Horoscope Today 26 February 2025 : ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ.

ಸುದೀರ್ಘಕಾಲದ ವಿದ್ಯೆಯು ನಿಮಗೆ ಫಲವನ್ನು ಕೊಡದೇ ಇರಬಹುದು. ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ಉದ್ವೇಗಕ್ಕೆ ಒಳಗಾಗದೇ ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ಇವು ಈ ದಿನದ ಭವಿಷ್ಯ.

Horoscope Today 26 February 2025 : ಭಯವು ನಿಮ್ಮ ತಪ್ಪುಗಳಿಂದಲೇ ಬರುವುದು

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ, ಬುಧವಾರ ಇಂಗಿತದ ಜ್ಞಾನ, ಅನ್ಯರಿಂದ‌ ಒತ್ತಾಯ, ತಪ್ಪು ಹೆಜ್ಜೆಗಳು ಇವು ಈ ದಿನದ ಭವಿಷ್ಯ.

ನಿತ್ಯ ಪಂಚಾಗ: ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಶ್ರವಣ, ಯೋಗ : ವರಿಯಾನ್, ಕರಣ : ವಣಿಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:46 – 14:14, ಯಮಘಂಡ ಕಾಲ 08:21 – 09:49, ಗುಳಿಕ ಕಾಲ 11:17 – 12:46

ಮೇಷ ರಾಶಿ :

ನೀವು ಸಕ್ರಿಯವಾಗಿ ಇರುವುದು ಇತರರಿಗೆ ಸಹಿಸಲಾಗದ ನೋವು ಕೊಡುವುದು. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಲು ಯಾರಾದರೂ ಪ್ರಯತ್ನಿಸುತ್ತಲೇ ಇರಬಹುದು. ನಿಮ್ಮ ನೌಕರರನ್ನು ಆತ್ಮೀಯವಾಗಿ ನೋಡಿಕೊಳ್ಳುವಿರಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗಳಿಂದ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಏನಾದರೂ ಒಂದು ಅಸಂಬದ್ಧವನ್ನು ಮಾಡುವ ಹಣೆಪಟ್ಟಿ ಬರಬಹುದು. ದುರ್ಬಲರ ಜೊತೆ ಹೋರಾಡಿ ಗೆದ್ದು ಹೆಮ್ಮೆಪಡುವಿರಿ. ನಿಮ್ಮ ಬಗ್ಗೆ ಇರುವ ಭಾವವನ್ನು ನೀವು ಸದಾ ಉಳಿಸಿಕೊಳ್ಳುವ ಯೋಚನೆಯಲ್ಲಿಯೇ ಇರುವಿರಿ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಕಾಣುವುದು. ಹೊಸ ಯೋಜನೆಗಳನ್ನು ನೀವು ಮನಸ್ಸಿನಲ್ಲಿ ಯೋಚಿಸುತ್ತಲೇ ಇರುವಿರಿ. ಇಂದು ಯಾರಿಗಾದರೂ ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು, ಎದುರಿಸುವ ಬಗ್ಗೆ ಸಲಹೆಯನ್ನು ಪಡೆಯಿರಿ.

ವೃಷಭ ರಾಶಿ :

ವಿದೇಶದಲ್ಲಿ ವಾಸಿಸುವವರಿಗೆ ತಮ್ಮ ಬಗ್ಗೆಯೇ ಅಸದ್ಭಾವ ಮೂಡುವುದು. ಸಂಬಂಧಗಳನ್ನು ಕಡಿದುಕೊಂಡ ಭಾವವು ಬರುವುದು. ನಿಮ್ಮ ಬಗ್ಗೆ ಅನಗತ್ಯ ಮಾತುಗಳು ಬರುವುದು. ಸ್ವಯಾರ್ಜಿತ ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಉದ್ಯೋಗದ ಅವಕಾಶವನ್ನು ಬಿಟ್ಟುಬಿಡುವಿರಿ. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಇಂದು ಕೆಲವರ ಮಾತುಗಳು ಉತ್ಸಾಹವನ್ನು ಕಡಿಮೆ ಮಾಡಬಹುದು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಪ್ರಯಾಣದ ಆಯಾಸದಿಂದ ಜ್ವರ, ಆಶಕ್ತತೆಯು ಬರಬಹುದು. ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡಬಹುದು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಡಿಕೊಳ್ಳಿ. ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ.

