Horoscope Today 20 June : ಈ ರಾಶಿಯವರು ದೊಡ್ಡದನ್ನು ಪಡೆಯಲು ಸಣ್ಣದನ್ನು ಕೊಡುವರು.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ರೇವತೀ, ಯೋಗ : ಐಂದ್ರ, ಕರಣ : ಗರಜ, ಸೂರ್ಯೋದಯ – 06 – 05 am, ಸೂರ್ಯಾಸ್ತ – 07 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:57 – 12:34, ಯಮಘಂಡ ಕಾಲ 15:49 – 17:26, ಗುಳಿಕ ಕಾಲ 07:43 – 09:20

ಮೇಷ ರಾಶಿ: ದೇಹದ ತೂಕ ಬಹಳ ಹಿಂಸೆ ಕೊಡಬಹುದು. ಯಾರಾದರೂ ನಿಮ್ಮನ್ನು ನಿಂದಿಸಿ ನಿಮ್ಮ ಶಕ್ತಿಯನ್ನು ಕಡಿಮೆ ಮಾಡಲು ಬಯಸಬಹುದು. ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಕೆಳಗಿಳಿದ ಚಕ್ರ ಮೇಲೆ ಏರಲೇ ಬೇಕು. ಪೂರ್ಣ ವಿಚಾರವನ್ನು ತಿಳಿದು ಮಾತನಾಡಿ.‌ ಅರ್ಧವಿಷಯವನ್ನು ತಿಳಿದು ಮಾತನಾಡಿದರೆ ಇನ್ನೊಬ್ಬರಿಗೆ ನೋವಾದೀತು. ಅವರ ಶಾಪಕ್ಕೂ ಗುರಿಯಾಗುವಿರಿ. ನಿಮ್ಮ ಯಾವ ಮಾತೂ ಸಂಗಾತಿಯನ್ನು ಸಮಾಧಾನಪಡಿಸದು. ನಿಮ್ಮ ಮನಸ್ಸಿನಲ್ಲಿ ಒಂದು ಕೃತಿಯಲ್ಲಿ ಒಂದು ಎನ್ನುವ ವಿಷಯವು ಇಂದಿನ‌ ನಿಮ್ಮ ವರ್ತನೆಯಿಂದ ತಿಳಿಯಲಿದೆ. ನಿಮಗೆ ನೀವು ಮಾಡುವ ಕೆಲಸದ ಬಗ್ಗೆ ಗಮನವಿರಲಿ. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಇತರರ ಧಾರ್ಮಿಕ ನಂಬಿಕೆಯನ್ನು ನೀವು ಘಾಸಿಮಾಡುವಿರಿ.

ವೃಷಭ ರಾಶಿ: ದೈವದತ್ತವಾದುದನ್ನು ಜೋಪಾನ ಮಾಡಿ. ಇಂದು ನಿಮಗೆ ವಾಸ್ತವದಲ್ಲಿ ಬದುಕುವುದು ಮುಖ್ಯ ಎಂದು ಎಲ್ಲ ಕಲ್ಪನೆಯನ್ನೂ ಕೈ ಬಿಡುವಿರಿ. ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಪ್ರತಿಭಾನ್ವಿತರಿಗೆ ಯಾವ ಅನುಕೂಲತೆಗಳೂ ಸಿದ್ಧಿಸದು. ಕುತೂಹಲದ ನಿಮ್ಮ ಸ್ವಭಾವವು ಇಂದು ಎಲ್ಲರಿಗೆ ಗೊತ್ತಾಗಬಹುದು. ಸಭ್ಯತೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಎಲ್ಲರ ಜೊತೆ ಸೇರಿಕೊಳ್ಳುವುದು ಕೂಡಲೇ ಆಗದು. ಯಾರಾದರೂ ಏನನ್ನಾದರೂ ಬಂದು ಕೇಳಿದರೆ ಇಲ್ಲವೆನ್ನದೇ, ಇರುವಷ್ಟರಲ್ಲಿ ಅಲ್ಪವನ್ನಾದರೂ ಕೊಡಿ. ಅದು ಅಕ್ಷಯವೂ ಆದೀತು ಮುಂದೊಂದು ದಿನ. ಅಸಾಧ್ಯವನ್ನು ಸಾಧಿಸುವ ಛಲವು ಒಳ್ಳೆಯದೇ. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ. ವೃತ್ತಿಜೀವನದಲ್ಲಿ ಆದ ಅಚಾತುರ್ಯದಿಂದ ಭಯವಾಗುವುದು. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು.

