ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ, ಶನಿವಾರ ಸ್ಥಾನಕ್ಕೆ ಬೇಕಾದ ಗುಣ, ಸಂಗಾತಿಗೆ ಸಮಾಧಾನ, ಪರರ ಸಂತೋಷದಲ್ಲಿ ಭಾಗಿ, ಪ್ರೇಮದಿಂದ ದುಃಖ ಇವೆಲ್ಲವೂ ಈ ದಿನ ವಿಶೇಷ. ಎಲ್ಲಾ ರಾಶಿಗಳ ಭವಿಷ್ಯ ಇಲ್ಲಿದೆ.

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಹಸ್ತಾ, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ – 06 – 57 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:52 – 11:20, ಯಮಘಂಡ ಕಾಲ 14:14 – 15:41, ಗುಳಿಕ ಕಾಲ 06:58 – 08:25.
ಮೇಷ ರಾಶಿ: ತಾಳ್ಮೆಗೆ ಒಂದು ಮಾರ್ಯಾದೆ ಇರಲಿದೆ. ಅದು ಮೀರದಂತೆ ಇದ್ದರೆ ಒಳ್ಳೆಯದು. ಅಧಿಕಾರಿಗಳ ವರ್ತನೆಯಿಂದ ಮೇಲೆ ಕೋಪಗೊಳ್ಳುವಿರಿ. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಯಂತ್ರದ ವ್ಯಾಪಾರವು ಲಾಭದಾಯಕವಾಗುವುದು. ಮುಖಂಡದರಾಗಿ ಕರೆದೊಯ್ಯುವ ಗುಣ ಬೇಕು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ವಿದ್ಯಾರ್ಥಿಗಳು ಗೊಂದಲದಲ್ಲಿ ಇರಬಹುದು. ಹೇಳಿಕೊಳ್ಳುವುದು ಸೂಕ್ತ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಯಾರದೋ ಮಾತು ನಿಮಗೆ ಮನಸ್ಸನ್ನು ಮುಟ್ಟಿ ಪರಿವರ್ತನೆ ಆಗಬಹುದು. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಸಂಗಾತಿಯ ಜೊತೆ ಆಪ್ತಸಮಾಲೋಚನೆಯನ್ನು ಮಾಡುವಿರಿ. ಇರುವ ಸಂಪತ್ತನ್ನು ಗ್ರಹಿಸಿಕೊಂಡು ಯೋಜನೆಯನ್ನು ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೇ ಸುಮ್ಮನಿರುವುದ ಲೇಸು ಎಂದೆನಿಸಬಹುದು. ಗೆಲುವಿನ ನಿರೀಕ್ಷೆ ಸಫಲವಾಗುವುದು.
ವೃಷಭ ರಾಶಿ: ಒಂದು ಮಾಡಲು ಹೋದರು ಮತ್ತೊಂದು ತಾನಾಗಿಯೇ ಘಟಿಸುವುದು. ಇಂದು ಧನಾತ್ಮಕ ಶಕ್ತಿಯನ್ನು ಅನುಭವಿಸುವಿರಿ. ಅಂದುಕೊಂಡ ಕಾರ್ಯವು ಆಗಿಲ್ಲವೆಂದು ಒದ್ದಾಡಬಹುದು. ಸಂಗಾತಿಯ ಅಪನಂಬಿಕೆಯನ್ನು ಪ್ರಶ್ನಿಸುವ ಮನಸ್ಸು ಮಾಡುವಿರಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಸನ್ಮಾನಗಳನ್ನು ಬಯಸುವಿರಿ. ಸಮಾರಂಭಗಳಿಗೆ ಒತ್ತಾಯದ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯಿಂದ ಮನಸ್ಸಿಗೆ ಕಿರಿಕಿರಿ. ಯಾರ ಬಳಿಯೋ ಹಣವನ್ನು ಹೊಂದಿಸಿ ಮಿತ್ರರಿಗೆ ಕೊಡುವಿರಿ. ಒಂದೇರೀತಿಯ ಕೆಲಸವು ನಿಮಗೆ ಬೇಸರ ತರಿಸಬಹುದು. ಯಾರ ಮೇಲೂ ಹಗುರಾದ ಮನೋಭಾವ ಬೇಡ. ಕೆಟ್ಟ ಸನ್ನಿವೇಶವನ್ನು ನೀವು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ನಿಮ್ಮ ಬಣ್ಣದ ಮಾತುಗಳು ಕೆಲವು ಅವಧಿಗೆ ಮಾತ್ರ ಸೀಮಿತ. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ.