ಮಿಥುನ ರಾಶಿ :

ಇಂದು ಹಿರಿಯರ ಮಾತನ್ನು ಆಲಿಸಿ ಭವಿಷ್ಯದ ಸುಂದರ ಕ್ಷಣಗಳನ್ನು ನೆನೆದು ಸಂತೋಪಡುವಿರಿ. ಸಂಗಾತಿಯ ಜೊತೆ ಕಳೆದ ದಿನಗಳನ್ನು ಮೆಲುಕು ಹಾಕುವಿರಿ. ಎಲ್ಲರಿಗೂ ಪ್ರೀತಿಯನ್ನು ಹಂಚಿ, ಸಂತೋಷಪಡಿಸುವಿರಿ. ಇಂದು ಮಾಡಲಾಗದ ಕಾರ್ಯವನ್ನು ಮತ್ತೆಂದೋ ಮಾಡುವ ಬದಲು ಅದಕ್ಕಾಗಿ ಇಂದೇ ದಿನವನ್ನು ನಿಶ್ಚಯಿಸಿ. ಹೊಸತನ್ನು ಏನಾದರೂ ಮಾಡುವ ಉದ್ದೇಶ ನಿಮ್ಮಲ್ಲಿರಲಿದೆ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಉತ್ಪನ್ನ ತಯಾರು ಮಾಡುವವರಿಗೆ ಬೇಡಿಕೆ ಅಧಿಕವಾಗಿದ್ದು, ಪೂರೈಸೈಲು ನಿಮಗೆ ಕಷ್ಟವಾಗುವುದು. ಅಧೈರ್ಯಗೊಂಡ ನಿಮಗೆ ಆಪ್ತರು ಧೈರ್ಯ ತುಂಬುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಮಾನಸಿಕ ಒತ್ತಡವು ನಿಮ್ಮ ಕಾರ್ಯವನ್ನು ನಿಧಾನ ಮಾಡುವುದು. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ ನಡೆಸುವ ಸಂದರ್ಭವು ಬರಬಹುದು.

ಕರ್ಕಾಟಕ ರಾಶಿ :

ಅವಲಂಬಿತ ಜನರಿಗೆ ಸರಿಯಾದ ದಿಕ್ಕಿ ತೋರಿಸಿ. ನಿಮ್ಮ ತಂತ್ರಗಳಿಂದ ನಿಮಗೆ ಉಪಯೋಗವಾಗಲಿದೆ. ಸಾಹಿತ್ಯಾಸಕ್ತರಿಗೆ ಉತ್ತಮ ಅವಕಾಶಗಳು ಪ್ರಾಪ್ತವಾಗಿ, ತಮ್ಮ ಜೀವನವನ್ನು ಬದಲಿಸಿಕೊಳ್ಳುವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಕುರುಡಾಗಿ ಮುನ್ನುಗ್ಗುವುದು ಬೇಡ. ವಿವಾಹದ ಮಾತುಕತೆಗೆ ವಿಘ್ನಗಳು ಬರಬಹುದು. ಮೊದಲೇ ನಿಶ್ಚಯಿಸಿದ ಕಾರ್ಯಗಳನ್ನು ಸರಿಯಾಗಿ ಮುಂದುವರಿಸಿ. ಹದಗೆಟ್ಟ ಆರೋಗ್ಯವು ಸುಧಾರಿಸುತ್ತ ಬರುವುದು. ಆಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡುವಿರಿ. ಸಮಯವನ್ನು ಬಹಳ ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ಸಂಗಾತಿಯಿಂದ ನಿಮಗೆ ಅಪರೂಪದ ವಸ್ತುಗಳು ಸಿಗಬಹುದು. ರಾಜಕೀಯವು ನಿಮಗೆ ಇಷ್ಟವಾಗದು. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ನಿಮ್ಮ ಶ್ರೇಯಸ್ಸಿಗೆ ದೈವದ ಕೃಪೆಯನ್ನು ಬೇಡುವಿರಿ.

