Horoscope Today 27 April: ಈ ರಾಶಿಯವರಿಗೆ ಶುಭ ಸಮಾಚಾರದಿಂದ ಮನಸ್ಸು ಅರಳುವುದು.

Horoscope Today 27 April: ಈ ರಾಶಿಯವರಿಗೆ ಸಂಗಾತಿಯಿಂದ ನಿಂದನೆ ಭೀತಿ, ತಪ್ಪಿಸಿಕೊಳ್ಳುಲು ದಾರಿಯ ಹುಡುಕಾಟ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶಿ/ ಅಮಾವಾಸ್ಯಾ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ – 06:13 am, ಸೂರ್ಯಾಸ್ತ – 06: 47 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:13 – 18:47, ಯಮಘಂಡ ಕಾಲ 12:30 – 14:05, ಗುಳಿಕ ಕಾಲ 15:39 – 17:13

ಮೇಷ ರಾಶಿ: ಹಣವನ್ನು ಉಳಿಸಿಕೊಳ್ಳಲು ಹೂಡಿಕೆಯ ಅನಿವಾರ್ಯ. ನೀವು ಎಲ್ಲ ಕಾರ್ಯವನ್ನು ಪಾರದರ್ಶಕತೆಯಿಂದ ಇರಲು ಬಯಸುವಿರಿ.‌ ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಅಪ್ರಚೋದಿತ ಮಾತುಗಳಿಂದಬ ಗೆಲವು. ಉತ್ತಮವಾದ ಮಾರ್ಗದ ಅನ್ವೇಷಣೆಯಲ್ಲಿ ಇರುವಿರಿ. ಮುಖ್ಯಸ್ಥರನ್ನು ಖುಷಿಪಡಿಸಲು ಧಾರಾಳ ಖರ್ಚು ಮಾಡಬಹುದು. ಹಳೆಯ ಕೌಟುಂಬಿಕ ಸಮಸ್ಯೆಗಳಿಗೆ ನ್ಯಾಯ ವ್ಯವಸ್ಥೆಯ ದಾರಿ ಉಪಯುಕ್ತವಾಗಬಹುದು. ಇತರರ ಅಭಿಪ್ರಾಯವನ್ನೂ ಪರಿಗಣಿಸಿ. ನಿಮ್ಮ ಕೆಲಸದ ಪರಿಣತಿಯಿಂದ ಜವಾಬ್ದಾರಿಗಳು ಹೆಚ್ಚುವುದು. ಹಣದ ಹರಿವು ನಿಮ್ಮ ಉತ್ಸಾಹವನ್ನು ಕುಂಠಿತಗೊಳಿಸದು. ಹತ್ತಿರವಿದ್ದಾಗ ಮಾತ್ರ ಗೊತ್ತಾಗುತ್ತದೆ. ನಿಮ್ಮ ಯೋಗ್ಯತೆ ತಕ್ಕ ಕೆಲಸವು ಸಿಗಲಿದ್ದು ಇನ್ನೊಬ್ಬರನ್ನು ಹೋಲಿಕೆ ಮಾಡುತ್ತ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು.

