ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಪಚಮೀ ತಿಥಿ, ಶನಿವಾರ ಕಾಲಕ್ಕೆ ತಕ್ಕಂತೆ ಅನುಸರಣೆ, ಹಿರಿಯರ ಅನುಕರಣೆ, ಪರೋಪಕಾರದಿಂದ ತೃಪ್ತಿ ಇದೆಲ್ಲ ಇರುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶನಿವಾರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ – 06 : 05 am, ಸೂರ್ಯಾಸ್ತ – 06 : 52 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:17 – 10:53, ಯಮಘಂಡ ಕಾಲ 14:05 – 15:41, ಗುಳಿಕ ಕಾಲ 06:06 – 07:42
ಮೇಷ ರಾಶಿ: ಯಾವುದೇ ಕ್ಷೇತ್ರದಲ್ಲಿಯಾದರೂ ಹೆಸರು ಮಾಡುವ ಆಕಾಂಕ್ಷೆ ಇರುವುದು. ಅದೃಷ್ಟ ನಿಮ್ಮ ಕಡೆ ಇದೆ ಎಂಬುದು ಸತ್ಯದ ಮಾತಾದರೂ ಅಷ್ಟಕ್ಕೇ ಕೆಲಸಗಳು ಆಗದು. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಯಾರನ್ನೂ ಸುಮ್ಮನೇ ಬಿಡದೇ ಎಲ್ಲರಿಗೂ ಕೆಲಸ ಕೊಡುವಿರಿ. ಸವಾಲಿನ ಪರಿಸ್ಥಿತಿಗಳು ಬರಬಹುದು. ನಿಮ್ಮ ಧೈರ್ಯದಿಂದ ಎಲ್ಲವೂ ನಯವಾಗುತ್ತದೆ. ಸ್ನೇಹಿತರಿಂದ ಕಾರ್ಯಸಿದ್ಧಿಯಾಗುತ್ತದೆ. ಖರ್ಚಿನಲ್ಲಿ ನಿಯಂತ್ರಣ ಇರಿಸಿಕೊಳ್ಳುವುದು ಅಗತ್ಯ. ಕಚೇರಿಯಲ್ಲಿ ನಿಮಗೆ ಹೊಸ ಕೆಲಸದ ನಿರ್ವಹಣೆ ಬಂದೀತು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ನಿಮ್ಮ ಕಠಿಣ ಪರಿಶ್ರಮ ಮೆಚ್ಚಗೆಯು ಸಿಗಲಿದೆ. ಚರ ಸ್ವತ್ತನ್ನು ನಿರ್ಲಕ್ಷಿಸುವುದು ಬೇಡ. ಸಮಯವನ್ನು ಸುಮ್ಮನೇ ವ್ಯರ್ಥ ಮಾಡುವಿರಿ. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು.
ವೃಷಭ ರಾಶಿ: ಅವಸರಾವಸರದಲ್ಲಿ ಮನೆ ಕೆಲಸವನ್ನು ಮುಗಿಸಬೇಕಾಗುವುದು. ಕುಟುಂಬವನ್ನು ಹೊಂದಾಣಿಕೆಯಿಂದ ನಡೆಸುವ ಜವಾಬ್ದಾರಿ ಇರುತ್ತದೆ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ನಿಮ್ಮ ಮಹಾಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಿಟ್ಟುಕೊಡಬೇಡಿ. ಹಗಲು ದರೋಡಯಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ಪ್ರಶಂಸೆ ಲಭಿಸಬಹುದು. ತೃಪ್ತಿಯಾಗುವಷ್ಟು ಭೋಜನ ಮಾಡುವಿರಿ. ಹಣಕಾಸಿನಲ್ಲಿ ಚಿಕ್ಕ ಎಚ್ಚರಿಕೆ ಅಗತ್ಯ. ಬಂಧುಮಿತ್ರರೊಂದಿಗೆ ಸಮಯ ಕಳೆಯುವುದು ಸಂತಸ ನೀಡಲಿದೆ. ಪ್ರೇಮ ಸಂಬಂಧದಲ್ಲಿ ನಿಷ್ಠೆ ಅಗತ್ಯ. ಮಕ್ಕಳ ವಿಷಯದಲ್ಲಿ ಖುಷಿಯ ಸುದ್ದಿಗಳು ಸಾಧ್ಯ. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿದರೆ ನಿರ್ಧಾರಗಳನ್ನು ಸರಿಯಾಗಿರುತ್ತವೆ. ನಿಮ್ಮನ್ನು ನೀವು ಸರಿಮಾಡಿಕೊಳ್ಳುವ ಯೋಚನೆ ಬರಲಿದೆ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು.