ಮಿಥುನ ರಾಶಿ: ಅತಿಯಾದ ಪ್ರೇಮವೇ ನಿಮಗೆ ಮೋಹವಾಗಿ ಮುಳುವಾಗಬಹುದು. ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಅವರಿಗೆ ಇಂದು ಉತ್ತಮ ದಿನವಲ್ಲ. ವ್ಯಾಪಾರದಲ್ಲಿ ನಿಮಗೆ ಋಣಾತ್ಮಕ ಹೇಳಿಕೆಗಳು ಕೇಳಿಬರಬಹದು. ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಆಂತಕವಾಗುವುದು. ನಿಮ್ಮ ಪಾವಿತ್ರ್ಯಯನ್ನು ಉಳಿಸಿಕೊಳ್ಳಲಾಹದು. ಅಪರಿಚಿತರು ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವರು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ನಿಮಗೆ ಯಾರ ಬೆಂಬಲದಿದ್ದರೂ ಕಾರ್ಯವನ್ನು ಮಾಡುವವರು ನೀವೇ. ಬರಬೇಕಾದ ಪೂರ್ಣವಾಗಿ ಬಾರದು. ಇಂದು ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಲು ಹೆಚ್ಚು ಗಮನಹರಿಸುವಿರಿ.
ಕರ್ಕಾಟಕ ರಾಶಿ: ಸ್ತ್ರೀಯರ ಜೊತೆ ಹೆಚ್ಚು ಸಮಯ ಕಳೆಯುವಿರಿ. ಇಂದು ಉದ್ಯೋಗದಲ್ಲಿರುವ ನಿಮಗೆ ತಾಳ್ಮೆಯು ಅತ್ಯವಶ್ಯಕ. ಅನ್ಯರ ಪಿತೂರಿಯಿಂದ ನಿಮ್ಮ ಉದ್ಯೋಗವು ಹಾಳಾಗುವುದು. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಬಹಳ ಕೆಲಸವಿದ್ದರೂ ಒತ್ತಡದಿಂದ ಇರುವಿರಿ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು. ಹೂಡಿಕೆಯನ್ನು ಮಾಡಿ ಒತ್ತಡವನ್ನು ಅನುಭವಿಸಬೇಕಾಗುವುದು. ಹಿರಿಯರಿಗೆ ಆರ್ಥಿಕ ವಿಚಾರದಲ್ಲಿ ಮಾನಸಿಕ ಹಿಂಸೆಯನ್ನು ಕೊಡುವಿರಿ. ಪ್ರೀತಿಯಿಂದ ಹೇಳಿ ಕೆಲಸವನ್ನು ಮಾಡಿಸಿಕೊಳ್ಳಿ. ಎಲ್ಲಿಗಾದರೂ ದೂರ ಪ್ರಯಾಣವನ್ನು ಮಾಡುವಿರಿ. ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಕೃತಜ್ಞೆಯನ್ನು ಅರ್ಪಿಸುವ ಮನೋಭಾವವಿರದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು.
