Horoscope Today 29 May: ಈ ರಾಶಿಯರು ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಅಲ್ಪ ಲಾಭದ ನಿರೀಕ್ಷೆಯನ್ನು ಮಾಡಬಹುದು.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ, ಗುರುವಾರ ಉತ್ತರಕ್ಕೆ ಪ್ರತ್ಯುತ್ತರ, ಮಾರ್ಯಾದಗೆ ಭಯ, ಅಧಿಕಾರದಲ್ಲಿ ತೃಪ್ತಿ, ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ವ್ಯವಸ್ಥಿತ ಕೆಲಸದಿಂದ ಬೆಲೆ ಸಿಗಲಿದೆ. ನಾಯಕರಾಗಲು ಸಂಚು ಇವೆಲ್ಲ ಇಂದಿನ ವಿಶೇಷ.

Horoscope Today 29 May: ಈ ರಾಶಿಯವರಿಗೆ ಕೇಳಿಸಿಕೊಳ್ಳುವ ವ್ಯವಧಾನ ಕಡಿಮೆ

ಮೇ 29, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧೃತಿ, ಕರಣ : ಬಾಲವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:30 – 14:07, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:54 – 12:30.

ಮೇಷ ರಾಶಿ: ನಿಮ್ಮಿಂದ ಅಪರಿಚಿತರಿಗೆ ಆರ್ಥಿಕ ಲಾಭವಾಗಬಹುದು. ಇಂದಿನ‌ ನಿಮ್ಮ ಮಾತು ಅಲ್ಪವಿದ್ದರೂ ಖಾರವಾಗಿರುವುದು. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಅಲ್ಪ ಲಾಭದ ನಿರೀಕ್ಷೆಯನ್ನು ಮಾಡಬಹುದು. ನಿಮ್ಮ ಮಾತು ಸತ್ಯವಾಗಿದ್ದು ಕುಟುಂಬದವರು ಅಚ್ಚರಿಪಡುವರು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಶಾಂತಚಿತ್ತರಾಗಿ ಯೋಚಿಸಿ. ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ಎಲ್ಲ ಕಾರ್ಯಕ್ಕೂ ನಿಮ್ಮದೇ ಆದ ದಾರಿ ಇರುವುದು. ಯಾರ ಕೊತೆ ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಯಾರ ಬಗ್ಗೆಯೂ ಪೂರ್ವಾಗ್ರಹಬುದ್ಧಿಯನ್ನು ಬಿಡುವುದು ಒಳ್ಳೆಯದು. ವ್ಯಾಪಾರಸ್ಥರು ಯಾವುದಾರೂ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಹುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ.

ವೃಷಭ ರಾಶಿ: ವಾಸಸ್ಥಳದ ನವೀಕರಣಕ್ಕೆ ಯೋಜನೆ ಸಿದ್ಧವಾಗಲಿದೆ. ನಿಮ್ಮ ಮಾರ್ಗವು ಯೋಗ್ಯವಲ್ಲದೇ ಇರಬಹುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಾತಿಗೆ ಬೆಲೆಯು ಕಡಿಮೆಯಾದೀತು. ಮಾರ್ಗಾಯಾಸದಿಂದ ವಿಶ್ರಾಂತಿ ಪಡೆಯುವಿರಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿದೆ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಸಾಮಾಜಿಕ ಬದ್ಧತೆಯನ್ನು ಪೂರೈಸುವಿರಿ. ನಿಮ್ಮ ಕೆಲವು ಅಭ್ಯಾಸವನ್ನು ನೀವು ಬಿಡಬೇಕಾಗಿಬರಬಹುದು. ಸರಳತೆಯನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳುವಿರಿ. ಬಂಧುಗಳ ಆಗಮನದಿಂದ ಹೆಚ್ಚು ಸಂತೋಷವು ಇರುವುದು. ಉತ್ತಮ ವಿದ್ಯೆಯ ಕಾರಣ ಉತ್ತಮ ಆದಾಯದ ಕೆಲಸವೂ ಸಿಗಲಿದೆ. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ದೈವವನ್ನು ದೂರುತ್ತ ಕೂರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಯಾವುದನ್ನೂ ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕು.