ಸಿಂಹ ರಾಶಿ :

ನಿಮ್ಮಿಂದ ಸಿಗುವ ಪ್ರೀತಿಯು ಪೂರ್ವಾಗ್ರಹ ಪೀಡಿತವಾಗದಿರಲಿ. ನೀವು ಸ್ನೇಹಿತರ ಜೊತೆ ಕ್ರೀಡೆಯಲ್ಲಿ ಸಮಯವನ್ನು ಕಳೆಯುವಿರಿ. ಹಳೆಯ ನೆನಪುಗಳಿಂದ ಹಿಂದಿರುಗುವುದು ನಿಮಗೆ ಕಷ್ಟವಾಗಬಹುದು. ಸಹೋದರರ ಜೊತೆ ಕಲಹವಾಗಬಹುದು. ಸಂಗಾತಿಯ ಮೌನವು ನಿಮಗೆ ಕಷ್ಟವಾಗಬಹುದು. ಅಧಿಕ ಪ್ರಯಾಣದಿಂದ ಆಯಾಸವಾಗಬಹುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಏನೂ ಬೇಡ ಎನಿಸಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ ಕೆಲಸದಿಂದ ಸಾಧಿಸುವಿರಿ. ಸುರಕ್ಷಿತ ವಾಹನ ಚಾಲನೆಯನ್ನು ಮಾಡಿ. ವಿದ್ಯಾಭ್ಯಾಸವನ್ನು ಮುಗಿಸಿ ಹೊಸ ಉದ್ಯೋಗವನ್ನು ಹುಡುಕುವಿರಿ. ಆಹಾರದ ವ್ಯಾಪಾರದಿಂದ ಲಾಭವಾಗುವುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು.

ಕನ್ಯಾ ರಾಶಿ :

ಮನೆಯ ಕಾರ್ಯಗಳಿಗೆ ಸಂಪನ್ಮೂಲದ ಕೊರತೆ ಕಾಣಿಸುವುದು. ಇಂದು ಕುಟುಂಬದ ಸದ್ಯರ ಅಪರೂಪದ ಭೇಟಿಯಾಗಲಿದೆ. ನಿಮ್ಮಿಂದ ಆಗದ ಕಾರ್ಯವನ್ನು ನೀವು ಇತರರ ಜೊತೆ ಸೇರಿ ಮಾಡಿಕೊಳ್ಳುವಿರಿ. ನಿಮ್ಮ ಉದ್ಯಮದ ಪ್ರಗತಿಯು ನಿಮಗೆ ಖುಷಿಕೊಡುವುದು. ಹಳೆಯ ಹೂಡಿಕೆಗೆ ಪುನಃ ನವೀಕರಣ ಮಾಡಿಕೊಳ್ಳುವಿರಿ. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ನಿಮ್ಮ ಸಾಹಸಕ್ಕೆ ಯಾರ ಪ್ರೇರಣೆಯೂ ಸಿಗಲಿಕ್ಕಿಲ್ಲ. ಭೂಮಿಯ ವ್ಯವಹಾರದಿಂದ ಅಲ್ಪ ಹಣವು ನಷ್ಟವಾಗುವುದು. ಮನೆಯ ವಾತಾವರಣವು ನಿಮಗೆ ಹಿತವೆನಿಸಲಿದ್ದು ಮನೆಯಿಂದ ದೂರವಿರಲು ಕಷ್ಟವಾಗುವುದು. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಯಾರನ್ನೋ ನಂಬಿ ಹಣವ್ಯವಹಾರವನ್ನು ಮಾಡಿ ಮೋಸ ಹೋಗುವಿರಿ. ವಿದ್ಯಾಭ್ಯಾಸದ ಹಿನ್ನಡೆಯ ಕಾರಣ ಎಲ್ಲರಿಂದ ಅವಮಾನವಾಗಬಹುದು. ಕೃಷಿಯನ್ನು ಆದಾಯದ ಮೂಲವಾಗಿಸಿಕೊಳ್ಳಬಹುದು. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು.

