Horoscope Today 19 February 2025 : ಪ್ರೇಮಸುಖದಿಂದ ಬಾಂಧವ್ಯ ದೂರ, ಕಾಲಾನಂತರ ತಿಳಿವಳಿಕೆ.

Horoscope Today 19 February 2025 : ಪ್ರೇಮಸುಖದಿಂದ ಬಾಂಧವ್ಯ ದೂರ, ಕಾಲಾನಂತರ ತಿಳಿವಳಿಕೆ

ನಿತ್ಯಪಂಚಾಗ:  ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಗಂಡ, ಕರಣ : ವಣಿಜ, ಸೂರ್ಯೋದಯ – 06 – 55 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:47 – 14:14, ಯಮಘಂಡ ಕಾಲ 08:24 – 09:51, ಗುಳಿಕ ಕಾಲ 11:19 – 12:47.

ಮೇಷ ರಾಶಿ :ನಿಮ್ಮ ಬಗೆಗಿನ ಸ್ಪಂದನೆಗೆ ಪ್ರತಿಸ್ಪಂದವಿದ್ದರೆ ಬಾಂಧವ್ಯ ಆಪ್ತವಾಗಲಿದೆ. ಅವಕಾಶದ ನಿರೀಕ್ಷೆಯಲ್ಲಿ ನೀವು ಇರುವಿರಿ. ಒಮ್ಮೆಲೇ ಹಲವು ಕಾರ್ಯಗಳನ್ನು ನಿರ್ವಹಿಸುವುದು ಕಷ್ಟ. ಕೆಲವನ್ನು ನೀವು ಅನಿವಾರ್ಯವಾಗಿ ಬಿಡಬೇಕಾಗುವುದು. ಮಕ್ಕಳ ಸಹವಾಸವನ್ನು ಗಮನಿಸಿ. ನಿಮಗೆ ಅವರು ಬದಲಾದಂತೆ ಕಾಣಿಸಬಹುದು. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅಧ್ಯಾತ್ಮದಿಂದ ಆತ್ಮಬಲದ ವೃದ್ಧಿ. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ. ಒಂದಕ್ಕೊಂದು ಮಾತು ಸೇರಿ ಏನಕ್ಕೇನೋ ಆಗಬಹುದಿ. ಆಪ್ತರ ಸೋಗಿನಿಂದ ಯಾರಾದರೂ ನಿಮ್ಮ ಬಳಿ ಬಂದು ಗೌಪ್ಯ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿನೀತ ವೇಷವೇ ನಿಮಗೆ ಶೋಭೆ.

ವೃಷಭ ರಾಶಿ :ಹಿರಿಯರ ಮಾತಿನ ಉಲ್ಲಂಘನೆಗೆ ದಂಡನೆ ಆಗಲಿದೆ. ಕಛೇರಿಯ ನಿಯಮವನ್ನು ಉಲ್ಲಂಘಿಸಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಆಸ್ತಿಯ ವಿಚಾರದಲ್ಲಿ ನೀವು ಆಸಕ್ತಿಯನ್ನು ಕಳೆದುಕೊಂಡಿರುವಿರಿ. ಗೃಹನಿರ್ಮಾಣ ಸುಖಾಮವಾಗಲಿದೆ. ಯಾರ ಕಣ್ತಪ್ಪಿಸಿಯೂ ನೀವು ವ್ಯವಹಾರವನ್ನು ಮಾಡಲಾಗದು. ಮಾತಿನಲ್ಲಿ ಮೃದುತ್ವವನ್ನು ಇತರರಿಗೂ ಇಷ್ತವಾದೀತು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನಿಮ್ಮ ನೈಜ ಸ್ವಭಾವವು ಕಾರಣಾಂತರಗಳಿಂದ ಬದಲಾಗಲಿದೆ. ಸುಲಭವಾಗಿ ದೊರೆಯುವುದನ್ನು ಇಷ್ಟಪಡುವುದಿಲ್ಲ. ದಿನದ ಆರಂಭದಲ್ಲಿ ಆಲಸ್ಯ ಅಧಿಕವಾಗಿರುವುದು. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದು. ಆದರೆ ನೇರವಾಗಿ ಹೇಳಲು ಧೈರ್ಯ ಸಾಲದು.