ಮಿಥುನ ರಾಶಿ: ವಿವಾಹ ಒಂದಕ್ಕಿಂತ ಒಂದು ಉತ್ತಮ‌ವೆನಿಸಬಹುದು. ಇಂದು ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ನಿಮ್ಮ ಗುಣಗಳು ನಿಮ್ಮನ್ನು ಕಟ್ಟಿಹಾಕಬಹುದು. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಸಮಸ್ಯೆಗೆ ಬೇಕಾದ ಪರಿಹಾರವನ್ನು ತಿಳಿದೂ ಅದನ್ನು ಮಾಡಲಾರಿರಿ. ಎಂದೋ‌ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ಎಲ್ಲರ ಜೊತೆ ಬೆರೆತು ಬದುಕುವ ನಿಮ್ಮ ಗುಣವು ಮೆಚ್ಚುಗೆಯಾಗಲಿದೆ. ಆರ್ಥಿಕತೆಯನ್ನು ನಿಭಾಯಿಸುವುದನ್ನು ಕಲಿಯಿರಿ. ಪಿತ್ತಸಂಬಂಧಿಯಾದ ರೋಗವು ಬರಬಹುದು. ವ್ಯಾಪಾರದಲ್ಲಿ ಇಂದಿನ ನಿಮ್ಮ ಬೆಳವಣಿಗೆಯು ನಿಮಗೆ ಅಚ್ಚರಿಯನ್ನು ತರಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ.

ಕರ್ಕಾಟಕ ರಾಶಿ: ಒಮ್ಮೊ ಮಾಡಿದ್ದು ಒಂದುಬಾರಿಗೆ ಮಾತ್ರ ಚೆಂದ. ನಿಮ್ಮ ಜಾಣತನವೇ ಮುಳುವಾಗಬಹುದು. ವಿವೇಚನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ. ಯಾವ ಮಾತನ್ನೂ ನೋವಾಗುವಂತೆ ಆಡಬೇಡಿ. ಮೇಲಿನಿಂದ ಬಿದ್ದು ಪೆಟ್ಟು‌‌ಮಾಡಿಕೊಳ್ಳುವಿರಿ. ನೀವಿಂದು ಪ್ರೀತಿಸಲು ಆರಂಭಿಸುವಿರಿ. ಆಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ನಿಮ್ಮ ಅಸ್ತಿತ್ವ ಮರೆಯಾಗದಂತೆ ನೋಡಿಕೊಳ್ಳಿ. ಅವಸರದಲ್ಲಿ ಅನಾಹುತವಾದೀತು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ಸಂತೋಷವನ್ನು ಯಾರೂ ಸಹಿಸಲಾರರು. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ಸ್ತ್ರೀಯರಿಂದ ನಿಮಗೆ ಲಾಭವಾಗಲಿದೆ. ಸ್ತ್ರೀಯರು ನಿಮಗೆ ಬೆಂಬಲವನ್ನು ನೀಡುವರು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು.