ತುಲಾ ರಾಶಿ :

ನಿಮ್ಮ ಚೌಕಟ್ಟು ದಾಟಿ ಏನನ್ನೂ ಮಾಡುವುದೂ ಬೇಡ. ತಪ್ಪೆನಿಸಿದರೂ ನಿಮ್ಮ ಕಾರ್ಯವನ್ನು ಮಾಡುತ್ತ ಸುಮ್ಮನಿರಿ. ನಿಮಗೆ ಇಂದು ಸಿಗುವ ಸೂಚನೆಗಳ ಆಧಾರದ ಮೇಲೆ ಈ ದಿನವನ್ನು ನಿರ್ಧರಿಸಿಕೊಂಡು ಕೆಲಸವನ್ನು ಮಾಡುವಿರಿ. ಮಾರಾಟದ ವಿಭಾಗದಲ್ಲಿ ಇರುವವರಿಗೆ ಲಾಭವನ್ನು ಹೆಚ್ಚಿಸಿದ ಕಾರಣಕ್ಕೆ ಪ್ರಶಂಸೆಯು ಸಿಗಲಿದೆ. ಯಾವ ವಿದ್ಯೆಯೂ ಕರಗತ ಆಗದ ಹೊರತೂ ಧೈರ್ಯವನ್ನು ಕೊಡದು. ನಿಮ್ಮನ್ನು ಅವ್ಯವಹಾರಕ್ಕೆ ಸಹೋದ್ಯೋಗಿಗಳು ಪ್ರೇರಿಸಬಹುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಬಹಳ ದಿನಗಳಿಂದ ಮನೆಗೆ ಬಂಧುಗಳ ಆಗಮನವು ಆಗದೇ ಇರುವುದು ಬೇಸರತಂದೀತು. ವಿದ್ಯಾರ್ಥಿಗಳು ಅಧ್ಯಯನವನ್ನು ಚುರುಕು ಮಾಡುವುದು ಒಳ್ಳೆಯದು. ಹಿತಶತ್ರುಗಳನ್ನೇ ನಿಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುವಿರಿ. ನೀವೇ ಸಾಯಬೇಕು, ಸ್ವರ್ಗಕಾಣಬೇಕು. ರಾಜಕೀಯದವರಿಗೆ ಬೆಂಬಲಿಗರಿಂದ ಒತ್ತಡಗಳು ಬರಬಹುದು. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು.

ವೃಶ್ಚಿಕ ರಾಶಿ :

ನಿಮ್ಮ ಇಂಗಿತವನ್ನು ಇತರರು ಅರ್ಥಮಾಡಿಕೊಳ್ಳುವುದು ಕಷ್ಟ. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳಲಾರಿರಿ. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗವು ಸಿಗಬಹುದು. ಮೂರ್ಖತನದಿಂದ ಎಲ್ಲವನ್ನೂ ಹಾಳುಮಾಡಿಕೊಳ್ಳಬಹುದು. ಸಾಲವನ್ನು ಪಡೆಯಲು ನಿಮಗೆ ಸರಿಯಾದ ಆದಾಯ ಮೂಲದ ಅವಶ್ಯಕತೆ ಇರುವುದು. ಪೋಷಕರ ಜೊತೆ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಪರೋಪಕಾರ ಗುಣವು ನಿಮ್ಮಲ್ಲಿ ಇಂದು ಜಾಗರೂಕವಾಗಿ ಇರುವುದು.