ಮಿಥುನ ರಾಶಿ :ವಿದ್ಯಾಭ್ಯಾಸಕ್ಕೆ ಛಲ ಮುಖ್ಯವಾಗಲಿದೆ‌. ಶ್ರಮಕ್ಕೆ ಹಿಂದೆ, ಲಾಭಕ್ಕೆ ಮುಂದೆ ಬರುವಿರಿ. ಬಂಧುಗಳಿಗೆ ಸಹಕಾರ ಮಾಡಲು ಹೋಗಿ ನಿಮಗೆ ಕಷ್ಟವಾದೀತು. ಗೃಹನಿರ್ಮಾಣದ ವಸ್ತುಗಳನ್ನು ಮಾರಾಟ ಮಾಡುವವರು ಅಧಿಕ ಲಾಭವನ್ನು ಪಡೆಯುವರು. ಮಕ್ಕಳು ಹೇಳಿದ್ದನ್ನು ನೀಡುವಿರಿ. ಮಕ್ಕಳ ದುರ್ಬಲ ಮನಸ್ಸಿಗೆ ಸರಿಯಾದ ಮಾರ್ಗದರ್ಶನ ಬೆಂಬಲದ ಅಗತ್ಯವಿದೆ. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು. ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯಬಹುದು. ಅತಿಯಾದ ಆನಂದದ ಮಧ್ಯದಲ್ಲಿ ದುಃಖವೂ ಇದೆ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಓಡಾಟ ಮಾಡುವ ಸಂದರ್ಭವು ಬರಬಹುದು.

ಕರ್ಕಾಟಕ ರಾಶಿ :ನಿಮಗೆ ಗೊತ್ತಿದ್ದರಷ್ಟೇ ಸಲಹೆ ಕೊಡಿ. ಇಂದು ಸಹೋದ್ಯೋಗಿಗಳ ಜೊತೆ ವಿಶ್ವಾಸದಿಂದ ವರ್ತಿಸುವಿರಿ. ನೀವು ಎಲ್ಲವನ್ನು ತಿಳಿದವರಂತೆ ನಿಮ್ಮ ನಡವಳಿಕೆ ಇರುವುದು. ಯಾರದೋ ತಪ್ಪಿನಿಂದ ಅಕಸ್ಮಾತ್ ಆಗಿ ವಾಹನದಿಂದ ಬೀಳುವ ಸಾಧ್ಯತೆ. ಅಧಿಕಾರದ ಆಮಿಷಕ್ಕೆ ಬಲಿಯಾಗಬಹುದು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಗೊಂದಲ ಬರಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಭೂಮಿಯ ವ್ಯವಹಾರದಲ್ಲಿ ಪೂರ್ಣವಾಗಿ ಇಂದು ತೊಡಗಿಕೊಳ್ಳುವಿರಿ. ಸಂಗಾತಿಯಿಂದ ಹಣವನ್ನು ಕೇಳಿಪಡೆಯುವಿರಿ. ಪಾಲುದಾರಿಕೆಯಿಂದ ನಿಮಗೆ ಉಪಯೋಗವಾಗಲಿದೆ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಣಿಕತೆಯು ಕೆಲವರಿಗೆ ಗೊತ್ತಾಗಬಹುದು.

ಸಿಂಹ ರಾಶಿ :ಮುಕ್ತ ಮಾತುಕತೆಗೆ ಅವಕಾಶ ಸಿಗದು. ರಕ್ಷಣೆಯ ಕಾರ್ಯದಲ್ಲಿ ತೊಡಗಿದವರು ಆತಂಕದಿಂದ ಇರುವಿರಿ. ನಿಮ್ಮ ಆದಾಯವು ಬದಲಾಗುವ ಸಾಧ್ಯತೆ ಇದೆ. ಗೌರವವಿಲ್ಲದೆ ಕಡೆ ಹೋಗಲು ನೀವು ಬಯಸುವುದಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು. ಕಳೆದ ಸುಖದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನಿಮ್ಮ ಸಂಗಾತಿಯ ಮಾತುಗಳಿಗೆ ಪ್ರಾಮುಖ್ಯತೆ ನೀಡಿ. ನಿಮ್ಮ ಕಾರಣದಿಂದಲೇ ನೊಂದಿರಲೂ ಸಾಕು. ಆಲಸ್ಯದ ಕಾರಣ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸಲಿದ್ದು ಅದರ ರಕ್ಷಣೆಯನ್ನು ಮಾಡಬೇಕಾಗುವುದು. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು. ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ.

ಕನ್ಯಾ ರಾಶಿ :ಪ್ರಯೋಗಾತ್ಮಕ ಸಂಶೋಧನೆ ವಿಫಲವಾಗುವುದು. ಉದ್ಯೋಗದಲ್ಲಿ ನಿಮ್ಮನ್ನು ಕೆಲಸಕ್ಕೆಂದು ಕಳಿಸಬಹುದು. ಅಪರಿಚಿತ ಸ್ಥಳದಿಂದ ನೀವು ಉದ್ವೇಗಕ್ಕೆ ಒಳಗಾಗುವಿರಿ. ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಹಣಕಾಸಿನ ಅನುಕೂಲತೆಗಳನ್ನು ನೋಡಿ ಮಾತುಕೊಡಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ. ಇನ್ನೊಬ್ಬರ ವಿಚಾರಕ್ಕೆ ತೊಂದರೆಯನ್ನು ತೆಗೆದುಕೊಳ್ಳುವಿರಿ. ಪುಣ್ಯ ಸ್ಥಳಗಳ ದರ್ಶನದಿಂದ ಮನಸ್ಸಿಗೆ ಸಮಾಧಾನ. ಸಹೋದ್ಯೋಗಿಯ ಅಸಹಕಾರದಿಂದ ಅವರ ಮೇಲೆ ದ್ವೇಷ. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು. ನಿಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಂಡು ಮುಂದುವರಿಯಿರಿ.