ಸಿಂಹ ರಾಶಿ: ನಿರ್ಮಾಣ ಕಾರ್ಯವನ್ನು ವಹಿಸಿಕೊಂಡು, ಪೂರ್ಣ ಮಾಡಲಾಗದು. ಇಂದು ನಿಮ್ಮ ಮಾತಿನಿಂದ ಕುಟುಂಬದಲ್ಲಿ ಆತಂಕವು ಸೃಷ್ಟಿಯಾಗಬಹುದು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಅನೇಕ ಒತ್ತಡಗಳು ನಿಮ್ಮ ಬಲವನ್ನು ಕುಗ್ಗಿಸುವುದು. ಮನೆಯ ವ್ಯವಹಾರದಲ್ಲಿ ಭಾಗವಹಿಸಲು ಇಷ್ಟವಾಗದು. ಇದರಿಂದ ಕುಟುಂಬವು ಬೇಸರಗೊಳ್ಳುವುದು. ಆದಾಯದ ಮಟ್ಟವು ಇಂದು ಅಧಿಕವಾಗಲಿದೆ. ಯಾರ ಒತ್ತಾಯವನ್ನೂ ಮನಸಿಗೆ ಹಾಕದೇ ನಿಮಗೆ ಅನ್ನಿಸಿದಂತೆ ಮಾಡುವಿರಿ. ಮನೆಯನ್ನು ಇಂದು ಬದಲಾಯಿಸುವಿರಿ. ಹೊಂದಾಣಿಕೆಯನ್ನು ಬಹಳ ಸೂಕ್ಷ್ಮವಾಗಿ ಮಾಡಿಕೊಳ್ಳಬೇಕಾಗಬಹುದು. ಗೌರವವನ್ನು ಪಡೆಯುತ್ತೀರಿ. ನೀವು ತಾಳ್ಮೆಯಿಂದ ಮಾಡುವ ಯಾವುದೇ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕಛೇರಿಯಲ್ಲಿ ಕಾರ್ಯಗಳು ಒತ್ತಡದಿಂದ ಇದ್ದು ಕೆಲವು ತಪ್ಪು ಆಗಬಹುದು.

ಕನ್ಯಾ ರಾಶಿ: ತಾತ್ಕಾಲಿಕ ಉದ್ಯೋಗಕ್ಕೆ ನಿಮ್ಮ ಗಮನವಿರಲಿದೆ. ಇಂದು ನಿಮ್ಮ ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಬೇಡಿ. ಹಿರಿಯರ ಪಾಲನ್ನೂ ನೀವೇ ಪಡೆಯುವ ಆಸೆ ಇದೆ. ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ನಿಮ್ಮ ಆಲೋಚನೆ ಹಾಗೂ ಸಾಮರ್ಥ್ಯದಿಂದ ಉನ್ನತ ಹುದ್ದೆಗೆ ಹೋಗುವ ಅವಕಾಶವಿರಬಹುದು. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಡುವುದು ಒಳ್ಳೆಯದಲ್ಲ. ಅನೇಕ ಗೊಂದಲಗಳು ನಿಮ್ಮ ಜೀವನದಲ್ಲಿ ಬರುವುದು. ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಮನೆಯನ್ನು ಬದಲಿಸುವ ಯೋಚನೆ ಮಾಡಬಹುದು ಇಂದು. ಅಲ್ಪ‌ ಆದಾಯದಲ್ಲಿಯೇ ಉಳಿತಾಯದ ಯೋಚನೆ ಮುಖ್ಯ. ಇಂದು, ನೀವು ಹೊಸ ಕೆಲಸದಲ್ಲಿ ಹೂಡಿಕೆ ಮಾಡಬೇಕಾದರೆ, ನೀವು ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು.

ತುಲಾ ರಾಶಿ: ಅಪಪ್ರಚಾರವನ್ನು ಸಹಿಸಿಕೊಳ್ಳುವುದು ಕಷ್ಟ. ವಿದ್ಯಾರ್ಥಿಗಳಿಗೆ ಮನೆಯ ಕೆಲಸದ ನಡುವೆ ವಿದ್ಯಾಭ್ಯಾಸ ಆಗದು. ವ್ಯವಸ್ಥೆಯ ಮುಖ್ಯಸ್ಥರಾಗಿ ಮುನ್ನಡೆಸುವುದು ಕಷ್ಟವಾಗುವುದು. ಆಯಾಸದಿಂದ ಯಾವ ಉತ್ಸಾಹವೂ ನಿಮ್ಮಲ್ಲಿ ಇರದು. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ವಾಹನವು ನಾಷ್ಟವಾಗುವ ಸಾಧ್ಯತೆಯಿದೆ. ಹೊಸ ಹವ್ಯಾಸದ ಕಡೆಗೆ ಗಮನವಿರಲಿ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆಯನ್ನು ನೀವು ಹೊಂದುವಿರಿ. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ನಿಮ್ಮ ಮನಸ್ಸಿನ ವಿಕಾರವನ್ನು ತೋರಿಸುವುದು ಬೇಡ.‌ ಪ್ರತಿಯೊಂದು ವಿಷಯದಲ್ಲೂ ನಿಮ್ಮ ಪೋಷಕರಿಂದ ನೀವು ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಕೆಲವು ಅನಗತ್ಯ ಖರ್ಚುಗಳನ್ನು ಸಹ ಅನುಭವಿಸಬಹುದು. ದುಂದುವೆಚ್ಚ ಮಾಡುವ ಸಾಧ್ಯತೆಯೂ ಇದೆ. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ನಿಮ್ಮ ಅಸಂಬದ್ಧ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳಿ.