ವೃಷಭ ರಾಶಿ: ವಿಶ್ವಾಸಾರ್ಹ ವ್ಯವಹಾರದಿಂದ ಅಧಿಕ ಲಾಭ. ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ತಂದೆಯಿಂದ ಧನವು ವಿಳಂಬವಾಗಿ ಬರಬಹುದು. ಅನ್ಯರ ಕುಮ್ಮಕ್ಕಿನಿಂದ ನ್ಯಾಯಾಲಯದ ಅಲೆದಾಟವನ್ನು ಮಾಡಿ ಹಣವನ್ನು ವ್ಯರ್ಥಮಾಡಿಕೊಳ್ಳಬೇಡಿ. ತಂದೆಯ ಆರೋಗ್ಯದ ಬಗ್ಗೆ ನಿಮ್ಮ ಅಧಿಕಾರದ ಗರ್ವವನ್ನು ಪಕ್ಕಕ್ಕಿರಿಸಿ. ಸಂಬಂಧ ಬಲವಾಗಿಸಲು ಪ್ರೀತಿಯವರಿಗೆ ಸಮಯ ಮೀಸಲಿಡಿ. ಕೆಲಸದ ಒತ್ತಡದಲ್ಲಿ ಸಹಜವಾಗಿ ದೂಡಲ್ಪಡುವಿರಿ. ಹೊಸದಾಗಿ ಪ್ರೀತಿಯನ್ನು ವ್ಯಕ್ತಪಡಿಸಿ. ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ಸಿಟ್ಟನ್ನು ಅಲ್ಪ ಸಮಯದಲ್ಲಿ ಶಮನ ಮಾಡಿಕೊಂಡು ಯಥಾಸ್ಥಿತಿಗೆ ಬರುವಿರಿ. ಹಳೆಯದನ್ನು ಹೊಸತನ್ನಾಗಿ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಸಮಾರಂಭಗಳಿಗೆ ಆಹ್ವಾನ ಸಿಕ್ಕಿ ಸಂತಸ. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ಸಹೋದರರ‌ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ: ನಿಮ್ಮ ಕೆಲಸವೇ ನಿಮಗೆ ಹೆಮ್ಮೆ ತರುವುದು. ಇಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೇರಡ ಕಡೆ ಹೋಗುವುದು ಅನಿವಾರ್ಯ ಆಗಬಹುದು. ತಂದೆಯಿಂದ ಯಾವುದೋ ಕಾರ್ಯಕ್ಕೆ ಧನವನ್ನು ನಿರೀಕ್ಷಿಸುವಿರಿ. ಎಂತಹ ಆರೋಪವನ್ನೂ ಗೆಲ್ಲುವುದು ನಿಮಗೆ ಗೊತ್ತಿದೆ. ಉದ್ಯೋಗದಲ್ಲಿ ತೊಂದರೆ ಬಂದರೂ ನಿರೀಕ್ಷೆಯ ಬೆಳಕು ಕಾಣುವಿರಿ. ಸುತ್ತಲಿರುವ ಜನರಿಂದ ದೂರವಿರಿ, ಅವರ ಮಾತುಗಳಿಗೆ ಕಿವಿಗೊಡಬೇಡಿ. ಮೋಸದ ಆಟದಿಂದ ಎಚ್ಚರಿಕೆಯಿಂದಿರಿ. ಭವಿಷ್ಯದ ಚಿಂತೆ ಖಿನ್ನತೆಗೆ ದಾರಿ ಮಾಡಬಹುದು. ಸಾಮಾಜಿಕ ಕಾರ್ಯದಿಂದ ಗೌರವವನ್ನು ಪಡೆಯಲಿದ್ದೀರಿ. ಸಹೋದರ ನಡುವೆ ನಡೆಯುತ್ತಿದ್ದ ಶೀಲತಲ ಸಮರವು ಇಂದು ಸ್ಫೋಟವಾಗಬಹುದು. ಮಧ್ಯವರ್ತಿಗಳ ಸಹಾಯದಿಂದ ಶಾಂತವಾಗಲಿದೆ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು.

ಕರ್ಕಾಟಕ ರಾಶಿ: ಏಳು ಬೀಳುಗಳು ಹೊಸತಲ್ಲದಿದ್ದರೂ ಒಮ್ಮೊಮ್ಮೆ ಆತಂಕ ನುಸುಳುವುದು. ಇಂದು ನೀವು ಕಛೇರಿಯ ಕಾರಣಕ್ಕೆ ಪರ ಊರಿಗೆ ಹೋಗಬೇಕಾಗಿ ಬರಬಹುದು. ಹಸಿವಿನಿಂದ ನಿಮಗೆ ಇಂದು ಕಷ್ಟವಾಗುವುದು. ಭೂಮಿ ದಾಖಲೆಗಳು ಬದಲಾಗಬಹುದು. ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಹಳೆಯ ವ್ಯಕ್ತಿಯೊಂದಿಗೆ ಮತ್ತೆ ಸಂಪರ್ಕ ಆಗಬಹುದು. ಈ ಬದಲಾವಣೆ ನಿಮ್ಮ ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಅದೃಷ್ಟ ಸಹಾಯ ಮಾಡಲಿದೆ. ಆದರೆ ಸ್ವಲ್ಪ ಪ್ರಯತ್ನವೂ ಬೇಕಾಗುತ್ತದೆ. ಹೊಸ ವ್ಯಕ್ತಿಗಳ ಭೇಟಿಯಿಂದ ಆರ್ಥಿಕ ಸಹಾಯದ ಹಲವು ಯೋಜನೆಗಳು ಮುನ್ನಡೆಯುತ್ತವೆ. ವ್ಯಾಪರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ವಿಘ್ನನಿವಾರಕನಿಗೆ ನಮಸಿ ಕಾರ್ಯವನ್ನು ಆರಂಭಿಸಿ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ನೀವು ಇಂದು ಯಾವುದೇ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡಲಾರಿರಿ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ರಾಜಕೀಯ ಹುಚ್ಚುತನ ಬೇಡ.

