Horoscope Today 18 February 2025: ಹೊಸ ಮುಖದ ಪರಿಚಯವಾಗಲಿದೆ, ಭಾವನೆ ಬದಲಾಗುವುದು.

Horoscope Today 18 February 2025: ಹೊಸ ಮುಖದ ಪರಿಚಯವಾಗಲಿದೆ, ಭಾವನೆ ಬದಲಾಗುವುದು

ನಿತ್ಯಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಶೂಲಿ, ಕರಣ : ತೈತಿಲ, ಸೂರ್ಯೋದಯ – 06 – 56 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:42 – 17:09, ಯಮಘಂಡ ಕಾಲ 09:52 – 11:19, ಗುಳಿಕ ಕಾಲ 12:47 – 14:14.

ಮೇಷ ರಾಶಿ: ಸಣ್ಣ ಕಾರ್ಯವಾದರೂ ಅಚ್ಚುಕಟ್ಟಾಗಿ ಮಾಡುವಿರಿ. ಕುಟುಂಬದಿಂದ ದೂರವಿರುವ ನಿಮಗೆ ನೋಡಬೇಕೆನ್ನುವ ಮನಸ್ಸಾದೀತು. ಸ್ನೇಹಿತರ ಮೇಲಿನ ಮೋಹದಿಂದ ತಪ್ಪನ್ನು ಸಮರ್ಥಿಸಿಕೊಳ್ಳುವಿರಿ. ದೊಡ್ಡಸ್ತಿಕೆಯನ್ನು ಪ್ರದರ್ಶನ ಮಾಡುವಿರಿ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಯಾರೂ ನಿಮ್ಮ ಬಗ್ಗೆ ಹೇಳದಿದ್ದಾಗ ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ಸ್ತ್ರೀಯರಿಂದ ಸಹಕಾರ ದೊರೆತರೂ ಕೆಲಸ ಪೂರ್ಣವಾಗದು. ಸಮಯಮಿತಿಗೆ ತಕ್ಕಹಾಗೆ ಕಾರ್ಯದಲ್ಲಿ ವೇಗವಿರಲಿದೆ. ನಿಮ್ಮ ಮನೋಬಲವನ್ನು ಕುಗ್ಗಿಸುಲು ಸಹೋದ್ಯೋಗಿಗಳ ಪ್ರಯತ್ನ‌ ಇರಲಿದೆ. ನಿಮ್ಮ ಬಗ್ಗೆ‌ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಕೃತಜ್ಞತೆಯನ್ನು ನೀವು ರೂಢಿಸಿಕೊಳ್ಳಬೇಕಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ವೃಷಭ ರಾಶಿ: ಒರಟು ಸ್ವಭಾವವೇ ನಿಮಗೆ ಮುಳುವಾಗುವುದು. ಮನೋರಂಜನೆಯ ಕಾರ್ಯದಲ್ಲಿ ನೀವು ಹೆಚ್ಚು ತೊಡಗಿಕೊಳ್ಳುವಿರಿ. ಇನ್ನೊಬ್ಬರ ಜೊತೆ ಕಾಲಹರಣ ಮಾಡುವುದನ್ನು ಬಿಡಿ. ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸರಕಿನ ಆಮದು ಮಾಡಿಕೊಳ್ಳಲು ತೊಂದರೆ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಕಾರಣಾಂತರಗಳಿಂದ ಬೇರೆ ಕಡೆ ವಾಸ ಮಾಡುವ ಸಂದರ್ಭವು ಬರಬಹುದು. ಯಾರ ಮಾತನ್ನೂ ಪೂರ್ಣವಾಗಿ ನಂಬಲಾರಿರಿ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ದುಂದುವೆಚ್ಚವು ನಿಮಗೆ ಆಗಿಬರದು. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ‌ ಇರಲಿದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಇಚ್ಛೆಯು ಜಾಗರೂಕವಾಗಲಿದೆ. ಪರೋಪಕಾರಕ್ಕೆ ಪ್ರತ್ಯುಪಕಾರದ ಚಿಂತನೆ ಇರಲಿ. ಬೆನ್ನು ನೋವಿನಿಂದ ನಿಮಗೆ ಕಷ್ಟವಾದೀತು.