ತುಲಾ ರಾಶಿ :ಉದ್ಯೋಗಕ್ಕಾಗಿ ಪರದಾಡುತ್ತಿರುವವರು ಇಂದು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುವರು. ಪಿತ್ತಾಧಿಕ್ಯದಿಂದ ಆರೋಗ್ಯದಲ್ಲಿ ವ್ಯತ್ಯಾಸ. ತುರಿಕೆ, ಹುಣ್ಣುಗಳು ಕಾಣಿಸುವುವು. ವ್ಯಾಪಾರಸ್ಥರು ಹೊಸತನ್ನು ಮಾಡಲು ಇಚ್ಛಿಸುವಿರಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು. ಬಹಳ ವರ್ಷಗಳಿಂದ ಬಳಸಿರುವ ವಸ್ತು ಹಾಳಾಗಲಿದೆ. ಪಾಲುದಾರಿಕೆಯಲ್ಲಿ ನಿಮಗೆ ಪೂರ್ಣ ಸಮಾಧಾನ ಇರದು. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಯು ಇರಲಿದೆ. ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ.

ವೃಶ್ಚಿಕ ರಾಶಿ :ಇಂದು ನಕಾರಾತ್ಮಕ ಸುದ್ದಿಗಳೇ ಅಧಿಕವಾಗಿ ಕೇಳಿಬರುವುದು. ಇಂದು ಕಛೇರಿಯಲ್ಲಿ ಕೌಟುಂಬಿಕ ವಿಚಾರವು ಪರಿಣಾಮವನ್ನು ಉಂಟುಮಾಡಲಿದೆ. ಬಹಳ ದಿನಗಳಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಸಣ್ಣ ವ್ಯಾಪಾರಿಗಳು ವ್ಯವಹಾರ ಹೆಚ್ಚಳದ ಬಗ್ಗೆ ಗಮನಹರಿಸಬೇಕು. ಸೌಂದರ್ಯದ ವಿಚಾರದಲ್ಲಿ ಅಸೂಯೆ ತಲೆ ಹಾಕುವುದು. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಓಡಾಟ ಮಾಡಬೇಕಾಗುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ಧಾರ್ಮಿಕ ಆಚರಣೆಯಲ್ಲಿ ವಿಶ್ವಾಸವು ಕಡಿಮೆಯಾಗಲಿದೆ. ನೀವು ಬಿಟ್ಟರೂ ಸ್ನೇಹಿತರು ನಿಮ್ಮನ್ನು ಬಿಡಲಾರರು. ಸಂಗಾತಿಯು ನಿಮ್ಮನಡೆಯನ್ನು ಅನುಮಾನಸಿಬಹುದು. ಅಲಭ್ಯವಾದ ವಸ್ತುವನ್ನು ಪಡೆದುಕೊಳ್ಳುವ ತವಕವು ಇರುವುದು.

ಧನು ರಾಶಿ :ನಿಮ್ಮಿಂದ ಆರಂಭವಾದ ಸಮಸ್ಯೆಯನ್ನು ನೀವೇ ಪರಿಹಾರ ಮಾಡುವಿರಿ. ಕೆಲಸದ ಬಗ್ಗೆ ಉತ್ಸಾಹದಿಂದ ಇರಬೇಕು. ಆತ್ಮವಿಶ್ವಾಸದ ಕೊರತೆಯಿಂದ ನಿಮ್ಮ ಕಾರ್ಯವು ವಿಳಂಬವಾಗಬಹುದು. ಅಪಮಾನದಿಂದ ದುರ್ಬಲರಾಗುವ ಸಾಧ್ಯತೆ ಇದೆ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ದಾಂಪತ್ಯದಲ್ಲಿ ಪರಸ್ಪರ ವಿರೋಧವು ಬರುವಹಾಗಿದ್ದರೂ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುದು. ನಿಮ್ಮ ಶ್ರಮವು ದುರುಪಯೋಗವಾಗುವುದು. ಅನಿರೀಕ್ಷಿತ ದೂರಪ್ರಯಾಣದಿಂದ ಖರ್ಚು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಅಪರಿಚಿತರ ನೂತನ ಯೋಜನೆಯನ್ನು ಕೈಗೆತ್ತಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಅವಕಾಶವವನ್ನು ಬಳಸಿಕೊಳ್ಳುವರು. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು.

ಮಕರ ರಾಶಿ :ನಿಮ್ಮ ಕೋಪವು ದ್ವೇಷವಾಗಿ ಪರಿವರ್ತನೆ ಆಗಿ, ಶತ್ರುಗಳ ಮೇಲೆ ಪ್ರಯೋಗಿಸುವಿರಿ. ಇಂದಿನ ಕೆಲವು ಸಂದರ್ಭದಲ್ಲಿ ಮನಸ್ಸು ವಿಚಲಿತವಾಗಬಹುದು. ಆರ್ಥಿಕತೆಗೆ ಸಂಬಂಧಿಸಿದಂತೆ ಮೈಯೆಲ್ಲ ಕಣ್ಣಾಗಬೇಕಾಗುವುದು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಜೊತೆ ವಿವಾದವಾಗಬಹುದು. ಪಾಲುದಾರಿಕೆಯಲ್ಲಿ ರಾಜಕೀಯ ಸೇರುವುದು. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಿಂದ ತೊಂದರೆ. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ನಿಮ್ಮ ಮಾತಿನಲ್ಲಿ ಉದ್ಧಟತನ ಕಾಣಿಸುವುದು. ನೀವುಂದು ಸ್ನೇಹದ ಕಾರಣದಿಂದ ಸಾಲವನ್ನು ಕೊಡುವ ಸಂದರ್ಭವು ಬರಬಹುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವುದು ಸೂಕ್ತ.

ಕುಂಭ ರಾಶಿ :ಸಜ್ಜನರ ಮೇಲೆ ಸದ್ಭಾವ ಇರಲಿ. ಇಂದು ಹಣಕಾಸಿಗೆ ಸಂಬಂಧಿತ ಉದ್ಯೋಗದಲ್ಲಿದ್ದವರಿಗೆ ಸಮಸ್ಯೆಗಳು ಎದುರಾಗಬಹುದು. ಉದ್ಯಮಿಗಳು ಹೂಡಿಕೆಯ ಬಗ್ಗೆ ಚಿಂತಾಮಗ್ನರಾಗುವರು. ಹುಮ್ಮನಸ್ಸಿನಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಬಯಸಿ, ಅನಂತರ ಕೆಲವು ಸವಾಲುಗಳನ್ನು ಅನುಭವಿಸುತ್ತಾರೆ. ಅಧಿಕ ಹೂಡಿಕೆಯನ್ನು ಎಲ್ಲಿಯೋ ಮಾಡಿ ನಷ್ಟ ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವು ಬರಬಹುದು. ಮಾಡಬೇಕು ಎನಿಸಿದ್ದನ್ನು ಹೇಳಿಯೇ ತೀರುವಿರಿ. ನಿಯಮ ಭಂಗದಿಂದ ದಂಡ ಬೀಳುವುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು. ವೈಫಲ್ಯವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿ. ಮಕ್ಕಳಿಗೆ ಕಡಿವಾಣ ಹಾಕಲು ಹೋಗುವುದು ಬೇಡ.

ಮೀನ ರಾಶಿ :ನಿಮ್ಮ ಉದ್ಯಮಕ್ಕೆ ಪೈಪೋಟಿ ಸಾಧ್ಯತೆ. ಗೆಲ್ಲಲು ನಾನಾ ತಂತ್ರ. ಇಂದು ಕಛೇರಿಯಲ್ಲಿ ಸಣ್ಣ ವಿಷಯಗಳಿಗೆ ವಿವಾದ ಮಾಡಬಾರದ. ಅಹಂಕಾರದ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ಮಕ್ಕಳಿಂದ ಹಣವು ವ್ಯರ್ಥವಾಗಬಹುದು. ನೌಕರರು ಇಂದು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವರು. ನಿಮ್ಮ ವಾದವು ವಿಷಯಾಧಾರಿತವಾಗಿರಲಿ, ವ್ಯಕ್ತಿಗತವಾಗುವುದು ಬೇಡ. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ವ್ಯಾಪಾರಸ್ಥರ ಗೌರವ ಹೆಚ್ಚುವುದು. ಇಂದು ವ್ಯವಹಾರಕ್ಕೆ ಉತ್ತಮ ದಿನ. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸದ ಛಲವಿರಲಿದೆ.

Source : https://tv9kannada.com/horoscope/horoscope-today-february-19-2025-relationships-are-far-understanding-comes-over-time-zodiac-signs-in-kannada-rbj-980234.html

Leave a Reply

Your email address will not be published. Required fields are marked *