ಮಿಥುನ ರಾಶಿ: ಸಂತಾನದ ವಿಚಾರದಲ್ಲಿ ಖುಷಿ ಹೋಗಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ನಿಮ್ಮ ಶತ್ರುವಾಗಿ ಯಾರಿದ್ದಾರೆ ಎನ್ನುವುದು ಗೊತ್ತಾಗದು. ಸಾಗುವ ದಾರಿಯು ಎಷ್ಟೇ ಚೆನ್ನಾಗಿದ್ದರೂ ಒಮ್ಮೆ ಹಿಂತಿರುಗಿ ನೋಡುವುದು ಒಳ್ಳೆಯದು. ಅನ್ಯರ ಜೊತೆಗಿನ ಅಸಂಬದ್ಧ ಮಾತುಕತೆಗಳನ್ನು ನಿಲ್ಲಿಸಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗಬಹುದು. ಅಸ್ವಾಭಾವಿಕ ಬೆಳವಣಿಗೆಗೆ ಮನೆಯಲ್ಲಿ ಆತಂಕ ವಿದ್ಯಾರ್ಥಿಗಳಿಗೆ ಆಟದಲ್ಲಿ ಹೆಚ್ಚು ಮಗ್ನರಾಗುವರು. ನಿಮ್ಮವರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುವಿರಿ. ಪ್ರಕ್ಷುಬ್ಧ ವಾತಾವರಣವಿರಬಹುದು ಇಂದು. ಪಡೆದುಕೊಳ್ಳುವಾಗ ಇರುವ ಸಂತೋಷ ಕಳೆದುಕೊಳ್ಳುವಾಗಲೂ ಇದ್ದರೆ ನೀವು ಸಾಮಾನ್ಯರಲ್ಲ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.

ಕರ್ಕಾಟಕ ರಾಶಿ: ಬೇಡದ ಸಂಗತಿಗಳು ನಿಮ್ಮನ್ನು ಆಕ್ರಮಿಸಬಹುದು. ಇಂದು ನೀವು ಅತಿಯಾದ ಆತುರದಲ್ಲಿ ಇರುವಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳನ್ನು ಯಾರಾದರೂ ಆಡುವು ಕೇಳಿಬರಬಹುದು. ಆಕಾಶದಲ್ಲಿ ಕಾಣುವ ಎಲ್ಲ ಮೋಡಗಳೂ ಮಳೆಗರೆಯವು. ಎಲ್ಲರೂ ನಿಮಗೆ ಬೇಕಾದುದನ್ನು ಕೊಡುವವರಲ್ಲಿ ಮಾತ್ರ ಕೇಳಿ. ನಿಜವನ್ನು ಪ್ರೂವ್ ಮಾಡುವ ಸ್ಥಿತಿ ಬರಲಿದೆ. ಮಾತುಗಳಿಂದ ನಿಮಗೆ ಕಿರಿ ಕಿರಿಯಾಗುವ ಸಾಧ್ಯತೆ ಇದೆ. ಮಕ್ಕಳು ಆಸ್ತಿಯ ವಿಚಾರದಲ್ಲಿ ಮಾನಸಿಕ ಹಿಂಸೆ ಕೊಡಬಹುದು. ಖರ್ಚು ಹೆಚ್ಚಾಯಿತು ಎನ್ನುವ ಆತಂಕ ಬೇಡ, ಆದಾಯಕ್ಕೂ ದಾರಿಯು ಸಿಗಲಿದೆ. ಕಲಿಸಿದ್ದನ್ನು ಯಥಾವತ್ತಾಗಿ ಪ್ರಯೋಗಿಸುವಿರಿ. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಉದ್ಯೋಗದಲ್ಲಿ ಭಡ್ತಿ ಸಿಗದೇ ಇರಬಹುದು. ಸ್ತ್ರೀಯರು ನಿಮಗೆ ಶತ್ರುವಾಗುವರು. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ. ವಕೀಲ ವೃತ್ತಿಯವರಿಗೆ ಸ್ವಲ್ಪ ಸಮಾಧಾನ ಇರುವುದು.

ಸಿಂಹ ರಾಶಿ: :ನಿಮ್ಮವರೆದುರು ಅದ್ಭುತವನ್ನು ಸಾಧಿಸುವ ಹುಮ್ಮಸ್ಸು ಕಾಣಿಸುವುದು. ಇಂದು ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಿಗದಾದೀತು. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹುಂಬುತನ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ತಲೆಯೊಳಗಿದ್ದ ಭೂಮಿಯ ಭಾರ ತಗ್ಗಲಿದೆ. ನಿಮ್ಮ ಬುದ್ಧಿಯ ಕೌಶಲಕ್ಕೆ ಕಛೇರಿಯಲ್ಲಿ ಬೆರಗಾಗುವರು. ಅಂದುಕೊಂಡ ಕಾರ್ಯವನ್ನು ಆರಂಭಿಸುವ ಮೊದಲೇ ಹಿಂದೆ ಹೆಜ್ಜೆ ಇಡಬೇಡಿ. ನಿಮ್ಮವರ ಬಳಿ ವಿಧೇಯತೆಯನ್ನು ಇಟ್ಟುಕೊಳ್ಳುವುದು ಉತ್ತಮ. ಯಾರೋ ಅಚಾನಕಾಗಿ ಬಂದು ನಿಮ್ಮನ್ನು ಇಂಪ್ರೆಸ್ ಮಾಡಬಹುದು. ಸಂಗಾತಿಯ ಬಗ್ಗೆ ನಂಬಿಕೆ ಬರುವುದು ಕಷ್ಟ. ಕೆಲಸವನ್ನು ಬದಲಿಸುವ ಬಗ್ಗೆ ಸದ್ಯ ಯೋಚನೆ ಬೇಡ. ದೂರದ ಊರಿನಿಂದ ನಿಮ್ಮನ್ನು ಹುಡುಕಿ ಬರಬಹುದು. ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು. ಆರ್ಥಿಕ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿ ಅತಿಯಾದಂತೆ ಅನಿಸುವುದು. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರಿ.

ಕನ್ಯಾ ರಾಶಿ: :ನಿಮ್ಮ ಸಹಾಯಕ್ಕೆ ಪ್ರತ್ಯುಪಕಾರ ಸಿಗುವುದು. ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಅದನ್ನು ಅಷ್ಟಕ್ಕೇ ನಿಲ್ಲಿಸುವ ಜಾಣ್ಮೆ ನಿಮ್ಮದು. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡುವಂತೆ ಪ್ರೇರಿಸಿತ್ತು. ಉದ್ಯಮವನ್ನು ನಡೆಸುತ್ತಿದ್ದರೆ, ಆದಾಯದ ಹೊಸಮಾರ್ಗವನ್ನು ಯೋಚಿಸಬೇಕಾಗುವುದು. ನಿಮ್ಮ ಆಸ್ತಿಯನ್ನು ಮಾರಾಟಮಾಡಲು ಆಲೋಚಿಸಿಸುವಿರಿ. ನಿಮ್ಮ ಅಸಲಿಯತ್ತನ್ನು ತೋರಿಸಲಾಗದು. ನೂತನ ವಾಹನಖರೀದಿಯನ್ನು ಮಾಡಲಿದ್ದೀರಿ. ಮಾನಸಿಕ ಒತ್ತಡದಿಂದ ಸ್ವಲ್ಪ ಸಮಸ್ಯೆಯನ್ನು ಅನುಭವಿಸುವಿರಿ. ಅನಿವಾರ್ಯವಾದ ವಸ್ತುಗಳನ್ನು ಸ್ವಂತದ್ದಾಗಿಸಿಕೊಳ್ಳಿ. ಶ್ರಮವಹಿಸಿದ ಕಾರ್ಯಕ್ಕೆ ಫಲವು ಸಿಗಬಹುದು. ಒಳ್ಳೆಯವರ ಸಂಗ ಸಿಗಬಹುದು ಅಥವಾ ಉತ್ತಮ ಪುಸ್ತಕವನ್ನು ಓದುವಿರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು.

