ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ, ಶುಕ್ರವಾರ ತಾಳ್ಮೆಯ ಮಿತಿ ಮೀರುವುದು, ಕೈಲಾಗದ ಕಾರ್ಯ, ಕಾರ್ಯ ವಿಲಂಬ, ವಾಹನಾಪಘಾತ ಇದೆಲ್ಲ ಇರುವುದು ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ವೃಷಭ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಶುಕ್ರವಾರ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಾಧ್ಯ, ಕರಣ : ಬವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 52 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:53 – 12:29, ಯಮಘಂಡ ಕಾಲ 15:41 – 17:16, ಗುಳಿಕ ಕಾಲ 07:42 – 09:18
ಮೇಷ ರಾಶಿ: ಹೂಡಿಕೆಯ ಹಣದಿಂದ ಇಂದು ಉಪಯೋಗವಾಲಿದ್ದು, ನಿಮಗೆ ಒತ್ತಡ ಕಡಿಮೆಯಗಲಿದೆ. ಒಂದೇ ರೀತಿಯ ಕೆಲಸದಿಂದ ಆಸಕ್ತಿ ಕುಂದಬಹುದು. ಮಧ್ಯ ಸಣ್ಣ ವಿರಾಮವನ್ನು ನೀವು ಬಯಸುವಿರಿ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಛೇರಿಯಲ್ಲಿ ನೀವು ಮೇಲಧಿಕಾರಿಗಳು ಹಾಗೂ ನೌಕರರ ನಡುವೆ ಸಿಕ್ಕಿಬೀಳುವಿರಿ. ಕುಟುಂಬದ ಬೆಂಬಲ ನಿಮಗೆ ಶಕ್ತಿ ನೀಡುತ್ತದೆ. ಪ್ರೀತಿಯಲ್ಲಿ ನಿಗೂಢತೆಯ ಬದಲಿಗೆ ಸ್ಪಷ್ಟತೆ ಅಗತ್ಯವಿದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವಿಲಂಬಿತ ಕೆಲಸಗಳಿಂದ ದೂರವಿರಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಕೈಲಾಗುವ ಕೆಲಸವನ್ನು ಮಾಡಿ ಕಿಂಚಿತ್ ಆದಾಯವನ್ನು ಮಾಡಿಕೊಳ್ಳುವಿರಿ. ನಿಮ್ಮ ಪ್ರಗತಿಯ ಬಗ್ಗೆ ಇತರರು ಪ್ರಶಂಸಿಸಬಹುದು. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ.
ವೃಷಭ ರಾಶಿ: :ಯಾವುದೇ ಶರತ್ತನ್ನು ಸ್ವೀಕರಿಸಲಾರಿರಿ. ಇಂದು ನೀವು ಮನಸ್ಸಿಗೆ ಹಿಡಿಸಿದ್ಸನ್ನು ಮಾತ್ರ ಮಾಡುವಿರಿ. ನಿಮ್ಮ ಪೂರ್ವ ನಿಶ್ಚಿತ ಯೋಜನೆಯನ್ನು ಬದಲಾಯಿಸುವಿರಿ. ತಂಪಾದ ವಸ್ತುಗಳನ್ನು ಸೇವಿಸಿ ಆರೋಗ್ಯ ಕೆಡುವುದು. ನಿಮ್ಮ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಕೆಲಸದ ಮೆಚ್ಚುಗೆಗಳು ಸಂತೋಷವನ್ನುಂಟುಮಾಡುತ್ತವೆ. ಹಣಕಾಸು ವಿಷಯದಲ್ಲಿ ಜಾಗರೂಕತೆ ಅಗತ್ಯವಿದೆ. ಬದಲಿ ವ್ಯವಸ್ಥೆ ಮಾಡುವುದು ನಿಮಗೆ ಕಷ್ಟವಾಗುವುದು. ಕುಟುಂಬದಲ್ಲಿ ಸಣ್ಣ ಮನಸ್ತಾಪ ಉಂಟಾಗಬಹುದು. ಮಾತುಗಳಲ್ಲಿ ನಿಖರತೆ ಇರಲಿ. ನಿಮ್ಮ ನಿರ್ಧಾರಗಳಲ್ಲಿ ತಲೆಕೆಡಿಸಿಕೊಳ್ಳದೇ ಸಾಗುವುದು ಉತ್ತಮ. ಇನ್ನೊಬ್ಬರನ್ನು ನೀವು ನಯವಾಗಿ ವಂಚಿಸುವಿರಿ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಮನೆಯ ವಾಸವನ್ನು ಬದಲಾಯಿಸುವಿರಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರ ಬನ್ನಿ.
