ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಪ್ರತಿಪತ್ ತಿಥಿ, ಮಂಗಳವಾರ ಕೃಷಿಯಲ್ಲಿ ಹೊಸ ಯೋಜನೆ, ಉದ್ದೇಶಪೂರ್ವಕ ತಪ್ಪು, ಮನಸ್ಸಿನ ಚಾಂಚಲ್ಯ ಇವೆಲ್ಲ ಇರಲಿದೆ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಪರಿಘ, ಕರಣ : ಬಾಲವ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 51 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:40 – 17:16, ಯಮಘಂಡ ಕಾಲ 09:18 – 10:53, ಗುಳಿಕ ಕಾಲ 12:29 – 14:05
ಮೇಷ ರಾಶಿ: : ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಬೆಳೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ದೂರದರ್ಶಿತ್ವ ನಿಮಗೆ ಪ್ರಯೋಜನವಾಗಲಿದೆ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ನಿಮ್ಮ ಪ್ರಾಮಾಣಿಕತೆ ಇತರರ ಗಮನ ಸೆಳೆಯುತ್ತದೆ. ಕೆಲಸದಲ್ಲಿ ಚಿಕ್ಕ ವಿಳಂಬ ಸಂಭವಿಸಬಹುದು, ತಾಳ್ಮೆಯಿಂದಿರಿ. ನಿಮ್ಮ ಯೋಜನೆಗಳಿಗೆ ಪೂರಕವಾದ ಅವಕಾಶಗಳು ಎದುರಾಗಬಹುದು. ಮನೆಯ ಕೆಲಸವನ್ನು ಬೇರೆಯವರಿಗೆ ಹೇಳಿದರೂ ನೀವೇ ಮಾಡಬೇಕಾಗುವುದು. ಇಂದು ಹೊಸ ಕಲಿಕೆಯ ಹಂಬಲವಿರಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ನೆಮ್ಮದಿಗೆ ನೀವೇ ಬುನಾದಿ. ಪ್ರಮಾಣಿಕತೆಯನ್ನು ಹಣಕಾಸಿನ ವ್ಯವಹಾರವನ್ನು ಕೊಡಬಹುದು. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹಣದ ಖರ್ಚು ಮಾಡಬೇಕಾದೀತು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು.
ವೃಷಭ ರಾಶಿ: : ಅವಕಾಶ ವಂಚನೆಗೆ ಇನ್ಮೊಬ್ಬರನ್ನು ಕಾರಣ ಮಾಡಿ ದ್ವೇಷ ಸಾಧಿಸುವಿರಿ. ಇಂದು ಸಂಗಾತಿಯ ಮಾತಿನಿಂದ ನಿಮ್ಮ ವರ್ತನೆಯು ಬಬಲಾಗುವುದು. ಕಛೇರಿಯಲ್ಲಿ ಒತ್ತಡವು ಇರುವುದರಿಂದ ಉದ್ಯೋಗವನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ನೆಮ್ಮದಿ ನೀಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ. ಹಣಕಾಸು ಪರಿಸ್ಥಿತಿ ಸ್ಥಿರವಾಗಿರುತ್ತದೆ. ನಿಮ್ಮ ಆದರ್ಶಗಳ ಬಗ್ಗೆ ಯೋಚನೆ ಮಾಡುವ ದಿನ. ಸ್ನೇಹಿತರಿಂದ ಪ್ರೇರಣಾ ಮಾತುಗಳು ಸಿಗಬಹುದು. ವ್ಯವಸ್ಥೆ ಸರಿಯಾಗಲು ಎಲ್ಲ ಪ್ರಯೋಗವನ್ನೂ ಮಾಡಿ ಬತ್ತಳಿಕೆ ಖಾಲಿ ಮಾಡಿಕೊಳ್ಳುವಿರಿ. ಬದಲಾವಣೆಯ ಶಕ್ತಿ ಇವತ್ತು ನಿಮ್ಮ ಪಕ್ಕದಲ್ಲಿದೆ. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಡಿ. ಪರಿಚಿತರಂತೆ ಬಂದು ಮೋಸಮಾಡಬಹುದು. ಅಸಭ್ಯ ಮಾತುಗಳನ್ನು ಕಡಿಮೆ ಮಾಡಿ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ನಿಮ್ಮ ಕಾರ್ಯಕ್ಕೆ ಬೇರೆಯವರನ್ನು ದೂರುವುದು ಬೇಡ.
