Horoscope Today 25 April : ಈ ರಾಶಿಯವರ ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.

Horoscope Today 25 April : ಈ ರಾಶಿಯವರು ಆಲಸ್ಯದಿಂದ ಯಾವುದನ್ನೂ ಸರಿಯಾಗಿ ಮಾಡಲಾರರು

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಐಂದ್ರ, ಕರಣ : ಬಾಲವ, ಸೂರ್ಯೋದಯ – 06 – 14 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:57 – 12:31, ಯಮಘಂಡ ಕಾಲ 15:39 – 17:13, ಗುಳಿಕ ಕಾಲ 07:48 – 09:22

ಮೇಷ ರಾಶಿ: :ಪರರ ಸಂಕಷ್ಟವನ್ನು ನೋಡಿ ನಿಮ್ಮ ಆತ್ಮಬಲವು ವೃದ್ಧಿಯಾಗುವುದು. ಇಂದು ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಅನುಕೂಲವಾದ ವಾತಾವರಣಕ್ಕೆ ಕರೆದೊಯ್ಯುತ್ತಿದೆ ಎನ್ನುವುದು ನಿಮಗೆ ಆಶ್ಚರ್ಯಕರ ಎನಿಸುವುದು. ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವಾಹನಗಳು, ಜಮೀನುಗಳನ್ನು ಖರೀದಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗ ಹಾಗೂ ಉತ್ತಮ ಮಾರ್ಗದರ್ಶನ ಎರಡೂ ಸಿಗುವುದು. ವ್ಯವಹಾರಗಳು ಲಾಭದಾಯಕವಾಗಿ ಮುಂದುವರಿಯುತ್ತವೆ. ಇಂದು ನೀವು ದೊಡ್ಡ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಗಾಯವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ನ್ಯಾಯಯುತವಾದ ವಿಷಯಕ್ಕೂ ವಿರೋಧವಿರಬಹುದು. ಯಾರಿಂದಲೂ ಏನನ್ನೂ ಪಡೆಯುವ ಮನಸ್ಸಾಗದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಏಕಾಂತದಲ್ಲಿ ಇರಲು ನಿಮಗೆ ಅನಿವಾರ್ಯವಾದೀತು. ನೀವು ಯಾರಿಂದಲೂ ಸಲಹೆಯನ್ನು ಪಡೆಯಲು ಇಷ್ಟಪಡುವುದಿಲ್ಲ.

ವೃಷಭ ರಾಶಿ: : ಭವಿಷ್ಯದ ಯೋಜನೆಗೆ ಸರಿಯಾದ ಚೌಕಟ್ಟು ಬೇಕಾಗುವುದು. ಮನಸ್ಸಿನ ನಿಯಂತ್ರಣವೇ ನಿಮ್ಮ ಗುಟ್ಟಾಗಿದ್ದು, ಎಲ್ಲರೊಂದಿಗೆ ಸೌಹಾರ್ದವಾಗಿ ಇರಲಿದ್ದೀರಿ. ಅತಿಯಾದ ಪ್ರಯಾಣದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವಿರಿ. ಮನೆ ನಿರ್ಮಾಣದ ಪ್ರಯತ್ನಗಳು ಒಟ್ಟಿಗೆ ಬರುತ್ತವೆ. ವ್ಯವಹಾರಗಳು ವಿಸ್ತರಣೆಯಲ್ಲಿ ಯಶಸ್ವಿಯಾಗುತ್ತವೆ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ಪ್ರಾಪ್ತಿ‌. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಂಬುಗೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ಉದ್ಯೋಗಕ್ಕಾಗಿ ಪಡೆಯುವ ಪ್ರಯತ್ನಗಳು ಸಫಲವಾಗುವುವು. ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿಭಾಗ ಮಾಡಿ. ಇದು ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ.

ಮಿಥುನ ರಾಶಿ: ಅನಿವಾರ್ಯ ಕಾರಣದಿಂದ ನಿಮ್ಮ ಮೇಲೆ ಅನೇಕ ಜವಾಬ್ದಾರಿಗಳು ಬರಬಹುದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ನಿಮ್ಮ ಎಂದಿನ‌ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಸಾಲದ ಸಮಸ್ಯೆಗಳು ಹೆಚ್ಚಾಗಿ ಬಗೆಹರಿಯುತ್ತವೆ. ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಗುತ್ತಿಗೆದಾರರಿಗೆ ಹೊಸ ಭರವಸೆಗಳು ಮೂಡಲಿವೆ. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಸಂತೋಷದ ಸಮಯವನ್ನು ಮೆಲುಕು ಹಾಕುವಿರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಅನುಭವಿ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸುವ ಮೂಲಕ ಭವಿಷ್ಯದಲ್ಲಿ ಲಾಭವನ್ನು ಗಳಿಸುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ.