ಮಿಥುನ ರಾಶಿ: ಇಂದು ಕೆಲವರು ನಿಮ್ಮನ್ನು ಮುಂದೆ ಮಾಡಿ ತಾವು ಹಿಂದಿನಿಂದ ಜಾರಿಕೊಳ್ಳುವರು. ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ದೂರುಗಳು ದಾಖಲಾಗಬಹುದು. ಹಠವನ್ನು ಬಿಟ್ಟು ನಡೆದುಕೊಂಡರೆ ಎಲ್ಲವೂ ಸರಿಯಾಗುವುದು. ಲೆಕ್ಕಪತ್ರದ ವಿಚಾರದಲ್ಲಿ‌ ನಿರ್ದಿಷ್ಟತೆಯನ್ನು ಅಪೇಕ್ಷಿಸುವಿರಿ. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ.‌ ನಿಮ್ಮಿಂದ ನೌಕರರಿಗೆ ಭಡ್ತಿ ಸಿಗಲಿದೆ. ಅಪ್ರಾಮಾಣಿಕತೆಯು ನಿಮಗೆ ಇಷ್ಟವಾಗದು. ಸಮಾರಂಭಗಳಿಗೆ ಆಹ್ವಾನ ಬರಬಹುದು. ಕಣ್ಣಿನ ತೊಂದರೆಯು ಪುನಃ ಕಾಣಿಸಿಕೊಳ್ಳಬಹುದು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.‌ ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ.

ಕರ್ಕಾಟಕ ರಾಶಿ: ಸ್ಪರ್ಧೆಯಲ್ಲಿ ಗೆಲ್ಲಲು ತಾಲೀಮನ್ನು ಬಹಳ ಗಂಭೀರವಾಗಿ ಮಾಡುವಿರಿ. ಒತ್ತಡದ ಕಾರಣದಿಂದ ನಿಮ್ಮ ಕೆಲಸಗಳು ಅಸ್ತವ್ಯಸ್ತವಾಗಬಹುದು. ನಿರೀಕ್ಷೆಯು ಹುಸಿಯಾಗಿ ಬೇಸರವಾಗಬಹುದು. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಅರ್ಧಬಲದಷ್ಟು ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ನೀವು ಹೇಳಿದ ಮಾತು ಮತ್ತಾವುದೋ ಅರ್ಥವನ್ನು ಕೊಡುವುದು. ನೀವಿಲ್ಲದವರಲ್ಲಿ ನಿಮ್ಮನ್ನು ಹುಡುಕುವ ಪ್ರಯತ್ನ ವ್ಯರ್ಥ. ವಿದ್ಯಾರ್ಥಿಗಳಿಗೆ ಮುಖ್ಯಘಟ್ಟದಲ್ಲಿ ಸೋಲಾಗಬಹುದು. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯವಾಗಿರಲಿ. ಮನೆಯಲ್ಲಿ ಬದಲಾಯಿಸುವ ಸಂದರ್ಭವು ಬರಬಹುದು. ಆಸಕ್ತಿ ಇಲ್ಲದಿದ್ದರೂ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುವುದು.