ಮಿಥುನ ರಾಶಿ: ವಿದ್ಯೆಯ ಜೊತೆ ವಿನಯವಂತಿಕೆ ಕೂಡ ಮುಖ್ಯವಾಗಿರುತ್ತದೆ. ಕಾರ್ಯಕ್ಷೇತ್ರಕ್ಕೆ ಸೇರಿಕೊಳ್ಳಲು ಎಲ್ಲವೂ ಪ್ರಧಾನವೇ. ನಿಮ್ಮ ಜೀವನದಲ್ಲಿ ಕೆಲವರ ಬಗ್ಗೆ ತಪ್ಪು ತಿಳುವಳಿಕೆ ಬರುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಆಲೋಚನೆಗಳಿಂದ ತುಂಬಿದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗಬಹುದು. ಯಾವುದನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ ಕಾನೂನಾತ್ಮಕ ತೊಂದರೆಗಳನ್ನು ಪರಿಹರಿಸಿಕೊಳ್ಳಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು.
ಕರ್ಕಾಟಕ ರಾಶಿ: ವಿದೇಶ ಪ್ರವಾಸಕ್ಕೆ ಅನುಕೂಲತೆ ಸೃಷ್ಟಿಯಾಗಲಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸದಿದ್ದರೆ ಅದು ಬೇರೆ ಸ್ವರೂಪವನ್ನು ಪಡೆಯುವುದು. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಹೊಂದಿರುವಿರಿ. ಆರ್ಥಿಕವಾಗಿ ಲಾಭದಾಯಕ ಸಮಯ ಇದಾಗಿದೆ. ಜೀವನ ಸಂಗಾತಿಯ ಜೊತೆ ಸಮಯ ಕಳೆಯಬಹುದು. ಅದನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಸ್ವಲ್ಪ ಸವಾಲಾಗುವುದು. ನಿಮ್ಮ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸುವುದು ಉತ್ತಮ. ನೀವು ಬಹಳ ವಿಳಂಬನೀತಿಯವರಾಗಿ ಕಾಣಿಸುವಿರಿ. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ.
ಸಿಂಹ ರಾಶಿ: ಪರಿಚಿತರ ಜೀವನದಲ್ಲಿ ಮೋಸದ ಆಟವಾಡುವಿರಿ. ಮಾನಸಿಕವಾಗಿ ನೀವು ಗುದ್ದಾಟ ಮಾಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಶ್ರಮ ಸಫಲವಾಗದು. ನಿಮ್ಮ ಹೊಸ ಪ್ರೇಮಪ್ರಕರಣವು ಪ್ರಾರಂಭವಾಗಬಹುದು. ಆಕರ್ಷಣೆಯ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು. ಹಣಕಾಸಿನಲ್ಲಿ ಲಾಭದಾಯಕ ನಿರ್ಧಾರ ತೆಗೆದುಕೊಳ್ಳಬಹುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಸಂತಸ ತಂದೀತು. ಸಂಗಾತಿಯ ಜೊತೆ ಪ್ರೀತಿಯ ಮಾತುಕತೆಗಳನ್ನು ಆಡುವಿರಿ. ಅತಿಯಾದ ಬುದ್ಧಿ ಶಕ್ತಿಯಿಂದ ಜಟಿಲವಾದ ಸಮಸ್ಯೆಗಳನ್ನು ಪರಿಹರಿಸಬಹುದು. ಕಾರ್ಯಕ್ಷಮತೆ ಹೆಚ್ಚಿರುವ ದಿನವಾಗಿದೆ. ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸುವರು ಪ್ರಶಂಸೆಯೂ ಸಿಗಲಿದೆ. ಶತ್ರುಗಳು ನಿಮ್ಮನ್ನು ಗೆಲ್ಲಲು ಪ್ರಯತ್ನಿಸಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ನಂಬಿಕೆ ಕಡಿಮೆಯಾಗುವುದು.