ವೃಶ್ಚಿಕ ರಾಶಿ: ಸಂಗಾತಿಗೆ ಸರಿಯಾದ ಸ್ಪಂದನೆ ಅಗತ್ಯ. ಯಾರದೋ ಹಣವು ಅನಿರೀಕ್ಷಿತವಾಗಿ ಕೈ ಸೇರುವುದು. ನಿಮ್ಮ ಬಹುದಿನದ ಸಮಸ್ಯೆಯು ಬಗೆಹರಿಯಲಿದೆ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಉತ್ತಮ‌ ವಿಚಾರಗಳ ಕಡೆ ಗಮನವಿರಲಿ. ಪೋಷಕರ ಬೆಂಬಲ ಮತ್ತು ಆಶೀರ್ವಾದದಿಂದ ಸಮಾಧಾನವಿರುತ್ತದೆ. ವ್ಯವಹಾರದಿಂದ ಬಾಂಧವ್ಯ ನಿರ್ಣಯ ಮಾಡುವುದು ಬೇಡ. ನಿಮ್ಮ ಬಂಧುಗಳ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ಇನ್ನೊಬ್ಬರ ಸಂಪತ್ತನ್ನು ಅಪಹರಿಸಿದ ಅಪವಾದ ಬರುವುದು. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬಹುದು. ಮಧುರವಾದ ಮಾತುಗಳಿಂದ ತುಂಡಾಗುವ ಸಂಬಂಧವನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಚೆನ್ನಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು.

ಧನು ರಾಶಿ: ಇರುವ ಭೂಮಿಯನ್ನು ಕಾಯಗದುಕೊಳ್ಳುವುದೇ ನಿಮಗೆ ಸಮಸ್ಯೆ. ಕಾಲಹರಣದಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ದಿನದ ಕೊನೆಯಲ್ಲಿ ಅನಾರೋಗ್ಯದಂತೆ ಅನ್ನಿಸುವುದು. ನಿಂತಲ್ಲೇ ಇರುವ ಬುದ್ಧಿ ಹಾಗೂ ಮನಸ್ಸಿನಿಂದ ಕೆಟ್ಟ ಆಲೋಚನೆಗಳು ಬರಲಿವೆ. ಹಿತಶತ್ರುಗಳ ಜಾಲದಲ್ಲಿಯೇ ಇದ್ದರೂ ಅರಿವಿಗೆ ಬಾರದು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ಮನೆಯವರ ಜೊತೆ ಈ ದಿನವನ್ನು ಕಳೆಯುವಿರಿ. ಆಪ್ತವಲಯದಿಂದ ಆಘಾತಕಾರಿ ಸುದ್ದಿಯು ಬರಬಹುದು. ನಿಮ್ಮ ನಂಬಿಕೆಯು ಸುಳ್ಳಾಗಿ ಬೇಸರವಾಗಬಹುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸುವಿರಿ. ನಿಮ್ಮ ಅಪೂರ್ಣ ಕೆಲಸವು ಇಂದು ಪೂರ್ಣಗೊಳ್ಳುತ್ತದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ.