ಮಿಥುನ ರಾಶಿ: :ಹರಿತವಾದ ವಸ್ತುಗಳನ್ನು ಬಳಸುವಾಗ ಜಾಗರೂಕತೆ ಬೇಕು. ನಿಮ್ಮ ಬಗ್ಗೆ ಯಾರಾದರೂ ಪ್ರೀತಿ ತೋರಿಸಿದರೆ ಮುಜುಗರವಾಗುವುದು. ಯಾರನ್ನೇ ಆದರೂ ಅವರನ್ನು ಒಂದು ಹಂತದವರಗೆ ಮಾತ್ರ ಒಳಗೆ ಕರೆಯುವುದು ಸೂಕ್ತ. ಬಾಂಧವ್ಯದಲ್ಲಿ ವ್ಯವಹಾರ ಕಷ್ಟವಾದೀತು. ನೆರೆಯವರು ನಿಮ್ಮ ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹೂಡಿಕೆಯೊಳಗಿನ ಲಾಭದಿಂದ ಹಣಕಾಸು ಬೆಂಬಲ ಸಿಗಬಹುದು. ಮನೆಯವರ ಜೊತೆ ಕಾಲ ಕಳೆಯುವುದರಿಂದ ಶಾಂತಿ ಪಡೆಯುವಿರಿ. ಹಳೆಯ ಗೆಳೆಯನ ಸಂಪರ್ಕ ಸಂತೋಷ ನೀಡಬಹುದು. ಆರೋಗ್ಯದಲ್ಲಿ ವಿಶ್ರಾಂತಿ ಮುಖ್ಯ. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು. ಹೊಂದಾಣಿಕೆಯ ಕಡೆ ನಿಮ್ಮ ಗಮನವಿರಲಿ.
ಕರ್ಕಾಟಕ ರಾಶಿ: :ಅಕ್ರಮದ ವಸ್ತುಗಳು ಕೈ ತಪ್ಪಿಹೋಗುವುದು. ಇಂದು ನಿಮ್ಮ ಪ್ರೇಮವು ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ನಿಮಗೆ ಇಂದು ಬಹಳ ಸಮಯ ಇರುವಂತೆ ತೋರುತ್ತದೆ. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಯಾವ ಕಾರ್ಯಕ್ಕೂ ಮುಂಚಿತವಾಗಿ ಹಣ ಕೊಡುವುದು ಬೇಡ. ಆರ್ಥಿಕ ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ಬಹುತೇಕವಾಗಿ ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡದೆ ಶ್ರದ್ಧೆಯಿಂದ ಪೂರ್ಣಗೊಳಿಸಿ. ಸಹಕರಿಸುವ ಮನೋಭಾವನೆ ಇಂದು ಯಶಸ್ಸಿಗೆ ದಾರಿ ತೆಗೆಯುತ್ತದೆ. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ನಿಮ್ಮ ಹಸ್ತಕ್ಷೇಪ ಇರಲಿ. ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸುವಿರಿ. ಇಂದು ತಲ್ಲೀನರಾಗಿ ಎಲ್ಲ ಕಾರ್ಯವನ್ನು ಮಾಡುವಿರಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು.
ಸಿಂಹ ರಾಶಿ: :ನೀವು ಖರೀದಿಸುವ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿಕೊಳ್ಳ ಇಂದು ಹಲವು ರೀತಿಯಲ್ಲಿ ಪ್ರಯತ್ನ ಮಾಡುವಿರಿ. ಇಂದು ನೀವು ಅನಾಯಾಸವಾಗಿ ವೃತ್ತಿಯಲ್ಲಿ ತೊಡಗುವಿರಿ. ಕುಟುಂಬದಲ್ಲಿ ನಡೆಯಲಿರುವ ವಿವಾಹ ಕಾರ್ಯದ ಓಡಾಟವಿರುವುದು. ಉತ್ತಮ ಯೋಚನಾ ಶಕ್ತಿಯಿಂದ ಮಾರ್ಗವನ್ನು ಹುಡುಕುವಿರಿ. ಜಾಣ್ಮೆಯಿಲ್ಲದೇ ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಕುಟುಂಬದವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ದೂರದ ಸಂಬಂಧಿಯವರಿಂದ ಸಂವೇದನೆಗಳ ಬದಲಾವಣೆ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಗಂಭೀರತೆ ಬೆಳೆಯಲಿದೆ. ಪ್ರಭಾವಿಗಳ ಶಿಫಾರಸು ಇದ್ದರೂ ಕೆಲಸ ಸಾಧ್ಯವಾಗದು. ಯಾರನ್ನೂ ದೂಷಿಸುವುದು ನಿಮಗೆ ಹೇಳಿಸಿದ್ದಲ್ಲ. ಕೃಷಿಗೆ ಸಂಬಂಧಿಸಿದ ಕಾರ್ಯವನ್ನು ವೇಗವಾಗಿ ಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ.
ಕನ್ಯಾ ರಾಶಿ: :ಅನಪೇಕ್ಷಿತರಿಂದ ಸಹಾಯ ಸಿಗಲಿದ್ದು, ಅಚ್ಚರಿಯಾಗಬಹುದು. ನೀವು ಇನ್ನೊಬ್ಬರನ್ನು ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ವಾಹನ ಸಂಚಾರದಲ್ಲಿ ನಿಮಗೆ ಅಡ್ಡಿಗಳು ಬರಬಹುದು. ಇಂದಿನ ಕೆಲಸಗಳು ಬೇಗ ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಔಷಧದಿಂದ ದುಷ್ಪರಿಣಾಮವಾಗಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ಮನೆಯ ವಿಷಯದಲ್ಲಿ ಹೆಚ್ಚು ಸಮಯ ಕೊಡಬೇಕಾಗಬಹುದು. ಕಳೆದುಕೊಂಡಿದ್ದನ್ನು ಹೇಗಾದರೂ ಮಾಡಿ ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ.
ತುಲಾ ರಾಶಿ: :ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ಕೇಳಿ ಸುಮ್ಮನಾಗುವಿರಿ. ಅವಸರದಲ್ಲಿ ಉದ್ಯೋಗದ ತೀರ್ಮಾನವನ್ನು ತೆಗೆದುಕೊಳ್ಳಬೇಡ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಮಕ್ಕಳಿಂದ ನೆಮ್ಮದಿಯು ನಿಮಗೆ ಸಿಗುತಗತದೆ. ಹಣಕ್ಕಾಗಿ ಕಿರಿಕಿರಗಳು ಅಧಿಕವಾದಂತೆ ತೋರುವುದು. ಹೂಡಿಕೆಗೆ ಮೊದಲು ಎಲ್ಲವನ್ನೂ ಅಧ್ಯಯನ ಮಾಡಿ. ಕುಟುಂಬದವರೊಂದಿಗೆ ಕಳೆಯುವ ಸಮಯ ಹೃದಯ ತಣಿಸುತ್ತದೆ. ಬೃಹತ್ ಮೊತ್ತದ ಕಾಮಗಾರಿ ನಿಮಗೆ ಸಿಗಬಹುದು. ಪ್ರೇಮ ಸಂಬಂಧದಲ್ಲಿ ಬುದ್ಧಿವಂತಿಕೆ ಮುಖ್ಯ. ನಿಮ್ಮ ನಿಷ್ಠೆ ಮತ್ತು ಶ್ರಮವು ಮೆರೆದೀತು. ನಿಮಗೆ ಇಂದು ಬರುವ ಅಶುಭವಾರ್ತೆಯಿಂದ ತಲ್ಲಣಿಸಬಹುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಮನಃಶಾಂತಿಗೆ ಧ್ಯಾನವನ್ನು ರೂಢಿ ಮಾಡಿಕೊಳ್ಳಿ. ಮಹಿಳೆಯರಿಗೆ ಈ ದಿನ ಶುಭವಿರುವುದು. ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಬಹುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ನೋಡಿ.
ವೃಶ್ಚಿಕ ರಾಶಿ: :ಮೈ ಮರೆತರೆ ಅಪಘಾತವಾಗಬಹುದು. ಇಂದು ಸ್ನೇಹಿತರು ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಆದಾಯವನ್ನು ಉತ್ತಮ ಮಾಡಿಕೊಳ್ಳುವಿರಿ. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. ಬಟ್ಟೆಯನ್ನು ಮನೆಯವರಿಗೆ ಖರೀದಿಮಾಡುವಿರಿ. ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುತ್ತವೆ. ಮನೆಯ ಅಲಂಕರಣದ ಚಿಂತನೆ ಮೂಡಬಹುದು ಆದರೆ ಮುಂದಕ್ಕೆ ಹಾಕುವುದು ಉತ್ತಮ. ಸ್ನೇಹಿತರ ಜೊತೆಗಿನ ಸಮಯ ಖುಷಿಯನ್ನು ನೀಡುತ್ತದೆ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಸಹೋದ್ಯೋಗಿಗಳು ಉದ್ಯೋಗಕ್ಕೆ ಸಂಬಂಧಿಸಿದ ಗೊಂದಲವನ್ನು ಪರಿಹರಿಸಲು ಸಹಕಾರ ನೀಡಬಹುದು. ಅದೃಷ್ಟವನ್ನು ಮಾತ್ರ ನಂಬಿ ಕೆಲಸ ಮಾಡುವುದು ಬೇಡ. ನೀವು ಪಡೆದ ಸಾಲವನ್ನು ಮರುಪಾವತಿಸುವಿರಿ. ಸರ್ಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು.
ಧನು ರಾಶಿ: :ಮುಂಗಡ ಹಣವನ್ನು ಕೊಟ್ಟರೂ ನಿಮ್ಮ ಕೆಲಸ ಆಗದೇ ಮೋಸ ಹೋಗುವಿರಿ. ಸಿಟ್ಟಿನ ಭರದಲ್ಲಿ ವಿವೇಚನೆಯನ್ನು ಕಳೆದುಕೊಳ್ಳುವಿರಿ. ಚಂಚಲ ಮನಸ್ಸಿನಿಂದ ಕಾರ್ಯವನ್ನು ಸಾಧಿಸಲಾಗದು. ಬಹಳ ದಿನಗಳ ಅನಂತರ ಸಹೋದರರ ಭೇಟಿಯಾಗಲಿದ್ದು, ಸಂತೋಷವು ಇಮ್ಮಡಿಸುವುದು. ನಿಮ್ಮ ಆಕ್ರೋಶವನ್ನು ಮನೆಯಲ್ಲಿ ಹೊರಹಾಕುವಿರಿ. ಧೈರ್ಯದಿಂದ ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಹಣಕಾಸು ಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಖರ್ಚುಗಳಲ್ಲಿ ನಿಯಂತ್ರಣ ವಹಿಸಿ. ಮನೆಯವರು ನಿಮ್ಮ ಸಮಯ ಮತ್ತು ಪ್ರೀತಿಗೆ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಉಜ್ವಲ ಭವಿಷ್ಯಕ್ಕಾಗಿ ಸಮರ್ಪಿತ ಯತ್ನ ಅಗತ್ಯ. ಅಧಿಕಾರ ಪ್ರಾಪ್ತಿಗಾಗಿ ನೀವು ತಂತ್ರ ಹೂಡುವಿರಿ. ಮಕ್ಕಳ ಮೇಲೆ ಪಕ್ಷಪಾತ ಮಾಡುವುದು ಬೇಡ. ಮಾತನಾಡುವಾಗ ಒಂದು ಮಿತಿಯಲ್ಲಿ ಇರಲಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಇಂದು ಸೇವಿಸುವ ಆಹಾರದ ಬಗ್ಗೆ ನಿಮಗೆ ಸರಿಯಾದ ನಿಗಾ ಇರಲಿ.