ಕನ್ಯಾ ರಾಶಿ: ಉದ್ಯಮವನ್ನು ಸ್ವತಂತ್ರವಾಗಿ ಮಾಡುವ ಇಚ್ಛೆಯನ್ನು ಹೊಂದಿರುವಿರಿ. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ನಿಮ್ಮ ವ್ಯವಹಾರದಲ್ಲಿ ಯಶಸ್ಸಿಗೆ ನೀವು ಹೊಸ ಆಲೋಚನೆಗಳೊಂದಿಗೆ ಮುಂದುವರಿಯಬೇಕು. ಜನಮನ್ನಣೆ ನಕಲಿ ಎನಿಸಬಹುದು. ವ್ಯಕ್ತಿತ್ವ ಇಂದು ಇನ್ನಷ್ಟು ಬಲುಷ್ಠವಾಗುತ್ತದೆ. ಬೆಳಗುತ್ತದೆ. ಜನರ ಗಮನ ಸೆಳೆಯುವಂತೆ ನೀವು ನಡೆದುಕೊಳ್ಳುವಿರಿ. ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು. ಸಂಗಾತಿಯೊಂದಿಗೆ ಗಂಭೀರ ಚರ್ಚೆಗಳು ನಡೆಯಲಿದೆ. ಶುಭಸಂದೇಶಗಳಿಂದ ಮನಸ್ಸು ಹರ್ಷಿತವಾಗುವುದು. ಉದ್ಯೋಗದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿರಲಿ. ಹಿರಿಯರ ಸಲಹೆಗಳನ್ನು ಗೌರವಿಸಿ. ವ್ಯಾಪಾರದಲ್ಲಿ ಕೆಲವು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಇಂದು ನಿಮಗೆ ಇಷ್ಟವಾದವರ ಜೊತೆ ಕುಳಿತು ಹರಟೆ ಹೊಡೆಯುವಿರಿ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ.
ತುಲಾ ರಾಶಿ: ಕೆಲಸವು ಆಗಿಲ್ಲ ಎಂದು ತಾಳ್ಮೆ ಕಳೆದುಕೊಂಡು ಮುಂದಿನ ಕೆಲಸವನ್ನೂ ಹಾಳು ಮಾಡಿಕೊಳ್ಳುವಿರಿ. ನಿಮ್ಮ ಇಂದಿನ ಸಾಂಸಾರಿಕ ಜೀವನ ಉತ್ತಮವಾಗಿರುತ್ತದೆ. ಸಣ್ಣಪುಟ್ಟ ಕಲಹಗಳಿದ್ದರೂ ಮನೆಯಲ್ಲಿ ಸುಖ, ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ನಿಮ್ಮ ಸೃಜನಶೀಲತೆ ಬೆಳೆಸುವ ಅವಕಾಶ ಲಭ್ಯವಿದೆ. ಹಣಕಾಸಿನಲ್ಲಿ ಸ್ಥಿರತೆ ಕಾಣಬಹುದು. ಕುಟುಂಬದವರೊಂದಿಗೆ ಭಾವನಾತ್ಮಕ ಸಂಪರ್ಕ ಉಂಟಾಗುವುದು. ಆರೋಗ್ಯ ಸುಧಾರಣೆಯನ್ನು ನೆಮ್ಮದಿಯ ಮನಸ್ಸಿನಿಂದ ಆಗಲಿದೆ. ಸಂಗಾತಿಯೊಂದಿಗೆ ಸಂವಾದ ಹೆಚ್ಚಾದರೆ ಸಂಬಂಧ ಬಲವಾಗುತ್ತದೆ. ಕೆಲವು ಒಳ್ಳೆಯ ಸುದ್ದಿಗಳು ಮನೆಯ ಸಂತೋಷಕ್ಕೆ ಬೆಳಕನ್ನು ತರುತ್ತವೆ. ಹೆಚ್ಚು ಖರ್ಚು ಮಾಡಿ ವಸ್ತುಗಳನ್ನು ಖರೀದಿಸುವಿರಿ. ಪೂರ್ವಜರ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆಗಳು ಹೆಚ್ಚಿರುವುದು. ಪ್ರೀತಿಯ ಜೀವನವು ಮಿಶ್ರವಾಗಿರಬಹುದು. ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಃಸ್ಥಿತಿಯನ್ನು ಹೊಂದಿರುತ್ತಾರೆ.
ವೃಶ್ಚಿಕ ರಾಶಿ: ವಿದ್ಯಾರ್ಥಿಗಳು ತಮ್ಮ ಜೀವನವನ್ನು ಎತ್ತರಕ್ಕೆ ಏರಿಸಿಕೊಳ್ಳಲು ಪ್ರಯತ್ನಿಸುವರು. ನಿಮ್ಮ ಪ್ರೀತಿಪಾತ್ರರು ಯಾವಾಗಲೂ ಸಹಾಯ ಮಾಡಲು ಸಿದ್ಧರಾಗಿರುವರರು. ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತ್ವದಿಂದ ಇರಬೇಕಾಗುತ್ತದೆ. ಆರ್ಥಿಕ ವಿಷಯದಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂದರ್ಭ ಬರುತ್ತದೆ. ಪ್ರೀತಿಯವರು ನಿಮ್ಮ ಜತೆ ಸಮಯ ಕಳೆಯಲು ಆಸಕ್ತಿ ತೋರುತ್ತಾರೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ಅಗತ್ಯ. ನಿಮ್ಮ ಮಾತುಗಳು ಸತ್ಯವಾಗಿರಲಿ. ಕೊಟ್ಟಷ್ಟು ಹಣ ನಿಮಗೆ ಸಿಗದೇ ತೊಂದರೆಯನ್ನು ಎದುರಿಸಬೇಕಾಗುವುದು. ಇದು ತಾಳ್ಮೆಯಿಂದಿರಬೇಕಾದ ಸಮಯವಾಗಿದೆ. ನೀವು ಸಾಮಾಜಿಕ ವಿವಾದದಲ್ಲಿ ಸಿಲುಕಿಕೊಳ್ಳಬಹುದು. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಹೊಸ ಉದ್ಯೋಗವು ನಿಮಗೆ ಉತ್ತಮ ಅವಕಾಶಗಳನ್ನು ತರುತ್ತದೆ. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು.
ಧನು ರಾಶಿ: ನಿಮ್ಮ ಸಂಕಟವನ್ನು ಕೇಳುವ ಕಿವಿಗಳನ್ನು ಹುಡುಕುವಿರಿ. ನಿಮಗೆ ಯಾವುದಾದರೂ ಒಂದು ರೀತಿಯಲ್ಲಿ ಭಯದ ವಾತಾವರಣ ಇರುವುದು. ನಿಮ್ಮ ಕೆಲಸವನ್ನು ಬದಿಗಿರಿಸಿ ನಿಮಗೆ ಸಿಕ್ಕ ಯಶಸ್ಸನ್ನು ಅನುಭವಿಸಿ. ಹಣದ ವಿಷಯದಲ್ಲಿ ಏರಿಳಿತಗಳು ಆಗಬಹುದು. ಅಧಿಕಾರವನ್ನು ಸದುಪಯೋಗ ಮಾಡಿಕೊಂಡು ಯಶಸ್ವಿಯಾಗುವಿರಿ. ಹಳೆಯ ಯೋಜನೆಗಳ ಪೂರ್ಣತೆಗೆ ಪೂರಕ ಪರಿಸ್ಥಿತಿಗಳು ಇರುತ್ತವೆ. ಹಣಕಾಸು ಸ್ಥಿತಿಯಲ್ಲಿ ಬೆಳವಣಿಗೆ ಕಂಡುಬರುತ್ತದೆ. ಕುಟುಂಬದಲ್ಲಿ ಹರ್ಷದ ವಾತಾವರಣ ಉಂಟಾಗುವುದು ಸಾಧ್ಯ. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಆಗುವ ಸಾಧ್ಯತೆ ಇದೆ. ಪ್ರೀತಿಯ ವ್ಯಕ್ತಿಯೊಂದಿಗೆ ಮನಸ್ಸು ಹಂಚಿಕೊಳ್ಳಲು ಉತ್ತಮ ಸಮಯ. ಯಾವುದೇ ಹೊಸ ಹೆಜ್ಜೆಯನ್ನು ಇಡುವಾಗಲೂ ಆಲೋಚನೆ ದೃಢವಾಗಿರಲಿ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರಪಂಚದಿಂದ ಮರೆ ಮಾಡುವ ಅಗತ್ಯವಿಲ್ಲ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ.
ಮಕರ ರಾಶಿ: ನಿಮ್ಮ ಪರಾಕ್ರಮವನ್ನು ಶತ್ರುಗಳ ಎದುರು ತೋರಿಸುವಿರಿ. ನೀವು ನಿಮ್ಮ ಆಸ್ತಿಯನ್ನು ಮಾರಾಟ ಮಾಡುವ ಯೋಚನೆಯಲ್ಲಿ ಇರುವಿರಿ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಲಾಭವಾದೀತು. ವ್ಯವಹಾರಗಳಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಬುದ್ದಿವಂತಿಕೆ ಬಳಸಿ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿ. ಯಾವ ಅಡ್ಡಿಗಳನ್ನೂ ನೀವು ಸುಲಭಕ್ಕೆ ಸಹಿಸಲಾಗದು. ಕೂಡಲೇ ಅದರಿಂದ ಹೊರಬರಲು ಯೋಚಿಸುವಿರಿ. ಚರಾಸ್ತಿಯ ಮೇಲೆ ಹದ್ದಿನ ಕಣ್ಣಿಡುವುದು ಅವಶ್ಯಕ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯ. ಖರ್ಚುಗಳಲ್ಲಿ ನಿಯಂತ್ರಣ ಇರಲಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಶರೀರಕ್ಕೆ ಅತಿಯಾಗಿ ಆಯಾಸವಾಗುವ ಕೆಲಸಗಳನ್ನು ಮಾಡಬೇಡಿ, ಅಶಕ್ತತೆಯು ಉಂಟಾಗಬಹುದು. ಕಛೇರಿಯಲ್ಲಿ ಕೆಲಸವು ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ. ಹೊಸ ಪ್ರೇಮವು ಅಂಕುರಿಸು ಸಾಧ್ಯತೆ. ಪ್ರೇಮಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು.
ಕುಂಭ ರಾಶಿ: ಅನ್ಯರ ಅಭಿರುಚಿಗೆ ತಕ್ಕಂತೆ ಇರಬೇಕಾಗಬಹುದು. ಇಂದು ನಿಮ್ಮ ಮನಸ್ಸು ಬಹಳ ಚಂಚಲವಾಗಿರಲಿದೆ. ಅನಗತ್ಯ ಖರ್ಚುಗಳು ಆಗಬಹುದಾಗಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಉತ್ತಮ ಮಾನಸಿಕ ಸ್ಥಿತಿಯಿಂದ ಹೊಸ ಕೆಲಸಗಳಿಗೆ ತಯಾರಿ ಸಾಧ್ಯ. ಇರುವುದನ್ನು ಸರಿಯಾಗಿ ಇಟ್ಟುಕೊಂಡರೆ ಸಾಕು, ಹೊಸದನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೆಲವು ಹಳೆಯ ಸಮಸ್ಯೆಗಳು ಪರಿಹಾರ ಕಾಣುವ ಸಾಧ್ಯತೆ. ಹಣಕಾಸಿನಲ್ಲಿ ಅಲ್ಪ ಲಾಭ ಸಿಗಬಹುದು. ನಿಮ್ಮ ಜೀವನಸಂಗಾತಿಯು ನಿಮ್ಮ ಪ್ರೋತ್ಸಾಹಕ್ಕೆ ಕಾರಣವಾಗುತ್ತಾರೆ. ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗೆ ಸಿದ್ಧರಾಗಿರಿ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ದೂರದ ಪ್ರಯಾಣವು ಸುಖದಾಯಕವಲ್ಲ. ನಿಮ್ಮ ಇಷ್ಟದ ವಸ್ತುಗಳು ಕಣ್ಮರೆಯಾಗಬಹುದು. ಅಗತ್ಯದ ಕಾರ್ಯವನ್ನು ಇತರರ ಸಹಾಯವನ್ನು ಪಡೆದು ಮುಗಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು.
ಮೀನ ರಾಶಿ: ನಿಮ್ಮ ಜೊತೆಗಾರರ ಮೇಲಿನ ಭಾವನೆ ಸರಿಯಾಗಿದೆ ಇದ್ದರೂ ಒಮ್ಮೊಮ್ಮೆ ಬದಲಾವಣೆಯಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೊತ್ಸಾಹ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ಅದೃಷ್ಟವು ಜೊತೆಗಿರಲಿದೆ. ನೀವಿಂದು ಅಲ್ಪ ಪ್ರಯತ್ನದಿಂದ ಕೆಲಸವನ್ನು ಸಾಧಿಸಿಕೊಳ್ಳಬಹುದು. ತೆರಿಗೆಯನ್ನು ಸರಿಯಾದ ಸಮಯಕ್ಕೆ ಕಟ್ಟಿ ದಂಡವನ್ನು ತಪ್ಪಿಸಿಕೊಳ್ಳುವಿರಿ. ಇಂದು ಬಂದಿರುವ ಹಣಕಾಸಿನಲ್ಲಿ ನಿರ್ವಹಣಾ ಸಾಮರ್ಥ್ಯವನ್ನು ತೋರಬೇಕಾಗಬಹುದು. ಮನೆಯ ಕೆಲಸಗಳಲ್ಲಿ ಸಹಕಾರ ಬೇಕಾದ ಸಮಯ. ಹೊಸ ಜ್ಞಾನವನ್ನು ಪಡೆಯಲು ಯತ್ನಮಾಡಿ. ಪ್ರೀತಿಯ ವಿಷಯಗಳಲ್ಲಿ ನಂಬಿಕೆ ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ ಸಿಗಲಿದೆ. ಮೆಚ್ಚುಗೆಯು ನಿಮ್ಮ ಕೆಲಸಕ್ಕೆ ಪ್ರಾಪ್ತವಾಗುವುದು. ಮೇಲಧಿಕಾರಿಗಳಿಂದ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ. ಉದ್ವಿಗ್ನತೆಗೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ.
TV9 Kannada