ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ, ಶುಕ್ರವಾರ ಅನುಕರಣೆಯಿಂದ ಅಪಹಾಸ್ಯ, ಅತಿ ಕರುಣೆಯಿಂದ ತೊಂದರೆ, ಶತ್ರುಗಳು ಮಿತ್ರರಾಗುವುದು ಇದೆಲ್ಲ ಈ ದಿನ ಇರವುದು.ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಶುಕ್ರವಾರ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಪ್ರೀತಿ, ಕರಣ : ಬವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 54 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:53 – 12:29, ಯಮಘಂಡ ಕಾಲ 15:42 – 17:18, ಗುಳಿಕ ಕಾಲ 07:41 – 09:17
ಮೇಷ ರಾಶಿ: ಸಾಲದ ವಿಚಾರಕ್ಕೆ ಮನೆಯಲ್ಲಿ ಪ್ರಸ್ತಾಪ ಮಾಡುವಿರಿ. ಇಂದು ದಿನದ ಆರಂಭದಲ್ಲಿ ಕೆಲವು ಅನಿರೀಕ್ಷಿತ ಒತ್ತಡ ಬರುವುದು. ಅದನ್ನು ದಾಟಿ ನೆಮ್ಮದಿಯನ್ನು ಕಾಣುವಿರಿ. ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ವಾಹನ ಖರೀದಿಯನ್ನು ಮಾಡಲಿದ್ದೀರಿ. ನಿಮಗೆ ಭರವಸೆ ಕೊಟ್ಟಷ್ಟು ತೃಪ್ತಿ ಇರದು. ಸ್ನೇಹಭಾವದಿಂದ ಎಲ್ಲರೊಂದಿಗೆ ವರ್ತಿಸಬಹುದು. ನಿಃಸ್ವಾರ್ಥ ಸೇವೆಗೆ ಅವಕಾಶ ಸಿಗಬಹುದು. ನಿಮ್ಮ ಧೈರ್ಯದಿಂದ ಹೊಸ ಉದ್ದಿಮೆ ಪ್ರಾರಂಭಿಸಬಹುದು. ಮನಸ್ಸು ಸ್ಥಿರವಾಗಿರಲು ವಿಶ್ರಾಂತಿ ಸಹಾಯ ಮಾಡುತ್ತದೆ. ಆಗದ ಕಾರ್ಯವನ್ನು ಮಾಡಿಕೊಡುವ ಆಶ್ವಾಸನೆ ಬೇಡ. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು. ಮರೆಯಲ್ಲಿ ಇದ್ದು ನಿಮ್ಮಷ್ಟಕ್ಕೇ ಕೆಲಸ ಮಾಡಿಕೊಳ್ಳುವುದು ಇಷ್ಟವಾಗುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಇಂದಿನ ಕಾರ್ಯಕ್ಕೆ ಸಮಯ ಸಾಲದೇ ಅರ್ಧಕ್ಕೇ ನಿಲ್ಲಿಸುವಿರಿ.
ವೃಷಭ ರಾಶಿ: ಯಾರಿಗೂ ಗೊತ್ತಾಗದಂತೆ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಇಂದಿನ ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿ ದೂರಾಗುವರು. ಅಪಮಾನವಾಗುವ ಸಂಗತಿಯನ್ನು ನೀವೇ ತಂದುಕೊಳ್ಳುವಿರಿ. ಸೃಜನಶೀಲತೆ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಎಲ್ಲರ ಪ್ರೋತ್ಸಾಹ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ನೀವು ಎದುರಿಸಿದ ಸಂಕಷ್ಟಗಳಿಂದ ಹೊರಬರಲು ಸಮಯ ಸಿಕ್ಕಿದೆ. ಸ್ನೇಹಿತರ ಬೆಂಬಲ ನಿಮಗೆ ಮುಖ್ಯವಾಗಿದೆ. ನಿಮ್ಮೆದುರು ಸ್ಪರ್ಧಿಸಲು ಸಮರ್ಥರು ಬಂದಾರು. ಒಳ್ಳೆಯವರ ಸಹವಾಸವನ್ನು ಮಾಡಿದ್ದಕ್ಕೆ ಒಳ್ಳೆಯ ಸ್ಥಿತಿಯು ಬರಲಿದೆ. ನಿರೀಕ್ಷಿತ ಪ್ರತಿಸ್ಪಂದವು ನಿಮ್ಮ ಮಾತಿಗೆ ಸಿಗದೇ ಇರುವುದು. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು.
ಮಿಥುನ ರಾಶಿ: :ನಿಮಗೆ ಬೇಕಾದ ಸಮಯಕ್ಕೆ ಸಿಗದ ವ್ಯಕ್ತಿಗಳನ್ನು ಮಾತನಾಡಿಸಲಾರಿರಿ. ನಿಮ್ಮವರೇ ನಿಮಗೆ ಯಾವುದಾದ ರೀತಿಯಲ್ಲಿ ವಂಚನೆ ಮಾಡಬಹುದು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ಸಮಯಕ್ಕಿಂತ ಮುಂಚೆ ಯೋಜನೆಗಳನ್ನು ಮುಗಿಸಲು ಸಾಧ್ಯವಾಗುತ್ತದೆ. ಇತರರ ಸಲಹೆಗಳನ್ನು ಗೌರವದಿಂದ ಸ್ವೀಕರಿಸಿದರೆ ಅದು ನಿಮ್ಮ ಬಲವಾಗುತ್ತದೆ. ಧೈರ್ಯ ಹಾಗೂ ನಿರ್ಧಾರಗಳ ಸ್ಪಷ್ಟತೆ ನಿಮಗೆ ಯಶಸ್ಸು ತರುತ್ತದೆ. ಹೊಸ ಯೋಜನೆ ಆರಂಭಕ್ಕೆ ಯೋಚನೆ ಬೇಕು. ಅನಾರೋಗ್ಯಕ್ಕೆ ಅನಿರೀಕ್ಷಿತ ಮದ್ದು ಸಿಗಲಿದೆ. ನೂತನ ಗೃಹನಿರ್ಮಾಣದ ಕನಸನ್ನು ಕಾಣಲಿದ್ದೀರಿ. ಇಂದು ದೂರ ಹೋಗಬೇಕಾದ ಅನಿವಾರ್ಯತೆ ಬರಲಿದ್ದು, ವಾಹನಚಾಲನೆಯಿಂದ ಅಪಘಾತವಾಗುವ ಸಾಧ್ಯತೆ ಇದೆ. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಅಧಿಕಪ್ರಸಂಗಿತನ ಬೇಡ. ಇನ್ನೊಬ್ಬರಿಂದ ಕೊಂಬೆ ನೋವಾಗುವುದು. ನಿಮ್ಮ ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು.
ಕರ್ಕಾಟಕ ರಾಶಿ: :ವಿವಾಹವಾಗಿಲ್ಲವೆಂಬ ಬೇಸರವಿರಲಿದೆ. ಇಂದಿನ ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಕಾಣುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಆಸಕ್ತಿ ಇರುವುದು. ನಿಮ್ಮ ವಸ್ತುಗಳನ್ನು ನವೀಕರಣ ಮಾಡಿಸಿಕೊಳ್ಳುವಿರಿ. ಪ್ರಕ್ಷುಬ್ದವಾಗಿದ್ದ ಮನಸ್ಸು ಸಮಾಧಾನಕ್ಕೆ ಬರಲಿದೆ. ನಿರ್ಧಾರಣಾ ಶಕ್ತಿ ಬೇರೆಯವರ ಸಲಹೆ ಕೇಳಲು ಅವಕಾಶವಿಲ್ಲದಂತೆ ಬೆಳೆಯಲಿ. ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರಬೇಡಿ. ಪ್ರೀತಿಯಲ್ಲಿ ನಿಮ್ಮ ಧೈರ್ಯ ಫಲ ಕೊಡಬಹುದು. ನೈಜ ಅಭಿಪ್ರಾಯ ಹೇಳಿದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಯಾರದೋ ಸಿಟ್ಟನ್ನು ಮಕ್ಕಳ ಮೇಲೆ ತೀರುಗಿಸಿವಿರಿ. ಮನೆಯಿಂದ ಹೊರಗೆ ಇರಬೇಕಾದ ಸ್ಥಿತಿ ಬರಲಿದೆ. ಯಾರಾದರೂ ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳಬಹುದು. ಅದಕ್ಕೆ ಹಿಗ್ಗುವಿರಿ. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು.
ಸಿಂಹ ರಾಶಿ: :ಅಪರಿಚಿತರು ಅಥವಾ ನಂಬಿಕೆ ಇರುವವರಲ್ಲಿ ಲೆಕ್ಕಾಚಾರವನ್ನು ಪ್ರಸ್ತಾಪಿಸಿ ಪರಿಹರಿಸಿಕೊಳ್ಳಿ. ರೂಪಕ್ಕೆ ತಕ್ಕಂತೆ ಸ್ವರೂಪವಿರುವುದಿಲ್ಲ ಎನ್ನುವುದು ಸತ್ಯವಾಗುವುದು. ಯಾರದೋ ಮಾತಿನಿಂದ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ನಿಮಗೆ ಸಲ್ಲದ ಮಾತುಗಳು ನಿಮ್ಮೆದುರು ಬರಬಹುದು. ಏರುದನಿಯಲ್ಲಿ ಮಾತನಾಡುವುದು ಬೇಡ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ನಿಮಗೆ ಸಹಾಯ ಮಾಡುತ್ತದೆ. ಇತರರ ಆಸೂಯೆಯಿಂದ ದೂರವಿರಿ. ನಿಮ್ಮ ಹವ್ಯಾಸಗಳು ನಿಮಗೆ ಆತ್ಮಸಂತೃಪ್ತಿಯನ್ನು ನೀಡುತ್ತವೆ. ಮನಸ್ಸು ಸ್ಥಿರವಾಗಿರಲು ಈ ದಾರಿಯು ಸಹಾಯವಾಗಬಹುದು. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ಮೋಹದಿಂದ ಹೊರಬರುವುದು ಕಷ್ಟವಾದೀತು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮ ನೇರವಾದ ಮಾತು ನಿಮಗಷ್ಟೇ ಚೆನ್ನಾಗಿದೆ ಎನ್ನಿಸಬಹುದು.
ಕನ್ಯಾ ರಾಶಿ: :ಹಿರಿಯರ ಆರೋಗ್ಯವನ್ನು ಕಾಳಜಿ ಮಾಡಬೇಕು. ನೀವು ಉದ್ಯಮದಲ್ಲಿ ಒತ್ತಡಗಳು ಇಲ್ಲದೇ ಇಂದು ನಿಶ್ಚಿಂತೆಯಿಂದ ಕೆಲಸವನ್ನು ಮಾಡುವಿರಿ. ದುಶ್ಚಟಗಳನ್ನು ಸ್ನೇಹಿತರು ನಿಮಗೆ ಹಿಡಿಸಬಹುದು. ಸಣ್ಣ ತಪ್ಪಿಗೆ ಹೆಚ್ಚು ನಿಂದನೆ ಸಿಗಲಿದೆ. ನಿಮ್ಮ ಯೋಜನೆಗಳು ಸಮಯಕ್ಕೆ ಮುಕ್ತಾಯಗೊಳ್ಳುತ್ತವೆ. ಇತರರ ಅಭಿಪ್ರಾಯಗಳಿಗೆ ಸ್ಪಂದಿಸಿದರೆ ಪ್ರಗತಿ ಸಾಧ್ಯ. ಹೊಸ ಯೋಜನೆಗಳನ್ನು ಆರಂಭಿಸಲು ಇನ್ನೂ ಸಮಯ ಬಂದಿಲ್ಲ. ನಿರ್ಧಾರಗಳ ಬಗ್ಗೆ ಗಮನಹರಿಸಿ, ಭವಿಷ್ಯದ ಆಲೋಚನೆ ಅಗತ್ಯ. ಎಲ್ಲವನ್ನೂ ಒಂದೇ ತೂಕದಲ್ಲಿ ನೋಡುವುದು ಬೇಡ. ಋಣಮುಕ್ತರಾಗಲು ನೀವು ಬಹಳ ಶ್ರಮಪಡಬೇಕಾಗಿದೆ. ಚೂರಾದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಕಾಗುವುದು.