ಮಕರ ರಾಶಿ: ಸ್ತ್ರೀಯರ ಸಂಘಟಿತ ಉದ್ಯಮದಲ್ಲಿ ಉತ್ತಮ ಪ್ರಗತಿ. ನಿಮಗೆ ಗೊತ್ತಿಲ್ಲದೇ ಸಿಟ್ಟನ್ನು ನಿಯಂತ್ರಣದಲ್ಲಿ ಇರಿಸಿರುವಿರಿ. ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದಿನ ಶಕ್ತಿಗೆ ಅನುಗುಣವಾಗಿ ಉದ್ಯೋಗವನ್ನು ಮಾಡುವುದು ಉತ್ತಮ. ಸತ್ಸಂಗದಲ್ಲಿ ದಿನ ಕಳೆಯುವಿರಿ. ಉದ್ಯೋಗದ ಹುಡುಕಾಟದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಕೆಲವು ಅನಿರೀಕ್ಷಿತ ಲಾಭಗಳಿಂದಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಕೌಟುಂಬಿಕ ವಿಚಾರದಲ್ಲಿ ಭಿನ್ನಮತ ಬರಬಹುದು.

ಕುಂಭ ರಾಶಿ: ಕ್ಷಿಪ್ರವಾಗಿ ನಿಮ್ಮ ಕಾರ್ಯವಾದರೂ ಮತ್ತೆಲ್ಲೋ ನಿಧಾನವಾಗಲಿದೆ. ನಿಮ್ಮ ವಸ್ತುವಿನಿಂದಲೇ ತೊಂದರೆಯಾಗಲಿದೆ. ಆಲಸ್ಯವು ನಿಮ್ಮ ಒಳ್ಳೆತನಕ್ಕೆ ಮುಳುವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ಉಡುಗೆ ತೊಡುಗೆಯ ವ್ಯವಹಾರಕ್ಕಾಗಿ ಮ‌ನೆಯಲ್ಲಿ ಕಲಹ. ನಿಮ್ಮನ್ನು ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ನಿಮ್ಮಲ್ಲಿ ಕಲಾವೃಕ್ಷವಿದ್ದು ಅದಕ್ಕೆ ಸರಿಯಾಗಿ ನೀರೆರಿಯಿರಿ. ಇದೇ ನಿಮ್ಮನ್ನು ಎತ್ತರಕ್ಕೆ ಒಯ್ಯಲಿದೆ. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಬೇಕಾದ ಔಷಧವನ್ನು ಮಾಡಿ. ನಿಮ್ಮ ಮೇಲೆ ಒತ್ತಡ ಅಧಿಕವಾಗಿ ಬರಬಹುದು. ಇಂದು ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ. ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು.

ಮೀನ ರಾಶಿ: ನಿಮಗೆ ಕೊಟ್ಟ ಗಡುವು ಮುಕ್ತವಾಗಿ ಮನೆಬಾಗಿಲಿಗೆ ಜನರು ಬರಬಹುದು. ನೀವು ಮನೆಯವರಿಗೆ ತೊಂದರೆಯಾಗದಂತೆ ನೀವೇ ಉದ್ಯೋಗದ ಜೊತೆ ಉನ್ನತ ವಿದ್ಯಾಭ್ಯಾಸವನ್ನೂ ಮಾಡಬೇಕಾಗುವ ಸ್ಥಿತಿ ಬರಬಹುದು. ತಪ್ಪುಗಳು ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಶ್ಚಿಂತೆಯಿಂದ ಮುನ್ನಡೆಯಿರಿ. ಪರಿಚಿತರ ಜೊತೆ ಅಕಾರಣ ತಿರುಗಾಟವನ್ನು ಮನೆಯವರು ನಿಲ್ಲಿಸುವರು.‌ ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಕಲಹವಾಗಬಹುದು. ಆಪ್ತರ ಜೊತೆ ಹಣಕಾಸಿನ ವಿಚಾರವಾಗಿ ಸಮಾಲೋಚನೆ. ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುವಿರಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಗೌರವವನ್ನೂ ಪಡೆಯುವಿರಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ.

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *