂರ್ವಾಗ್ರಹದಿಂದ ಪೀಡಿತರಾದವರ ಮನಃಸ್ಥಿತಿಯನ್ನು ಇರಿಸಿಕೊಳ್ಳಬೇಡಿ‌. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಮಕ್ಕಳಿಂದ ಸಂತೋಷ ಸಿಗುತ್ತದೆ. ಪ್ರಯಾಣದ ಸಾಧ್ಯತೆಯೂ ಇದೆ. ಆದರೆ ಸಂಜೆ ಸಮಸ್ಯೆಗಳು ಹೆಚ್ಚಾಗಬಹುದು. ಬಂಧುಗಳ ಮನೆಗೆ ಅತಿಥಿಯಾಗಿ ಆಹ್ವಾನ ಬರಬಹುದು. ಅನಗತ್ಯ ಖರ್ಚುಗಳು ಮತ್ತು ಅಡೆತಡೆಗಳು ಎದುರಾಗುತ್ತವೆ. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಬೇಕೆನಿಸಿದ ವಸ್ತುವನ್ನು ಶ್ರಮದಿಂದ ಪಡೆಯುವಿರಿ. ನಿಮಗೆ ಹಿತವಚನವು ಮನಸ್ಸಿಗೆ ಬೇಸರವನ್ನೇ ತರಿಸುವುದು. ವಾಹನ ಖರೀದಿಯು ನಿಮಗೆ ಅನಿವಾರ್ಯ ಎನಿಸುವುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.

ಸಿಂಹ ರಾಶಿ: ಸೃಜನ ಶೀಲರಾಗಿ ಬಹುಕಾಲ ಉಳಿಯಲಾಗದು. ಇಷ್ಟು ದಿನ ಮನಸ್ಸಿನಲ್ಲಿಯೇ ಇಟ್ಟುಕೊಂಡ ಬಯಕೆಯನ್ನು ಹೊರ ಹಾಕುವಿರಿ. ಕೆಲಸದ ಸ್ಥಳದಲ್ಲಿ ಸವಾಲುಗಳಿದ್ದು ಸಹಕಾರದ ಅಗತ್ಯವಲಿದೆ ಹಣಕಾಸಿನಲ್ಲಿ ಚಿಕ್ಕ ಶ್ರಮದಿಂದ ಲಾಭ ಸಾಧ್ಯ. ನಿಮ್ಮಿಂದ ಬಯಸಿದ್ದನ್ನು ನೀಡುವುದು ಕಷ್ಟ. ಸ್ನೇಹಿತರಿಂದ ಖುಷಿಯ ಸುದ್ದಿ ಕೇಳಬಹುದು. ಮನಸ್ಸು ಶಾಂತವಾಗಿರಿಸಲು ಪ್ರಯತ್ನಿಸಿ. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಭೋಗ ವಸ್ತುಗಳಿಗೆ ದಾಸರಾಗುವಿರಿ. ಆಭರಣವನ್ನು ಖರೀದಿಸಲು ಇಚ್ಛೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸಿದವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮಿಂದ ಆಗದ್ದನ್ನು ಮತ್ಯಾರೋ ಮಾಡಬಹುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು.

ಕನ್ಯಾ ರಾಶಿ: ಉದ್ಯೋಗದ ಸಂವಹನವು ಸಫಲವಾಗಲಿದೆ. ನಿಮ್ಮ ಬೆಂಬಲಕ್ಕೆ ಯಾರೂ ಬಾರದೇ ಇಂದು ವಾದವು ವ್ಯರ್ಥವಾಗುವುದು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ವರ್ಗಾವಣೆಗಾಗಿ ಕಾಯುತ್ತಿದ್ದವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ವಿದೇಶದಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಬಾಂಧವ್ಯ ಸ್ಥಿರತೆಗೆ ಬದ್ಧಮನಸ್ಸಿರುವುದು. ಸಂಪತ್ತು ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಮಕ್ಕಳಿಂದ ಸಂತೋಷ ಸಿಗುತ್ತದೆ ಮತ್ತು ಸಂತೋಷ ಉಳಿಯುತ್ತದೆ. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಸೌಂದರ್ಯಕ್ಕೆ ಮರುಳಾಗುವಿರಿ. ಅನಾಮಧೇಯ ಕರೆಗಳಿಂದ ತೊಂದರೆಯಾಗಬಹುದು‌. ಅವುಗಳಿಂದ ದೂರವಿರುವುದು ಉಚಿತ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.

ತುಲಾ ರಾಶಿ: ಶೈಕ್ಷಣಿಕ ವೆಚ್ಚವನ್ನು ಭರಿಸಲು ಕಷ್ಟವಾದೀತು. ಇಂದು ಬಹಳ ದಿನಗಳ ಅನಂತರ ಶತ್ರುವಿನ ಮುಖಾಮುಖಿಯಾಗಲಿದೆ. ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸಿ, ಮುಂಬರುವ ಸಂಕಟದಿಂದ ಬಚಾವಾಗುವಿರಿ. ನಿರ್ಧಾರಗಳ ಮೇಲೆ ಸ್ಥಿರವಾಗಿರುವುದು ಯಶಸ್ಸು ತರುತ್ತದೆ. ಹಣಕಾಸಿನಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಪರರ ಸಂಪತ್ತಿನ ಬಗ್ಗೆ ಆಸೆ ಬೇಡ. ಕುಟುಂಬದ ಸದಸ್ಯರೊಂದಿಗೆ ಆಸ್ತಿಯ ವಿಚಾರವಾಗಿ ಸುದೀರ್ಘ ಚರ್ಚೆ. ಕೊಡಬೇಕಾದುದನ್ನು ಪ್ರೀತಿಯಿಂದ ಕೊಡಿ. ಸೃಷ್ಟಿಯಲ್ಲಿ ಎಲ್ಲವೂ ಸಹಜವೇ ಎಂಬ ಸಂಗತಿಯನ್ನು ತಿಳಿಯಿರಿ. ವಾಹನವನ್ನು ಖರೀದಿಸಲಿದ್ದು ತಂದೆಯಿಂದ ಸಾಲವನ್ನು ಪಡೆಯುವಿರಿ. ಯಾರನ್ನಾದರೂ ಪ್ರೀತಿಸಬೇಕಿತ್ತು ಎಂಬ ಭಾವ ನಿಮಗೆ ಬರಲಿದೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.

ವೃಶ್ಚಿಕ ರಾಶಿ: ಸಾಹಸಾದಿಗಳನ್ನು ಮಾಡುವಾಗ ಪ್ರಜ್ಞೆ ಇರಲಿ. ಇಂದು ಸಹನಯೇ ನಿಮ್ಮ ಎಲ್ಲ ಕಾರ್ಯಗಳನ್ನು ಸಕ್ಷಮವಾಗಿ ಕರೆದೊಯ್ಯುವುದು. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ನಿರೀಕ್ಷೆ ಇಟ್ಟುಕೊಳ್ಳುವುದರಿಂದ ನಿರಾಶೆ. ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಯಾರದೋ ಸಂತೋಷಕ್ಕೆ ನೀವು ಬಲಿಯಾಗುವ ಸಂದರ್ಭ ಬರಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶ ಸಿಗಬಹುದು. ಹಳೆಯ ವಿವಾದವೊಂದು ಬಗೆಹರಿಯುತ್ತದೆ. ಅದು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಹಣದ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಅವರೇ ನಿಮ್ಮನ್ನು ಸಮಾಧಾನ ಮಾಡಬೇಕಾದೀತು. ನಿಮ್ಮ ಮಾತನ್ನು ಎಲ್ಲರೂ ಕೇಳರು. ಕೇಳುವ ಹಾಗೆ ನಿಮ್ಮ ಮಾತಿರಲಿ. ಓಡಾಟ ಬೇಡವೆಂದು ಕುಳಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅಪರಿಚಿತರ ವ್ಯವಹಾರದಲ್ಲಿ ಎಷ್ಟೇ ಜಾಣ್ಮೆಯಿದ್ದರೂ ಸಾಲದು.‌ ಅದು ನಿಮ್ಮನ್ನು ಹೈರಾಣ ಮಾಡುವುದು.

ಧನು ರಾಶಿ: ನಿಮ್ಮ ಶಕ್ತಿ ಪ್ರದರ್ಶನದಿಂದ ನಿಮ್ಮ ಬಗ್ಗೆ ತಿಳಿವಳಿಕೆ ಬರುವುದು. ಇಂದು ನಿಮ್ಮ ಬಗ್ಗೆ ಸಕಾರಾತ್ಮವಾಗಿ ಹೇಳಿದರೂ ಯಾರೂ ನಂಬಲಾರರು. ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸ ಸಿಗಲಿದೆ. ಕುಟುಂಬದವರ ಜೊತೆ ಭಾವನಾತ್ಮಕ ಮಾತುಕತೆ ನಡೆಯಬಹುದು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಿ, ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಗೊತ್ತಿಲ್ಲದ ವಿಚಾರವನ್ನು ತಿಳಿಯಲು ಪ್ರಯತ್ನಿಸಿ. ಪ್ರಪಂಚದ ಬೇರೆ ಬೇರೆ ಸ್ಥಳಗಳಿಗೆ ಹೋಗುವ ಆಸೆಯುಳ್ಳವರಾಗಿರುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಲು ಒಲವು ಬರಲಿದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ. ಹಣವನ್ನು ಉಳಿಸಲು ಪ್ರಯತ್ನಶೀಲರಾಗುವಿರಿ.

ಮಕರ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧ್ಯತೆ ಇದೆ. ಇಂದು ನಿಮ್ಮ ಹೂಡಿಕೆ ವಿಚಾರವನ್ನು ರಹಸ್ಯವಾಗಿ ಇಡುವಿರಿ. ಇದನ್ನು ಯಾರಿಗೂ ತಿಳಿಸಲು ಇಷ್ಟಪಡುವುದಿಲ್ಲ. ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ‌ ಅಸಮಾಧಾನವಾಗುವ ಸಾಧ್ಯತೆ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಶೋಧನೆ ಮಾಡುವ ಸಂಭವ ಬರಲಿದೆ. ನಿಮ್ಮ ಮಾತುಗಳೇ ನಿಮ್ಮ ಶಕ್ತಿ ಸಾಮಾಜಿಕ ವಲಯದಲ್ಲಿ ಮೆರೆಯುವ ಅವಕಾಶ ಇದೆ. ಉದ್ಯೋಗದಲ್ಲಿ ಉನ್ನತಿ ಸೂಚನೆಗಳು ಸಿಗಬಹುದು. ಅತಿಯಾದ ಭಾವನೆಗಳಿಂದ ದೂರವಿರಿ. ಹಣದ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಅನಾಯಸದಿಂದ ಬಂದ ಹಣವು ನಿಮಗೆ ದಕ್ಕದು. ಬೇಡದ ಕಾರ್ಯಕ್ಕೆ ವಿನಿಯೋಗವಾಗಲಿದೆ. ಮಾತನ್ನು ಯೋಗ್ಯವಾಗಿ, ಯೋಗ್ಯಸ್ಥಾನದಲ್ಲಿ ಆಡಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೋರಾಡುವಿರಿ. ಯಾರನ್ನೂ ಒತ್ತಾಯಿಸದೇ ಕೆಲಸವನ್ನು ಮಾಡಿಸಿಕೊಳ್ಳಿ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ವೃತ್ತಿಯ ಕುರಿತು ಯಾರಾದರೂ ಕೇಳಿಯಾರು.

ಕುಂಭ ರಾಶಿ: ಜೀವನ ಚಕ್ರವು ಯಾವುದಾದರೊಂದು ರೀತಿಯಲ್ಲಿ ಬದಲಾಗುವ ಆಶಯದಲ್ಲಿ ಇರುವಿರಿ. ಇಂದು ನಿಮ್ಮನ್ನು ನಂಬಿದವರಿಗೆ ದ್ರೋಹವಾಗದಂತೆ ಕೆಲಸವನ್ನು ಮಾಡಿ. ಹಣದ ತೊಂದರೆ ಎದ್ದು ಕಾಣಿಸುತ್ತದೆ. ಇದರಿಂದ ಚಿಂತೆಯೂ ಆಗಬಹುದು. ಮನೆಯವರ ಸಹಾಯವು ಅನಿವಾರ್ಯವಾದರೆ ಸಿಗಲಿದೆ. ಅನಿರೀಕ್ಷಿತ ಲಾಭದಿಂದ ದಾರಿ ತಪ್ಪಬಹುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ಆತ್ಮೀಯರ ಸಹಾಯದಿಂದ ಸಮಸ್ಯೆಗಳ ಪರಿಹಾರ ಸಿಗುತ್ತದೆ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ವಿದೇಶದಿಂದ ಉದ್ಯೋಗಕ್ಕೆ ಕರೆ ಬರಲಿದೆ. ಜೀವನ ಸಂಗಾತಿಯೊಂದಿಗೆ ಸಣ್ಣ ಮನಸ್ತಾಪ ಸಂಭವಿಸಬಹುದು. ಹಳೆಯ ಸ್ನೇಹಿತನು ಭೇಟಿಯಾಗಬಹುದು. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ಕಥೆಯನ್ನು ಹೇಳವ ಆಸಕ್ತಿ ಹೆಚ್ಚಾಗಬಹುದು. ಬರವಣಿಗೆಯ ವಿಚಾರದಲ್ಲಿ ಹೆಚ್ಚು ಮನಸ್ಸನ್ನು ಕೊಡಿ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ.

ಮೀನ ರಾಶಿ: ವೃತ್ತಿಯಲ್ಲಿ ಅಸ್ಥಿರತೆ ಕಾಡುವುದು. ಇಂದು ನಿಮ್ಮ ನಿರೀಕ್ಷಿತ ಸುದ್ದಿಯಿಂದ ಸಂತೋಷವಗಲಿದೆ. ಮನಸ್ಸು ಮತ್ತು ದೇಹಕ್ಕೂ ಶ್ರಮವಾಗಬಹುದು. ಯೋಗ ಹಾಗೂ ಧ್ಯಾನದಿಂದ ಶ್ರಮದ ಪರಿಹಾರವಾಗಲಿದೆ. ಆರ್ಥಿಕವಾಗಿ ನಷ್ಟ ಎದುರಾಗುವುದು. ಇಂದಿನ ನಿಮ್ಮ ಕರ್ಮಕ್ಕೆ ಅನ್ಯರ ಸಹಕಾರ ಇರದು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಬಹುದು. ದೂರದ ಗೆಳೆಯರಿಂದ ಶುಭ ಸುದ್ದಿ ಬರುತ್ತದೆ. ಧಾರ್ಮಿಕ ಕ್ಷೇತ್ರದವರಿಗೆ ಹೊಸ ಅವಕಾಶ. ಅವುಗಳ ಕುರಿತು ಅತಿಯಾಗಿ ಆಲೋಚಿಸಿದಷ್ಟೂ ಸಮಸ್ಯೆಗಳು ಹಾಗೇ ಇರುತ್ತವೆ. ಹೊಸ ಉದ್ಯೋಗದ ಸೃಷ್ಟಿಗೆ ಹೆಚ್ಚು ಮನಸ್ಸು ಮಾಡುವಿರಿ. ವಾಹನದಿಂದ ಅಪಘಾತವಾಗುವ ಸಾಧ್ಯತೆ. ವೃತ್ತಿಯ ಸ್ಥಳದಲ್ಲಿ ನೀವು ಸಂತೋಷವಾಗಿ ಕೆಲಸಮಾಡುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು.

TV9 Kannada

Leave a Reply

Your email address will not be published. Required fields are marked *