ತುಲಾ ರಾಶಿ: :ಇನ್ನೊಬ್ಬರ ವಿಷಯದಲ್ಲಿ ಹಸ್ತಕ್ಷೇಪ ಬೇಡ. ಸೋಮಾರಿತನದಿಂದ ಆಗುವ ನಷ್ಟವು ಇಂದು ನಿಮಗೆ ಗೊತ್ತಾಗುವುದು. ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ಅಮೂಲ್ಯ ವಸ್ತುಗಳ ಮೇಲೆ ಹೂಡಿಕೆ ಮಾಡುವಿರಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ನಿಮ್ಮ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿದರೆ ಉತ್ತಮ ಫಲ ಸಿಗುತ್ತದೆ. ಮಹಿಳೆಯರು ತಮ್ಮ ಸಾಮರ್ಥ್ಯವನ್ನ ನಿರ್ಧಾರದಲ್ಲಿ ಪ್ರತಿಬಿಂಬಿಸಬೇಕು. ಹೆಚ್ಚಿನ ಮೌಲ್ಯ ನೀಡದೆ ಮುನ್ನಡೆಯಿರಿ. ಬಹಳ ದಿನಗಳಿಂದ ಇದ್ದ ಆಸೆಯನ್ನು ಇಂದು ಪೂರೈಸಿಕೊಳ್ಳುವಿರಿ. ಸಿಗದ ಹಣದ ಬಗ್ಗೆ ನಿಮಗೆ ಬೇಸರವಿರುವುದು. ಅದನ್ನು ಹೇಗಾದರೂ ಮಾಡಿ ಗಳಿಸುವ ತವಕ ಇರುವುದು. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಪಾತ್ರರು ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು.
ವೃಶ್ಚಿಕ ರಾಶಿ: :ನೌಕರರ ಬೇಡಿಕೆಯನ್ನು ಈಡೇರಿಸುವುದು ಅನಿವಾರ್ಯವಾಗಬಹುದು. ನೀವು ನಿಮ್ಮ ಮಕ್ಕಳ ಬಗ್ಗೂ ಇತರರ ಬಗ್ಗೆಯೂ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವಿರಿ. ಆಧಿಕಾರಿಗಳು ನಿಮ್ಮ ಕೆಲಸದಿಂದ ಮೆಚ್ಚುವರು. ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ ಸಂತೋಷ ಸಿಗುತ್ತದೆ. ವೃತ್ತಿ ಮತ್ತು ಕುಟುಂಬ ನಡುವೆ ಸಮತೋಲನ ಕಾಯ್ದುಕೊಳ್ಳಿ. ಜೀವನಮಟ್ಟ ಸುಧಾರಿಸಲು ಅವಕಾಶಗಳು ದೊರೆಯುತ್ತವೆ. ವೃತ್ತಿಯಿಂದ ನಿಮಗೆ ಬೇಸರವುಂಟಾಗಬಹುದು. ಸಂಗಾತಿಯಿಂದ ನಿಮಗೆ ಕಿರಿಕಿರಿ ಆಗಬಹುದು. ಯಾವುದೇ ನಿರ್ಧಾರಗಳನ್ನು ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಡಿ. ಹಣವು ಖರ್ಚಾಗುವುದೆಂಬ ಆತಂಕ ಬೇಡ. ಅಧಿಕಾರವು ಕ್ಷಣಿಕ ಎಂಬ ಭಾವವು ನಿಮ್ಮೊಳಗೆ ಇರಲಿ. ಚಿಕ್ಕ ಕೆಲಸವನ್ನಾದರೂ ಬಹಳ ಅಚ್ಚುಕಟ್ಟಿನಿಂದ ಮಾಡಿಕೊಳ್ಳುವಿರಿ. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಕೆಲವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದೀತು. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವುದು ಅನಿವಾರ್ಯ.