ಸಿಂಹ ರಾಶಿ: ನಿಮ್ಮ ಗುರಿಗೆ ಸಾಧನವಾದ ಎಲ್ಲರನ್ನೂ ಗೌರವಿಸುವಿರಿ. ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎನಿಸುವುದು. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ. ನಿಮ್ಮ ಕಷ್ಟಕ್ಕೆ ಆದವರೇ ಜೊತೆಯಲ್ಲಿ ಇರುವರು. ಸಂಬಂಧಗಳಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇತರರ ನಂಬಿಕೆಗೆ ಕಾರಣವಾಗುತ್ತದೆ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಕೊಡುವುದನ್ನು ಮರೆಯದಿರಿ. ಒತ್ತಡ ಹೆಚ್ಚಾದಾಗ ವಿಶ್ರಾಂತಿಯೇ ಮದ್ದು. ಪರಸ್ಥಳವಾಸವು ಎದುರಾಗಬಹುದು. ರಾಜಕಾರಣವನ್ನು ವೃತ್ತಿಯಾಗಿ ನೀವು ಸ್ವೀಕರಿಸುವ ಸಾಧ್ಯತೆ ಇದೆ. ಹೊಸ ವಾಹನದ ಖರೀದಿಯಿಂದ ಸಂತೋಷವಾಗುವುದು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮ ಮೌನವು ಕುಟುಂಬದಲ್ಲಿ ಭಯವನ್ನು ಉಂಟುಮಾಡೀತು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ.

ಕನ್ಯಾ ರಾಶಿ: ಯಾವುದನ್ನೂ ಪೂರ್ಣಮನಸ್ಸಿನಿಂದ ಮಾಡಲಾರಿರಿ. ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಮರ್ಯಾದೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಹಣದ ವ್ಯವಹಾರ ಶುಭವಾಗುವ ದಿನ. ನಿಮ್ಮ ಮಾತುಗಳು ಗುಣಮಟ್ಟದ್ದಾಗಿರಲಿ.‌ ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮ ನಿಖರತೆ ನೀಡುತ್ತದೆ. ಸ್ನೇಹಿತರಿಂದ ವೃತ್ತಿಯಲ್ಲಿ ಬೆಂಬಲ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ಇಂದು ನಿಮ್ಮನ್ನು ಕಂಡರೆ ಸಮಸ್ಯೆಗಳು ಬಂದಂತೆ ಕಾಣಬಹುದು. ತಾಳ್ಮೆ ಬೇಕು. ಸಮಯವು ಎಲ್ಲವನ್ನೂ ಸರಿ ಮಾಡುತ್ತದೆ. ನೀವಾಗಿಯೇ ಕೆರೆದು ಮಾಯದ ಹುಣ್ಣನ್ನು ಮಾಡಿಕೊಳ್ಳಬೇಡಿ. ಕೇವಲ‌ ಕೊರತೆಯನ್ನು ನೀವು ಹೆಚ್ಚು ಚಿಂತಿಸುವಿರಿ. ವ್ಯಾಪರದ ನಷ್ಟಕ್ಕೆ ಸಮಸ್ತ ತಂತ್ರವನ್ನು ಮಾಡುವಿರಿ. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧಾನ ಇರಲಿದೆ.

ತುಲಾ ರಾಶಿ: ಹಲವು ಕಾರ್ಯಗಳ ಕಡೆ ಗಮನ ಹಾಕುವುದಕ್ಕಿಂತ ಒಂದೇಕಡೆ ಇರಿಸುವುದು ಸೂಕ್ತ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಬಹುದು. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡಲಿದ್ದೀರಿ. ನಿಮ್ಮ ಸುತ್ತಮುತ್ತಲಿನವರ ಪ್ರಗತಿ ನಿಮಗೆ ಆಹ್ಲಾದವಾಗದು. ನಿಮ್ಮ ಕಲ್ಪನೆಯ ಪ್ರಪಂಚದಿಂದ ಹೊರಬರಲು ನಿಮಗೆ ನುರಿತ ವ್ಯಕ್ತಿಯ ಮಾರ್ಗದರ್ಶನ ಅಗತ್ಯವಿದೆ. ಪ್ರೀತಿಯವರಿಂದ ಸಂಕಷ್ಟ ಉದಯಿಸಬಹುದು. ಅದಕ್ಕೆ ಸಂಪೂರ್ಣ ಗಮನ ಹರಿಸಿ. ಮನಸ್ಸಿಗೆ ಶಾಂತಿ ನೀಡುವ ವಿಷಯವೊಂದು ಆಗಬಹುದು. ಇಂದು ನಿಮ್ಮ ಪರೀಕ್ಷಿಯೆ ಕಾಲವಾಗಿರುವುದು. ಹಣವನ್ನು ಬಹಳ ಗೌಪ್ಯವಾಗಿ ಇಟ್ಟುಕೊಳ್ಳುವಿರಿ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು.