ಧನು ರಾಶಿ :

ಸುದೀರ್ಘಕಾಲದ ವಿದ್ಯೆಯು ನಿಮಗೆ ಫಲವನ್ನು ಕೊಡದೇ ಇರಬಹುದು. ವಿವಾಹವಾಗುವ ಕುರಿತು ಬಹಳ ಗೊಂದಲವು ತಲೆಯನ್ನು ತುಂಬಿರಲಿದೆ.‌ ಸಂಗಾತಿಯ ಜೊತೆ ಹೊರಗೆ ಸುತ್ತಾಡುವ ಬಯಕೆಯಾಗುವುದು. ವಾಹನ ಖರೀದಿಯ ಬಗ್ಗೆ ನಿಮಗೆ ಚಿಂತೆಯಾಗಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ವಿಚಾರದಲ್ಲಿ ತಜ್ಞರ ಸಂಪರ್ಕ ಮಾಡುವುದು ಉತ್ತಮ. ನಿಮ್ಮ ಇಂದಿನ ಕೆಲಸವನ್ನು ಪೂರ್ಣ ಮಾಡಲು ಬಹಳ ಆತುರದಿಂದ ಇರುವಿರಿ. ವೃತ್ತಿಯ ಜೊತೆ ಉನ್ನತ ಶಿಕ್ಷಣವನ್ನೂ ಮಾಡುವಿರಿ. ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಬಿಟ್ಟು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವರು. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹವು ಉಂಟಾಗಬಹುದು. ಮಾನಸಿಕವಾಗಿ ನೀವು ಕುಗ್ಗಬಹುದು. ನಡೆಯುವ ಹಾದಿಯನ್ನು ಯಾರೂ ಹೇಳಬಹುದು, ಆದರೆ ಅಲ್ಲಿಸಿಗುವ ಕಲ್ಲುಮುಳ್ಳುಗಳು ನಮ್ಮದೇ. ನಿಮ್ಮ ಸ್ಥಾನಕ್ಕೆ ಗೌರವವಿಲ್ಲದಂತೆ ತೋರಬಹುದು. ನಿಮ್ಮ ಸೋಲನ್ನು ಸುಲಭಕ್ಕೆ ಒಪ್ಪಿಕೊಳ್ಳಲಾರಿರಿ. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ.

ಮಕರ ರಾಶಿ :

ಒತ್ತಾಯದಿಂದ ಆಗುವ ಕಾರ್ಯವು ಅಂದವನ್ನು ಹಾಳುಮಾಡಬಹುದು. ಆಮದು ವ್ಯವಹಾರದಲ್ಲಿ ಅಡೆತಡೆಗಳು ಬರಬಬಹುದು. ಭಾವೈಕ್ಯವನ್ನು ಬೆಳೆಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಯಾವುದನ್ನೂ ಪರಿಕ್ಷಿಸಿಯೇ ಖರೀದಿಸಿ. ಮೋಸಕ್ಕೆ ಅನೇಕ ಮುಖಗಳಿವೆ. ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸುವುದು ನಿಮಗೆ ಇಷ್ಟವಾಗದು. ಇದಕ್ಕಾಗಿ ಬೇರೆ ಮಾರ್ಗವನ್ನೂ ಅನ್ವೇಷಿಸುವಿರಿ. ನಿಮ್ಮ ಸಂಗಾತಿಯ ಆರೋಗ್ಯವು ಕ್ಷೀಣಸಲಿದ್ದು ಚಿಂತೆಯೂ ಕಾಡುವುದು. ಇಂದು ಕಾರ್ಯದ ಸ್ಥಳದಲ್ಲಿ ನಿಮ್ಮ ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡಿ ನಿಮ್ಮ ಕೆಲಸವು ಪೂರ್ಣವಾಗದಂತೆ ನೋಡಿಕೊಳ್ಳುವರು. ಬೇರೆಯವರನ್ನು ನಿಮ್ಮ ಮೇಲೆ ಆರೋಪಿಸಿಕೊಂಡಾಗ ಸಮಸ್ಯೆಗಳು ಅಧಿಕ. ಯಾರಾದರೂ ನಿಮ್ಮ ವ್ಯಕ್ತಿತ್ವವನ್ನು ತೂಗಿ ಅಳೆಯಬಹುದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಕೂಡಿಟ್ಟ ಹಣದಿಂದ ಕೆಲವು ಪ್ರಯೋಜನಗಳು ನಿಮಗೆ ಆಗಲಿವೆ.