ಸಿಂಹ ರಾಶಿ: ಅನಾರೋಗ್ಯಕ್ಕೆ ವೈದ್ಯರ ಭೇಟಿ. ದಂತಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳುವಿರಿ. ಅನೇಕ ಕೆಲಸಗಳನ್ನು ಮಾಡದೇ ಒಂದು ಕಡೆ ಗಮನವನ್ನು ಹರಿಸಿದರೆ ಆ ಕೆಲಸವು ಉತ್ತಮವಾಗಿ ಪೂರ್ಣಗೊಳ್ಳುವುದು. ಅಧ್ಯಾತ್ಮದಿಂದ ಏನೋ ಕಲ್ಪನೆಗಳನ್ನು ಮಾಡಿಕೊಳ್ಳುವಿರಿ. ದೈನಂದಿನ ಬಳಕೆಯ ಉತ್ಪನ್ನಗಳ ವ್ಯಾಪಾರಿಗಳು ಲಾಭ ಗಳಿಸುವರು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡುವಿರಿ. ಸಂಗಾತಿಯು ಕೆಲವು ವಿಚಾರಗಳನ್ನು ಗೌಪ್ಯವಾಗಿ ಇಡಬೇಕಾಗುವುದು. ಶತ್ರುವಿನ ನಿಗ್ರಹಕ್ಕೆ ಖರ್ಚುಮಾಡುವಿರಿ. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡುವುದು ಅನಿವಾರ್ಯವಾಗಬಹುದು. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು. ಹೊಸದರ ಆರಂಭವೇ ಹಳೆಯದರ ಅಂತ್ಯ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ.
ಕನ್ಯಾ ರಾಶಿ: ಮಕ್ಕಳನ್ನು ಮಾನಸಿಕವಾಗಿ ಬಲವಾಗಲು ಹೇಳುವಿರಿ. ಮೇಲಧಿಕಾರಿಗಳು ವಹಿಸಿದ ಕಾರ್ಯವನ್ನು ಪೂರೈಸುವಲ್ಲಿ ಯಶಸ್ವಿಯಾಗುವಿರಿ. ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಹೇಳುವುದು ಉಚಿತ. ನಿಮ್ಮ ಮಾತೇ ಬಂಡವಾಳವಾದೀತು. ಮನೆಯ ವಾತಾವರಣದಿಂದ ನಿಮ್ಮ ವೃತ್ತಿಯೂ ಸರಿಯಾಗಿರದು. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ಸಾಹವನ್ನು ವರ್ಧಿಸುವುದು. ಸಹೋದರಿಯ ವಿವಾಹದ ಜವಾಬ್ದಾರಿಯು ಇರಲಿದೆ. ನಿಮ್ಮ ವ್ರತಕ್ಕೆ ಭಂಗ ಬರುವ ಸಾಧ್ಯತೆ ಇದೆ. ಅಪರಿಚಿತರು ನಿಮ್ಮಿಂದ ಹಣವನ್ನು ಕೇಳಬಹುದು. ಕೆಲಸಕ್ಕೆ ಅನುಗುಣವಾಗಿ ಸಮಯವನ್ನು ಹೊಂದಿಸಿಕೊಳ್ಳಿ. ಸಂಗತಿ ಜೊತೆಗಿನ ವಿರಸವನ್ನು ದೂರಮಾಡಿಕೊಳ್ಳುವಿರಿ. ಪ್ರಯಾಣ ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಹತ್ತಿರದವರನ್ನು ನೀವು ಕಳೆದುಕೊಳ್ಳಬೇಕಾದೀತು. ಪರರಿಗೆ ನೋವಾಗದಂತೆ ಸ್ಪಂದಿಸುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು.