ವೃಶ್ಚಿಕ ರಾಶಿ: ಅಧ್ಯಯನ ಹಾಗೂ ಉದ್ಯೋಗ ಎರಡೂ ಕಷ್ಟ. ಮುಂದೆ ಆಗಬೇಕಾದ ಕೆಲವು ಕಾರ್ಯಗಳ ನಿರ್ಧಾರವು ಮಾಡುವಿರಿ. ದೂರಪ್ರಯಾಣವು ನಿಮಗೆ ಕಷ್ಟವಾಗಬಹುದು. ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ರಚನಾತ್ಮಕ ನಿಮ್ಮ ಶೈಲಿ ಪ್ರೇರಣೆಯುಂಟುಮಾಡುತ್ತದೆ. ಹೊಸ ಯೋಜನೆಗಳಲ್ಲಿ ಶಕ್ತಿ ಹೂಡಲು ಇದು ಸೂಕ್ತ ಸಮಯ. ನೀವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಕ್ಷಮೆ ಕೇಳಿ. ಸತಿ ತಪ್ಪುಗಳ ಗೊಂದಲಕ್ಕೆ ಸಿಲುಕುವಿರಿ. ಇದು ನಿಮಗೆ ಸಮಾಧಾನ ಮತ್ತು ಸ್ವೀಕಾರ ನೀಡುತ್ತದೆ. ಉದ್ದೇಶಪೂರ್ಣ ಕೆಲಸಗಳಲ್ಲಿ ತೊಡಗಿದರೆ ಧೈರ್ಯ ಹೆಚ್ಚಾಗುತ್ತದೆ. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಬಂಧುಗಳ ಆಗಮನ ನಿಮಗೆ ಕಿರಿಕಿರಿಯನ್ನು ತರಬಹುದು. ಕರ್ಮಗಳು ನ್ಯಾಯೋಚಿತವಾಗಿ ಇರಲಿ. ನಿಮ್ಮ ವರ್ತನೆಗಳು ತಂದೆಯ ಅಸಮಾಧಾನಕ್ಕೆ ಕಾರಣವಾಗಬಹುದು. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು.

ಧನು ರಾಶಿ: ವ್ಯಾಪಾರದಲ್ಲಿ ಪೈಪೋಟಿಯಿಂದ ಆತಂಕ. ಹೂಡಕೆಯಿಂದ ನಷ್ಟ. ಯಾವುದೇ ಒಪ್ಪಂದವನ್ನು ಮಾಡುವಾಗಲೂ ಅನುಭವಿಗಳ ಜೊತೆ ಚರ್ಚಿಸಿ. ಭೂಮಿಯ ವ್ಯವಹಾರವು ನಿಮಗೆ ಲಾಭವನ್ನು ತರುವುದು. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ನಿಮ್ಮ ನಿಷ್ಠೆಯಿಂದ ಬಂಧುಗಳು ಬೆಂಬಲ ನೀಡುತ್ತಾರೆ. ಅವರಿಂದ ಪ್ರೀತಿ ಹಾಗೂ ಸಹಾಯ ದೊರೆಯಲಿದೆ. ನಿಜವಾಗಿಯೂ ನೀವು ಬೆಲೆಬಾಳುವವರಾಗಿದ್ದೀರಿ ಎಂಬ ಅನುಭವ ಬರುವುದು. ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಇಂದಿನ ಹಗಲು ನಿಮಗೆ ನಿಧಾನವಾಗಿ ಇರುವಂತೆ ಅನ್ನಿಸಬಹುದು. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು.