ಧನು ರಾಶಿ: :ಉದ್ಯಮದ ವಿಸ್ತಾರವನ್ನು ಯೋಜನಾ ಬದ್ಧವಾಗಿ ರೂಪಿಸಿ. ನಿಮಗೆ ಇಂದು ತುರ್ತು ಕಾರ್ಯಗಳು ಹೆಚ್ಚಾಗುವುದು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ನೀವೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಮಕ್ಕಳಲ್ಲಿ ಹೊಂದಾಣಿಕೆ ಬೆಳೆಸಬೇಕಾಗುವುದು. ನಿಮಗಾಗದವರು ನಿರ್ಮಿಸಿದ ಜಾಲಕ್ಕೆ ಬೀಳುವಿರಿ. ಭಾವನೆಗಳನ್ನು ಪ್ರೀತಿಪಾತ್ರರಿಗೆ ಮುಕ್ತವಾಗಿ ಹಂಚಿಕೊಳ್ಳಿ. ದೇಹಕ್ಕೆ ಉಂಟಾದ ಸಂಕಟಗಳನ್ನು ನಿವಾರಿಸಿ ವಿಶ್ರಾಂತಿ ಪಡೆಯಿರಿ. ಪ್ರೀತಿಯಲ್ಲಿ ಯಶಸ್ಸು ದೊರೆಯುವ ದಿನ ಇದಾಗಿದೆ. ಆರ್ಥಿಕವಾಗಿ ದುಡಿಮೆ ಹೆಚ್ಚಾಗಬಹುದು, ಆದರೆ ಅದು ಸಂತೋಷ ತಂದೀತು. ಇಂದು ಮನೆಯಿಂದ ದೂರದಲ್ಲಿ ನಿಮ್ಮ ವಾಸವು ಇರುವುದು. ನಿಧಾನಗತಿಯಲ್ಲಿ ಸಾಗುವ ಕೆಲಸದಿಂದ ಬೇಸರಗೊಳ್ಳುವಿರಿ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಿಗೆ ಸಮಯವು ಸಿಗದೇ ಕಷ್ಟವಾಗುವುದು. ಆಗುತ್ತಿರುವ ಕೆಲಸಕ್ಕೆ ಅಡ್ಡಗಾಲು ಹಾಕಿ ದಿಕ್ಕು ತಪ್ಪಿಸುವುದು ಬೇಡ. ತಪ್ಪಾದಾಗ ಮಾತ್ರ ಸರಿ ಮಾಡಿ.
ಮಕರ ರಾಶಿ: :ಅವಕಾಶಗಳು ನಿಮ್ಮ ಭವಿಷ್ಯಕ್ಕೆ ಪೂರಕವಗಲಿದ್ದು, ಬಳಸಿಕೊಳ್ಳುವುದನ್ನು ಆಪ್ತರಿಂದ ಕಲಿಯುವಿರಿ. ನೀವು ಭವಿಷ್ಯಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲು ಚಿಂತನೆ ಮಾಡುವಿರಿ. ನಿಮ್ಮ ಮಕ್ಕಳು ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಾಧಾನ ಮಾಡಿ. ದೊಡ್ಡ ವ್ಯಕ್ತಿಗಳೆಂದು ಯಾರಾದರೂ ಹೇಳಿ ನಿಮಗೆ ವಂಚಿಸಬಹುದು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ನಿಮ್ಮ ಶಕ್ತಿ ಇಂದು ಸಹಾನುಭೂತಿಯನ್ನೆ ನೀಡುತ್ತದೆ. ಸಂದರ್ಶನ ನಿರಾಶೆ ಮೂಡಿಸುವುದು. ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು, ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಮೇಲೆ ಗಮನ ಹರಿಸಲು ಇದು ಸೂಕ್ತ ಸಮಯ. ಕೊಡುಕೊಳ್ಳುವ ವ್ಯವಹಾರವು ಪ್ರಮಾಣಿಕವಾಗಿ ಇರಲಿ. ಉತ್ತಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು. ಸಂಗಾತಿಯ ಅಸಹಜ ಮಾತುಗಳಿಂದ ನಿಮಗೆ ಕಷ್ಟವಾಗುವುದು. ನಿಮ್ಮ ಪ್ರತಿಭೆಗೆ ಸೂಕ್ತ ಸ್ಥಳವನ್ನು ಕಂಡುಕೊಳ್ಳಿ.
ಕುಂಭ ರಾಶಿ: :ಅಸಮಾಧಾನವನ್ನು ಹೊರಹಾಕಲು ಸ್ಥಾನವನ್ನೂ ಗಮನಿಸಿ. ಎಲ್ಲವನ್ನೂ ಅರ್ಧ ಕೆಲಸ ಮಾಡಿ ಇಡುವಿರಿ. ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಕೊಟ್ಟ ಹಣವು ಮತ್ತೆ ಬರುವ ನಿರೀಕ್ಷೆಯಲ್ಲಿ ಇರುವಿರಿ. ಆಹ್ವಾನವಿಲ್ಲದ ಕಡೆ ಹೋಗುವುದು ಬೇಡ. ಗುರಿಗಳನ್ನು ತಲುಪಲು ತಾಳ್ಮೆ ಮತ್ತು ಸೂಕ್ತ ಯೋಜನೆ ಅಗತ್ಯ. ನಿಮ್ಮ ನೈತಿಕ ಮೌಲ್ಯಗಳು ನಿಮಗೆ ಪ್ರಶಂಸೆಯನ್ನು ತಂದೀತು. ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಬಿಂಬಿಸುವುದು ಮಹತ್ವಪೂರ್ಣ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ದೃಷ್ಟಿದೋಷವು ನಿಮಗೆ ಅಧಿಕವಾಗಬಹುದು. ಹಳೆಯ ಪರಿಚಯವು ನಿಮಗೆ ಹೊಸತಾಗಿ ಕಾಣಿಸುವುಸುದು. ಯಾರದ್ದಾರೂ ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಬದಲಿಸಿ. ನಿಮ್ಮ ಹೂಡಿಕೆಯು ಸರಿಯಾದ ಸ್ಥಳದಲ್ಲಿ ಇಲ್ಲದೇ ಇರಬಹುದು.
ಮೀನ ರಾಶಿ: :ಪರರ ಕಣ್ಣಲ್ಲಿ ನೀವು ಸಣ್ಣಾಗಬಹುದು. ಇಂದು ನೀವು ಅನಾರೋಗ್ಯದಿಂದ ದಿನದ ಹೆಚ್ಚು ಭಾಗವನ್ನು ಕಳೆಯಬೇಕಾಗಬಹುದು. ತಾಯಿಯ ಪ್ರೀತಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ಕಛೇರಿಯಲ್ಲಿ ಯಾರ ಜೊತೆಗೂ ಅನುಚಿತವಾಗಿ ವರ್ತಿಸಿದರೆ ಕಷ್ಟ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೊಂದಲಗಳು ಬರಬಹುದು. ಹೆಚ್ಚು ಪರಿಶ್ರಮ ಬೇಕಾದ ದಿನವಾಗಿದ್ದು, ಗುರಿ ತಲುಪಲು ದೃಢ ನಿಲುವು ಅಗತ್ಯ. ವಿದ್ಯಾಭ್ಯಾಸ ಪೂರ್ಣವಾದ ಸಂತಸದಲ್ಲಿ ಇರುವಿರಿ. ಇತರರ ಸಲಹೆಗಳಿಗೆ ಗೌರವ ನೀಡಿದರೆ ಅದು ನಿಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ಆತ್ಮಸಾಕ್ಷಿಗೆ ವಿಶ್ವಾಸವಿರಿಸಿ ನಿರ್ಧಾರ ತೆಗೆದುಕೊಳ್ಳಿ. ಬಿಡುವಿಲ್ಲದ ದುಡಿಮೆಯು ನಿಮಗೆ ಕಷ್ಟವಾಗಬಹುದು. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಯಾರನ್ನೂ ನೀವು ತಪ್ಪಾಗಿ ಗ್ರಹಿಸುವುದು ಬೇಡ. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ಉನ್ನತ ಸ್ಥಾನದ ನಿರೀಕ್ಷೆ ಭಗ್ನವಾಗಬಹುದು.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1