ತುಲಾ ರಾಶಿ: :ಬೆಂಕಿ ಉರಿ ಹೊತ್ತಲು ಸಣ್ಣ ಕಿಡಿ ಸಾಕು. ಅದು ಎಲ್ಲಿಂದಲೋ ಹಾರಿ ಸ್ನೇಹದಲ್ಲಿ ಬೀಳುವುದು. ಆರದಂತೆ ಉರಿಯುವುದು. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರಿಗೆ ನೀಡುವ ಉಪದೇಶವು ವ್ಯರ್ಥವಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ತಾಳ್ಮೆಯಿಂದ ಆದಷ್ಟು ವ್ಯವಹರಿಸಿ. ಅಪರೂಪದ ವಿಚಾರಗಳು ನಿಮಗೆ ಗೊತ್ತಾಗಲಿದೆ. ಅನಿವಾರ್ಯವಾಗಿ ತಿಂದ ಹೊರಗಿನ ಆಹಾರದಿಂದ ರೋಗವನ್ನು ತಂದುಕೊಳ್ಳುವಿರಿ. ನೆರೆ ಹೊರೆಯರ ಜೊತೆ ಚೆನ್ನಾಗಿರಿ. ಪತಿಯ ಮೇಲೆ ಸಿಟ್ಟುಗೊಳ್ಳುವ ಸಾಧ್ಯತೆ ಇದೆ. ಕೆಲವು ಜವಾಬ್ದಾರಿಯ ಹೊರೆ ಕಡಿಮೆಯಾದೀತು. ಮನಸ್ಸನ್ನು ನಕಾರಾತ್ಮಕವಾಗಿ ಹರಿಯಲು ಬಿಡಬೇಡಿ. ಕೃಷಿಗೆ ಸಂಬಂಧಿಸಿದ ಚಟುವಟಿಕೆಲ್ಲಿ ಭಾಗವಹಿಸುವಿರಿ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಗುಡ್ಡ ಬೆಟ್ಟಗಳ, ನದಿಪ್ರದೇಶಗ ಸುತ್ತಿವ ಮನಸ್ಸಾದೀತು.

ವೃಶ್ಚಿಕ ರಾಶಿ: :ಒಳ ಮನಸ್ಸು ನಿಮ್ಮನ್ನು ನಿಯಂತ್ರಿಸಲಿದೆ. ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಇಂದು ನೀವು ಹಲವು ದಿನಗಳಿಂದ ಕಾಡುತ್ತಿರುವ ಅಥವಾ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವಿರಿ. ದುಃಖವನ್ನು ಕಣ್ಣೀರಿನ ಮೂಲಕ ಹೊರಹಾಕಿ ಸಮಾಧಾನ ಮಾಡಿಕೊಳ್ಳುವಿರಿ. ಸ್ನೇಹಿತರಿಂದ ಅಪಹಾಸ್ಯಕ್ಕೆ ಒಳಗಾಗುವಿರೊ. ಇನ್ನೊಬ್ಬರ ವಸ್ತುವನ್ನು ಅನುಮತಿ ಇಲ್ಲದೇ ಪಡೆಯಬೇಡಿ. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲವೊಂದಿಷ್ಟು ಗೊಂದಲಗಳು ಆಗಬಹುದು. ಗೆಲುವಿನ ಉತ್ಸಾಹ ನಿಮ್ಮಲ್ಲಿ ಕಾಣಿಸುವುದು. ಬೇರೆ ಕಡೆಗೆ ಇಟ್ಟಿದ್ದ ಗಮನವನ್ನು ಬದಲಿಸಿ, ನಿಮ್ಮ ಜೀವನದ ಬಗ್ಗೆ ಯೋಚಿಸುವುದು ಒಳ್ಳೆಯದು ಎಂದು ಅನ್ನಿಸಬಹುದು. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ.

ಧನು ರಾಶಿ: ಕ್ಷ:ಎಷ್ಟೇ ಖರ್ಚು ಮಾಡಿದರೂ ನಿಮಗೆ ಸಿಗಬೇಕಾದುದು ಸಿಗಲಾರದು. ವಿಶೇಷವಾಗಿ ಆರೋಗ್ಯ ನಿಮ್ಮ ಮನಸ್ಸನ್ನು ಹಾಳಾಗಿಸಲಿದೆ. ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಹೂಡಿಕೆಯ ವಿಚಾರದಲ್ಲಿ ನಂಬಿಕೆ ಉಳಿಯದು. ಯಾವುದನ್ನಾದರೂ ಹೇಳುವುದು ಸುಲಭ, ಸ್ವತಃ ಮಾಡಲು ಬಂದಾಗ ವಾಸ್ತವದ ಪರಿಚಯವಾಗುವುದು. ಬಹಳ ದಿನಗಳ ಅನಂತರ ಸಂಗಾತಿಯನ್ನು ನೀವು ಇಷ್ಟಪಡುವಿರಿ. ಅನಾರೋಗ್ಯವಿದ್ದರೂ ಸದಾ ಉತ್ಸಾಹಿಗಳಾಗಿ ಇರುವಿರಿ. ಮಕ್ಕಳ ವಿಚಾರಕ್ಕೆ ಸಿಟ್ಟಾಗುವಿರಿ. ಉದ್ಯೋಗದ ಬದಲಾವಣೆಯು ನಿಮಗೆ ಹವ್ಯಾಸದಂತೆ ಆಗುವುದು. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ.

ಮಕರ ರಾಶಿ: :ನಿಷ್ಪಕ್ಷಪಾತತೆಯನ್ನು ತೋರಸಿಬೇಕು. ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ‌ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ, ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ನಿರೀಕ್ಷಿತವಾದ ಸಂಪತ್ತು ನಿಮಗೆ ಸಿಗಲಿದೆ. ಮಕ್ಕಳು ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸಲಾರರು. ಯಾವುದೇ ವಿಚಾರವನ್ನು ನಿಮ್ಮ ಸಾಮರ್ಥ್ಯ ಹಾಗೂ ವಿದ್ಯೆ ತಕ್ಕಂತೆ ಯೋಚಿಸಿ. ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬ ಹುಂಬುತನವನ್ನು ತೋರಿಸಬೇಡಿ. ಇಬ್ಬಂದಿತನದಿಂದ ಕಷ್ಟವಾಗುವುದು. ಅದನ್ನು ಗಮನಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಿ. ಸ್ನೇಹಿತರು ದಾರಿಯನ್ನು ತಪ್ಪಿಸಬಹುದು. ಯಾರ ಬಳಿ ಏನನ್ನು ಹೇಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಮೆಲ್ಲಗೆ ಮಾತನಾಡಿ. ಆಲಸ್ಯದ ಮನೋಭಾವವನ್ನು ನೀವು ಬಿಡಬೇಕಾದೀತು. ಉದ್ವೇಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ.

ಕುಂಭ ರಾಶಿ: :ನಿಮ್ಮದಾದ ಆಲೋಚನೆಗಳಿಂದ, ಸಿದ್ಧಾಂತಗಳಿಂದ ಹೊರಬರಲಾರಿರಿ. ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ಸಾಲವು ಮರಳಿ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ಹೇಳಿಸಿಕೊಂಡು ಮಾಡುವುದು ನಿಮಗೆ ಅಭ್ಯಾಸವಾದ ಸಂಗತಿ. ಅಂದುಕೊಂಡಿದ್ದು ಆಗುವುದಿಲ್ಲ ಎಂಬ ನಂಬಿಕೆಯಿಂದ ಹೊರಗೆ ಬನ್ನಿ. ಎಲ್ಲವನ್ನೂ ನಾವಂದು ಕೊಂಡಂತೆ ನಡೆಸಲು ಸಾಧ್ಯವಿಲ್ಲ. ನಿಮ್ಮ ವಿದ್ಯಾರ್ಹತೆಯನ್ನು ಪರೀಕ್ಷಿಸಬಹುದು. ನಿಮ್ಮ ಬಗ್ಗೆ ನಿಮ್ಮವರಿಗೆ ತಿಳಿಸುವ ಅನಿವಾರ್ಯತೆ ಬರಲಿದೆ. ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವನು. ಅಹಂಕಾರದ ಕಾರಣ ನೀವು ಕೆಲವರಿಂದ ದೂರಾಗಬೇಕಾಗುವುದು. ಮಿಶ್ರಫಲವನ್ನು ಪಡೆಯುವಿರಿ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ.

ಮೀನ ರಾಶಿ: ನೀವು ಆತುರದಲ್ಲಿ ಇರುವುದಷ್ಟೇ ಅಲ್ಲ, ಇತರರೂ ಇರುವಂತೆ ಮಾಡುವಿರಿ. ಇಂದಿನ ಎಂತ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ಉಪಕಾರಕ್ಕೆ ಸತ್ಫಲವನ್ನು ಪಡಯಬಹುದಾಗಿದೆ. ಬೇಕಾಗಿರುವುದು ಉಳಿಸಿಕೊಳ್ಳುವುದು ಇಂದು ಕಷ್ಟ. ಕಾರಣಾಂತರಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮನೆಯಲ್ಲಿ‌ ಪ್ರಶಾಂತವಾದ ವಾತಾವರಣವಿರಲಿದ್ದು ನಿಮಗೆ ಬಹಳ ಖುಷಿ ಎನಿಸುವುದು. ನಿಮ್ಮ ತಮಾಷೆಯ ಸ್ವಭಾವವು ಇತರರಿಗೆ ಬೇಸರ ತರಿಸಬಹುದು. ಹಿರಿಯರ ಭೇಟಿಯಿಂದ ನಿಮ್ಮ ಜೀವನದ ಕೆಲವು ಭಾಗಗಳನ್ನು ಬದಲಿಸಿಕೊಳ್ಳುವಿರಿ. ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಅವರ ಜೊತೆ ವಿವಾದಕ್ಕೆ ಇಳಿಯುವಿರಿ. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.

Leave a Reply

Your email address will not be published. Required fields are marked *