ಮಕರ ರಾಶಿ: ಭೂಮಿಗೆ ಹೂಡಿದ ಹಣವನ್ನು ಪಡೆಯುವ ಸಂದರ್ಭ ಬರಬಹುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾಗುವುದು. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಕೌಶಲ್ಯಕ್ಕೆ ಯೋಗ್ಯವಾದ ಸ್ಥಳ ಸಿಗುವುದು. ಗಡುವಿಗೆ ಮುನ್ನ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ನಿಮ್ಮ ಕನಸುಗಳೇ ನಿಮ್ಮ ಮಾರ್ಗದರ್ಶಿ. ದೊಡ್ಡ ಯೋಜನೆಗಳಿಗೆ ತಕ್ಷಣ ಒಪ್ಪಿಗೆ ಕೊಡುವುದಿಲ್ಲ. ಪ್ರಸ್ತುತದ ಸ್ಥಿತಿಯನ್ನು ವೀಕ್ಷಿಸಿ ಮುನ್ನಡೆಯುವುದು ಶ್ರೇಯಸ್ಕರ. ಸಮಯವನ್ನು ನಿರೀಕ್ಷಿಸುವುದು ಒಳ್ಳೆಯದು. ಕಾಲವು ಎಲ್ಲವನ್ನೂ ಒದಗಿಸಿಕೊಡುತ್ತದೆ. ಹೂಡಿಕೆಯಲ್ಲಿ ಸರಿಯಾದ ಸಮಯವನ್ನು ನೋಡಿಕೊಳ್ಳಿ. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ವ್ಯಾಪರದಲ್ಲಿ ಲಾಭವಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಸಂಗಾತಿಯ ಮಾತುಗಳು ನಿಮಗೆ ಖುಷಿ ಕೊಟ್ಟೀತು.

ಕುಂಭ ರಾಶಿ: ನಿಮ್ಮ ತೊಂದರೆಗಳಿಗೆ ದೈವದ ಆಶ್ರಯ ಪಡೆಯುವುದು ಉತ್ತಮ. ನೀವು ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ಅರಿತುಕೊಳ್ಳಲಾಗದು. ಕುಟುಂಬದವರೇ ಆದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಕಳೆದ ವಸ್ತುಗಳ ಬಗ್ಗೆ ಅಧಿಕ ಚಿಂತೆ ಮಾಡುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಯಶಸ್ಸಿಲ್ಲದ ಯೋಜನೆಯ ನೆನೆಪು ದಣಿವನ್ನು ಉಂಟುಮಾಡಬಹುದು. ನಿಮ್ಮ ಶಕ್ತಿಯನ್ನು ಹೊಸದಾಗಿ ಪ್ರೇರಣೆಯಾದ ಕೆಲಸಗಳಿಗೆ ತಿರುಗಿಸಿ. ಮಹಿಳೆಯರು ನಕಾರಾತ್ಮಕ ಟೀಕೆಗಳಿಂದ ದೂರವಿರುವುದು ಉತ್ತಮ. ನಿಮ್ಮ ಪ್ರತಿಭೆಯ ಅರಿವಿರುವ ವ್ಯಕ್ತಿಯ ಭೇಟಿಯಿಂದ ಖುಷಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಬಗ್ಗೆ ಎಚ್ಚರಿಕೆ ಇರಲಿ. ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ. ಕಾಲು ಕೆರೆದುಕೊಂಡು ಯಾರೊಂದಿಗೂ ಜಗಳವಾಡಬೇಡಿ. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಹೂಡಿಕೆಯನ್ನು ಒತ್ತಾಯದ ಕಾರಣಕ್ಕೆ ಮಾಡುವಿರಿ.

ಮೀನ ರಾಶಿ: ಒಂದರ ಅಂತ್ಯ ಇನ್ನೊಂದರ ಆರಂಭವಾಗಲಿದೆ. ನಿಶ್ಚಿಂತೆಯೆಂದು ಅನ್ನಿಸಿದಿದ್ದರೂ ನೆಮ್ಮದಿ ಅನುಭವಕ್ಕೆ ಬರಲಿದೆ. ಇಂದು ನಿಮ್ಮ ಮನಸ್ಸಿಗೆ ಶಾಂತಿಯೂ ನೆಮ್ಮದಿಯೂ ಇರುತ್ತದೆ. ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ಉದ್ಯೋಗದಲ್ಲಿ ಅಡಚಣೆಗಳಿರಬಹುದು, ಆದರೆ ಇವು ತಾತ್ಕಾಲಿಕ. ನಿಮ್ಮ ಸುತ್ತಲಿರುವ ಜನರಿಂದ ದೂರವಿರುವುದು ಒಳಿತು. ಮೋಸದ ಕೆಲಸಗಳಿಂದ ಎಚ್ಚರಿಕೆಯಿಂದಿರಿ. ಭವಿಷ್ಯದ ಬಗ್ಗೆ ಚಿಂತೆಯಿದ್ದರೆ, ಪ್ರಬುದ್ಧರ ಸಲಹೆ ಹಿತಕರ. ಅಪಾಯಕಾರಿ ಹೂಡಿಕೆಗಳನ್ನು ತಕ್ಷಣವೇ ಬಿಟ್ಟುಬಿಡಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಧಾರ್ಮಿಕ ವಿಚಾರದಲ್ಲಿ ಭಕ್ತಿ ಇರದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ.

Source : TV9 Kannada

Leave a Reply

Your email address will not be published. Required fields are marked *