ಮಕರ ರಾಶಿ: :ನಿಮ್ಮ ಬೆಂಬಲಿಗರನ್ನು ಹಿತಶತ್ರುಗಳು ದೂರಮಾಡುವರು. ಇಂದು ವ್ಯವಹಾರದಲ್ಲಿ ಮಧ್ಯವರ್ತಿಗಳಿಂದ ಕೆಲವು ತೊಂದರೆಗಳನ್ನು ಎದುರಿಸಬೇಕಾಗುವುದು. ಕುಟುಂಬದವರ ಅನಾರೋಗ್ಯದ ಕಾಳಜಿ ಮಾಡಬೇಕಾಗುವುದು. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೂ ಮನಸ್ಸು ಬೇರೆಡೆ ಇರಬಹುದು. ಹಣಕಾಸು ಸ್ಥಿತಿಯಲ್ಲಿ ನಿರ್ವಹಣಾ ಜಾಣತನ ಅಗತ್ಯ. ಸಹೋದ್ಯೋಗಿಯಿಂದ ಸ್ಪರ್ಧಾತ್ಮಕ ಮನೋಭಾವನೆ ಎದುರಾಗಬಹುದು. ಅಂತರ್ಜಾಲದಿಂದ ಸಂಗಾತಿಯನ್ನು ಹುಡುಕುವ ಪ್ರಯತ್ನ ಮಾಡುವಿರಿ. ಹೊಸ ವಿಷಯ ಕಲಿಯಲು ಉತ್ತಮ ಸಮಯ. ಅಧಿಕ ಖರ್ಚನ್ನು ನಿಯಂತ್ರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ಅಶಕ್ತರಿಗೆ ಸಹಾಯ ನಿಮ್ಮಿಂದ ಸಹಕಾರ ನೀಡಿ. ಯಾರಾದರೂ ನಿಮ್ಮನ್ನು ಯಾವುದಾದರೂ ಕಾರ್ಯಕ್ಕೆ ಪ್ರೋತ್ಸಾಹಿಸಬಹುದು. ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ.