ಸಿಂಹ ರಾಶಿ: ಮಕ್ಕಳು ತಪ್ಪಿನ ಅರಿವಿನಿಂದ ಮನಃ ಪರಿವರ್ತನೆ ಸಾಧ್ಯ. ಮಕ್ಕಳ‌‌ ಕಾರಣದಿಂದ ನಿಮಗೆ ಅಪವಾದವು ಬರಬಹುದು. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು.‌ ಧನಾತ್ಮಕ ಆಲೋಚನೆಗೆ ಸ್ಪಂದನೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸ್ವಲ್ಪ ಹೊಸ ವಾತಾವರಣವನ್ನು ಕಾಣುವಿರಿ. ನಿಮ್ಮ ಮೇಲಿನ ಆರೋಪವನ್ನು ಸ್ತ್ರೀಯರು ವಿರೋಧಿಸಿ, ನಿಮ್ಮ ಪರವಾಗಿ ನಿಲ್ಲುವರು. ಬಹಳ‌ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಜವಾಬ್ದಾರಿಯ ಕಾರಣಕ್ಕೆ ನಿಮ್ಮ ವರ್ತನೆಯಲ್ಲಿ ಭಿನ್ನತೆ ಕಾಣುವುದು. ನಿಮಗೆ ಬರಬೇಕಾದ ಹಣವನ್ನು ಬೇರೆಯವರ ಮೂಲಕ ಪಡೆದುಕೊಳ್ಳುವಿರಿ. ನಿಮ್ಮ ವಿಚಾರದಲ್ಲಿ ನಿಮ್ಮ ನೌಕರರ ಬಗ್ಗೆ ನಿಮಗೆ ಸಮಾಧಾನ ಇರಲಿದೆ. ಕೆಲಸದ ಆಯಾಸದಿಂದ ಆರೋಗ್ಯವು ಕೆಡಬಹುದು.

ಕನ್ಯಾ ರಾಶಿ: ವಾದ ಮಂಡನೆಯಲ್ಲಿ ಹೊಸ ತಂತ್ರದ ಬಳಕೆ ಹಾಗೂ ಗೆಲವು. ಕೋಪವನ್ನು ನಿಯಂತ್ರಿಸಿಕೊಂಡು ಯಾರೂ ಗೊತ್ತಾಗದಂತೆ ಒಂಟಿಯಾಗಿ ಇರುವಿರಿ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಪಾಲುದಾರಿಕೆಗೆ ಅನ್ಯರ ಸೇರ್ಪಡೆ ಸಾಧ್ಯತೆ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ.‌ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ಸಾಮಾಜಿಕ ಕಾರ್ಯಗಳು ನಿಮ್ಮ ನೇತೃತ್ವದಲ್ಲಿ ಸಂಪನ್ನಗೊಳ್ಳುವುದಹ. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಲಾವಿದರು ಇತರರ ಸಹಕಾರವನ್ನು ಪಡೆಯುವರು. ಆಸ್ತಿಯ ವಿಚಾರದಲ್ಲಿ ಜಗಳವು ತಾರಕಕ್ಕೆ ಹೋಗಬಹುದು. ಒಂಟಿಯಾಗಿ ನೀವು ಇರಬೇಕಾಗಬಹುದು.