ತುಲಾ ರಾಶಿ: ನೈಪುಣ್ಯವೊಂದೇ ಸಾಲದು, ಅದೃಷ್ಟವೂ ಇದ್ದರೆ ಮಾತ್ರ ಸ್ಥಾನಮಾನಗಳು ಸಾಧ್ಯ. ನೀವು ಇಂದು ನಿರ್ದೋಷಿತ್ವವನ್ನು ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ಸಂಗಾತಿಯ ಹೂಡಿಕೆಯನ್ನು ನೀವು ಬಳಸಿಕೊಳ್ಳುವಿರಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ಏನು ಬೇಕಾದರೂ ಮಾಡಬಹುದು, ಆದರೆ ಏನೂ ಆಗದು. ನಿಮ್ಮ ಮಾತುಗಳು ಖಾರವಾಗುವುದು. ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಉದ್ಯೋಗವು ಸಿಗುವುದು. ಸಮಯದ ಮೌಲ್ಯವನ್ನು ಅರಿತು ಕಾರ್ಯಪ್ರವೃತ್ತರಾಗಿ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ಕೋಪಕ್ಕೆ ಸರಿಯಾದ ಕಾರಣವಿರಲಿ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು.
ವೃಶ್ಚಿಕ ರಾಶಿ: ಪುಣ್ಯಸ್ಥಳಗಳ ದರ್ಶನದಿಂದ ಆಯಾಸಗೊಳ್ಳುವಿರಿ. ಹಿರಿಯರ ಸೇವೆಯನ್ನು ಮಾಡುವ ಅವಕಾಶವು ಸಿಗಲಿದ್ದು, ಅದನ್ನು ಕಳೆದುಕೊಳ್ಳುವುದು ಬೇಡ. ಸಾಲಗಾರರ ಬೆನ್ನು ಬಿಡದೇ ನೀವು ಬರುವ ಹಣವನ್ನು ಪಡೆದುಕೊಳ್ಳುವಿರಿ. ಉಪವಾಸದಿಂದ ಆರೋಗ್ಯವನ್ನು ಕೆಡಸಿಕೊಳ್ಳುವಿರಿ. ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಕರ್ತವ್ಯಪರರಾಗಿ ಕಾರ್ಯವನ್ನು ಮಾಡಿ. ಅನಿರೀಕ್ಷಿತ ಧನಾಗಮನವು ನಿಮ್ಮ ಕಾರ್ಯಗಳಿಗೆ ಸರಿಯಾಗಿ ದೊರೆತಂತೆ ಆಗುವುದು. ಈ ದಿನಗಳಲ್ಲಿ ವ್ಯವಹಾರದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೆ, ತಾಳ್ಮೆಯಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ನಿಮ್ಮ ಜುಟ್ಟವನ್ನು ಅವರೇ ಹಿಡಿದುಕೊಂಡು ಆಡಿಸುವರು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.
ಧನು ರಾಶಿ: ಖರೀದಿಸಿದ ಭೂಮಿಯಲ್ಲಿ ಗೃಹನಿರ್ಮಾಣಕ್ಕೆ ಸಿದ್ಧತೆ. ಕಛೇರಿಯ ಕೆಲಸದಲ್ಲಿ ಸಹೋದ್ಯೋಗಿಗಳ ಅಸಹಕಾರವು ಇರುವುದು. ನಿಮಗೆ ಗೊತ್ತಿಲ್ಲದೇ ಇರುವ ಕಾರ್ಯವನ್ನು ಮಾಡಬೇಕಾಗುವುದು. ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ. ಸಿಹಿ ಎಷ್ಟೇ ಇಷ್ಟವಾದರೂ ಮಿತಿಯಲ್ಲಿ ಸೇವಿಸಿದರೆ ಆಪತ್ತಿಲ್ಲ. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುವಿರಿ. ಸಭೆಯಲ್ಲಿ ಮಾತನಾಡುವ ಅವಕಾಶವು ಸಿಗಲಿದೆ. ಉತ್ಪಾದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಷ್ಟವನ್ನು ಭರಿಸಿಕೊಳ್ಳಲು ನೀವು ಮಾರ್ಗವನ್ನು ಬದಲಿಸಬೇಕಾಗುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಸಂಕೋಚವಾಗುವುದು. ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು.
ಮಕರ ರಾಶಿ: ಇರುವುದರಲ್ಲಿ ಸಂತೋಷಪಡುವುದು ಉತ್ತಮ. ಯಾರಾದರೂ ಹೊಸ ಯೋಜನೆಗಳ ಬಗ್ಗೆ ಸಲಹೆಯನ್ನು ಕೊಡುವರು, ಉದ್ಯೋಗದ ಕಾರಣದಿಂದ ನೀವು ಓಡಾಟವನ್ನು ಮಾಡಬೇಕಾಗುವುದು. ನೀವು ಯಾವುದನ್ನೂ ಗುಟ್ಟಾಗಿ ಇಡಲಾರಿರಿ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚನ್ನು ನಿಮ್ಮ ಯೋಜನೆಯು ತೆಗೆದುಕೊಂಡಿದ್ದು ನಿಮಗೆ ಚಿಂತೆಯಾಗಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಪ್ರೀತಿ ನಿಮ್ಮ ದಿಕ್ಕನ್ನು ಬದಲಿಸುವುದು. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶಲ ವಸ್ತುಗಳ ಮಾರಾಟವನ್ನು ನೀವು ಮಾಡಲು ಉತ್ಸಾಹದಿಂದ ಇರುವಿರಿ. ಕಛೇರಿಯ ಕೆಲಸದಲ್ಲಿ ಮೇಲಧಿಕಾರಿಗಳಿಂದ ಅಕ್ಷೇಪವು ಬರಬಹುದು.
ಕುಂಭ ರಾಶಿ: ದೂರ ಪ್ರಯಾಣದ ಕಾರಣ ವ್ಯವಹಾರಕ್ಕೆ ಯಾರಾನ್ನಾದರೂ ಜೋಡಿಸುವಿರಿ. ಸಂಶೋಧನಾ ಕಾರ್ಯದಲ್ಲಿ ನಿರತರಾಗಿರುವವರಿಗೆ ಮಾರ್ಗಗಳು ತೆರೆದುಕೊಳ್ಳುವುದು. ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವಿರಿ. ಸಣ್ಣ ವ್ಯವಹಾರಗಳಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಮೇಲಿಂದ ಮೇಲೆ ಒತ್ತಡಗಳು ಕಾಣಿಸಿಕೊಳ್ಳುವುದು. ಎಂತಹ ಕಷ್ಟದಲ್ಲಿಯೂ ನೀವು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ. ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಕಾಣಿಸುವುದು.
ಮೀನ ರಾಶಿ: ಇಂದು ಸಂಗಾತಿಯ ಬೇಸರವನ್ನು ದೂರಮಾಡಿಸುವಿರಿ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವು ಬಂದೀತು, ನಿಮಗೆ ಸಾಮಾನ್ಯರ ಜೊತೆ ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು. ಹೊಸ ಆರ್ಥಿಕ ವ್ಯವಹಾರಕ್ಕೆ ಮೊದಲು ಕಾನೂನಿನ ಜ್ಞಾನ ಅಗತ್ಯ. ವ್ಯಾಪಾರವನ್ನು ನೀವು ವಿಸ್ತಾರ ಮಾಡಿಕೊಳ್ಳುವ ಯೋಜನೆಯನ್ನು ಹೊಂದುವಿರಿ. ಪ್ರಭಾವೀ ವ್ಯಕ್ತಿಗಳ ಬಗ್ಗೆ ನಿಮಗೆ ಮುಜುಗರವಾಗಬಹುದು. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಆಗದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ವ್ಯವಹಾರದ ಅನುಕೂಲತೆಗೆ ಜನರನ್ನು ಸೇರಿಸಿಕೊಳ್ಳುವಿರಿ. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ಕೆಲವನ್ನು ನೀವು ಬೇಕೆಂದೇ ಬಿಟ್ಟುಕೊಳ್ಳುವಿರಿ. ಊಹಿಸದ ಬದಲಾವಣೆಯು ನಿಮ್ಮಿಂದಾಗಬಹುದು.