ಕುಂಭ ರಾಶಿ: :ವಿದೇಶದ ಅಪರಿಚಿತ ಕರೆ ಬರಬಹುದು. ಹೂಡಿಕೆಯಿಂದ ನಿಮ್ಮ ಖರ್ಚನ್ನು ಆದಾಯವಾಗಿ ಪರಿವರ್ತಿಸಲು ಮಾಡಿಕೊಳ್ಳುವಿರಿ. ಹಳೆಯ ರೋಗವು ಮರುಕಳಿಸಬಹುದು. ಪರಸ್ಪರ ಪ್ರೀತಿಯು ದಾಂಪತ್ಯದಲ್ಲಿ ಹೊಂದಾಣಿಕೆ ಬೆಳೆಯುವುದು. ಉದ್ಯೋಗದಲ್ಲಿ ಚುರುಕು ಮತ್ತು ಯೋಜನೆ ಮುಖ್ಯ. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ ಸಾಲ ಅಥವಾ ಸಾಲಕೊಡಿಕೆ ಬೇಡ. ವ್ಯಾಪಾರಾದ ಪೈಪೋಟಿಗೆ ನೀವು ಸಿದ್ಧರಾಗಿಲ್ಲ. ಪ್ರೀತಿಯಲ್ಲಿ ಸಹನಶೀಲತೆಯಿಂದ ಸ್ಪಂದಿಸಿ. ಪ್ರವಾಸದ ಯೋಜನೆ ಅಕಸ್ಮಿಕವಾಗಿ ಬರುತ್ತದೆ. ಆತ್ಮಚಿಂತನದಿಂದ ಶಾಂತಿ ಸಿಗಲಿದೆ. ಕಲಿಕೆಯಲ್ಲಿ ಚುರುಕುತನವನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮೈಯ್ಯಲ್ಲ ಕಣ್ಣಿದ್ದರೂ ನಿಮಗೆ ವಂಚಿಸುವವರು ಇರುವರು. ದುಸ್ಸಾಹಸಕ್ಕೆ ಹೋಗಿ ಕೈ ಸುಟ್ಟುಕೊಳ್ಳುವಿರಿ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಕಳೆದುಕೊಂಡು ವಸ್ತುವಿನ ಮೌಲ್ಯವು ಇಂದು ಗೊತ್ತಾಗುವುದು.
ಮೀನ ರಾಶಿ: :ಜವಾಬ್ದಾರಿಯಿಂದ ಜಾರಿಕೊಳ್ಳಲು ಆಗದು. ನಿಮ್ಮನ್ನು ಬಿಡರು. ಇಂದು ನಿಮಗೆ ವ್ಯಾಪಾರದಲ್ಲಿ ಅಂದುಕೊಂಡಷ್ಟು ಸಾಧಿಸಲಾಗದೇ ಬೇಸರವಾಗಬಹುದು. ಧನವು ವ್ಯಯವಾಗುವ ಬಗ್ಗೆ ನಿಮಗೆ ಅಸಮಾಧಾನವಿದ್ದು, ಅದನ್ನು ಸರಿಯಾದ ರೀತಿಯಲ್ಲಿ ವ್ಯಯವಾಗುವಂತೆ ನೋಡಿಕೊಳ್ಳಿ. ಹಣಕಾಸು ಸಂಬಂಧಿತ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ಮಕ್ಕಳ ಸಾಧನೆ ಸಂತೋಷ ನೀಡಲಿದೆ. ಪ್ರೀತಿಯಲ್ಲಿ ಚಿಕ್ಕ ಚಿಕ್ಕ ವ್ಯತ್ಯಾಸಗಳನ್ನು ಸಮಾಧಾನದಿಂದ ಮುಗಿಸಿ. ಅನಗತ್ಯ ಚರ್ಚೆಗಳಿಗೆ ದೂರವಿರಿ. ಸಂಗಾತಿಯ ಜೊತೆ ಸುಂದರ ಕ್ಷಣವನ್ನು ಕಳೆಯಿರಿ. ಕಲಿತ ವಿದ್ಯೆಯ ಪ್ರದರ್ಶನಕ್ಕೆ ಅವಕಾಶವು ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ವ್ಯಾಪಾರದ ಆದಾಯಕ್ಕೆ ನಿಮ್ಮದೇ ತಂತ್ರವನ್ನು ಬಳಸುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ಕಾರ್ಯದಲ್ಲಿ ಶ್ರದ್ಧೆಯು ಕಡಿಮೆಯಾಗುವುದು. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮಗೆ ಆತ್ಮತೃಪ್ತಿಯು ಇರುವುದು.
TV9Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1