ತುಲಾ ರಾಶಿ: ಇಂದು ಇಷ್ಟುದಿನ ಬೇಡದೇ ಇರುವ ವಸ್ತು, ಪರರಿಗೆ ಕೊಟ್ಟ ಅನಂತರ ಅನಿವಾರ್ಯವಾದೀತು. ಸುಮ್ಮನೆ ಏನನ್ನಾದರೂ ಮಾತನಾಡಿ ಇತರರನ್ನು ಸಿಕ್ಕಿಹಾಕಿಸುವಿರಿ. ನಿಮಗೆ ಕಲಿಸಿದ ಶಿಕ್ಷಕರನ್ನು ನೀವು ಮಾತನಾಡುಸಲು ಹೋಗುವಿರಿ. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಭೂಮಿಯಲ್ಲಿ ಹೊಸ ಸಸ್ಯಗಳ ಆರೋಪಣೆ ಮಾಡುವಿರಿ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಕಛೇರಿಯ ತುರ್ತು ಸ್ಥಿತಿಯು ನಿಮಗೆ ಗೊತ್ತಾಗದೇ ಆರಾಮಾಗಿ ಇರುವಿರಿ. ಪಾರ್ಟ್ ಟೈಮ್ ಉದ್ಯೋಗದಲ್ಲಿ ರಾಜಕೀಯದಿಂದ ಅನ್ಯರ ಪಾಲಾಗುವುದು. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಿಕೊಳ್ಳಬಹುದು. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು. ಸ್ತ್ರೀಯರ ಜೊತೆ ಇಂದು ನಿಮ್ಮ ವ್ಯವಹಾರವು ಬೇಡ. ಮೇಲಧಿಕಾರಿಗಳಿಂದ ನಿಮಗೆ ಕಿರಿಕಿರಿ ಆಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಒಂದೇ ಕಾರ್ಯವನ್ನು ದೀರ್ಘಕಾಲ ಮಾಡುವಿರಿ. ಮೇಲಧಿಕಾರಿಗಳಿಂದ ಒತ್ತಡ ಸಾಧ್ಯತೆ. ಪೂರ್ಣ ಅದೃಷ್ಟವನ್ನೇ ನಂಬಿ ಕೆಲಸವನ್ನು ಮಾಡುವುದು ಪ್ರಯೋಜನವಾಗದು. ನಿಮ್ಮದಾದ ಪ್ರಯತ್ನವೂ ಇರಲಿ. ದಿನ ಪೂರ್ತಿ ಬೆವರು ಹರಿಸಿ ಮಾಡಿದ ಕೆಲಸಕ್ಕೆ ದಿನದ ಕೊನೆಗೆ ಶುಭ ಫಲವು ಸಿಗುವುದು. ಉದ್ಯೋಗ ಶಿಸ್ತಿಗೆ ಮಹಿಳೆಯರನ್ನು ಜೋಡಿಸಿಕೊಳ್ಳುವಿರಿ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ವಿಚಾರದಲ್ಲಿ ಕೋಪಗೊಳ್ಳುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು.‌ ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರುವಿರಿ. ದಾಂಪತ್ಯದಲ್ಲಿ ಅನುಮಾನದ ಹೊಗೆಯಾಡುವುದು. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು. ಉದ್ಯೋಗಕ್ಕಾಗಿ ಖಾಸಗಿ ಸಂಸ್ಥೆಯನ್ನು ಅಲೆಯಬೇಕಾಗುವುದು. ಮಾತನಾಡುವಾಗ ಸೂಕ್ಷ್ಮಸಂಗತಿಗಳನ್ನು ಮರೆಯಬಾರದು.

ಧನು ರಾಶಿ: ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಮುನ್ನುಗ್ಗಲು ಭಯ. ಹಲವರ‌ ವಿರೋಧದ‌ ನಡುವೆಯೂ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಮಿಂಚಿದ ಕಾರ್ಯವನ್ನು ಎಷ್ಟೆಂದು ಚಿಂತಿಸುವಿರಿ.‌ ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಪರಿಚಿತರ ಹೊಸ ಮುಖಗಳು ಅನಾವರಣವಾಗುವುದು. ನಿಮ್ಮ ಧಾರ್ಮಿಕ ನಂಬುಗೆಗೆ ಯಾರಿಂದಲಾದರೂ ಘಾಸಿ ಉಂಟಾದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಸಂಗಾತಿಗಾಗಿ ಸ್ವತಃ ನೀವೇ ಅನ್ವೇಷಣೆ ಮಾಡುವಿರಿ. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು. ನಿಮ್ಮ ದೌರ್ಬಲ್ಯವನ್ನು ವಿರೋಧಿಗಳು ಬಳಸಿಕೊಳ್ಳುವರು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ವಾಹನದಲ್ಲಿ ಸಂಚಾರ ಮಾಡುವುದಕ್ಕೆ ಕೆಲವು ತೆಡೆಗಳು ಬರಬಹುದು. ದೈಹಿಕ‌ಶ್ರಮವು ಇಂದು ಹೆಚ್ಚಿದ್ದು, ಲಾಭವೂ ಸಮಾಧಾನವನ್ನು ತರುವುದು.