ಮಿಥುನ ರಾಶಿ: : ದುರಸ್ತಿ ಕಾರ್ಯದಲ್ಲಿ ಹೆಚ್ಚು ಕೆಲಸವಿರಲಿದೆ. ನೀವು ಅನುಭವಿಸುತ್ತಿರುವ ಕಷ್ಟಗಳು ಇಂದಿಗೆ ಮುಕ್ತಯವಾಗಿ ನಿರಾಳವೆನಿಸಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ಆದಾಯ ಅಧಿಕ ಹಾಗೂ ಹಣವನ್ನು ಪಡೆಯಲು ಕಷ್ಟಪಡುವಿರಿ. ಆರ್ಥಿಕವಾಗಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು, ತಾಳ್ಮೆ ಇರಲಿ. ಇಂದು ನಿಮ್ಮ ಮಾತುಗಳು ಪರಿಣಾಮಕಾರಿ ಆಗಬಲ್ಲವು ಜವಾಬ್ದಾರಿಯಿಂದ ಮಾತನಾಡಿ. ಹೊಸ ಪರಿಚಯಗಳು ನಿಮ್ಮ ಮುಂದಿನ ದಾರಿಗೆ ಪ್ರೇರಣೆ ನೀಡಬಹುದು. ಕೆಲಸದಲ್ಲಿ ಒತ್ತಡ ಇದ್ದರೂ ಸಹ ಸಹೋದ್ಯೋಗಿಗಳ ಸಹಕಾರ ಲಭ್ಯವಿರಬಹುದು. ವಸ್ತುಗಳು ಕಳ್ಳತನವಾಗುವಬಹುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ಕೆಲವರಿಂದ ಭೀತಿಯಾಗುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು.
ಕರ್ಕಾಟಕ ರಾಶಿ: : ಪರರ ಸಂತೋಷಕ್ಕೆ ಕೆಟ್ಟ ಕೆಲಸವನ್ನೂ ಮಾಡುವಿರಿ. ಇಂದು ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ತಾಳ್ಮೆಯ ಪರೀಕ್ಷೆ ಇಂದಾಗನಹುದು. ಕೆಲಸದ ಒತ್ತಡ ಹೆಚ್ಚಾಗಿ ತೋರುತ್ತಾದರೂ, ನೀವು ಅದನ್ನು ಶ್ರದ್ಧೆಯಿಂದ ನಿಭಾಯಿಸಬಹುದು. ಹಣಕಾಸು ವಿಚಾರದಲ್ಲಿ ಚುರುಕಾಗಿ ಯೋಚಿಸಿ. ಅನವಶ್ಯಕ ವಾದವಿವಾದಗಳಿಂದ ದೂರವಿರಲಾಗದು. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದಗಳು ಬರಬಹುದು. ನೀವು ಹೇಳಿದ ಕೆಲಸವು ಆಗದೇ ಇರುವುದಕ್ಕೆ ಬೇಸರವಾಗುವುದು. ಅಪರಿಚಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗಲಿದೆ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಬೀಳುವಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ನಿಂದನೆ ಸಿಗಬಹುದು.
ಸಿಂಹ ರಾಶಿ: : ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಯೋಜನೆಯನ್ನು ರೂಪಗೊಳಿಸಲಾಗದು. ಸಾಹಸ ಪ್ರವೃತ್ತಿಯುಳ್ಳವರಿಗೆ ಕಾಡುಗಳನ್ನು ಸುತ್ತುವ ಆಸೆಯಾಗಬಹುದು. ಕೆಲಸದಲ್ಲಿ ನಿಮ್ಮ ಶ್ರಮ ಗುರುತಿಸಲ್ಪಡುತ್ತದೆ. ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ನಿಮ್ಮ ಗೆಲವು ತೃಪ್ತಿದಾಯಕವಾಗಿರದು. ಕುಟುಂಬದೊಂದಿಗಿನ ಸಂಬಂಧ ಬಲವಾಗುತ್ತದೆ. ಆತ್ಮವಿಶ್ವಾಸದಿಂದ ಮಾತನಾಡಿ. ಅದು ನಿಮಗೆ ಮುನ್ನಡೆಯಲು ಮಾರ್ಗವಾಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಬರುತ್ತದೆ. ತಂದೆಯಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಲಾಭವಾಗಲಿದೆ. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಸ್ವಂತ ವಿಚಾರಗಳನ್ನು ಚಿಂತಿಸುವುದು ನಿಮಗೆ ಕಷ್ಟವಾಗುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು.
ಕನ್ಯಾ ರಾಶಿ: : ಎಲ್ಲ ತಪ್ಪುಗಳೂ ಉದ್ದೇಶ ಪೂರ್ವಕವಾಗಿಯೇ ಇರುತ್ತದೆ ಎನ್ನಲಾಗದು. ನಿಮ್ಮ ಅಂತರಂಗವನ್ನು ನೀವೇ ನೋಡಿಕೊಳ್ಳುವುದು ಉತ್ತಮ. ಅನ್ಯರು ಹೇಳಿದರೆ ಸಿಟ್ಟಾಗಬಹುದು. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮನ್ನು ಬೇಸರಿಸುವರು. ಆತ್ಮವಿಶ್ವಾಸ ಹೆಚ್ಚಾಗಲು ಕೆಲವು ಸಣ್ಣ ಜವಾಬ್ದಾರಿಗಳನ್ನು ಹೊರಬೇಗುತ್ತದೆ. ಹಳೆ ಯೋಜನೆಯ ವ್ಯವಹಾರವನ್ನು ಮುಗಿಸಿಕೊಳ್ಳುವಿರಿ. ಮನಸ್ಸಿನಲ್ಲಿ ಹಳೆಯ ನೆನಪುಗಳು ಬರುವ ಸಾಧ್ಯ. ಅಧ್ಯಯನಕ್ಕೆ ಒಳ್ಳೆಯ ಸಮಯ. ನಿಮ್ಮ ಮಾತುಗಳಿಂದ ಯಾರಿಗಾದರೂ ಪ್ರೇರಣೆಯಾಗಬಹುದು. ಪ್ರಭಾವಿ ವ್ಯಕ್ತಿಗಳ ಸಹಾಯಕರಾಗಿ ಹೋಗುವ ಅವಕಾಶಗಳು ಸಿಗಬಹುದು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡಬಹುದು. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಘವನ್ನು ಆರಂಭಿಸುವಿರಿ.
ತುಲಾ ರಾಶಿ: :ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಚಾಂಚಲ್ಯ ಕಾಣಿಸಬಹುದು. ಇಂದು ಕೋಪವನ್ನು ಎಷ್ಟೇ ಕಡಿಮೆ ಮಾಡಬೇಕು ಎಂದರೂ ಒಂದಲ್ಲ ಒಂದು ರೀತಿಯಲ್ಲಿ ಅದು ಬರುತ್ತದೆ. ಪಾಲುದಾರಿಕೆಯಲ್ಲಿ ಉಂಟಾಗುವ ಕಲಹವನ್ನು ಆರಂಭದಲ್ಲಿಯೇ ನಿಲ್ಲಿಸಿ. ಯೋಜನೆಗಳು ನಿಧಾನವಾಗಿಯೇ ಮುಂದುವರಿಯಿಲಿ. ಗಡಿಬಿಡಿಯನ್ನು ಮಾಡಿಕೊಳ್ಳುವುದು ಬೇಡ. ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಖರ್ಚು ಆಗಬಹುದು. ಹಳೆಯ ಸ್ನೇಹಿತನಿಂದ ಸಿಹಿ ಸುದ್ದಿ ಬರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನ ಗುರುತಿಸಲ್ಪಡುತ್ತದೆ. ಸಾಮಾಜಿಕ ಕಾರ್ಯಗಳಿಂದ ಸಮ್ಮಾನಗಳು ಸಿಗಲಿವೆ. ಮಾತುಗಳನ್ನು ಅಳೆದು ತೂಗಿ ಆಡುವುದು ಒಳ್ಳೆಯದು. ಸಜ್ಜನರ ಸಹವಾಸ ಇಂದು ನಿಮಗೆ ಸಿಗಲಿದೆ. ಆಪತ್ಕಾಲಕ್ಕೆ ಬೇಕಾದ ಹಣವನ್ನು ತೆಗೆದಿರಿಸುವಿರಿ. ಸ್ತ್ರೀಯರು ಆಭರಣಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಚರಾಸ್ತಿಯು ಬೇಜವಾಬ್ದಾರಿಯಿಂದ ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ.
ವೃಶ್ಚಿಕ ರಾಶಿ: :ಅಧಿಕಾರಿಗಳ ಮನವೊಲಿಸಿ ಕಾರ್ಯವನ್ನು ಮಾಡುವುದು ಸುಲಭವಾಗದು. ಇಂದು ಮನಸ್ಸಿನಲ್ಲಿಯೇ ಸಂಕಟವನ್ನು ಅನುಭವಿಸುತ್ತ ಕಳೆಯುವಿರಿ. ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಂತ್ರಗಳಿಂದ ನಿಮಗೆ ನೋವಾಗುವ ಸಾಧ್ಯತೆ ಇದೆ. ದೂರದ ಪ್ರದೇಶಗಳಿಗೆ ಹೋಗಿ ನಿರಾಸೆ ಆಗಬಹುದು. ಮಾತಿನ ಪರಿಣಾಮ ಇಂದು ಹೆಚ್ಚಾಗಬಹುದು. ಜವಾಬ್ದಾರಿಯುತವಾಗಿ ಮಾತನಾಡಿ. ಸ್ನೇಹಿತರಿಂದ ಸಹಾಯ ಬರುತ್ತದೆ. ಕೆಲಸದಲ್ಲಿ ಕೊಂಚ ಅಸ್ತವ್ಯಸ್ತತೆಯಿದ್ದರೂ ಸಹಾಯದಿಂದ ಸುಗಮವಾಗುತ್ತದೆ. ಹೊಸ ಯೋಚನೆಗೆ ದಾರಿ ತೆರೆದುಕೊಳ್ಳವಹುದು. ಉತ್ಸಾಹದಿಂದ ಕೆಲಸಗಳನ್ನು ಆರಂಭಿಸಿ. ನಿಮ್ಮ ಸಂಗಾತಿಯ ಮೇಲೆ ಕಛೇರಿಯಲ್ಲಿ ಆದ ವೈಮನಸ್ಯದಿಂದ ಮುನಿಸಿಕೊಳ್ಳಬಹುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಿ. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ.
ಧನು ರಾಶಿ: :ಹೊಸ ಉತ್ಪನ್ನಗಳ ತಯಾರಿಕೆಯಲ್ಲಿ ಉದ್ಯೋಗಕ್ಕಿದ್ದರೆ ಒತ್ತಡ ಅಧಿಕವಾಗಲಿದೆ. ಅದನ್ನು ಮರೆಯುವುದು ಮುಂದುವರಿಸುವುದು ನಿಮಗೆ ಬಿಟ್ಟಿದ್ದು. ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವುವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಆರ್ಥಿಕ ವಿಚಾರದಲ್ಲಿ ಬೌದ್ಧಿಕ ಸಮತೋಲನ ಅಗತ್ಯ. ಸೃಜನಾತ್ಮಕ ಕೆಲಸಗಳಲ್ಲಿ ನಿರತರಾಗಬಹುದು. ಇಂದು ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಸಣ್ಣ ಸಹಾಯವೂ ದೊಡ್ಡ ಫಲ ನೀಡಬಹುದು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಪ್ರಯತ್ನಗಳು ಯಶಸ್ಸಿನತ್ತ ಕರೆದೊಯ್ಯುತ್ತವೆ. ಉದ್ಯೋಗದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಆತಂಕವಸದೀತು. ನಿಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶಗಳು ನಡೆಯಲಿವೆ. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಬೇಕಾಗಬಹುದು. ಹಲವು ದಿನಗಳ ನಿಮ್ಮ ಸಾಲ ಮುಕ್ತಾಯವಾಗಿಲಿದೆ.
ಮಕರ ರಾಶಿ: :ರಾಜಕೀಯದಲ್ಲಿ ಯಾವುದಾದರೂ ಒಂದು ಸ್ಥಾನವನ್ನು ಪಡೆಯಲು ದುಂಬಾಲು ಬೀಳುವಿರಿ. ದಾಂಪತ್ಯದಲ್ಲಿ ಪ್ರೇಮಸಲ್ಲಪವು ಎಂದಿಗಿಂತ ಜೋರಾಗಿ ಇರಲಿದೆ. ನಿಮ್ಮ ನಡುವೆ ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದುಃಖಗಳನ್ನು ಬಿಟ್ಟು ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಈ ದಿನ ಮನಸ್ಸು ಲಘುವಾಗುತ್ತದೆ. ಅನಾವಶ್ಯಕ ಖರ್ಚು ತಪ್ಪಿಸಿಕೊಳ್ಳಿ. ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಂತವಾಗಿ ಯೋಚಿಸಿ. ಸ್ನೇಹಿತನೊಂದಿಗೆ ಕಲಹವಾಗುವ ಸಾಧ್ಯತೆ ಇದೆ, ತಾಳ್ಮೆ ಇರಲಿ. ಅಧಿಕ ಧನಹಾನಿ ಆಗುವ ಸ್ಥಿತಿ ಎದುರಾಗಬಹುದು. ಸ್ವಲ್ಪ ಎಚ್ಚದಿಂದ ಇರಿ. ಮಿತ್ರರು ನಿಮ್ಮ ಗುಟ್ಟನ್ನು ಬಿಚ್ಚಿಟ್ಟಾರು. ಸಾಲವನ್ನು ನೀಡಿದವರು ನಿಮಗೆ ಪೀಡಿಸುವರು. ಎಲ್ಲವನ್ನೂ ತುಲನೆ ಮಾಡಿ ನೋಡುವ ಅವಶ್ಯಕತೆ ಇಲ್ಲ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ.
ಕುಂಭ ರಾಶಿ: :ಮಕ್ಕಳಿಗಾಗಿ ಏನನ್ನಾದರೂ ಮಾಡುವ ಮಹದಾಸೆಯನ್ನು ಕಾಣುವಿರಿ. ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಹಣಕಾಸು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಕೆಲಸದ ಒತ್ತಡ ಕಡಿಮೆಯಾಗಬಹುದು. ಹೊಸ ಗುರಿಗಳ ಬಗ್ಗೆ ಯೋಚಿಸಲು ಶುಭ ಸಮಯ. ಅವಕಾಶಗನ್ನು ಯಾರಿಗೂ ಬಿಟ್ಟುಕೊಡದೇ ನೀವೇ ಅನುಭವಿಸಿ. ಕುಟುಂಬದವರ ಜೊತೆ ಇಂದು ಕಾಲವನ್ನು ಕಳೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಲಿದೆ. ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸಮಯವು ಎಷ್ಟೇ ಇದ್ದರೂ ಕೆಲಸವನ್ನು ಮಾಡುವ ಮನಸ್ಸು ಇರದು.
ಮೀನ ರಾಶಿ: :ಮಾತನಾಡುವವರ ಮುಂದೆ ನಿಮಗೆ ಏನನ್ನು ಹೇಳಲೂ ಅವಕಾಶವೇ ಸಿಗದು. ಇಂದು ಅನ್ಯ ಮಾರ್ಗದಿಂದ ಹಣ ಸಂಪಾದನೆಯನ್ನು ಮಾಡಲು ದಾರಿ ಹುಡುಕುವಿರಿ. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಹೊಂದಿಕೊಳ್ಳಿ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಂಬಂಧಗಳು ಹಾಳಾಗಬಹುದು. ಭೂಮಿಗೆ ಸಂಬಂಧಿಸಿದ ಕೆಲಸದಲ್ಲಿ ಹಣವನ್ನು ಹೂಡಿಕೆ ಮಾಡುವ ಮೊದಲು ಸಂಪೂರ್ಣ ವಿಚಾರಣೆ ಮಾಡಿ. ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಇಂದಿನ ಬಹುಪಾಲು ಸಮಯವನ್ನು ಬೇರೆ ಯಾವುದೋ ಚಿಂತನೆಯಲ್ಲಿ ಕಳೆಯುವಿರಿ. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಗೆ ಧೈರ್ಯದಿಂದ ಮುನ್ನುಗ್ಗಿ ಸರಿ ಮಾಡಿಕೊಳ್ಳಿ.
Source : TV9 Kannada