ಕರ್ಕಾಟಕ ರಾಶಿ: :ವೃತ್ತಿಇಂದು ನೀವು ಸಂಗಾತಿಯ ಜೊತೆ ದೂರದ ಊರಿಗೆ‌ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ‌ಹರೊಯವುದು. ಆಸ್ತಿ ವಿವಾದಗಳು ಪರಿಹಾರ ಹಂತವನ್ನು ತಲುಪುತ್ತವೆ. ವಿಹಾರಕ್ಕೆ ಹೋಗುವ ಸಾಧ್ಯತೆಗಳು ಇರುತ್ತವೆ. ವಿದ್ಯಾರ್ಥಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವ್ಯವಹಾರಗಳು ಭರದಿಂದ ಸಾಗುತ್ತವೆ. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಇಂದು ಯಾವದೋ ಆತಂಕದಲ್ಲಿ ಇರುವಿರಿ. ನಿಮ್ಮ ಕೀರ್ತಿ ಹೆಚ್ಚಲಿದೆ. ದೂರದಿಂದ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನ ಸುಧಾರಣೆಗಳು ದೀರ್ಘಾವಧಿಯ ಬಾಕಿ ಮತ್ತು ಬಿಲ್ಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಹಳೆಯ ಕೆಲಸಗಳು ವ್ಯರ್ಥವಾಗಬಹುದು. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು.

ಸಿಂಹ ರಾಶಿ: ಸಾಲಕ್ಕಾಗಿ ಇಷ್ಟಪಡುತ್ತಿದ್ದರೆ ಇಂದು ಸಿಗಲಿದೆ. ಮಕ್ಕಳ ವಿವಾಹಕ್ಕೆ ಬೇಕಾದ ಸಿದ್ಧತೆ ಮಾಡುವಿರಿ. ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವ ವ್ಯಕ್ತಿತ್ವ ಅವಶ್ಯಕ. ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕಗಳು ಇರುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ನೀವು ಆರಾಮಾಗಿದ್ದೀರಿ ಎಂದು ತೋರಿಸಲು ಹೋಗಬೇಡಿ‌. ದಿನನಿತ್ಯದ ವಸ್ತುವಿನ ವ್ಯಾಪಾರ ಚೆನ್ನಾಗಿ ನಡೆಯಲಿದೆ. ಕುಟುಂಬದ ಬೆಂಬಲವು ಕೇಳದೆಯೂ ಸಿಗುತ್ತದೆ. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ವಿಶ್ರಾಂತಿ ದೊರೆಯುವುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.

ಕನ್ಯಾ ರಾಶಿ: ಸ್ವಾರ್ಥದಿಂದ ನಿಮ್ಮ ಗೌರವಕ್ಕೇ ತೊಂದರೆ. ಅರಿವಿದ್ದರೂ ಅಧಿಕಾರ ಸಿಗುತ್ತದೆ ಎನ್ನುವಂತಿಲ್ಲ. ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಅನ್ನಿಸಬಹುದು. ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಹೊಸ ಜನರ ಪರಿಚಯವು ಸಂತೋಷವನ್ನು ತರುತ್ತದೆ. ಗುತ್ತಿಗೆದಾರರಿಗೆ ಪ್ರೋತ್ಸಾಹಕವಾಗಲಿದೆ. ಮೋಟಾರು ವಾಹನದಿಂದ ಸಂತೋಷ ಇರುತ್ತೆ. ವ್ಯವಹಾರದಲ್ಲಿನ ಅಡೆತಡೆಗಳನ್ನು ನಿವಾರಿಸಿ ಲಾಭದ ಹಾದಿಯಲ್ಲಿ ಸಾಗುತ್ತೀರಿ. ಉನ್ನತ ವ್ಯಕ್ತಿಗಳ ಜೊತೆ ಸಂವಹನ ನಡೆಸುವಾಗ ಶಾಂತವಾಗಿರಿ ಮತ್ತು ನಿಮ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಿ. ಹಿಂದಿನ ಹಣಕಾಸಿನ ನಿರ್ಧಾರಗಳು ಲಾಭದಾಯಕ ಆದಾಯವನ್ನು ನೀಡಬಹುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು.

ತುಲಾ ರಾಶಿ: ಗೃಹನಿರ್ಮಾಣದಿಂದ ಉಳಿದ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ನಿಮ್ಮ ನಡೆ ಹಾಗು ನುಡಿಗಳು ವಿರೋಧದಂತೆ ಭಾಸವಾಗಬಹುದು. ಮನಸ್ಸು ಶಕ್ತಿಯನ್ನು ಉಲ್ಬಣಗೊಳಿಸಿಕೊಳ್ಳುವುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ಆರ್ಥಿಕ ಶಕ್ತಿಯನ್ನು ಪಡೆಯುತ್ತೀರಿ. ಸಾಲಗಳನ್ನು ತೀರಿಸುತ್ತೀರಿ. ನಿರುದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ.  ಸುಳ್ಳಾಡಿ ಸಿಕ್ಕಿಕೊಳ್ಳಬಹುದು. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಇಂದು ನಿಮಗೆ ಹೆಚ್ಚಿನ ಶಕ್ತಿ ತುಂಬಿದ ದಿನವಾಗಿರದಿರಬಹುದು. ಕೆಲಸದಲ್ಲಿ ಧನಾತ್ಮಕ ಬದಲಾವಣೆಗಳು ನಿಮಗೆ ಪ್ರಯೋಜನಕಾರಿ ಆಗುತ್ತವೆ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ.

ವೃಶ್ಚಿಕ ರಾಶಿ: :ಸಂತಾನದ ಬಯಕೆಯಿಂದ ಮನಸ್ಸಿನಲ್ಲಿ ಉತ್ಸಾಹ ಕಾಣಿಸುವುದು. ಇಂದು ನಿಮಗೆ ಅಂದುಕೊಂಡಂತೆ ಏನೂ ನಡೆಯದು ಎನ್ನುವ ಸತ್ಯದರ್ಶನವಾಗಬಹುದು. ಕ್ರೀಡೆಯಲ್ಲಿ ಮನಸ್ಸುಳ್ಳವರಾಗುವಿರಿ. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ. ವ್ಯವಹಾರದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಮತ್ತು ಉದ್ಯೋಗಗಳಲ್ಲಿ ಬದಲಾವಣೆಗಳು ಉಂಟಾಗಬಹುದು. ಸಿಟ್ಟಿನನ್ನು ಕಡಿಮೆಮಾಡಿಕೊಳ್ಳಲು ಆಗದು. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ನಿಮ್ಮ ಆಲೋಚನೆಗಳನ್ನು ಇತರೊಂದಿಗೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ಪ್ರಯಾಣದಲ್ಲಿ ಆತುರದಿಂದ ಅವಘಡವಾದೀತು. ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.

ಧನು ರಾಶಿ: ನಿಮ್ಮ ಪ್ರಗತಿಗೆ ಪ್ರತಿಭೆಯೇ ಮುಖ್ಯವಾಗಲಿದೆ. ಮನೆಯಲ್ಲಾಗಲಿ ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಮನೆ ನಿರ್ಮಾಣ ಪ್ರಯತ್ನಗಳಲ್ಲಿ ಒಂದು ಹೆಜ್ಜೆ ಮುಂದಿಡುತ್ತೀರಿ. ವ್ಯವಹಾರಗಳು ಭರದಿಂದ ಸಾಗುತ್ತಿವೆ. ಉದ್ಯೋಗಗಳಲ್ಲಿ ಬಡ್ತಿಗಳನ್ನು ಪಡೆಯುತ್ತೀರಿ. ಪ್ರೇಮ ವ್ಯವಹಾರಗಳಲ್ಲಿ ಹೊಂದಾಣಿಕೆ ಬೇಕೆನಿಸುವುದು. ಅದೃಷ್ಟ ನಿಮ್ಮ ಕಡೆ ಇದ್ದರೂ ಅದನ್ನು ಅನುಭವಿಸುವ ಮನೋಭಾವ ಇರಲಿ. ನಿಮ್ಮ ಸಹೋದರರ ಸಹಯೋಗವು ಇಂದು ಆರ್ಥಿಕ ಲಾಭಕ್ಕೆ ಕಾರಣವಾಗುತ್ತದೆ. ಅತ್ಯಂತ ಸಂಭ್ರಮ ಪಡುವಿರಿ. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಮಕ್ಕಳ ಒತ್ತಾಯಕ್ಕೆ ಇಂದು ಪ್ರಯಾಣವನ್ನು ಮಾಡುವಿರಿ.

ಮಕರ ರಾಶಿ: ಹಿತವಾದ ವಾತಾವರಣವನ್ನು ಮಾತಿನಿಂದ ಹಾಳುಮಾಡಿಕೊಳ್ಳುವಿರಿ. ನಿಮಗೆ ನಿಸ್ಸ್ವಾರ್ಥ ಸೇವೆಯಲ್ಲಿ ಸಂತೋಷ ಇರಲಿದೆ. ಅನೇಕ ಶುಭ ಸೂಚನೆಗಳನ್ನು ನೀವು ಗಮನಿಸಿಕೊಂಡಾಗ ನೀವು ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಒಪ್ಪಂದಗಳು ಸುರಕ್ಷಿತವಾಗಿರುತ್ತವೆ. ವ್ಯವಹಾರದಲ್ಲಿ ನಿರೀಕ್ಷಿತ ಲಾಭಗಳು ಇರುತ್ತವೆ. ಕೆಲಸಗಳು ರೋಮಾಂಚನ ರೀತಿಯಿಂದ ಮುಂದುವರಿಯುತ್ತವೆ. ರಾಜಕೀಯ ವಲಯದಲ್ಲಿ ಸೇರುವ ಅನಿವಾರ್ಯತೆ ಇರುತ್ತದೆ. ವಿದ್ಯಾರ್ಥಿಗಳು ಯಶಸ್ಸು ಸಾಧಿಸುವರು. ಹಿರಿಯ ಪ್ರಬುದ್ಧ ವ್ಯಕ್ತಿಯಿಂದ ನೀವು ಮಾರ್ಗದರ್ಶನ ಮತ್ತು ಬೆಂಬಲವನ್ನು ಸ್ವೀಕರಿಸುತ್ತೀರಿ. ಕುಟುಂಬದ ಕಡೆಯಿಂದ ಸಂತೋಷದ ಮಾತುಗಳು ಇರುವುದು. ಹಳೆಯ ವಾಹನದ ಮಾರಾಟ ಮಾಡಿ ಹೊಸ ವಾಹನವನ್ನು ಖರೀದಿಸುವಿರಿ. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.

ಕುಂಭ ರಾಶಿ: ಪೂರ್ವಯೋಜಿತ ಕಾರ್ಯವನ್ನು ಮಾಡಲು ಬೇಕಾದ ಸಿದ್ಧತೆ ನಡೆಸುವಿರಿ. ಆತುರದ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಪ್ರತ್ಯಕ್ಷವಾಗಿ ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ನೀವು ಅರಿತುಕೊಳ್ಳಬೇಕು. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುವು‌. ವ್ಯವಹಾರಗಳು ವಿಸ್ತರಣೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಉದ್ಯೋಗದ ಕೊರತೆ ಮಾಯವಾಗುತ್ತದೆ. ರಾಜಕೀಯ ವಲಯಗಳಲ್ಲಿ ಉತ್ತಮ ಮನ್ನಣೆ ಪಡೆಯಬಹುದು. ಮಾನಸಿಕ ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗಬಹುದು. ಪ್ರೀತಿಪಾತ್ರರ ಜೊತೆ ವಾದಗಳನ್ನು ಹುಟ್ಟುಹಾಕುವ ವಿಷಯಗಳಿಂದ ದೂರವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ಬಂಧುಗಳನ್ನು ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರುವುದು.

ಮೀನ ರಾಶಿ: ಇಂದು ದೈವದ ಅನುಗ್ರಹದ ಅರಿವಾಗಲಿದೆ. ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣವು ವ್ಯಯವಾಗುವ ಸಾಧ್ಯತೆ ಇದೆ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನೂ ನೆಮ್ಮದಿಯನ್ನೂ ನೀಡುತ್ತದೆ. ನಿಮ್ಮ ಯೋಜಿತ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳಿವೆ. ಭೂವ್ಯವಹಾರದ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ವ್ಯವಹಾರಗಳು ಲಾಭದಾಯಕವಾಗಿ ನಡೆಯಲಿವೆ. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹಾಸ್ಯ ಪ್ರಜ್ಞೆಯು ಇತರರಿಗೆ ಬೇಸರ ತರಿಸೀತು. ನಿಜವಾದ ಸಂತೋಷವು ಭೌತಿಕ ಆಸ್ತಿಯಲ್ಲಿ ಕಂಡುಬರುವುದಿಲ್ಲ. ವೃತ್ತಿಯ ಸ್ಥಳದಲ್ಲಿ ಬದಲಾವಣೆಯನ್ನು ಬಯಸುವಿರಿ. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಕಛೇರಿಗೆ ವಿರಾಮವಿದ್ದರೂ ಅನಿರೀಕ್ಷಿತ ಸಭೆಗೆ ಹಾಜಾರಾಗಬೇಕಾದೀತು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ.

Source : TV9 Kannada

Leave a Reply

Your email address will not be published. Required fields are marked *