ಕುಂಭ ರಾಶಿ :

ಅಂತರಂಗದ ಶುದ್ಧವಾಗದೇ ಬಹಿರಂಗ ಶುಚಿಯಾಗದು. ನಿಮಗೆ ಶುಭ ಸುದ್ದಿಯು ಇರುವುದು. ಇಂದು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ನಿಮ್ಮ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ಚಿಂತಿಸಬೇಕಾಗುವುದು. ನೀವು ಇತರರ ಮನೋಭಾವಕ್ಕೆ ಸ್ಪಂದಿಸಲು ಹೆಚ್ಚು ಉತ್ಸುಕತೆ ಇರಲಿದೆ. ಇಂದು ನಿಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ವಾರ್ತೆಯನ್ನು ಕೇಳುವಿರಿ. ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ. ನೀವು ಇಂದು ಯಾರ ಜೊತೆಗದರೂ ಹಣವನ್ನು ವಿನಿಮಯ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಸರಿಯಾದ ಲೆಕ್ಕಾಚಾರವನ್ನು ಇಟ್ಟುಕೊಳ್ಳಿ. ನಿರ್ಬಿಡೆಯಿಂದ ವ್ಯವಹರಿಸಲು ಕೆಲವನ್ನು ಬಿಡಬೇಕಾಗುವುದು. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು. ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ.

ಮೀನ ರಾಶಿ :

ನಿಮ್ಮ ಔದಾಸೀನ್ಯವೇ ಅನೇಕ ತಪ್ಪು ಹೆಜ್ಜೆಗಳಿಗೆ ಕಾರಣ. ಭವಿಷ್ಯಕ್ಕೆ ಸಂಬಂಧಿಸಿ ನಿರ್ಧಾರವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿರಾಸಕ್ತಿಯಿಂದ ಮಾಡಿದ್ದು ನಿಷ್ಫಲವೇ. ನಿಮ್ಮ ಮಗುವನ್ನು ಹೊರಗೆ ಓದಲು ಕಳುಹಿಸಲು ಬಯಸುವಿರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಮಕ್ಕಳೆಷ್ಟೇ ಇದ್ದರೂ ನೀವು ಜಾಗರೂಕತೆ ಮಾಡಬೇಕಾಗುವುದು. ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ಉದ್ವೇಗಕ್ಕೆ ಒಳಗಾಗದೇ ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ನಿಷ್ಕಪಟವು ನಿರಾತಂಕ ಸ್ಥಿತಿಯನ್ನು ಕೊಡುವುದು. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಇಂದು ನೀವು ನಿಮ್ಮ ಸಂಬಂಧಿಕರೊಬ್ಬರಿಗೆ ಸ್ವಲ್ಪ ಹಣವನ್ನು ವ್ಯವಸ್ಥೆ ಮಾಡಬೇಕಾಗಬಹುದು. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು.

Source: https://tv9kannada.com/horoscope/horoscope-today-february-26-your-mistakes-will-create-fear-in-you-daily-horoscope-in-kannada-sct-983448.html

Leave a Reply

Your email address will not be published. Required fields are marked *