ಮಕರ ರಾಶಿ: ಉದ್ಯೋಗಕ್ಕಾಗಿ ಹೊಸ ಸ್ಥಳಕ್ಕೆ ಸ್ಥಾನಾಂತರ. ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಉದ್ಯೋಗದಲ್ಲಿ ಏಕಾಗ್ರತೆಯ ಕೊರತೆ ಕಾಣಿಸುವುದು. ಹೋರಾಟವನ್ನು ಬೊಟ್ಟು ಮಾತುಕತೆಯಿಂದ ನಿಮಗೆ ಆಗಬೇಕಾದುದನ್ನು ಮಾಡಿಕೊಳ್ಳಿ. ಇಂದಿನ‌ ಪ್ರಯಾಣದಲ್ಲಿ ಬಂಧುಗಳು ಅನಿರೀಕ್ಷಿತವಾಗಿ ಸಿಗುವರು. ನಿಮ್ಮ ಗುಣವನ್ನು ದುರುಪಯೋಗ ಮಾಡಿಕೊಂಡಾರು. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಎಂದೂ ನಂಬದವರ ಮಾತನ್ನು ಇಂದು ನಂಬಬೇಕಾದೀತು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವನ್ನು ಮಾಡಿಕೊಂಡು ಸಂಕಟಪಡಬೇಕಾಗುವುದು.

ಕುಂಭ ರಾಶಿ: ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆಗೆ ಹೆಜ್ಜೆಹಾಕುವಿರಿ. ಎಷ್ಟೋ ದಿನಗಳಿಂದ ಹಾಗೆಯೇ ಉಳಿದಿದ್ದ ಕೆಲಸಕ್ಕೆ ಚಾಲನೆ ಸಿಗಲಿದೆ. ಇಂದು ನಡೆದ ಅಹಿತಕರ‌ ಘಟನೆಯನ್ನು ಕೆಟ್ಟ ಗಳಿಗೆ ಎಂದು ಮರೆತುಬಿಡುವಿರಿ. ನೀವು ಯಾರ ಕೈಗೂ ಸುಲಭಕ್ಕೆ ಸಿಗದೇ, ಎಲ್ಲ ಜವಾಬ್ದಾರಿಗಳಿಂದ ದೂರವಿರುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ವಿವಾಹದಲ್ಲಿ ಆಸಕ್ತಿಯು ಕಡಿಮೆ ಇರುವುದು. ಹಳೆಯ ನೆನಪಿನಿಂದ ಹೊರ ಬರಲು ಅವಕಾಶವು ಬೇಕಾಗುವುದು‌. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ನಿಷ್ಠುರದ ಮಾತಿನಿಂದ ಅನಂತರ ಪಶ್ಚಾತ್ತಾಪಗೊಳ್ಳುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ವಿದೇಶದಿಂದ ಮರಳುವ ಯೋಚನೆ ಇರುವುದು. ಪ್ರಯಾಣವು ಆರಂಭದಲ್ಲಿ ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು. ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು.

ಮೀನ ರಾಶಿ: ನಿಮ್ಮ ಸುದೀರ್ಘ ಸ್ನೇಹವು ಅವಗಡದಿಂದ ಕೊನೆಯಾಗುವುದು. ಪ್ರೀತಿಯನ್ನು ಉಳಿಸಿಕೊಳ್ಳಲು ನಿಮ್ಮಿಂದ ಕಷ್ಟವಾಗುವುದು. ಸಣ್ಣ ಕಲಹವು ದ್ವೇಷವಾಗಿ ಪರಿಣಮಿಸಬಹುದು. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕುಟುಂಬ ಹಾಗೂ ಪ್ರೇಮದ ನಡುವೆ ಸಿಕ್ಕಿಬಿದ್ದು ಗೊಂದಲ ಕಾಡುವುದು. ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ಭ್ರಮೆಯಲ್ಲಿ ಇರುವಿರಿ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಗಾವಣೆಯ ಭೀತಿ ಕಾಡಲಿದೆ. ನಿಮ್ಮ ಇತರ ಚಟುವಟಿಕೆಗಳು ಬೆಳಕಿಗೆ ಬರಬಹುದು. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ. ಒಂದೇ ವಿಷಯವನ್ನು ಹಲವರಿಂದ ಕೇಳಿ ಬೇಸರವಾಗುವುದು‌.

Source : https://tv9kannada.com/horoscope/horoscope-today-february-18-a-new-face-will-be-introduced-the-feeling-will-change-zodiac-signs-in-kannada-ggs-979784.html

Leave a Reply

Your email address will not be published. Required fields are marked *